Homeಮುಖಪುಟಸೆಂಟ್ರಲ್‌ ವಿಸ್ತಾ ಯೋಜನೆ ಮತ್ತು ದೆಹಲಿಯ ಮೂಲಕ ಭಾರತವನ್ನು ವಶಪಡಿಸಿಕೊಳ್ಳುವ ಬಿಜೆಪಿ ಸರ್ಕಾರದ ಆಕ್ರಮಣಕಾರಿ ತಂತ್ರ

ಸೆಂಟ್ರಲ್‌ ವಿಸ್ತಾ ಯೋಜನೆ ಮತ್ತು ದೆಹಲಿಯ ಮೂಲಕ ಭಾರತವನ್ನು ವಶಪಡಿಸಿಕೊಳ್ಳುವ ಬಿಜೆಪಿ ಸರ್ಕಾರದ ಆಕ್ರಮಣಕಾರಿ ತಂತ್ರ

- Advertisement -
- Advertisement -

ದೇಶದ ಆರ್ಥಿಕ-ಸಾಮಾಜಿಕ ವ್ಯವಸ್ಥೆಯನ್ನೇ ಕೊರೋನಾ ಅಲ್ಲೋಲ ಕಲ್ಲೋಲ ಗೊಳಿಸಿದೆ. ಇದು ದೇಶಕ್ಕೆ ತನ್ನದೇ ಸಮಸ್ಯೆಗಳನ್ನು ಎದುರಿಸುವ ಪ್ರತಿರೋಧವನ್ನು ಬೆಳಸಿಕೊಳ್ಳಲು ಸದಾವಕಾಶವಾಗಿದೆ. ಸಾಂಕ್ರಾಮಿಕದ ನಡುವೆಯೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ‌ ಮಾತ್ರ ದೇಶದ ರಾಜಧಾನಿ ದೆಹಲಿಯ ಮೂಲ ವಿನ್ಯಾಸವನ್ನೇ ಬದಲಿಸುವ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಕಾರ್ಯಗತಗೊಳಿಸುವುದರಲ್ಲಿ ಮಗ್ನವಾಗಿದೆ.

ಕೇಂದ್ರಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್‌ ವಿಸ್ತಾ ಯೋಜನೆಯು ಇಪ್ಪತ್ತನೇ ಶತಮಾನದ ಇತಿಹಾಸದ ನೆನಪುಗಳನ್ನು ದೇಶದ ಇತಿಹಾಸದಿಂದ ಕೊನೆಗೊಳಿಸುವ ಆಡಳಿತದಲ್ಲಿರುವವರ ಅಭಿಲಾಶೆಯೇ ಹೊರತು ಮತ್ತೇನು ಅಲ್ಲ. ದೇಶದ ರಾಜಧಾನಿ ದೆಹಲಿಯಲ್ಲಿರುವ ಹಲವು ಐತಿಹಾಸಿಕ ಕಟ್ಟಡಗಳನ್ನು ಕೆಡವಿ ತನ್ನದೇ ಆದ ಹೊಸ ರಾಜಧಾನಿಯನ್ನು ಕಟ್ಟಿಕೊಳ್ಳಲು ಪ್ರಸ್ತುತ ಸರ್ಕಾರ ಮುಂದಾಗಿದೆ. 2024 ರ ಸಂಸತ್‌ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕೋವಿಡ್‌ ಸಾಂಕ್ರಾಮಿಕದ ನಡುವೆಯೂ ತನ್ನ ಮಹತ್ವದ ಯೋಜನೆಗೆ ತಾತ್ಕಾಲಿಕ ವಿರಾಮ ನೀಡಲು ಮೋದಿ ನೇತೃತದ ಸರ್ಕಾರ ಮುಂದಾಗುತ್ತಿಲ್ಲ.

ಇದನ್ನೂ ಓದಿ: ಮೋದಿಯ 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಬಿಡುಗಡೆಯಾಗಿದ್ದೆಷ್ಟು? – ವಿವರ ಇಲ್ಲಿದೆ!

ಈ ಸೆಂಟ್ರಲ್‌ ವಿಸ್ತಾ ಯೋಜನೆ ಬಾಬ್ರಿ ಮಸೀದಿಯನ್ನು ಕೆಡವಿದ ದುರಂತದ ಮುಂದುವರೆದ ಭಾಗದಂತೆ ಕಾಣುತ್ತಿದೆ. ಬ್ರಿಟಿಷರು ಭಾರತಕ್ಕೆ ಬರುವ ಮೊದಲಿನ ಇತಿಹಾಸವನ್ನು ಅಳಿಸಿ ತನ್ನ ಕಲ್ಪನೆಯ ರಾಮರಾಜ್ಯವನ್ನು ಆ ಜಾಗದಲ್ಲಿ ಸ್ಥಾಪಿಸುವುದು ಸರ್ಕಾರದ ಉದ್ಧೇಶ. ಬಿಜೆಪಿ ನೇತೃತ್ವದ ಕೇಂದ್ರಸರ್ಕಾರ ಉದ್ಘೋಷಿಸುವ ಹೊಸ ಹಿಂದುತ್ವವನ್ನು ದೇಶದಲ್ಲಿ ವ್ಯಾಪಕವಾಗಿ ಹರಡುವ ಕಾರ್ಯದ ಒಂದು ಭಾಗವಾಗಿ ಈ ಯೋಜನೆಯನ್ನು ಕಾರ್ಯಗೊಳಿಸಲಾಗುತ್ತಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಇತಿಹಾಸದ ಪಠ್ಯಗಳಿಂದ ಮೊಘಲ್‌ ಮುಂತಾದ ಭಾರತದಲ್ಲಿ ಆಳ್ವಿಕೆ ನಡೆಸಿದ ಮುಸ್ಲಿಂ ಸಾಮ್ರಾಜ್ಯದ ಇತಿಹಾಸವನ್ನು ಕೈಬಿಡಲಾಗಿದೆ. ಸರ್ಕಾರ ಈಗ ಇನ್ನು ಮುಂದುವರೆದು ಮತ್ತೆ ಮತ್ತೆ ಭಾರತದಲ್ಲಿ ಮುಸ್ಲಿಂ ಆಳ್ವಿಕೆಯನ್ನು ನೆನಪಿಸುವ ದೇಶದ ರಾಜಧಾನಿ ದೆಹಲಿಯ ವಿನ್ಯಾಸವನ್ನೇ ಬದಲಿಸಲು ಹೊರಟಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೆಹಲಿಯನ್ನು ಅದರ ಇಸ್ಲಾಮಿಕ್‌ ಇತಿಹಾಸದ ಕಾರಣಕ್ಕಾಗಿ ದ್ವೇಷಿಸುತ್ತದೆ. ಆದರೆ ಅದೇ ಸಂದರ್ಭದಲ್ಲಿ ಭಾರತದ ರಾಜಧಾನಿ ದೆಹಲಿಯಿಂದಲೇ ಕಾರ್ಯನಿರ್ವಹಿಸಲು ಬಯಸುತ್ತದೆ. ರಾಜಧಾನಿಯನ್ನು ಸುಂದರಗೊಳಿಸಿರುವ ಅದ್ಭುತ ವಾಸ್ತು ಶಿಲ್ಪದ ಐತಿಹಾಸಿಕ ಕಟ್ಟಡಗಳು, ಉದ್ಯಾನಗಳನ್ನು ಮಾತ್ರ ಸರ್ಕಾರ ಬದಲಾಯಿಸಲು ಬಯಸುತ್ತಿಲ್ಲ. ಸಾಂಸ್ಕೃತಿಕವಾಗಿ ರಾಜಧಾನಿ ದೆಹಲಿಯ ಅವಿಭಾಜ್ಯ ಅಂಗವಾಗಿರುವ ಆಹಾರ ಪದ್ಧತಿ, ಧಾರ್ಮಿಕ ಆಚರಣೆಗಳು, ಪ್ರಾರ್ಥನೆ ಮತ್ತು ರಾಜಕೀಯವಾಗಿ ತನಗೆ ತೊಡಕಾಗಿರುವ ಜನರ ರಾಜಕೀಯ ಪ್ರಜ್ಞೆಗಳು ಸರ್ಕಾರಕ್ಕೆ ನುಂಗಲಾಗದ ತುತ್ತಾಗಿ ಮಾರ್ಪಟ್ಟಿವೆ.

 

ಇದಕ್ಕೆ ಉದಾಹರಣೆ ಕಳೆದ ವರ್ಷ ದೆಹಲಿಯಲ್ಲಿ ನಡೆದ ಶಾಹೀನ್‌ ಬಾಗ್‌ ಹೋರಾಟ ಮತ್ತು ರೈತ ಹೋರಾಟಗಳು. ತನಗೆ ಪ್ರತಿರೋಧವನ್ನು ಒಡ್ಡುತ್ತಿರುವ ಈ ಘಟನೆಗಳಿಂದಾಗಿ ಸರ್ಕಾರ ಇನ್ನಷ್ಟು ತ್ವರಿತವಾಗಿ ತನ್ನ ಅಜೆಂಡಾವನ್ನು ಕಾರ್ಯಗತಗೊಳಿಸಲು ಹೊರಟಿದೆ. ಮೂಲದಲ್ಲಿ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿರುವುದು ದೆಹಲಿಯ ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಬೆರೆತುಹೋದ ಹೋರಾಟದ ಕೆಚ್ಚು. ದೆಹಲಿಯ ಇತಿಹಾಸದಲ್ಲೇ ಅಂತರ್ಗತವಾಗಿರುವ ಹೋರಾಟದ ಕೆಚ್ಚು ಮೋದಿ ಸರ್ಕಾರದ ನಿದ್ದೆಗೆಡಿಸಿದಂತಿದೆ. ಶಾಹೀನ್‌ ಭಾಗ್‌ ಹೋರಾಟದ ಸ್ಪೂರ್ತಿ ದೆಹಲಿಯ ಇತಿಹಾಸದಲ್ಲಿ ಅಡಗಿದೆಯೆಂದು ಅರಿತಿರುವ ಸರ್ಕಾರ, ಆ ಇತಿಹಾಸಗಳನ್ನು ಬದಲಾಯಿಸುವ ಮೂಲಕ ಜನರಲ್ಲಿ ಹೋರಾಟಕ್ಕೆ ಸ್ಪೂರ್ತಿ ನೀಡುವ ಅವರ ಅಸ್ಮಿತೆಯನ್ನು ನಾಶಪಡಿಸುವ ಗುರಿಯನ್ನು ಈ ಸೆಂಟ್ರಲ್‌ ವಿಸ್ತಾ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಇದನ್ನೂ ಓದಿ: ‘ಕಾಂಗ್ರೆಸ್‌ ಟೂಲ್‌ಕಿಟ್‌ ಎಕ್ಸ್‌ಪೋಸ್ಡ್‌‌’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆದ್ದ ನಾಯಕರೊಬ್ಬರ ವರ್ತನೆಯಾಗಿ ಸರ್ಕಾರದ ಇತ್ತೀಚಿನ ಧೋರಣೆಗಳು ತೋರುತ್ತಿಲ್ಲ. ಬದಲಾಗಿ ಕೇಂದ್ರ ಸರ್ಕಾರದ ಈ ನಡೆ ಯುದ್ಧವನ್ನು ಗೆದ್ದು ತಾನು ಜಯಿಸಿದ ನಗರವನ್ನು ಧ್ವಂಸಗೊಳಿಸಿ ತನಗೆ ಬೇಕಾದಂತೆ ನಿರ್ಮಿಸಿಕೊಳ್ಳುವ ಸಾಮ್ರಾಜ್ಯಶಾಹಿಯ ಧೋರಣೆಯಂತಿದೆ. ಶಾಹೀನ್‌ ಬಾಗ್‌‌ನಲ್ಲಿ ಹೋರಾಟ ನಿರತ ಮಹಿಳೆಯರನ್ನು ಸರ್ಕಾರ ಹಿಂಸಿಸಿದ ರೀತಿ, ದೆಹಲಿಯ ಗಡಿಯಲ್ಲಿ ಹೋರಾಟ ನಿರತ ರೈತರನ್ನು ನಡೆಸಿಕೊಂಡ ರೀತಿ, ವಲಸೆ ಕಾರ್ಮಿಕರು ಸಾವಿರಾರು ಕಿಲೋ ಮಿಟರ್‌ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುವಾಗಿನ ಸರ್ಕಾರದ ನಿರ್ಲಕ್ಷ್ಯ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಮೂಲಕ ದೆಹಲಿಯ ಅರವಿಂದ ಕೇಜರಿವಾಲ್‌ ನೇತೃತ್ವದ ಸರ್ಕಾರಕ್ಕೆ ನೀಡುತ್ತಿರುವ ಕಿರಿಕಿರಿ ಎಲ್ಲವೂ ದೇಶದ ಪ್ರಧಾನಿಯ ಸರ್ವಾಧಿಕಾರಿಯ ಧೋರಣೆಯನ್ನೇ ತೋರಿಸುತ್ತವೆ. ಇದಕ್ಕೆ ಹೊಸ ಸೇರ್ಪಡೆಯಾಗಿ ಸೆಂಟ್ರಲ್‌ ವಿಸ್ತಾ ಯೋಜನೆ.

ಮನುಷ್ಯನ ಇತಿಹಾಸದಲ್ಲಿ ನಾವು ಅನೇಕ ಅಕ್ರಮಣಕಾರಿಗಳನ್ನು ನೋಡಿದ್ದೇವೆ. ಇವರೆಲ್ಲರಲ್ಲಿ ಕಾಣುವ ಒಂದು ಸಾಮ್ಯತೆಯೆಂದರೆ ತಾನು ಗೆದ್ದ ಸಾಮ್ರಾಜ್ಯದ ಕಾನೂನು, ಸಂಪ್ರದಾಯ ಜನರ ಸಂಸ್ಕೃತಿಗಳನ್ನು ತಿರಸ್ಕರಿಸುವ ಗುಣ. ತನ್ನ ಹೊಸ ಸಾಮ್ರಾಜ್ಯದಲ್ಲಿ ಅಧಿಕಾರವನ್ನು ನಡೆಸಲು ಕೈಗೊಳ್ಳುವ ಸಾಮೂಹಿಕ ನರಹತ್ಯೆಗಳು. ಬಿಜೆಪಿಯು ಸದ್ಯ ಇದೇ ಮನಸ್ಥಿತಿಯಲ್ಲಿ ಆಡಳಿತದ ಚುಕ್ಕಾಣಿಹಿಡಿದು ದೇಶವನ್ನು ಆಳುತ್ತಿದೆ. ತನ್ನ ಆಕ್ರಮಣಕಾರಿ ಮನೋಧರ್ಮದಿಂದಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಪಾರದರ್ಶಕ ಚುನಾವಣೆ, ಕಾನೂನಿಗೆ ಗೌರವ, ಪತ್ರಿಕೆಗಳ ಸ್ವಾತಂತ್ರ್ಯ, ದೇಶದ ಸಂವಿಧಾನಕ್ಕೆ ಬದ್ಧತೆ, ರಾಜಕೀಯ ಭಿನ್ನಾಭಿಪ್ರಾಯ ಇದ್ಯಾವುದೂ ಅಗತ್ಯವೆಂದು ಕಂಡುಬರುತ್ತಿಲ್ಲ.

ಕೇಂದ್ರಸರ್ಕಾರದ ಆಕ್ರಾಮಣಕಾರಿ ಸಾಮ್ರಾಜ್ಯಶಾಹಿ ದೋರಣೆಯ ಹಿಂದಿರುವ ಉದ್ಧೇಶ ಕೇವಲ ಅಧಿಕಾರ ವಿಸ್ತರಣೆ ಮಾತ್ರವೇ? ಇದಕ್ಕೆ ಉತ್ತರ ತನ್ನ ಕನಸಿನ ಹಿಂದುತ್ವದ ಮರುಸ್ಥಾಪನೆ. ಹಿಂದುತ್ವದ ಅಜೆಂಡಾದ ಅನುಷ್ಠಾನಕ್ಕೆ ಸರ್ಕಾರ ಮೊದಲ ಆಯ್ಕೆ ದೇಶದ ರಾಜಧಾನಿ ದೆಹಲಿ. ಈ ಮೊದಲು ಸರ್ಕಾರ ಅನೇಕ ನಗರಗಳ ಹೆಸರನ್ನು ಬದಲಾಯಿಸಿದೆಯಾದರೂ ಅದು ಪೂರ್ಣ ಪ್ರಮಾಣದಲ್ಲಿ ಬಿಜೆಪಿಯ ಅಜೆಂಡಾಗೆ ಪೂರಕವಾಗಿ ಫಲಕೊಡದಿರುವುದು ದೆಹಲಿಯನ್ನು ಹೊಸದಾಗಿ ನಿರ್ಮಿಸಲು ಸರ್ಕಾರಕ್ಕೆ ಪ್ರಚೋದನೆಯನ್ನು ನೀಡಿದೆ. ಪ್ರಜಾಸತ್ತಾತ್ಮವಾಗಿ ಆಯ್ಕೆಯಾದ ಸರ್ಕಾರವಾಗಿದ್ದರೆ ದೇಶವನ್ನು ನಿಯಂತ್ರಿಸುವ ಆಡಳಿತ ಶಕ್ತಿಯಿಂದ ಬಿಜೆಪಿ ಸಂತೃಪ್ತವಾಗುತ್ತಿತ್ತು. ಆದರೆ ಆಕ್ರಮಣಕಾರಿಗಳು ಅಷ್ಟಕ್ಕೆ ಸಮಾಧಾನಗೊಳ್ಳಲಾರರು. ಸಾಮ್ರಾಜ್ಯ ಜಯಿಸಿದ ದಂಡನಾಯಕರು ತಾನು ಗೆದ್ದ ನಗರಗಳ ಮಹಿಳೆಯರನ್ನು ಹೊಂದುವುದು, ಸ್ಮಾರಕಗಳನ್ನು ಹೊಂದುವುದು ತಮ್ಮ ವಿಜಯದ ಸಂಕೇತವೆಂದು ಭಾವಿಸುತ್ತಾರೆ. ಆ ಮೂಲಕ ತನ್ನ ಹೊಸ ಸಾಮ್ರಾಜ್ಯದ ಜನರಲ್ಲಿ ಭಯವನ್ನು ಹುಟ್ಟಿಸುತ್ತಾರೆ.

ಇದನ್ನೂ ಓದಿ: ಹಿಂದು ರಾಷ್ಟ್ರವೆಂಬುದೇ ಭ್ರಮೆ; ಆಕಾರ್ ಪಟೇಲ್ ಅವರ ’ಅವರ್ ಹಿಂದು ರಾಷ್ಟ್ರ’ ಪುಸ್ತಕ ಪರಿಚಯ

ಸೆಂಟ್ರಲ್‌ ವಿಸ್ತಾ ಯೋಜನೆಯ ಮುಖ್ಯ ಶಿಲ್ಪಿ ಬಿಮಲ್‌ ಪಟೇಲ್‌ ಮತ್ತು ಹಿಟ್ಲರ್‌‌ನ ಸ್ಟಾರ್‌ ಆರ್ಕಿಟೆಕ್ಟ್‌ ಅಲ್ಬರ್ಟ್‌ ಸ್ಪೀರ್‌ ನಡುವೆ ಹಲವು ಸಾಮ್ಯತೆಗಳಿವೆ. ಬಿಜೆಪಿ ಮತ್ತು ಹಿಟ್ಲರ್‌ನ ನಾಜಿ ಪಕ್ಷದಂತೆ ಒಬ್ಬರನ್ನೊಬ್ಬರು ಇವರು ಹೋಲುತ್ತಾರೆ. ಸರ್ಕಾರ ನಿರ್ಮಿಸಲು ಹೊರಟಿರುವ ಹೊಸ ವಾಸ್ತುಶಿಲ್ಪಗಳು ಬೃಹತ್‌ ಸಂಖ್ಯೆಯ ಜನರು ನೆರೆಯಲು ಅನುವಾಗುವಂತಹ ವಿನ್ಯಾಸವನ್ನು ಹೊಂದಿವೆ. ಅಪಾರವಾದ ಕಲ್ಲು, ಕಾರ್ಮಿಕರು ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಈ ಸೆಂಟ್ರಲ್‌ ವಿಸ್ತಾ ಯೋಜನೆಯು ಈಜಿಪ್ಟಿನ ಪಿರಮಿಡ್ಡುಗಳು, ಚೀನಾದ ಬೃಹತ್‌ ಗೋಡೆ ಹಾಗು ಕೆಂಪುಕೋಟೆ ಹಿಂದೆ ಅಲ್ಲಿನ ಸಾಮ್ಯಾಜ್ಯಶಾಹಿಗಳಿಗೆ ನೀಡಿದ ಬೃಹತ್‌ ಶಕ್ತಿಯನ್ನು ಇಂದಿನ ಸರ್ಕಾರಕ್ಕೂ ನೀಡಬಹುದು.

ಉಮರ್‌ ಖಾ
ಶಾಹಿನ್‌ ಬಾಗ್ ನ ಪ್ರತಿಭಟನೆ ಫೋಟೋ.

ವಿಮಲ್‌ ಪಟೇಲ್‌ ಮತ್ತವರ ಸಹುದ್ಯೋಗಿಗಳು ಕೇವಲ ವಾಸ್ತುಶಿಲ್ಪಿಗಳಲ್ಲ. ಅವರು ಹೊಸ ಸೂಚನೆಯನ್ನು ನೀಡುತ್ತಿರುವ ಶಿಲ್ಪಿಗಳು. ಅರ್ಥಶಾಸ್ತ್ರದಲ್ಲಿ ಈ ಸೂಚನೆ ಎಂಬ ಪದವನ್ನು ಬಳಸಲಾಗುತ್ತದೆ. ಉದ್ಯಮದ ಒಪ್ಪಂದಗಳಲ್ಲಿ ಒಬ್ಬರು ಮತ್ತೊಬ್ಬರಿಗೆ ಈ ಸೂಚನೆಗಳ ಮೂಲಕ ಮಾಹಿತಿಯನ್ನು ರವಾನಿಸುತ್ತಾರೆ. ಸೆಂಟ್ರಲ್‌ ವಿಸ್ತಾ ಯೋಜನೆಯ ಮೂಲಕ ವಿಮಲ್‌ ಪಟೇಲ್‌ ಮತ್ತವರ ತಂಡ ದೆಹಲಿಯ ಜನರಿಗೆ, ದೇಶಕ್ಕೆ, ಜಗತ್ತಿಗೆ ಹೊಸ ಸೂಚನೆಯೊಂದನ್ನು ರವಾನಿಸುತ್ತಿದೆ. ಆ ಸೂಚನೆಯೇನೆಂದರೆ ದೆಹಲಿಗೆ ಹೊಸ ದೊರೆ ಬಂದಿದ್ದಾನೆ. ಅವನು ದೀರ್ಘಕಾಲದ ಆಡಳಿತವನ್ನು ಅಪಾರ ಹಣ, ಹಾಗೂ ಪ್ರಬಲ ಶಕ್ತಿಯನ್ನು ಹೊಂದಿದ್ದಾನೆ ಎಂದು. ಈ ಸಂದೇಶವನ್ನು ವಿಮಲ್ ಕುಮಾರ್ ನೇತೃತ್ವದ ಸೆಂಟ್ರಲ್‌ ವಿಸ್ತಾ ಯೋಜನೆಯ ಮೂಲಕ ಮೋದಿ ಸರ್ಕಾರ ಜಗತ್ತಿಗೆ ರವಾನಿಸುತ್ತಿದೆ.

ಮೋದಿ ನೇತೃತ್ವದ ಸರ್ಕಾರ ತಾನು ಎಣಿಸಿದಂತೆಯೇ ಎಲ್ಲವೂ ನಡೆಯುತ್ತಿದೆ ಎಂದು ನಿರಮ್ಮಳವಾಗಿತ್ತು. ತನ್ನ 50 ವರ್ಷಗಳ ಸುದೀರ್ಘ ಆಡಳಿತದ ಆರಂಭವೆಂಬಂತೆ ರಾಜಕೀಯ ವಿರೋಧಿಗಳನ್ನು, ಪ್ರತಿಭಟನಾಕಾರರನ್ನು ನಿಗ್ರಹಿಸಿ, ಬಂಡವಾಳಶಾಹಿ ಉದ್ಯಮಿಗಳನ್ನು ತನ್ನತ್ತ ಸೆಳೆಯುತ್ತ, ಅಂತರಾಷ್ಟ್ರೀಯ ಮಾಧ್ಯಮಗಳನ್ನು ನಂಬಿಸುತ್ತ, ನೆರೆಯ ದೇಶವನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಯಾರೂ ಎಣಿಸುದ ಕೊರೊನಾ ಸಾಂಕ್ರಾಮಿಕ ಸರ್ಕಾರದ ಬೃಹತ್‌ ಯೋಜನೆಗೆ ತಾತ್ಕಾಲಿಕ ಹಿನ್ನಡೆಯನ್ನುಂಟುಮಾಡಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ‘ಅನುಕಂಪಕ್ಕಾಗಿ ಗಾಝಾ ನಾಟಕವಾಡುತ್ತಿದೆ’ ಎಂದು ಎಡಿಟೆಡ್‌‌ ವಿಡಿಯೊ ಶೇರ್‌ ಮಾಡುತ್ತಿರುವ ಬಲಪಂಥೀಯರು!

ವಿದ್ಯಾರ್ಥಿಗಳನ್ನು, ರೈತರನ್ನು, ದಲಿತರನ್ನು, ಮುಸ್ಲಿಮರನ್ನು, ಸಿಖ್ಖರನ್ನು ನಿಗ್ರಹಿಸುವಲ್ಲಿ ನಿಪುಣವಾಗಿರುವ ಸರ್ಕಾರ ಪ್ರಕೃತಿಯನ್ನು ನಿಯಂತ್ರಿಸುವಷ್ಟು ಪಳಗಿಲ್ಲ. ಅನಿವಾರ್ಯವಾಗಿ ಅವರು ಕೋವಿಡ್‌ ಪರಿಸ್ಥಿತಿ ಅಂತ್ಯವಾಗುವವರೆಗೆ ಕಾಯಲೇಬೇಕಿದೆ. ಕೋವಿಡ್‌ ವೈರಸನ್ನು ಕೊಳ್ಳಲು, ನಿಗ್ರಹಿಸಲು ಅಥವಾ ನಾಶಪಡಿಸಲು ಸಾಧ್ಯವಿಲ್ಲ. ಸಾಮೂಹಿಕ ಸ್ನಾನ, ಗೋ ಮೂತ್ರದ ಸೇವನೆಯಂತಹ ಹಿಂದುತ್ವದ ವಿಜ್ಞಾನವೂ ಸರ್ಕಾರವನ್ನು ಈ ಸಂಕಷ್ಟದಿಂದ ಪಾರುಮಾಡಲು ಸಾಧ್ಯವಾಗುತ್ತಿಲ್ಲ. ಸಧ್ಯಕ್ಕೆ ದೇಶದಲ್ಲಿ ಕಾಣುತ್ತಿರುವುದು ಸಾವಿರಾರು ಚಿತೆಗಳನ್ನು ಉರಿಸುತ್ತಿರುವ ಭೌತ ವಿಜ್ಞಾನ ಮಾತ್ರ. ಅದೂ ಸರ್ಕಾರದ ವಿರುದ್ಧವಾಗಿ ಕೆಲಸಮಾಡುತ್ತಿದೆ.

ಸದ್ಯದ ಪರಿಸ್ಥಿತಿ ಸೆಂಟ್ರಲ್‌ ವಿಸ್ತಾ ಯೋಜನೆಯ ಅನುಷ್ಠಾನಕ್ಕೆ ಯಾವ ರೀತಿಯಲ್ಲೂ ಅನುಕೂಲ ಮಾಡಿಕೊಡುತ್ತಿಲ್ಲ. ಬಿಜೆಪಿ ಸರ್ಕಾರ ಈಗ ತನ್ನನ್ನು ತಾನು ಸಮರ್ಥಿಸಿಕೊಳ್ಳಬೇಕಾದ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳದ ಚುನಾವಣಾ ಫಲಿತಾಂಶಗಳು ಸರ್ಕಾರ ಮತ್ತು ಪ್ರಧಾನ ಮಂತ್ರಿ ಮೋದಿಯವರನ್ನು ಮೌನಕ್ಕೆ ದೂಡಿವೆ. ಸದ್ಯ ದೇಶದ ಮಹಾದಂಡನಾಯಕ ವೈದ್ಯಸಮೂಹಕ್ಕೆ ನೈತಿಕ ಸ್ಥೈರ್ಯ ತುಂಬುವ, ಇರುವಷ್ಟು ಆಮ್ಲಜನಕವನ್ನು ರಾಜ್ಯಗಳಿಗೆ ಹಂಚುವ, ಸಾಮಾಜಿಕ ಅಂತರಕ್ಕಾಗಿ ಜನರಲ್ಲಿ ಮೊರೆಯಿಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಸಾಂಕ್ರಾಮಿಕವು ವಿಜಯಶಾಲಿ ನಾಯಕನನ್ನು ಹಾಗೂ ರಾಜ್ಯದ ಜನ ಎರಡನ್ನೂ ಒಟ್ಟಿಗೆ ವಿಪತ್ತಿನಲ್ಲಿ ಸಿಲುಕಿಸಿದೆ. ನಮ್ಮನ್ನಾಳುತ್ತಿರುವ ನಾಯಕನ ಮುಂದಿರುವ ಈಗಿನ ಆಯ್ಕೆಯೆಂದರೆ ಕುಸಿಯುತ್ತಿರುವ ಜನಪ್ರಿಯತೆ, ಮತ್ತು ಬೆಂಬಲವನ್ನು ಮರಳಿ ಗಳಿಸಿಕೊಳ್ಳುವುದು. ಮೊನ್ನೆ ದೇಶದ ಮುಂದಿನ ಅವರ ಅಳು ಇದೇ ಪ್ರಯತ್ನದಂತೆ ತೋರುತ್ತದೆ.

ಮಾತುಕತೆ

ಕೇಂದ್ರದ ಬಿಜೆಪಿ ನೇತ್ರತ್ವದ ಸಾಮ್ರಾಜ್ಯಶಾಹಿಯ ಅಕ್ರಮಣದ ವಿರುದ್ಧ ಪ್ರತಿರೋಧವನ್ನೊಡ್ಡಲು ಇದು ಸರಿಯಾದ ಸಂದರ್ಭ. ದೇಶದ ಒಳಗಿನಿಂದ ಮತ್ತು ದೇಶದ ಹೊರಗಿನಿಂದ ಮುಂದೊದಗಬಹುದಾದ ದುರಂತದ ವಿರುದ್ಧ ಪ್ರತಿರೋಧವನ್ನು ತೋರಿಸಲೇ ಬೇಕಾದ ಸಂದರ್ಭ ಇದು. ದೇಶದ ಪ್ರತಿಯೊಬ್ಬನೂ ಸೋಂಕಿನಿಂದ ತನ್ನನ್ನು ರಕ್ಷಿಸಿಕೊಳ್ಳಲು ಹೋರಾಡುತ್ತಿದ್ದಾನೆ. ಆಮ್ಲಜನಕ, ಬೆಡ್ಡು, ವೆಂಟಿಲೇಟರ್‌‌ಗಳಿಗಾಗಿ ಜನರು ಪರದಾಡುತ್ತಿದ್ದಾರೆ. ಈ ದುರಂತದ ಘಳಿಗೆ ಕಳೆದರೆ ಸಾಕೆಂದು, ಎಲ್ಲವೂ ಸರಿಹೋಗುವ ಘಳಿಗೆಯ ಸುದೀರ್ಘ ನಿರೀಕ್ಷೆಯಲ್ಲಿ ಎಲ್ಲರು ತೊಡಗಿದ್ದಾರೆ. ಬಹಿರಂಗ ಪ್ರತಿತರೋಧಕ್ಕೆ ಇದು ಸರಿಯಾದ ಸಮಯವಲ್ಲ. ಸರ್ಕಾರದ ವಿರುದ್ಧ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಮುಂದುವರೆಸಲೂ ಕಷ್ಟದ ಕಾಲ ಇದು. ಸರ್ಕಾರ ತನ್ನ ಹಿಂದುತ್ವದ ಕಾರ್ಯಯೋಜನೆಯನ್ನು ಮುಂದುವರೆಸಲು ಜನರು ಪ್ರತಿರೋಧವನ್ನು ತೋರಿಸಲು ಸರಿಯಾದ ಸಮಯಕ್ಕಾಗಿ ಕಾದು ಕುಳಿತಿರುವ ಸಂದರ್ಭ ಇದು.

ಇದನ್ನೂ ಓದಿ: ‘ಕಾಂಗ್ರೆಸ್‌ ಟೂಲ್‌ಕಿಟ್‌ ಎಕ್ಸ್‌ಪೋಸ್ಡ್‌‌’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!

ಕೋವಿಡ್‌ ಸಾಂಕ್ರಾಮಿಕದ ತುರ್ತು ಪರಿಸ್ಥಿಯಲ್ಲೂ ಸಂವಿಧಾನಾತ್ಕಕ ಪ್ರಜಾಪ್ರಭುತ್ವದ ಪರವಾಗಿ ಮಾಧ್ಯಮದ ಸ್ವಾತಂತ್ರ್ಯಕ್ಕಾಗಿ ಮತ್ತು ಆಢಳಿತ ವ್ಯವಸ್ಥೆ ನಡೆಸುವ ಹಿಂಸೆ ಮತ್ತು ಕ್ರೌರ್ಯದ ವಿರುದ್ಧ ಕೆಲಸಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಈಗ ಕೇಂದ್ರದ ಆಕ್ರಮಣಕಾರಿ ನೀತಿಯನ್ನು ತಡೆಯಲು ದೇಶದ ಮುಂದಿರುವ ಪರ್ಯಾಯಗಳೇನು? ರೈತ ಹೋರಾಟದಲ್ಲಿ, ಎನ್‌ಆರ್‌ಸಿ ವಿರುದ್ಧದ ಹೋರಾಟಗಳಲ್ಲಿ ಆದಂತೆ ಜನರ ಜೀವವನ್ನು ನಷ್ಟ ಮಾಡದೇ ಸತತವಾಗಿ ಜನರನ್ನು ಜಾಗೃತಗೊಳಿಸುವ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಧೈರ್ಯವಾಗಿ ಭಿನ್ನಾಭಿಪ್ರಾಯಗಳನ್ನು ಪ್ರಕಟಿಸುತ್ತ, ಕಲೆ ಮತ್ತು ಸಾಹಿತ್ಯದ ಮೂಲಕ ವಿರೋಧವನ್ನು ಅಭಿವ್ಯಕ್ತಿಸುವುದೊಂದೆ ದೇಶದ ಮುಂದಿರುವ ಮಾರ್ಗ.

ಇದರ ಭಾಗವಾಗಿ ನೂರಾರು ವಿಜ್ಞಾನಿಗಳು, ವಿಶ್ವವಿದ್ಯಾಲಯದ ಪ್ರಧ್ಯಾಪಕರು, ಸಾಹಿತಿಗಳು, ಕಲಾವಿದರು, ಹೋರಾಟಗಾರರು ತಮ್ಮ ಪ್ರತಿಭಟನೆಯನ್ನು ಪತ್ರದ ಮೂಲಕ ಮತ್ತು ರೈತ ಹೋರಾಟಕ್ಕಕೆ ತಮ್ಮ ಮನೆಯಿಂದಲೇ ಬೆಂಬಲಿಸುವ ಮೂಲಕ ಪ್ರಕಟಿಸುತ್ತಿದ್ದಾರೆ. ಬಿಜೆಪಿ ಮತ್ತು ಅದರ ಆಕ್ರಮಣದ ವಿರುದ್ಧ ದೆಹಲಿ ಮತ್ತು ಭಾರತದ ಹೋರಾಟಕ್ಕೆ ಡಿಜಿಟಲ್‌ ಜಗತ್ತು ಉತ್ತಮ ವೇದಿಕೆ. ದೇಶದಲ್ಲಿ ಎಲ್ಲರಿಗಿಂತ ಮೊದಲು ಡಿಜಿಟಲ್‌ ಮಾಧ್ಯಮದ ಮಹತ್ವವನ್ನು ಅರಿತ ಬಿಜೆಪಿ ಅದೇ ಮಾಧ್ಯಮದ ಮೂಲಕ ದೇಶದ ಮೂಲೆ ಮೂಲೆಗೆ ತನ್ನ ಸಿದ್ಧಾಂತವನ್ನು ಹರಡುತ್ತಿದೆ. ಈಗ ಬಿಜೆಪಿ ನೇತೃತ್ವದ ಸರ್ಕಾರದ ಈ ಡಿಜಿಟಲ್‌ ಆಕ್ರಮಣದ ವಿರುದ್ಧ ಡಿಜಿಟಲ್‌ ಜಗತ್ತಿನ ಮೂಲಕವೇ ಪ್ರತಿರೋಧವೊಡ್ಡಬೇಕಿರುವುದು ಈ ಹೊತ್ತಿನ ಅನಿವಾರ್ಯ.

ಇದರಾಚೆಗೆ ಮಮತಾ ಬ್ಯಾನರ್ಜಿ, ಸ್ಟಾಲಿನ್‌, ಪಿಣರಾಯಿ ವಿಜಯನ್‌ ಮುಂತಾದ ನಾಯಕರ ಗೆಲುವು ಮತ್ತು ಅವರ ರಾಜಕೀಯ ಸಂಘಟನಾ ಚಾತುರ್ಯ ಭಾರತದಲ್ಲಿ ಪ್ರಗತಿಪರ ಪ್ರಜಾಸತ್ತಾತ್ಮಕ ಯೋಚನೆಗಳು ಸತ್ತಿಲ್ಲ ಎಂಬುದನ್ನು ಖಾತರಿಪಡಿಸುತ್ತವೆ. ದೆಹಲಿಗೆ ಮುತ್ತಿಗೆ ಹಾಕಿದ ರೈತ ವರ್ಗ ಮತ್ತು ಸಿಖ್‌ ಸಮುದಾಯ, ಇವರನ್ನು ಬೆಂಬಲಿಸಿದ ಗ್ರಾಮೀಣ ಭಾರತ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಧಾರ್ಮಿಕ ಆಕ್ರಮಣಕಾರಿ ರಾಜಕೀಯಕ್ಕೆ ಪ್ರತಿರೋಧವೊಡ್ಡಿ ಮಮತಾ ಬ್ಯಾನರ್ಜಿಯ ಜೊತೆ ನಿಂತ ಮಹಿಳಾ ಶಕ್ತಿ, ಕೇರಳ ತಮಿಳುನಾಡಿನ ಪ್ರಾದೇಶಿಕ, ಸಾಂಸ್ಕೃತಿಕ ಮತ್ತು ಸೆಕ್ಯುಲರ್‌ ಅಸ್ಮಿತೆಗಳು ಮೋದಿ ಸರ್ಕಾರದ ಆಕ್ರಮಣದ ವಿರುದ್ಧದ ಹೋರಾಟದ ಪ್ರಬಲ ಶಕ್ತಿಗಳಾಗಿ ತೋರುತ್ತವೆ.

ಇದನ್ನೂ ಓದಿ: ಗುಜರಾತ್ ನಕಲಿ ರೆಮ್ಡೆಸಿವಿರ್ ದಂಧೆ: ಬಂಧಿತರಲ್ಲಿ ಇಬ್ಬರು ಮುಸ್ಲಿಮರಷ್ಟೇ ಅಲ್ಲ, 5 ಹಿಂದೂಗಳೂ ಇದ್ದಾರೆ!

ಸರ್ಕರಾದ ವ್ಯವಸ್ಥಿತ ಆಕ್ರಮಣದ ವಿರುದ್ಧದ ಹೋರಾಟ ನೆಹರು ಕಾಲದ ಭವ್ಯ ನೆನಪುಗಳಿಂದಲೋ, ಬೃಹತ್‌ ಆಣೆಕಟ್ಟೆಗಳ ಕುರಿತು ಮಾತನಾಡುವುದರಿಂದಲೋ ಅಥವಾ ವಿಶ್ವವಿದ್ಯಾಲಯಗಳ ಸೆಮಿನಾರ್‌‌ಗಳಿಂದಲೋ ಸಾಧ್ಯವಿಲ್ಲ. ನಿಜವಾದ ಪ್ರತಿರೋಧವನ್ನು ಕೇರಳ ತಮಿಳುನಾಡಿನ ಜನರು ತಮ್ಮ ದ್ರಾವಿಡಿಯನ್‌ ಅಸ್ಮಿತೆಗಾಗಿ ಬಿಜೆಪಿಯ ಹಿಂದುತ್ವದ ವಿರುದ್ಧ ನಡೆಸುತ್ತಿರುವ ಸುದೀರ್ಘ ಸಂಘರ್ಷಗಳಿಂದ, ದೆಹಲಿಯ ಆಳುವವರ್ಗಕ್ಕೆ ಇನ್ನೂ ರಹಸ್ಯವಾಗಿರುವ ಈಶಾನ್ಯ ಭಾರತದ ಜನರ ಸಾಂಸ್ಕೃತಿಕ ಅಭಿವ್ಯಕ್ತಿಯಿಂದ, ತೆಲಂಗಾಣದಿಂದ ನೇಪಾಳದ ಗಡಿಯವರೆಗೆ ಹಬ್ಬಿರುವ ಬುಡಕಟ್ಟುಗಳು ದಶಕಗಳಿಂದ ತಮ್ಮ ನೆಲ, ನೀರನ್ನು ಉಳಿಸಿಕೊಳ್ಳಲು ತೋರುತ್ತಿರುವ ಕೆಚ್ಚಿನಿಂದ ಕಲಿಯಬೇಕು.

ಪಂಜಾಬಿನ ದಂತ ವೈದ್ಯಕೀಯ ವಿದ್ಯಾರ್ಥಿ ಸಂಘದಿಂದ ರೈತ ಹೋರಾಟಕ್ಕೆ ಬೆಂಬಲ

ಮಹರಾಷ್ಟ್ರದಲ್ಲಿ ಶರದ್‌ ಪವಾರ್‌-ಉದ್ಧವ ಠಾಕ್ರೆ ಬಿಜೆಪಿಯ ಹಿಂದುತ್ವ ಅಜೆಂಡಾದ ವಿರುದ್ಧ ಹೆಣೆದ ರಾಜಕೀಯ ತಂತ್ರಗಾರಿಕೆಯಿಂದಲೂ ಆಕ್ರಮಣದ ವಿರುದ್ಧ ಸೆಣೆಸುವುದನ್ನು ಕಲಿಯಬೇಕು.

ಸಿದ್ಧಾಂತ, ವೈಚಾರಿಕ ಚಿಂತನೆ, ಮಾಧ್ಯಮದ ಪ್ರತಿಕ್ರಿಯೆ, ಕಾನೂನಾತ್ಮಕ ಸಂಘರ್ಷ ಮತ್ತು ಹೊಸ ನರೇಟಿವ್‌‌ಗಳನ್ನು ಕಟ್ಟುವ ಪ್ರಕ್ರಿಯೆಗಳ ಮೂಲಕ ಮಾತ್ರ ಮೋದಿ ನೇತೃತ್ವದ ಬಿಜೆಪಿಯ ಹಿಂದುತ್ವ ಸರ್ಕಾರದಿಂದ ಭಾರತನ್ನು ರಕ್ಷಿಸಲು ಸಾಧ್ಯ. ಇದು ಕೇವಲ ಹಿಂದುತ್ವದ ವಿರುದ್ಧದ ಹೋರಾಟವಾಗಿರದೇ ಗಾಂಧೀ, ಅಂಬೇಡ್ಕರ್‌, ಬುದ್ಧ, ಬಸವ, ಪೆರಿಯಾರ್‌ ಮುಂತಾದವರ ವೈವಿಧ್ಯಮಯ ಭಾರತದ ಅಸ್ಮಿತೆಯನ್ನು ಉಳಿಸುವ ಪ್ರಯತ್ನವೂ ಹೌದು.

ದಿವೈರ್‌‌ ಮೂಲ: ಅರ್ಜುನ್‌ ಅಪ್ಪಾದೊರೈ
ಪ್ರಾಧ್ಯಾಪಕರು ನ್ಯೂಯಾರ್ಕ್‌ ಮತ್ತು ಬರ್ಲಿನ್‌ ವಿಶ್ವವಿದ್ಯಾಲಯ
ಇಸ್‌ ಫೇಲ್ಯೂರ್‌ ಪುಸ್ತಕದ ಲೇಖಕರು.
ಅನುವಾದ: ರಾಜೇಶ್‌‌ ಹೆಬ್ಬಾರ್‌‌

ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...