Homeನಿಜವೋ ಸುಳ್ಳೋಹಣ ಕೊಡದೇ ಬಸ್ ಬಿಡುವುದಿಲ್ಲ ಎಂದು ಮಧ್ಯರಾತ್ರಿಯಲ್ಲಿ ಹಠಹಿಡಿದ ರಾಜಸ್ತಾನ? ಸಂಬಿತ್‌ ಪಾತ್ರಾನ ಹೊಸ ಸುಳ್ಳು

ಹಣ ಕೊಡದೇ ಬಸ್ ಬಿಡುವುದಿಲ್ಲ ಎಂದು ಮಧ್ಯರಾತ್ರಿಯಲ್ಲಿ ಹಠಹಿಡಿದ ರಾಜಸ್ತಾನ? ಸಂಬಿತ್‌ ಪಾತ್ರಾನ ಹೊಸ ಸುಳ್ಳು

- Advertisement -
- Advertisement -

ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಮೇ 21ರಂದು ಟ್ವೀಟ್ ಮಾಡಿ 19 ಲಕ್ಷ ರೂಗಳನ್ನು ಬರೆದಿರುವ ಚೆಕ್ ಚಿತ್ರವೊಂದನ್ನು ಪ್ರಕಟಿಸಿದ್ದರು. “ರಾಜಸ್ತಾನದ ಕೋಟದಿಂದ ತಮ್ಮ ವಿದ್ಯಾರ್ಥಿಗಳನ್ನು ಕರೆತರಲು ಉತ್ತರ ಪ್ರದೇಶದಿಂದ ಬಸ್‌ಗಳು ಹೊರಟಿದ್ದವು. ವಾಪಸ್ ಬರಲು ಪ್ರಿಯಾಂಕ ಗಾಂಧಿಯವರ ನೇತೃತ್ವದ ಗುಜರಾತ್ ಸರ್ಕಾರ ಆ ಬಸ್‌ಗಳಿಗೆ ಡೀಸೆಲ್ ತುಂಬಿಸಿತ್ತು. ಆದರೆ ಮಧ್ಯರಾತ್ರಿಯೊಳಗೆ ಅದರ ಬಿಲ್ 19,76,286/- ರೂಗಳನ್ನು ಕಳಿಸದಿದ್ದರೆ ಇಲ್ಲಿಂದ ಬಸ್ ಹೊರಡಲು ಬಿಡುವುದಿಲ್ಲ ಎಂದು ಹಠ ಮಾಡಿದ್ದಾರೆ. ವಾವ್ ಎಂತಹ ಸಹಾಯ! ಕಾಂಗ್ರೆಸ್‌ನ ಎರಡು ಮುಖ!” ಎಂದು ಟ್ವೀಟ್ ಮಾಡಿದ್ದರು.

ಇದನ್ನು ಕನಿಷ್ಟ 48 ಸಾವಿರ ಜನ ಲೈಕ್ ಮಾಡಿದ್ದರಲ್ಲದೇ 18 ಸಾವಿರಕ್ಕೂ ಹೆಚ್ಚು ಜನ ಹಂಚಿಕೊಂಡಿದ್ದರು.
ಸಂಬಿತ್ ಪಾತ್ರ ಪ್ರಕಾರ ಕೇವಲ 19 ಲಕ್ಷ ಹಣ ವಿಚಾರದಲ್ಲಿ ಹಣ ಕೊಡದಿದ್ದರೆ ಬಸ್ ಕಳಿಸುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಧಮಕಿ ಹಾಕಿತ್ತು.

ಫ್ಯಾಕ್ಟ್‌ ಚೆಕ್

ಏಪ್ರಿಲ್ 17,18,19 ರಂದು ರಾಜಸ್ಥಾನದ ಕೋಟಾದಿಂದ ಉತ್ತರ ಪ್ರದೇಶಕ್ಕೆ 403 ಬಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಆ ಬಸ್‌ಗಳಿಗೆ ರಾಜಸ್ಥಾನದಲ್ಲಿ ಡೀಸೆಲ್ ತುಂಬಿಸಲಾಗಿದೆ. ಒಪ್ಪಂದದಂತೆ ಅದರ ಹಣವನ್ನು ’ಮೇ 05 ರಂದ’ ಉತ್ತರ ಪ್ರದೇಶ ಸರ್ಕಾರ ರಾಜಸ್ಥಾನಕ್ಕೆ ತುಂಬಿಕೊಟ್ಟಿದೆ.

ಈ ಕುರಿತು ಆಲ್ಟ್‌ನ್ಯೂಸ್ ಕೋಟಾದ ಜಿಲ್ಲಾಧಿಕಾರಿ ಓಂ ಕೇಸರ್ ಮತ್ತು ಜೈಪುರದ ಸಾರಿಗೆ ಅಧಿಕಾರಿ ನವೀನ್ ಜೈನ್‌ರವರನ್ನು ಮಾತನಾಡಿಸಿದೆ. ಅವರಿಬ್ಬರೂ ಎರಡೂ ರಾಜ್ಯಗಳ ಒಪ್ಪಂದದಂತೆ ಕೆಲಸ ಸುಗಮವಾಗಿ ನಡೆದಿದೆ. ಏಪ್ರಿಲ್ 17,18,19 ರಂದು ಡೀಸೆಲ್ ತುಂಬಿಸಿದ್ದಕ್ಕಾಗಿ ಮೇ 05ರಂದು ಹಣ ತಲುಪಿದೆ. ಇದರಲ್ಲಿ ತಡರಾತ್ರಿ ಬಸ್ ತಡೆಯುವ ಪ್ರಮೇಯವೇ ಉದ್ಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ಯುಪಿ ಸರ್ಕಾರದ ವತಿಯಿಂದಲೂ ಕೂಡ ಹಣ ನೀಡಿರುವುದನ್ನು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿಗಳನ್ನು ಕರೆತರುವ ಯೋಜನೆಯ ಭಾಗವಾಗಿದ್ದ ಉತ್ತರ ಪ್ರದೇಶದ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ನಮ್ಮ ಬೇಡಿಕೆಗಳಿಗೆ ರಾಜಸ್ಥಾನ ಸರ್ಕಾರವು ಸಂಪೂರ್ಣವಾಗಿ ಸಹಕರಿಸಿತು. ಕೊರತೆ ಬಂದ ಬಸ್‌ಗಳನ್ನು ಸಹ ರಾಜಸ್ಥಾನ ಸರ್ಕಾರವೇ ಕಳಿಸಿಕೊಟ್ಟಿತು. ಅದಕ್ಕೆ ಯುಪಿ ಸರ್ಕಾರ ಹಣ ಪಾವತಿಸಿದೆ. ಯಾವುದೇ ಅಡೆತಡೆಗಳು ಸಂಭವಿಸಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಅಲ್ಲಿಗೆ ಸಂಬಿತ್ ಪಾತ್ರ ಹೇಳಿದ್ದು ಸಂಪೂರ್ಣ ಸುಳ್ಳು ಎಂಬುದು ಸ್ಪಷ್ಟವಾಗಿದೆ. ಕೊರೊನಾ ವಿರುದ್ಧ ಎಲ್ಲಾ ರಾಜ್ಯಗಳು ರಾಜಕೀಯ ಮರೆತು ಜನರಿಗಾಗಿ ಕೆಲಸ ಮಾಡುತ್ತಿವೆ. ಆದರೆ ಸಂಬಿತ್‌ ಪಾತ್ರರಂತಹ ವ್ಯಕ್ತಿಗಳು ಈ ರೀತಿ ರಾಜ್ಯಗಳ ನಡುವೆ ಬಿರುಕು ಮೂಡಿಸುವ ಕೆಲಸ ಮಾಡಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಮೋದಿ ಪಶ್ಚಿಮ ಬಂಗಾಳ ಭೇಟಿ ವೇಳೆ ಚೌಕಿದಾರ್‌ ಚೋರ್‌ ಹೈ ಘೋಷಣೆ ಕೂಗಿದ್ದು ನಿಜವೇ? 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...