Homeಮುಖಪುಟಎಕ್ಸಿಟ್ ಪೋಲ್: ತಮಿಳುನಾಡಿನಲ್ಲಷ್ಟೇ ಬದಲು, ಉಳಿದೆಡೆ ಅವೇ ಸರ್ಕಾರ ಮುಂದುವರಿಕೆ - ಕೊರೊನಾ ಮಾತ್ರ ತೀವ್ರ...

ಎಕ್ಸಿಟ್ ಪೋಲ್: ತಮಿಳುನಾಡಿನಲ್ಲಷ್ಟೇ ಬದಲು, ಉಳಿದೆಡೆ ಅವೇ ಸರ್ಕಾರ ಮುಂದುವರಿಕೆ – ಕೊರೊನಾ ಮಾತ್ರ ತೀವ್ರ ಏರಿಕೆ!

- Advertisement -
- Advertisement -

ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆ ವಿವಿಧ ಸಂಸ್ಥೆಗಳು ತಮ್ಮ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಿವೆ. ಹೆಚ್ಚು ಗಮನ ಸೆಳೆದ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹೆಚ್ಚು ಫೇವರಿಟ್ ಆಗಿದ್ದಾರೆ ಮತ್ತು ಅವರ ತೃಣಮೂಲ ಕಾಂಗ್ರೆಸ್ ರಾಜ್ಯದ 294 ಸ್ಥಾನಗಳಲ್ಲಿ 152 ಸ್ಥಾನಗಳನ್ನು ಗೆಲ್ಲಬಹುದು, ಬಿಜೆಪಿ ಕನಿಷ್ಠ 130 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಎನ್‌ಡಿಟಿವಿ ನಡೆಸಿದ ಪೋಲ್ ಆಫ್ ಪೋಲ್ಸ್ (ಎಲ್ಲ ಸಮೀಕ್ಷೆಗಳ ಸಮೀಕ್ಷೆ) ತಿಳಿಸಿದೆ. ಈ ಸಮೀಕ್ಷೆ ಕಂಡುಕೊಂಡ ಅಂಶಗಳ ಪ್ರಕಾರ ತಮಿಳುನಾಡು ಹೊರತುಪಡಿಸಿ ಉಳಿದ ಕಡೆ ಆಡಳಿತ ಪಕ್ಷಗಳು ಮುಂದಿನ ಅವಧಿಗೂ ಮುಂದುವರೆಯಲಿವೆ.

ಆರು ನಿರ್ಗಮನ ಸಮೀಕ್ಷೆಗಳ ಒಟ್ಟು ಸರಾಸರಿಯು ಮಮತಾ ಬ್ಯಾನರ್ಜಿ ಬಹುಮತಕ್ಕೆ ತಲುಪಬಹುದೆಂದು ಸೂಚಿಸುತ್ತದೆ. ಆದರೆ ಚುನಾವಣೆಗೆ ಮುಂಚಿತವಾಗಿ ಹಲವಾರು ಪಕ್ಷಾಂತರಗಳ ನಂತರ ಬಿಜೆಪಿಯೊಂದಿಗಿನ ಅಂತರವನ್ನು ಅವರು ಎಷ್ಟು ವಿಸ್ತರಿಸಬಹುದು ಎಂಬುದರ ಮೇಲೆ ಅವರ ಸರ್ಕಾರದ ಭದ್ರತೆ ಅವಲಂಬಿತವಾಗಿದೆ. ಬಿಜೆಪಿ ಗಮನಾರ್ಹ ಏರಿಕೆ ಕಾಣಲಿದೆ.

ತೃಣಮೂಲ ಕಾಂಗ್ರೆಸ್ 2011 ರಲ್ಲಿ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿದ್ದು, 34 ವರ್ಷಗಳ ಎಡ ಆಡಳಿತವನ್ನು ಕೊನೆಗೊಳಿಸಿತು. 2016 ರಲ್ಲಿ ಅದು ಇನ್ನೂ ದೊಡ್ಡ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಂಡಿದೆ. ಈ ಬಾರಿ, ಬಿಜೆಪಿ ಲಾಭ ಗಳಿಸುವುದರೊಂದಿಗೆ ತೃಣಮೂಲದ ಪ್ರಮಾಣ ತೀವ್ರವಾಗಿ ಕುಸಿಯುತ್ತದೆ ಎಂದು ಸಮೀಕ್ಷೆಗಳು ಸೂಚಿಸುತ್ತವೆ. ಆದರೆ ಎಲ್ಲ ಸಮೀಕ್ಷೆಗಳ ಸಮೀಕ್ಷೆ (ಪೋಲ್ ಆಫ್ ಪೋಲ್ಸ್) ಟಿಎಂಸಿ ಸರಳ ಬಹುಮತ ಪಡೆಯಲಿದೆ ಎನ್ನುತ್ತದೆ.

ಇಂಡಿಯಾ ನ್ಯೂಸ್-ಜನ್ ಕಿ ಬಾತ್ ಬಿಜೆಪಿಗೆ ಗೆಲುವಿನ ಮುನ್ಸೂಚನೆ ನೀಡಿದರೆ, ರಿಪಬ್ಲಿಕ್ ಟಿಸಿಎನ್‌ಎಕ್ಸ್ ಸಮೀಕ್ಷೆ ಅತಂತ್ರ ವಿಧಾನಸಭೆಯನ್ನು ಸೂಚಿಸಿದೆ.

ಕೇರಳದಲ್ಲಿ ಈಗಿನ ಎಡಪಂಥೀಯ ಎಲ್‌ಡಿಎಫ್ ಕೂಟವು 140 ಸ್ಥಾನಗಳಲ್ಲಿ 85 ಸ್ಥಾನಗಳೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ 53 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಅದು ಸರಿಯೆಂದು ಸಾಬೀತಾದರೆ, ಕೇರಳದ ರಾಜಕೀಯದಲ್ಲಿ ಆಡಳಿತ ಪಕ್ಷ ಪುನರಾಯ್ಕೆಗೊಂಡ ಮೊದಲ ನಿದರ್ಶನ ಇದಾಗಲಿದೆ. ಕೇರಳದಲ್ಲಿ ಎರಡು ಸ್ಥಾನಗಳೊಂದಿಗೆ ಬಿಜೆಪಿ ತನ್ನ ಅಸ್ತಿತ್ವವನ್ನು ತೋರಿಸಲು ಸಜ್ಜಾಗಿದೆ ಎಂದು ಸಮೀಕ್ಷೆಯ ಸಮೀಕ್ಷೆ ತಿಳಿಸಿದೆ.

ತಮಿಳುನಾಡಿನಲ್ಲಿ, ಡಿಎಂಕೆ ನೇತೃತ್ವದ ಕೂಟ ಸಲೀಸಾಗಿ ಅಧಿಕಾರಕ್ಕೆ ಬರಲಿದೆ. ಡಿಎಂಕೆ ಕೂಟ 234 ಸ್ಥಾನಗಳಲ್ಲಿ 160 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಆಡಳಿತಾರೂಢ ಮತ್ತು ಬಿಜೆಪಿಯ ಮಿತ್ರ ಪಕ್ಷ ಎಐಡಿಎಂಕೆ ತನ್ನ ವರ್ಚಸ್ವಿ ನಾಯಕಿ ಜೆ.ಜಯಲಲಿತಾ ಅವರ ನಿಧನದ ನಂತರ ನಡೆದ ಮೊದಲ ರಾಜ್ಯ ಚುನಾವಣೆಯಲ್ಲಿ 66 ಸ್ಥಾನಗಳನ್ನು ಗಳಿಸಲಿದೆ ಎಂದು ನಿರ್ಗಮನ ಸಮೀಕ್ಷೆಗಳು ತಿಳಿಸಿವೆ. ಎಂ.ಕೆ ಸ್ಟಾಲಿನ್ ಅವರ ಡಿಎಂಕೆ 2019 ರ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಗೆಲುವು ಗಳಿಸಿತ್ತು. ಪ್ರತಿಪಕ್ಷದಲ್ಲಿ ಎರಡು ಅವಧಿಯ ನಂತರ ಈ ಬಾರಿ ಅಧಿಕಾರಕ್ಕೆ ಮರಳುವ ಭರವಸೆ ಇದೆ.

ಅಸ್ಸಾಂನಲ್ಲಿ ಕಾಂಗ್ರೆಸ್‌ಗೆ ಮತ್ತೆ ನಿರಾಶೆ ಕಾದಿದೆ ಎಂದು ಎಕ್ಸಿಟ್ ಪೋಲ್ಸ್ ಸೂಚಿಸುತ್ತವೆ, ಬಿಜೆಪಿ 126 ಸ್ಥಾನಗಳಲ್ಲಿ 72 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ತನ್ನ ಹಿಂದಿನ ಭದ್ರಕೋಟೆ ಮರಳಿ ಗೆಲ್ಲಲು ಆಕ್ರಮಣಕಾರಿಯಾಗಿ ಪ್ರಚಾರ ಮಾಡಿದ ಕಾಂಗ್ರೆಸ್ 53 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ತಿಳಿಸಿವೆ.
ಪುದುಚೇರಿಯಲ್ಲಿ ಕಾಂಗ್ರೆಸ್‌ಗೆ ಕಷ್ಟವಾದರೂ ಮರಳಿ ಅಧಿಕಾರಕ್ಕೆ ಬರುವ ಸೂಚನೆಗಳಿವೆ.

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಮಾರ್ಚ್ 27 ರಿಂದ ಚುನಾವಣೆ ನಡೆಯಿತು. ಬಂಗಾಳದ ದಾಖಲೆಯ ಎಂಟು ಹಂತದ ಮತದಾನ ಏಪ್ರಿಲ್ 29ಕ್ಕೆ ಕೊನೆಗೊಂಡಿದೆ. ಮೇ 2 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು.

ಚುನಾವಣೆಯೇನೊ ಮುಗಿದಿದೆ. ಆದರೆ ಈ ಚುನಾವಣೆಯ ಕಾರಣಕ್ಕೆ ಕೊರೊನಾ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ. ಕೋವಿಡ್ ಎರಡನೇ ಅಲೆ ಬೀಸಿದ ಸಂದರ್ಭದಲ್ಲಿಯೇ ರಾಜಕೀಯ ಪಕ್ಷಗಳು ದೊಡ್ಡ ದೊಡ್ಡ ಚುನಾವಣಾ ರ್ಯಾಲಿಗಳನ್ನು ನಡೆಸಿ ಕೊರನಾ ಹರಡಲು ಕಾರಣರಾಗಿದ್ದರೆ ಎಂದು ಕೋರ್ಟ್‌ಗಳು ತರಾಟೆಗೆ ತೆಗೆದುಕೊಂಡಿವೆ.


ಇದನ್ನೂ ಓದಿ: ಮೋದಿ ದುರಂಹಕಾರವೇ ಕೋವಿಡ್ 2ನೆ ಅಲೆಯ ತೀವ್ರತೆಗೆ ಕಾರಣ: ಫ್ರೆಂಚ್ ಪತ್ರಿಕೆ ಸಂಪಾದಕೀಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...