20 ಲಕ್ಷ ಕೋಟಿ ಪ್ಯಾಕೇಜ್‌‌ ಕೊರೊನಾ ಜುಮ್ಲಾ: ರಾಹುಲ್ ಗಾಂಧಿ ಟ್ವೀಟ್

ಕೊರೊನಾ ಸಂದರ್ಭದ ಆರ್ಥಿಕ ಹಿನ್ನಡೆಯನ್ನು ಸರಿದೂಗಿಸುವ ಸಲುವಾಗಿ ಮೇ ತಿಂಗಳಿನಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಆತ್ಮನಿರ್ಭರ ಪ್ಯಾಕೇಜನ್ನು ಘೋಷಿಸಿತ್ತು. ಆದರೆ ಇದುವರೆಗೂ ಈ ಪ್ಯಾಕೇಜ್‌ನ ಕೇವಲ ಶೇ 10 ರಷ್ಟು ಹಣ ಮಾತ್ರ ಹಂಚಿಕೆಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಚುನಾವಣೆಯ ಜುಮ್ಲಾ – ಪ್ರತಿಯೊಬ್ಬರ ಅಕೌಂಟಿಗೂ 15 ಲಕ್ಷ, ಕೊರೊನಾ ಜುಮ್ಲಾ – 20 ಲಕ್ಷ ಕೋಟಿ ಪ್ಯಾಕೇಜ್” ಎಂದು ಟ್ವೀಟ್ ಮಾಡಿ ಪತ್ರಿಕಾ ವರದಿಯೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ಪ್ರಧಾನ ಮಂತ್ರಿ ಆಗಬೇಕು ಎನ್ನುವ ಆಸೆ ನನಗಿಲ್ಲ…’ – ಸಿದ್ದರಾಮಯ್ಯ

ಮೊದಲೇ ಇಳಿಮುಖವಾಗುತ್ತಿದ್ದ ಆರ್ಥಿಕತೆ ಕೊರೋನಾ ಸಾಂಕ್ರಾಮಿಕ ರೋಗದಿಂದ ಮತ್ತಷ್ಟು ಇಳಿಯತೊಡಗಿತು. ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರದ ಸರಿಯಾದ ನಿರ್ವಹಣೆಯಿಲ್ಲದೇ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ -23ಕ್ಕೆ ಕುಸಿದಿತ್ತು. ಈ ಸಮಸ್ಯೆಯಿಂದ ಹೊರಬರುಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿಯ ಆರ್ಥಿಕ ಉತ್ತೇಜಕ ಪ್ಯಾಕೇಜ್‌ ಅನ್ನು ಘೋಷಿಸಿತ್ತು.

ಇದನ್ನೂ ಓದಿ: ಕೊರೊನಾ ಪ್ಯಾಕೇಜ್‌ ಅಸಮರ್ಪಕ, ದೇಶದ ಆರ್ಥಿಕತೆ ಕುಸಿಯುತ್ತಿದೆ: ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್‌ ಸ್ವಾಮಿ

ಈ ಪ್ಯಾಕೇಜ್‌ನ ವಿವರಗಳನ್ನು ಕೋರಿ ಪುಣೆಯ ಉದ್ಯಮಿ ಪ್ರಫುಲ್ ಸರ್ದಾ ಎಂಬುವವರು ಆರ್‌ಟಿಐ ಅಡಿಯಲ್ಲಿ ಮಾಹಿತಿ ಕೋರಿದ್ದರು. ಇದರಲ್ಲಿ ಕೆಲವು ಅಚ್ಚರಿಯ ಅಂಶಗಳು ಬಹಿರಂಗವಾಗಿವೆ.

ಈ ಬೃಹತ್ ಪ್ಯಾಕೇಜ್ ವಿತರಣೆಯ ಅಡಿಯಲ್ಲಿ, ವಲಯವಾರು ಮತ್ತು ರಾಜ್ಯವಾರು ನೀಡಬೇಕಾಗಿರುವ ಯಾವುದೇ ಬಾಕಿ ಮೊತ್ತವು ಬಾಕಿ ಉಳಿದಿದೆಯೇ ಎಂಬ ವಿವರಗಳನ್ನು ಕೋರಲಾಗಿತ್ತು.

ಇದನ್ನೂ ಓದಿ: ಇರುವ ಯೋಜನೆಗಳ ರೀಪ್ಯಾಕೇಜೇ ಹೊಸ ಪ್ಯಾಕೇಜ್: ಆರ್ಥಿಕತೆ ಮತ್ತಷ್ಟು ಕುಸಿಯುವುದರಲ್ಲಿ ಅನುಮಾನವಿಲ್ಲ

ಆತ್ಮನಿರ್ಭರ ಭಾರತ್ ಅಭಿಯಾನದ ಅಡಿಯಲ್ಲಿ, ತುರ್ತು ಕ್ರೆಡಿಟ್ ಲೈನ್ ಖಾತರಿ ಯೋಜನೆಯನ್ನು (ECLGS) ಪರಿಚಯಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ಯೋಜನೆಯಡಿಯಲ್ಲಿ ಅಕ್ಟೋಬರ್ 31 ರವರೆಗೆ 3 ಲಕ್ಷ ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ ಸರ್ಕಾರವು ವಿವಿಧ ರಾಜ್ಯಗಳಿಗೆ ಸಾಲವಾಗಿ ಸುಮಾರು 1.20 ಲಕ್ಷ ಕೋಟಿ ರೂ.ಗಳನ್ನು ವಿತರಿಸಿದೆ ಎಂದು ತಿಳಿದುಬಂದಿದೆ.

“ಸರ್ಕಾರವು 3 ಲಕ್ಷ ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಅದರಲ್ಲಿ ಸುಮಾರು ಶೇಕಡಾ 40ರಷ್ಟನ್ನು (1.20 ಲಕ್ಷ ಕೋಟಿ) ವಿತರಿಸಲಾಗಿದೆ. ದೊಡ್ಡ ಪ್ರಶ್ನೆಯೆಂದರೆ – ಈ ದೊಡ್ಡ ಪ್ಯಾಕೇಜ್‌ನಲ್ಲಿ ಉಳಿದ 17 ಲಕ್ಷ ಕೋಟಿ ರೂ. ಏನಾಯಿತು. ಈ ಯೋಜನೆ ಘೋಷಿಸಿ 7 ತಿಂಗಳ ನಂತರ ಇದು ಬಹಿರಂಗವಾಗಿದೆ. ಇದು ಭಾರತೀಯ ಜನರಿಗೆ ಮಾಡಿದ ಮತ್ತೊಂದು ವಂಚನೆಯೇ (ಜುಮ್ಲಾ)”ಎಂದು ಸರ್ದಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಾರತವು ವಿಶ್ವದ ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ಬರಲು ಇನ್ನೂ 30 ವರ್ಷ ಬೇಕು: ಅಧ್ಯಯನ

“ಇಡೀ ದೇಶವು, ಕಳೆದ 10 ತಿಂಗಳುಗಳಿಂದ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಮತ್ತು ಲಾಕ್‌ಡೌನ್‌ನ ನಂತರದ ಪರಿಣಾಮಗಳಿಂದ ತತ್ತರಿಸುತ್ತಿದೆ. ಕೋಟ್ಯಂತರ ವ್ಯಕ್ತಿಗಳು, ಅವರ ಕುಟುಂಬಗಳು ಮತ್ತು ವ್ಯವಹಾರಗಳು ತೊಂದರೆ ಅನುಭವಿಸುತ್ತಿವೆ. ಆದರೆ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಕೇಂದ್ರವು ಇನ್ನೂ ಸಾಕಷ್ಟು ಹಣವನ್ನು ಮಂಜೂರು ಮಾಡಿಲ್ಲ” ಸರ್ದಾ ಹೇಳಿದರು.

ದೇಶದ ಆರ್ಥಿಕ ತಜ್ಞರು, ಕೇಂದ್ರ ಸರ್ಕಾರದ ಈ ಯೋಜನೆಯನ್ನು ವಾಸ್ತವದಲ್ಲಿ ಇದು ಸಾಧ್ಯವಾಗುವುದಿಲ್ಲ ಟೀಕಿಸಿದ್ದರು. ಆದರೂ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಅದರ ವಕ್ತಾರರು ಈ ಯೋಜನೆಯ ಬಗ್ಗೆ ಸಾಕಷ್ಟು ಪ್ರಚಾರ ನಡೆಸಿದರು. ಆದರೆ ಇಷ್ಟು ದಿನಗಳ ನಂತರ ಬಹಿರಂಗಗೊಂಡಿರುವ ಮಾಹಿತಿಯನ್ನು ಅವಲೋಕಿಸಿದಾಗ 20 ಲಕ್ಷ ಕೋಟಿಯ ಯೋಜನೆ ಚುನಾವಣಾ ಪ್ರಣಾಳಿಕೆಯಂತಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.


ಇದನ್ನೂ ಓದಿ: ಕೋವಿಡ್‌ನಿಂದ ನೆಲಕಚ್ಚಿರುವ ಆರ್ಥಿಕತೆಯನ್ನು ಮೇಲೆತ್ತಲು ಸರ್ಕಾರ ಮಾಡಬೇಕಾದುದ್ದೇನು?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here