Homeಮುಖಪುಟನನ್ನ ಪತಿ ಸಾವಿಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಾರಣ: ರಾಜೀವ್ ತ್ಯಾಗಿ ಪತ್ನಿ ಆರೋಪ

ನನ್ನ ಪತಿ ಸಾವಿಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಾರಣ: ರಾಜೀವ್ ತ್ಯಾಗಿ ಪತ್ನಿ ಆರೋಪ

ಸಂಬಿತ್ ಪಾತ್ರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಟಿವಿ ಡಿಬೇಟ್‌ಗಳ್ನು ನಿರ್ಭಂಧಿಸಬೇಕು ಎಂಬ ಕೂಗುಗಳು ಜೋರಾಗಿದ್ದರು ಅದು ಸುಲಭಕ್ಕೆ ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

- Advertisement -
- Advertisement -

ಆಜ್ ತಕ್ ಸುದ್ದಿ ವಾಹಿನಿಯ ಡಿಬೇಟ್‌ ನಂತರ ಹೃದಯಾಘಾತದಿಂದಾಗಿ ನಿಧನರಾದ ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ ಅವರ ಪತ್ನಿ, ನನ್ನ ಪತಿಯ ಸಾವಿಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಾರಣ ಎಂದು ಆರೋಪಿಸಿದ್ದಾರೆ.

ರಾಜೀವ್ ತ್ಯಾಗಿಯ ಪತ್ನಿ “ಹತ್ಯಾರಾ ವಹಿ (ಸಂಬಿತ್ ಪಾತ್ರ) ಹೈ” ಎಂದು ಹೇಳಿರುವ ವೀಡಿಯೋವನ್ನು ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು ತಮ್ಮ ಫೇಸ್‌ಬುಕ್ ಟೈಮ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.

“ವಾಹಿನಿಯ ಚರ್ಚೆಯಲ್ಲಿ ಪದೇ ಪದೇ “ಜೈಚಂದ್” ಎಂದು ಸಂಬೋಧಿಸಿದ್ದು ಅವರಿಗೆ ಅತಿ ಹೆಚ್ಚು ಘಾಸಿ ಮತ್ತು ನೋವನ್ನುಂಟು ಮಾಡಿದೆ. ಬಹುಶಃ ಅವರ ನಿಧನಕ್ಕೆ ಇದೇ ಕಾರಣವಾಯಿತು. ಅವರು ತುಂಬಾ ಬಲಶಾಲಿಯಾಗಿದ್ದರೂ…” ಎಂದು ಅವರು

“ಈ ಜನರು ನನ್ನನ್ನು ಕೊಂದರು” ಎಂಬುದು ತ್ಯಾಗಿ ಅವರ ಕೊನೆಯ ಮಾತುಗಳು ಎಂದು ಅವರ ಪತ್ನಿ ವೀಡಿಯೋದಲ್ಲಿ ಹೇಳಿದ್ದಾರೆ. ಅಂತಹ ಅಪಾಯಕಾರಿ ಟಿವಿ ಚರ್ಚೆಗಳ ಮೇಲೆ ನಿಷೇಧ ಹೇರಿ ಎಂದೂ ಒತ್ತಾಯಿಸಿದ್ದಾರೆ.

“ಅವಹೇಳನಕಾರಿ ಟೀಕೆಗಳನ್ನು ಎದುರಿಸಿದ ತ್ಯಾಗಿ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಅವರು ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ” ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಸಂಬಿತ್ ಪಾತ್ರ ದ್ವೇಷ ಹರಡುವ ಮಾತುಗಳನ್ನಾಡಿದ್ದಾರೆ ಮತ್ತು ಸಹ ಪ್ಯಾನೆಲಿಸ್ಟ್‌ಗೆ ಅಪಚಾರ ಮಾಡಿದ್ದಾರೆ ಎಂದು ಅವರ ವಿರುದ್ಧ ಪಶ್ಚಿಮ ಬಂಗಾಳ ಯುವ ಕಾಂಗ್ರೆಸ್ ಅಧ್ಯಕ್ಷ ಶಾದಾಬ್ ಖಾನ್ ದೂರು ಸಲ್ಲಿಸಿದ್ದಾರೆ.

ಸಂಬಿತ್ ಪಾತ್ರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಟಿವಿ ಡಿಬೇಟ್‌ಗಳ್ನು ನಿರ್ಭಂಧಿಸಬೇಕು ಎಂಬ ಕೂಗುಗಳು ಜೋರಾಗಿದ್ದರು ಅದು ಸುಲಭಕ್ಕೆ ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

“ಹೆಚ್ಚಿನ ಸುದ್ದಿ ಚಾನೆಲ್‌ಗಳಿಗೂ ಪತ್ರಿಕೋದ್ಯಮಕ್ಕೂ ಯಾವುದೇ ಸಂಬಂಧವಿಲ್ಲ. ಈ ಚಾನೆಲ್‌ಗಳು ಆಡಳಿತದ ಬ್ಯಾಂಡ್-ಪಾರ್ಟಿಯಾಗಿ ಕಾರ್ಯನಿರ್ವಹಿಸುತ್ತವೆ. ಟಿಆರ್‌ಪಿ ಸಲುವಾಗಿ ಈ ಚಾನೆಲ್‌ಗಳು ತಪ್ಪಾದ ಮಾಹಿತಿಯ ಆಧಾರದ ಮೇಲೆ ಇಂತಹ ಕ್ರೂರ ನಾಟಕಗಳನ್ನು ಆಯೋಜಿಸುತ್ತವೆ. ಅವರ ಪ್ರದರ್ಶನಗಳು ಟಿಆರ್‌ಪಿಗೆ ಮಾತ್ರ ಸೀಮಿತವಾಗಿಲ್ಲ” ಎಂದು ರಾಜ್ಯಸಭಾ ಟಿವಿಯ ಮುಖ್ಯಸ್ಥರಾಗಿರುವ ಹಿರಿಯ ಪತ್ರಕರ್ತ ಊರ್ಮಿಳೇಶ್ ಹೇಳಿದ್ದಾರೆ.


ಇದನ್ನೂ ಓದಿ: ಟಿವಿ ಡಿಬೇಟ್ ನಂತರ ಹೃದಯಾಘಾತದಿಂದ ಕಾಂಗ್ರೆಸ್ ವಕ್ತಾರ ಸಾವು: ಅರೆಸ್ಟ್ ಸಂಬಿತ್ ಪಾತ್ರ ಟ್ರೆಂಡಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...