Homeಮುಖಪುಟ‘ಪ್ರಧಾನಿ ಮೋದಿಗೆ ಕೊರೊನಾ ಬಗ್ಗೆ ಏನೂ ಗೊತ್ತಿಲ್ಲ’ - ರಾಹುಲ್ ಗಾಂಧಿ ದಾಳಿ

‘ಪ್ರಧಾನಿ ಮೋದಿಗೆ ಕೊರೊನಾ ಬಗ್ಗೆ ಏನೂ ಗೊತ್ತಿಲ್ಲ’ – ರಾಹುಲ್ ಗಾಂಧಿ ದಾಳಿ

- Advertisement -
- Advertisement -

ಕೊರೊನಾ ಸಾಂಕ್ರಮಿಕವನ್ನು ನಿಭಾಯಿಸಿರುವುದು ಮತ್ತು ಮಾರಣಾಂತಿಕ ಎರಡನೇ ಅಲೆಯ ಉಲ್ಬಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯು ಕೇಂದ್ರ ಸರ್ಕಾರದ ವಿರುದ್ದ ತೀಕ್ಷ್ಣವಾಗಿ ದಾಳಿ ನಡೆಸಿದ್ದು, “ಪ್ರಧಾನಿ ನರೇಂದ್ರ ಮೋದಿಯವರೆ ಕೊರೊನಾ ಎರಡನೆ ಅಲೆಗೆ ಜವಾಬ್ದಾರಿ, ಅವರಿಗೆ ಸೋಂಕಿನ ಬಗ್ಗೆ ಏನೂ ಗೊತ್ತಿಲ್ಲ” ಎಂದು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕೊರೊನಾ ಮೊದಲ ಅಲೆ ಯಾರಿಗೂ ಅರ್ಥವಾಗಲಿಲ್ಲ…ಆದರೆ ಎರಡನೆಯ ಅಲೆಯ ಉಲ್ಬಣಕ್ಕೆ ಪ್ರಧಾನಮಂತ್ರಿಯೆ ಜವಾಬ್ದಾರರಾಗಿದ್ದಾರೆ. ಅವರ ಸಾಹಸಗಳು(ಸ್ಟಂಟ್‌ಗಳು), ಸಾವಿನ ಬಗ್ಗೆ ಅವರ ಸುಳ್ಳುಗಳು…” ಎಂದು ರಾಹುಲ್ ಗಾಂಧಿ ಆನ್‌ಲೈನ್‌ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ 2 ನೇ ಅಲೆಯ ಸಮಯದಲ್ಲಿ ಹಸಿರು ಬಣ್ಣಕ್ಕೆ ತಿರುಗಿದ ಗಂಗಾ ನದಿ!

“ಪ್ರಧಾನಿ ಅವರು ‘ಕಾರ್ಯಕ್ರಮಗಳ ಮ್ಯಾನೇಜರ್’ ಆಗಿದ್ದಾರೆ. ಆದರೆ ನಮಗೆ ‘ಕಾರ್ಯಕ್ರಮ’ಗಳ ಅಗತ್ಯವಿಲ್ಲ. ನಮಗೆ ಬೇಕಾಗಿದ್ದು ಕಾರ್ಯತಂತ್ರಗಳಾಗಿವೆ” ಎಂದು ಅವರು ಹೇಳಿದ್ದು, ಮೋದಿಗೆ ವೈರಸ್ ಬಗ್ಗೆ ಏನೂ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.

“ನೀವು ಬಾಗಿಲು ತೆರೆದಿದ್ದೀರಿ, ಆದರೆ ಇನ್ನೂ ಬಾಗಿಲು ಮುಚ್ಚಿಲ್ಲ. ಜನಸಂಖ್ಯೆಯ ಕೇವಲ ಮೂರು ಪ್ರತಿಶತದಷ್ಟು ಜನರಿಗೆ ಮಾತ್ರ ಲಸಿಕೆ ನೀಡಿದ್ದೀರಿ, ಉಳಿದವರು ಇನ್ನೂ ಅಪಾಯದಲ್ಲಿದ್ದಾರೆ. ಅಮೆರಿಕ ತನ್ನ ಅರ್ಧದಷ್ಟು ಜನಸಂಖ್ಯೆಗೆ ಲಸಿಕೆ ನೀಡಿದೆ. ಬ್ರೆಜಿಲ್ 8 ರಿಂದ 9% ದಷ್ಟು ಲಸಿಕೆ ನೀಡಿದೆ. ಅವರು ದೊಡ್ಡ ಮಟ್ಟದಲ್ಲಿ ಲಸಿಕೆ ಉತ್ಪಾದಿಸುವುದಿಲ್ಲ, ಆದರೆ ನಾವು ಲಸಿಕೆಗಳನ್ನು ಉತ್ಪಾದಿಸುತ್ತೇವೆ” ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

“ಭಾರತವು ತನ್ನ ವ್ಯಾಕ್ಸಿನೇಷನ್ ತಂತ್ರವನ್ನು ಸರಿಯಾಗಿ ಮಾಡದಿದ್ದರೆ, ವೈರಸ್‌ನ ಅನೇಕ ಅಲೆಗಳು ಉಂಟಾಗುತ್ತದೆ ಎಂದು ನಾನು ನೇರವಾಗಿ ಪ್ರಧಾನ ಮಂತ್ರಿಗೆ ಹೇಳುತ್ತೇನೆ”

ಇದನ್ನೂ ಓದಿ: ತೇಜಸ್ವಿ ಸೂರ್ಯರಿಗೆ ಒಂದು ಪತ್ರ

ಕೊರೊನಾ ಮತ್ತು ಲಾಕ್‌ಡೌನ್‌ಗಳಿಗೆ ಲಸಿಕೆಗಳು ಮಾತ್ರ ಶಾಶ್ವತ ಪರಿಹಾರವಾಗಿದೆ. ಸಾಮಾಜಿಕ ಅಂತರ ಮತ್ತು ಮಾಸ್ಕ್‌ಗಳು ತಾತ್ಕಾಲಿಕವಾದವು. ಸರಿಯಾದ ವ್ಯಾಕ್ಸಿನೇಷನ್ ತಂತ್ರವಿಲ್ಲದಿದ್ದರೆ, ಭಾರತವು ಸೋಂಕಿನ ಅನೇಕ ಅಲೆಗಳಿಗೆ ಸಾಕ್ಷಿಯಾಗಲಿದೆ ಎಂದು ರಾಹುಲ್‌ ಗಾಂಧಿ ಒತ್ತಿ ಹೇಳಿದ್ದಾರೆ.

“ಲಸಿಕೆ ನೀಡುವ ಪ್ರಕ್ರಿಯೆ ಈ ವೇಗದಲ್ಲಿ ಮುಂದುವರಿದರೆ, ಸೋಂಕಿನ ಮೂರನೆಯ ಮತ್ತು ನಾಲ್ಕನೆಯ ಅಲೆಗಳೂ ಬರಲಿದೆ. ಏಕೆಂದರೆ ವೈರಸ್ ರೂಪಾಂತರಗೊಳ್ಳುತ್ತದೆ. ನಾವು ರೂಪಾಂತರ ಹೊಂದುತ್ತಿರುವ ಕಾಯಿಲೆಯಾದ ಕೊರೊನಾ ವೈರಸ್‌ನೊಂದಿಗೆ ಯುದ್ಧ ಮಾಡುತ್ತಿದ್ದೇವೆ. ಆದರೆ ಸರ್ಕಾರವು ವಿರೋಧ ಪಕ್ಷದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಭಾವಿಸುತ್ತಿದೆಯೆ ಹೊರತು ವೈರಸ್ ಜೊತೆ ಹೋರಾಡುತ್ತಿದ್ದೇವೆ ಎಂದಲ್ಲ” ಎಂದು ಅವರು ಹೇಳಿದ್ದಾರೆ.

“ಇದು ಸುಳ್ಳನ್ನು ಹರಡುವ ಸಮಯವಲ್ಲ. ಸರ್ಕಾರ ಸತ್ಯಸಂಧತೆಯಿಂದ ಕೂಡಿರಬೇಕು. ಇದು ದೇಶದ ಭವಿಷ್ಯವನ್ನು, ಜೀವಗಳನ್ನು ಉಳಿಸುವ ಪ್ರಶ್ನೆಯಾಗಿದೆ. ನಾವು ಸರ್ಕಾರದ ಶತ್ರುಗಳಲ್ಲ, ಪ್ರತಿಪಕ್ಷಗಳು ದಾರಿ ತೋರಿಸುತ್ತಿವೆ. ಅವರು ಫೆಬ್ರವರಿಯಲ್ಲೇ ನಮ್ಮ ಮಾತನ್ನು ಆಲಿಸುತ್ತಿದ್ದರೆ ನಾವು ಈ ಬಿಕ್ಕಟ್ಟನ್ನು ಎದುರಿಸ ಬೇಕಾಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ವಿರುದ್ದ ಬಳಸುವ ಔಷಧಗಳಿಗೆ ಜಿಎಸ್‌ಟಿ ಹೇರುವುದು ‘ಕ್ರೌರ್ಯ’: ಪ್ರಿಯಾಂಕ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

1
ಇರಾನ್‌ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನದ ಸಮಯದಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಸಾವಿಗೀಡಾದ ಬಳಿಕ ಸ್ಫೋಟಿಸಿದ ಮಹಿಳಾ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ....