ಸಚಿವ ಸಿ.ಪಿ. ಯೋಗೇಶ್ವರ್ ಅವರು ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರ ಕಾಲು ಹಿಡಿದು, ಕಣ್ಣೀರಿಟ್ಟು ಗೋಗರೆದು ಸಚಿವ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಹೇಳಿದ್ದಾರೆ.
“ಸಚಿವ ಸಿ.ಪಿ. ಯೋಗೇಶ್ವರ್ ಅವರು ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರ ಕಾಲು ಹಿಡಿದು, ಕಣ್ಣೀರಿಟ್ಟು ಗೋಗರೆದು ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಮೆಗಾ ಸಿಟಿ ಹಗರಣದಲ್ಲಿ ಎಷ್ಟೆಲ್ಲಾ ಹಗರಣ ಮಾಡಿದ್ದಾರೆ ಎಂದು ನನಗೆ ಗೊತ್ತಿಗೆ. ಹಾಗಾಗಿ ಯೋಗೇಶ್ವರ್ ಅವರನ್ನು ಮೊದಲು ಬಂಧಿಸಬೇಕು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ” ಎಂದು ರೇಣುಕಾಚಾರ್ಯ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಪ್ರಧಾನಿ ಮೋದಿಗೆ ಕೊರೊನಾ ಬಗ್ಗೆ ಏನೂ ಗೊತ್ತಿಲ್ಲ’ – ರಾಹುಲ್ ಗಾಂಧಿ ದಾಳಿ
“ಸಿ.ಪಿ. ಯೋಗೇಶ್ವರನ್ನು ಖಡಾ ಖಂಡಿತವಾಗಿ ಬಿಜೆಪಿ ಸಚಿವ ಎಂದು ನಾನು ಒಪ್ಪಿಕೊಳ್ಳೋದಿಲ್ಲ. ಎಲ್ಲಾ ಪಕ್ಷ ಸುತ್ತಾಡಿ ಬಂದಂತವನು ಅವನು. ಸಿಪಿ ಯೋಗೀಶ್ವರ್ ಮೆಗಾ ಸಿಟಿ ಹಗರಣದ 420 ಕಳ್ಳ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಲ್ಲಿ ನಾನು ನಿಷ್ಟಾವಂತ ಕಾರ್ಯಕರ್ತ. ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಅವನ್ಯಾರ್ ರೀ.. ನನ್ನ ಬಗ್ಗೆ ಮಾತನಾಡೋಕೆ.. ಅವನೇನ್ ಬಿಜೆಪಿ ಲೀಡರ್ ಆ..? ತಾಕತ್ತಿದ್ದರೇ ಬರಲಿ.. ನನ್ನ ಮುಂದೆ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿ.ಪಿ. ಯೊಗೇಶ್ವರ್ ಹಿಂಭಾಗಿಲಿನಿಂದ ಬಂದು ಸಚಿವ ಆಗಿರುವವರು. ಕೊರೊನಾ ಸೋಂಕಿನ ಸಂದರ್ಭದಲ್ಲಿ ನಾನು ಜನರ ಸೇವೆ ಮಾಡುತ್ತಿದ್ದೇನೆ. ಅವರು ಜನರ ಸೇವೆ ಮಾಡೋದು ಬಿಡ್ಡು ರಾಜಕೀಯ ಮಾಡುತ್ತಾ ಇದ್ದಾರೆ. ಅವನ ಹಾಗೇ ಬಿಟ್ಟಿಯಾಗಿ ನಾನು ಮಂತ್ರಿಯಾಗಿಲ್ಲ ಎಂದು ಯೋಗೇಶ್ವರ್ ವಿರುದ್ದ ರೇಣುಕಾಚಾರ್ಯ ಹೇಳಿದ್ದಾರೆ.
ಇದನ್ನೂ ಓದಿ: ಸೋಂಕು ಹೆಚ್ಚಾದಂತೆ ವ್ಯವಸ್ಥೆಯ ಅಮಾನವೀಯತೆಗೆ ಗುರಿಯಾಗುತ್ತಿರುವ ಬೆಂಗಳೂರಿನ ಸ್ಮಶಾನ ಕಾರ್ಮಿಕರು


