Homeಮುಖಪುಟಬಿಜೆಪಿ ವಕ್ತಾರ ಸಂಬಿತ್ ಪಾತ್ರಾ - ಫೇಕ್‌, ಸುಳ್ಳು ಮತ್ತು ತಿರುಚುವಿಕೆಯೇ `ಜೀವಾಳ'

ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ – ಫೇಕ್‌, ಸುಳ್ಳು ಮತ್ತು ತಿರುಚುವಿಕೆಯೇ `ಜೀವಾಳ’

- Advertisement -
- Advertisement -

ಟೂಲ್‌ಕಿಟ್-ಲೆಟರ್‌ಹೆಡ್ ಫೋರ್ಜರಿ ಪ್ರಕರಣದಲ್ಲಿ ಸಂಬಿತ್ ಪಾತ್ರಾ ಮತ್ತು ರಮಣಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ವೃತ್ತಿಯಲ್ಲಿ ವೈದ್ಯರಾದ ಸಂಬಿತ್ ಪಾತ್ರಾ ಬಿಜೆಪಿಯ ರಾಷ್ಟ್ರೀಯ ವಕ್ತಾರರ ಪೈಕಿ ಹೆಚ್ಚು ಗೋಚರಿಸುವ ವ್ಯಕ್ತಿಯಾಗಿದ್ದಾರೆ.

ರಾಷ್ಟ್ರೀಯ ಚಾನೆಲ್‌ಗಳ ಚರ್ಚೆಗಳಲ್ಲಿ ಪಕ್ಷದ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುವ ಅವರು, ಪ್ರತಿಪಕ್ಷಗಳ ವಿರುದ್ಧ ಅದರಲ್ಲೂ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಲು ಕೆಲವೊಮ್ಮೆ ಸತ್ಯ, ಬಹುಪಾಲು ಸಂದರ್ಭಗಳಲ್ಲಿ ಅರೆಸತ್ಯ, ಸುಳ್ಳು ಮತ್ತು ತಿರುಚಲ್ಪಟ್ಟ ಸಂಗತಿಗಳನ್ನು ತಮ್ಮ ಅಸ್ತ್ರಗಳನ್ನಾಗಿ ಬಳಸುತ್ತಾರೆ.

ಇತ್ತೀಚನ ವರ್ಷಗಳಲ್ಲಿ ಟ್ವಿಟರ್ ಅವರ ನೆಚ್ಚಿನ ವೇದಿಕೆಯಾಗಿದ್ದು, ಅವರು ನಾಲ್ಕು ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲು ಅವರು ಈಗ ಟ್ವಿಟರ್ ಬಳಸುತ್ತಿದ್ದಾರೆ.

ಇದನ್ನೂ ಓದಿ: ಹಣ ಕೊಡದೇ ಬಸ್ ಬಿಡುವುದಿಲ್ಲ ಎಂದು ಮಧ್ಯರಾತ್ರಿಯಲ್ಲಿ ಹಠಹಿಡಿದ ರಾಜಸ್ತಾನ? ಸಂಬಿತ್‌ ಪಾತ್ರಾನ ಹೊಸ ಸುಳ್ಳು

ಕಳೆದ ವಾರ ಅವರ ಟೂಲ್‌ಕಿಟ್ ಟ್ವೀಟ್‌ಗೆ ಟ್ವಿಟರ್ ಕಂಪನಿ ’ತಿರುಚಲ್ಪಟ್ಟ ಸಂಗತಿ’ (’ಮ್ಯಾನಿಪುಲೆಟೆಡ್ ಮೀಡಿಯಾ’) ಎಂಬ ಟ್ಯಾಗ್ ಹಾಕಿತ್ತು. ಅವರು ರಾಷ್ಟ್ರೀಯ ಚಾನೆಲ್‌ಗಳಲ್ಲಿ ತಪ್ಪು ಮಾಹಿತಿಯನ್ನು ಉತ್ತೇಜಿಸುತ್ತಿದ್ದಾರೆ, ಟ್ವೀಟ್‌ಗಳಲ್ಲಿ ತಿರುಚಿದ ವಿಡಿಯೋ-ಮಾಹಿತಿ ಹಾಕುತ್ತಾರೆ ಎಂದು ಹಲವಾರು ಫ್ಯಾಕ್ಟ್‌ಚೆಕ್‌ಗಳು ಹಲವಾರು ಸಲ ನಿರೂಪಿಸಿವೆ.

ಟಿವಿ ಚರ್ಚೆಗಳಲ್ಲಿ ಅವರು ತಮಗೆ ಹಿನ್ನಡೆ ಆಗುತ್ತಿದೆ ಅನಿಸಿದಾಗ ಬಿಜೆಪಿಯ ಪರಂಪರಾಗತ ಅಸ್ತ್ರಗಳಾದ ದೇಶದ್ರೋಹ, ಪಾಕಿಸ್ತಾನ, ಭಾರತಮಾತಾ, ಕಾಶ್ಮೀರ ಮುಂತಾದ ವಿಷಯಗಳಿಗೆ ಜಾರಿ ವಿಷಯ ಪಲ್ಲಟ ಮಾಡಿ ಗದ್ದಲ ಎಬ್ಬಿಸಲು ನೋಡುತ್ತಾರೆ. ಇದು ಚಾನೆಲ್‌ಗಳ ಟಿಆರ್‌ಪಿಗೂ ಅಗತ್ಯವಾದ್ದರಿಂದ ಸಂಬಿತ್ ಅವುಗಳ ನೆಚ್ಚಿನ ಪ್ಯಾನೆಲಿಸ್ಟ್.

ಪಟ್ಟಿ ಮಾಡುತ್ತ ಹೋದರೆ, ಅದು ತುಂಬ ದೊಡ್ಡದಾಗುತ್ತದೆ. ಅಲ್ಟ್‌ನ್ಯೂಸ್ ಮತ್ತು ಇತರ ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳು ನಿರೂಪಿಸಿದ ಪಾತ್ರಾ ಅವರ ಕೆಲವು ಸುಳ್ಳುಗಳನ್ನು ನೋಡೋಣ.

ತಿರುಚಿದ ಇತಿಹಾಸ ಹೇಳಿ ದಂಗು ಬಡಿಸುವುದು ಅವರ ’ಕಲೆ’. ಹಾಗೆಯೇ ಯಾವುದಾದರೂ ವಿಡಿಯೋದಿಂದ ಮಧ್ಯದ ಐದಾರು ಸೆಕೆಂಡುಗಳ ದೃಶ್ಯ-ಮಾತುಗಳನ್ನು ಎತ್ತಿ ವಿಪಕ್ಷದವರನ್ನು ಅಪರಾಧಿಯನ್ನಾಗಿ ಮಾಡುವುದು ಅಥವಾ ಗೇಲಿ ಮಾಡುವುದು ಅವರ ’ಶೈಲಿ’!

ಕಾಂಗ್ರೆಸ್-ನೆಹರೂ-ಗಾಂಧಿ ಕುಟುಂಬಗಳು ಅವರ ನೆಚ್ಚಿನ ಟಾರ್ಗೆಟ್.

ಕಳೆದ ಕೋವಿಡ್ ಒಂದನೇ ಅಲೆ ಸಂದರ್ಭದಲ್ಲಿ ರಾಜಸ್ಥಾನ ಸರ್ಕಾರವು ಯುಪಿ ವಿದ್ಯಾರ್ಥಿಗಳನ್ನು ಯುಪಿಗೆ ಸಾಗಿಸುವ ಬಸ್ಸುಗಳನ್ನು 19 ಲಕ್ಷ ರೂ. ಪಾವತಿಸಿದ ನಂತರವಷ್ಟೇ ಬಿಟ್ಟಿತ್ತು ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರೈಲ್ವೇ ಫಲಕದಲ್ಲಿ ಸಂಸ್ಕೃತ ಭಾಷೆಯಿರುವ ಸಂಬಿತ್ ಪಾತ್ರ ಟ್ವೀಟ್- ವಾಸ್ತವವೇನು?

ರಾಜಸ್ತಾನದ ಕೋಟಾದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಯುಪಿಗೆ ಕಳಿಸಿಕೊಡಲು ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳು ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದವು. ಅವರು ಸುರಕ್ಷಿತವಾಗಿ ಮನೆಗೆ ಮರಳಿದ ಒಂದು ತಿಂಗಳ ನಂತರ, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಯುಪಿ ಸರ್ಕಾರದ ಚೆಕ್ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ, ಯುಪಿ ಸರ್ಕಾರವು ಮಧ್ಯರಾತ್ರಿ 19 ಲಕ್ಷ ರೂ.ಗಳ ಇಂಧನ ಬಾಕಿ ಪಾವತಿಸಿದ ನಂತರವೇ ರಾಜಸ್ಥಾನ್ ಸರ್ಕಾರ ಬಸ್ಸುಗಳನ್ನು ರಾಜ್ಯದಿಂದ ಹೊರಹೋಗಲು ಅನುಮತಿ ನೀಡಿದೆ ಎಂದು ಹೇಳಿದ್ದರು.

ಆದರೆ ಇದು ನಿಜವಲ್ಲ ಏಕೆಂದರೆ ಪಾತ್ರ್ರಾ ಅವರು ತೋರಿಸಿದ ಚೆಕ್ 2020 ರ ಮೇ 5 ರ ದಿನಾಂಕದ್ದು. ವಿದ್ಯಾರ್ಥಿಗಳನ್ನು ಕರೆದೊಯ್ಯುವ ಕೊನೆಯ ಬಸ್ ಏಪ್ರಿಲ್ 19 ರಂದು ರಾಜಸ್ಥಾನದಿಂದ ಹೊರಟಿತ್ತು. ಸಾಕಷ್ಟು ಸ್ಪಷ್ಟವಾಗಿ, ಏಪ್ರಿಲ್‌ನಲ್ಲಿ ಪಾವತಿಯ ಕೊರತೆಯಿಂದಾಗಿ ಬಸ್‌ಗಳನ್ನು ನಿಲ್ಲಿಸಲಾಗಲಿಲ್ಲ. ಬಾಕಿಗಳನ್ನು ಎರಡು ವಾರಗಳ ನಂತರ ಮೇನಲ್ಲಿ ವರ್ಗಾಯಿಸಲಾಯಿತು.

ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡಲು ಕ್ಲಿಪ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದರು.

ಕೋವಿಡ್ ತೀವ್ರತೆಯ ಆಧಾರದ ಮೇಲೆ ಕೇಂದ್ರ ಸರ್ಕಾರ ಸ್ಥಾಪಿಸಿದ ವಲಯಗಳನ್ನು ಉಲ್ಲೇಖಿಸಿ “ಕೆಂಪು ವಲಯವು ನಿಜವಾಗಿಯೂ ಹಸಿರು ವಲಯ ಮತ್ತು ಹಸಿರು ವಲಯವು ನಿಜವಾಗಿಯೂ ಕೆಂಪು ವಲಯವಾಗಿದೆ” ಎಂದು ರಾಹುಲ್ ಗಾಂಧಿ ಹೇಳುವಂತಹ ವೀಡಿಯೊವನ್ನು ಪಾತ್ರಾ ಟ್ವೀಟ್ ಮಾಡಿ ಗೇಲಿ ಮಾಡಿದ್ದರು.

ಇದನ್ನೂ ಓದಿ: ಟಿವಿ ಡಿಬೇಟ್ ನಂತರ ಹೃದಯಾಘಾತದಿಂದ ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ ಸಾವು: ಅರೆಸ್ಟ್ ಸಂಬಿತ್ ಪಾತ್ರ ಟ್ರೆಂಡಿಂಗ್

ಭಾರತದಲ್ಲಿ ಕೊರೊನಾ ಸಂಭವಿಸಿದ ಬಗ್ಗೆ ರಾಹುಲ್ ಗಾಂಧಿ ಅವರು ನಡೆಸಿದ್ದ ಒಂದು ಗಂಟೆ ಅವಧಿಯ ಪತ್ರಿಕಾಗೋಷ್ಠಿಯಿಂದ 6 ಸೆಕೆಂಡುಗಳನ್ನು ಸಂಬಿತ್ ಪಾತ್ರಾ ಹಂಚಿಕೊಂಡಿದ್ದರು. ಬಲವಾದ ಸ್ಥಳೀಯ ನಾಯಕರ ಅಗತ್ಯತೆ ಮತ್ತು ತಳಮಟ್ಟದಿಂದ ವೈರಸ್ ಅನ್ನು ನಿಭಾಯಿಸುವ ಅಗತ್ಯವನ್ನು ಕಾಂಗ್ರೆಸ್ ನಾಯಕ ಒತ್ತಿ ಹೇಳಿದ್ದರು. “ಈ ವಲಯಗಳನ್ನು – ಕೆಂಪು, ಕಿತ್ತಳೆ ಮತ್ತು ಹಸಿರು – ರಾಷ್ಟ್ರಮಟ್ಟದಲ್ಲಿ ರಚಿಸಲಾಗಿದೆ. ಅವುಗಳನ್ನು ರಾಜ್ಯ ಮಟ್ಟದಲ್ಲಿ ರಚಿಸಬೇಕು. ಮುಖ್ಯಮಂತ್ರಿಗಳು (ಕಾಂಗ್ರೆಸ್ ಆಡಳಿತದ ರಾಜ್ಯಗಳ) ರಾಷ್ಟ್ರಮಟ್ಟದಲ್ಲಿ ಕೆಂಪು ಬಣ್ಣದಲ್ಲಿರುವ ವಲಯವು ವಾಸ್ತವವಾಗಿ ಹಸಿರು ಮತ್ತು ಹಸಿರು ಇರುವ ವಲಯವು ನಿಜವಾಗಿಯೂ ಕೆಂಪು ಎಂದು ನಮಗೆ ಹೇಳುತ್ತಿದ್ದಾರೆ ಎಂದು ಹೇಳಿದ್ದರು.

ರಾಹುಲ್‌ ಗಾಂಧಿಯವರು ಸಿಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಂಬಿಸಲು ರಾಷ್ಟ್ರಮಟ್ಟ ಎಂಬ ಪದಗಳನ್ನು ಭಾಷಣದಿಂದ ಈ ವಿಡಿಯೊವನ್ನು ಕ್ಲಿಪ್ ಮಾಡಲಾಗಿದೆ.

ಜವಾಹರಲಾಲ್ ನೆಹರೂಗೆ ನಕಲಿ ಉಲ್ಲೇಖ

2018 ರಲ್ಲಿ ಚಾನೆಲ್ ಚರ್ಚೆಯೊಂದರಲ್ಲಿ, ಮೊದಲ ಭಾರತೀಯ ಪ್ರಧಾನಿ ಜವಾಹರಲಾಲ್ ನೆಹರು, ನಾನು ಶಿಕ್ಷಣದಿಂದ ಇಂಗ್ಲಿಷ್‌, ಸಂಸ್ಕೃತಿಯಿಂದ ಮುಸ್ಲಿಂ ಮತ್ತು ಕೇವಲ ಜನ್ಮದಿಂದ ಆಕಸ್ಮಿಕವಾಗಿ ಹಿಂದೂ ಎಂದು ಹೇಳಿದ್ದಾರೆ ಎಂದು ಪಾತ್ರಾ ಹೇಳಿದ್ದಾರೆ.

ಈ ಮಾತುಗಳು ಮೊದಲು ಕಾಣಿಸಿಕೊಂಡಿದ್ದು 1959 ರಲ್ಲಿ ಹಿಂದೂ ಮಹಾಸಭಾ ನಾಯಕ ಮತ್ತು ಜವಾಹರಲಾಲ್ ನೆಹರೂ ಅವರ ತೀವ್ರ ವಿಮರ್ಶಕ ಎನ್.ಬಿ ಖಾರೆ ಬರೆದ ’ದಿ ಆಂಗ್ರಿ ಅರಿಸ್ಟೋಕ್ರಾಟ್’ ಎಂಬ ಲೇಖನದಲ್ಲಿ. ಈ ಲೇಖನವು ಹಲವಾರು ರಾಜಕೀಯ ವ್ಯಕ್ತಿಗಳ ವ್ಯಾಖ್ಯಾನಗಳೊಂದಿಗೆ ’ಎ ಸ್ಟಡಿ ಆಫ್ ನೆಹರೂ’ ಸಂಪುಟದ ಭಾಗವಾಗಿತ್ತು. ನೆಹರೂ ಅವರ ಆತ್ಮಚರಿತ್ರೆಯನ್ನೂ ಒಳಗೊಂಡಂತೆ ಬೇರೆಲ್ಲೂ ಈ ಉಲ್ಲೇಖವನ್ನು ಹೇಳುವ ಯಾವುದೇ ಸಾಕ್ಷಿಯಿಲ್ಲ.

ಇದನ್ನೂ ಓದಿ: ನನ್ನ ಪತಿ ಸಾವಿಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಾರಣ: ರಾಜೀವ್ ತ್ಯಾಗಿ ಪತ್ನಿ ಆರೋಪ

ಕಳೆದ ವರ್ಷ ನ್ಯೂಸ್ 18 ಚರ್ಚೆಯ ಸಂದರ್ಭದಲ್ಲಿ, ಸೋನಿಯಾ ಗಾಂಧಿ ವಿಶ್ವದ 4 ನೇ ಶ್ರೀಮಂತ ಮಹಿಳೆ ಎಂದು ಸಾಂಬಿತ್ ಪಾತ್ರ್ರಾ ಹೇಳಿಕೊಂಡಿದ್ದಾರೆ.

ಆಲ್ಟ್‌ನ್ಯೂಸ್ ಈ ಸಂಗತಿ ’ವರ್ಲ್ಡ್ಸ್ ಲಕ್ಸುರಿ ಗೈಡ್’ ಹೆಸರಿನ ಕಳಪೆ ವೆಬ್‌ಸೈಟ್ ಅನ್ನು ಆಧರಿಸಿದೆ ಎಂದು ಕಂಡುಹಿಡಿದಿತ್ತು. ಅದು ಈಗ ಅಸ್ತಿತ್ವದಲ್ಲಿಲ್ಲ ಎಂಬುದನ್ನು ತೋರಿಸಿತ್ತು.

ಯಾರದೋ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಎಂದರೆಂದು ಆರೋಪಿಸುವುದು, ಫೋರ್ಜರಿ ಲೆಟರ್‌ಗಳಿರುವ ಟ್ವೀಟ್‌ಗಳನ್ನು ರಿಟ್ವೀಟ್ ಮಾಡುವುದನ್ನು ಯಾವ ಅಳುಕೂ ಇಲ್ಲದೇ ಮಾಡಬಲ್ಲ ಸಂಬಿತ್ ಪಾತ್ರಾ ಗಂಭೀರ ಟಿವಿ ವೀಕ್ಷರು ಮತ್ತು ನೆಟ್ಟಿಗರ ಪಾಲಿಗೆ ಜೋಕರ್ ತರಹ ಭಾಸವಾಗುತ್ತಾರೆ.

ಆದರೆ ಅದಕ್ಕೂ ಅಪಾಯಕಾರಿ ಸಂಗತಿ ಎಂದರೆ, 4 ಮಿಲಿಯನ್‌ಗೂ ಹೆಚ್ಚಿರುವ ಅವರ ಫಾಲೋವರ್ಸ್ ಈ ಸುಳ್ಳುಗಳನ್ನು ಹರಡುತ್ತ ಹೋಗುತ್ತಾರೆ. ಅವು ನಂತರ ವ್ಯಾಟ್ಸಾಪ್ ಮೂಲಕ ಇನ್ನಷ್ಟು ಪ್ರಸಾರಗೊಳ್ಳುತ್ತವೆ. ಇದನ್ನು ಬಲ್ಲ ಸಂಬಿತ್ ಪಾತ್ರಾ ಸುಳ್ಳು ಎಂದು ಗೊತ್ತಿದ್ದರೂ ಟ್ವೀಟ್ ಮಾಡುತ್ತಲೇ ಇರುತ್ತಾರೆ. ಐಟಿ ಸೆಲ್‌ನ ಅಮಿತ್ ಮಾಳವಿಯ ಮತ್ತು ಪಾತ್ರಾ ಪರಸ್ಪರ ಸಹಕಾರದಲ್ಲಿ ಇಂಥದೊಂದು ಅಪಾಯಕಾರಿ ಆಟ ಆಡುತ್ತಿದ್ದಾರೆ.

ಬಿಜೆಪಿ ಅವರನ್ನು ಈ ಕೆಲಸಕ್ಕೇ ನೇಮಿಸಿದೆಯಲ್ಲವೆ?

ಇದನ್ನೂ ಓದಿ: ‘ಟೂಲ್‌ಕಿಟ್-ಲೆಟರ್‌ಹೆಡ್ ಫೋರ್ಜರಿ ಪ್ರಕರಣ: ಬಿಜೆಪಿಯ ರಮಣಸಿಂಗ್, ಸಂಬಿತ್ ಪಾತ್ರಾ ವಿರುದ್ಧ ಎಫ್‌ಐಆರ್ ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...