Homeಅಂಕಣಗಳುಪಿಕೆ ಟಾಕೀಸ್: ಹೆಣ್ಣಿನ ಸಾಮಾನ್ಯ ಬದುಕಿಗೆ ಕನ್ನಡಿ ಹಿಡಿಯುವ ಶಾಂತಾಲ್‌ರ ಸಿನಿಮಾಗಳು

ಪಿಕೆ ಟಾಕೀಸ್: ಹೆಣ್ಣಿನ ಸಾಮಾನ್ಯ ಬದುಕಿಗೆ ಕನ್ನಡಿ ಹಿಡಿಯುವ ಶಾಂತಾಲ್‌ರ ಸಿನಿಮಾಗಳು

- Advertisement -
- Advertisement -

ಪಿಕೆ ಟಾಕೀಸ್ 13/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಶಾಂತಾಲ್ ಅಕೆಮನ್

ಜೀನ್ ಡೀಲ್‌ಮನ್, 23 ಕ್ವಾಡು ಕಾಮರ್ಸ್, 1080 ಬ್ರಕ್ಸೆಲ್ಸ್ (ಫ್ರೆಂಚ್, 1975): ಯಾವುದೇ ವ್ಯಕ್ತಿಯ ದಿನಚರಿಯನ್ನೇ ಸಿನಿಮಾ ಮಾಡಿದರೆ, ಇದರಲ್ಲಿ ಕಂಡುಬರುವ ಕಥೆಯಾದರೂ ಎಂತಹದ್ದು? ಸಿನಿಮಾಗೆ ಕಥೆ ಅಷ್ಟು ಮುಖ್ಯವಾ? ಕಥೆ ಇಲ್ಲದೆ ಸಿನಿಮಾವೂ ಇಲ್ಲವಾ?

ನಡುವಯಸ್ಸಿನ ವಿಧವೆ ಬೆಳೆದ ಮಗನ ಜೊತೆ ಬದುಕುತ್ತಿರುತ್ತಾಳೆ. ಸಿನಿಮಾದ ಶೀರ್ಷಿಕೆಯೇ ಅವಳ ಹೆಸರು, ವಿಳಾಸ. ಈ ಸಿನಿಮಾದ ಕಾಲಾವಧಿ ಮೂರು ಗಂಟೆ ಇಪ್ಪತ್ತೊಂದು ನಿಮಿಷಗಳು. ಡೀಲ್‌ಮನ್‌ಳ ಮೂರು ದಿನಗಳ ದಿನಚರಿಯನ್ನು ಸುಮಾರು ಮೂರು ಗಂಟೆ ಅವಧಿಗೆ ಚಿತ್ರಿಸಲಾಗಿದ್ದು, ಕೊನೆಯಲ್ಲಿ ಒಂದು ಆಘಾತದೊಂದಿಗೆ ಸಿನಿಮಾ ಮುಗಿಯುತ್ತದೆ.

ಡೀಲ್‌ಮನ್‌ಳ ದಿನಚರಿ ಎಂದರೆ: ಕಾಫಿ ತಯಾರಿಸಿ ಕುಡಿಯುವುದು, ಅಲೂಗಡ್ಡೆ ಸಿಪ್ಪೆ ಸುಲಿಯುವುದು, ಹಾಸಿಗೆಯ ಹೊದಿಕೆಯನ್ನು ಬದಲಾಯಿಸಿ ಚೊಕ್ಕವಾಗಿ ಇಡುವುದು, ಮಗನ ಬೂಟ್‌ಗಳಿಗೆ ಪಾಲಿಶ್ ಮಾಡುವುದು, ಅಡುಗೆ ಮಾಡುವುದು, ಪಾತ್ರೆಗಳನ್ನು ತೊಳೆಯುವುದು, ತೊಳೆದ ಪಾತ್ರೆಗಳನ್ನು ಒರೆಸುವುದು, ಊಟದ ಡೈನಿಂಗ್ ಟೇಬಲ್‌ಗೆ ಬಟ್ಟೆ ಹೊದಿಸಿ, ಚಮಚಗಳನ್ನು ಜೋಡಿಸುವುದು, ಬಟ್ಟೆಗಳನ್ನು ಒಗೆಯುವುದು, ಒಗೆದ ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಮನೆಯ ಬಿಲ್‌ಗಳನ್ನು ಪಾವತಿಸುವುದು, ಪಕ್ಕದ ಮನೆಯವರ ಮಗುವನ್ನು ನೋಡಿಕೊಳ್ಳುವುದು- ಹೀಗೆ ಮಾಡಲು ಯಾವುದೇ ಕೆಲಸವಿಲ್ಲದಾಗ ರೆಡಿಯೋದಲ್ಲಿ ಬರುವ ಬೆಥೋವನ್‌ನ ಪಿಯಾನೋ ಕೇಳುತ್ತಾ ಸ್ವೆಟರ್ ಹೆಣಿಯುವುದು. ಹೀಗೆ ಮನೆಯಲ್ಲಿನ ದಿನನಿತ್ಯದ ನೀರಸ ಚಟುವಟಿಕೆಗಳೇ ಈ ಸಿನಿಮಾ.

PC : High On Films, (ಜೀನ್ ಡೀಲ್‌ಮನ್, 23 ಕ್ವಾಡು ಕಾಮರ್ಸ್, 1080 ಬ್ರಕ್ಸೆಲ್ಸ್)

ಈ ನೀರಸ ದಿನನಿತ್ಯದ ಕೆಲಸಗಳಲ್ಲಿ ಡೀಲ್‌ಮನ್ ಮಧ್ಯಾಹ್ನ ಹೊತ್ತಿನಲ್ಲಿ ಮನೆಯಲ್ಲಿಯೇ ವೇಶ್ಯಾವಾಟಿಕೆಯನ್ನು ನಡೆಸುತ್ತಿರುತ್ತಾಳೆ. ದಿನಕ್ಕೊಬ್ಬ ಗಿರಾಕಿ ಬರುತ್ತಾನೆ. ಯಾಂತ್ರಿಕವಾಗಿ ಅವನ ಕೋಟ್ ಮತ್ತು ಮಫ್ಲರನ್ನು ತೆಗೆದು ಗೋಡೆಗೆ ಸಿಕ್ಕಿಸಿ ಇಬ್ಬರೂ ಬೆಡ್‌ರೂಮಿಗೆ ಹೋಗುತ್ತಾರೆ. ನಂತರ ಹೊರಬಂದು ಮುಂದಿನ ಭೇಟಿಯ ದಿನವನ್ನು ನಿರ್ಧರಿಸಿ ಹಣವನ್ನು ಕೊಟ್ಟು ಹೋಗುತ್ತಾನೆ. ಆಮೇಲೆ ಡೀಲ್‌ಮನ್ ಕಾಲೇಜು ಮುಗಿಸಿ ಬರುವ ಮಗನಿಗಾಗಿ ಊಟದ ತಯಾರಿಯಲ್ಲಿ ನಿರತಳಾಗುತ್ತಾಳೆ.

ಸಿನಿಮಾದಲ್ಲಿ ಮಾತುಗಳು ಅತಿ ವಿರಳ. ಕೆನಡಾದಲ್ಲಿರುವ ತನ್ನ ಸಹೋದರಿಯಿಂದ ಬಂದ ಪತ್ರವನ್ನು ಮಗನಿಗೆ ಓದಿ ತಿಳಿಸುವಾಗ, ಪ್ರೇಕ್ಷಕರಿಗೆ ಅವಳು ವಿಧವೆಯಾಗಿ ಆರು ವರ್ಷಗಳು ಕಳೆದಿರುವುದರ ಬಗ್ಗೆ ತಿಳಿಯುತ್ತದೆ. ಆ ಪತ್ರಕ್ಕೆ ಪ್ರತ್ಯುತ್ತರ ಬರೆಯಲು ಪ್ರಯತ್ನಿಸಿ, ಅದನ್ನು ಮುಂದೂಡುತ್ತಾ ತನ್ನ ಮತ್ತಿರರ ಕೆಲಸಗಳಲ್ಲಿ ಮುಳುಗಿ ಹೋಗುತ್ತಾಳೆ.

ಮನೆಯಿಂದ ಹೊರಗೆ ಹೋಗುವುದು, ಮಗನ ಕೋಟಿಗೆ ಗುಂಡಿ ಹುಡುಕಲು, ಮಗನಿಗೆ ಹೆಣಿಯುತ್ತಿರುವ ಸ್ವೆಟರ್‌ನ ಉಣ್ಣೆದಾರವನ್ನು ತರಲು ಹಾಗೂ ಅಡುಗೆಗೆ ತರಕಾರಿ, ಹಣ್ಣು ಮತ್ತು ದಿನಸಿಯನ್ನು ತರಲು ಮಾತ್ರ.

ಸಿನಿಮಾ ವಾಚ್ಯವಾಗದೆ, ಕಥೆಯಲ್ಲಿ ಉಬ್ಬರ ಇಳಿತಗಳನ್ನು ಹುಡುಕದೆ, ಮನೆಯ ಹೆಂಗಸಿನ (ಹೌಸ್‌ವೈಫ್‌ನ) ದಿನನಿತ್ಯದ ಬದುಕಿಗೆ ಕನ್ನಡಿ ಹಿಡಿದಂತೆ ಕಟ್ಟಲಾಗಿದೆ.

ಮೂರು ಗಂಟೆಗೂ ಮೀರಿದ ಈ ಸಿನಿಮಾ ನಿರಾಸಕ್ತಿಯೆನಿಸಿ, ಬದುಕಿನಲ್ಲಿ ಮುಖ್ಯವಲ್ಲದ ಕೆಲಸಗಳನ್ನು ನೋಡುವುದರಲ್ಲಿ ಅಂತಹ ವಿಶೇಷವೇನಿದೆ ಎಂಬ ಪ್ರಶ್ನೆ ಮೂಡಿದರೆ, ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಒಂದು ದಿನವೂ ತಪ್ಪದೇ ಈ ನೀರಸ ಕೆಲಸಗಳಲ್ಲಿಯೇ ಬಂಧಿಯಾಗಿರುವ ಹೆಂಗಸರ ಬದುಕು ಎಷ್ಟು ನಿರ್ಲಕ್ಷ್ಯಗೊಂಡಿದೆ ಎಂಬುದನ್ನು ಮನಗಾಣಿಸುತ್ತದೆ.

ಸಿನಿಮಾದ ಕೊನೆಯಲ್ಲಿ ಮೂರನೇ ದಿನ ಡೀಲ್‌ಮನ್ ಒಂದು ಗಂಟೆ ಮೊದಲೇ ನಿದ್ದೆಯಿಂದ ಎಚ್ಚರಗೊಳ್ಳುತ್ತಾಳೆ. ಆದುದರಿಂದ ಅವಳಿಗೆ ಎದ್ದ ತಕ್ಷಣ ಮಾಡುಲು ಕೆಲಸವಿರುವುದಿಲ್ಲ ಹಾಗೂ ಅವಳ ದಿನಚರಿ ಇರುಸು ಮುರಿಸಿಂದಲೇ ಶುರುವಾಗಿ, ಕೊನೆಗೆ ಅದು ಮಧ್ಯಾಹ್ನದ ಹೊತ್ತಿನಲ್ಲಿ ಬರುವ ಗಿರಾಕಿ ಹಾಸಿಗೆಯಲ್ಲಿ ಅವಳಿಗೆ ಇಷ್ಟವಿಲ್ಲದಂತೆಯೇ ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾನೆ. ಇದನ್ನು ಸಹಿಸದ ಡೀಲ್‌ಮನ್ ಕ್ರಿಯೆಯ ನಂತರ ತನ್ನ ಬಟ್ಟೆಗಳನ್ನು ತೊಟ್ಟು, ಹಾಸಿಗೆಯಲ್ಲಿ ಮಲಗಿದ್ದ ಗಿರಾಕಿಯ ಕತ್ತಿಗೆ ಮೇಜಿನ ಮೇಲಿದ್ದ ಕತ್ತರಿಯಿಂದ ಇರಿದು ಕೊಲ್ಲುತ್ತಾಳೆ.

ಅವನನ್ನು ಕೊಂದ ನಂತರವಷ್ಟೇ ಮುಂದೇನೆಂಬ ಪ್ರಶ್ನೆ ಡೀಲ್‌ಮನ್ ಮತ್ತು ಪ್ರೇಕ್ಷಕರಿಗೆ ಎದುರಾಗುತ್ತದೆ! ಡೀಲ್‌ಮನ್ ಡೈನಿಂಗ್ ಟೇಬಲ್‌ನಲ್ಲಿ ರಕ್ತಸಿಕ್ತ ಕೈಯಲ್ಲಿ ಕೂತು ಯೋಚನೆ ಮಾಡುವಾಗಲೇ ಸಿನಿಮಾ ಮುಗಿಯುತ್ತದೆ.

ಮೀಟಿಂಗ್ಸ್ ಅಫ್ ಅನ್ನಾ (ಫ್ರೆಂಚ್, 1978): ಅನ್ನಾ ಸ್ವತಂತ್ರ ಸಿನಿಮಾ ನಿರ್ದೇಶಕಿ. ತನ್ನ ಸಿನಿಮಾಗಳನ್ನು ಯೂರೋಪಿನ ವಿವಿಧ ನಗರಗಳಲ್ಲಿ ಪ್ರದರ್ಶಿಸುತ್ತಾ, ಬೇರೆ ಬೇರೆ ಜನರನ್ನು ಭೇಟಿ ಮಾಡುವುದೇ ಈ ಸಿನಿಮಾದ ಕಥಾನಕ.

ಸೆಲ್ಫ್ ರೆಫ್ಲೆಕ್ಟಿವ್ ಜಾನರ್‌ಗೆ ಸೇರುವ ಈ ಸಿನಿಮಾ, ನಿರ್ದೇಶಕಿಯ ಸ್ವಂತಃ ಅನುಭವವನ್ನೇ ಸಿನಿಮಾವಾಗಿಸಿರುವ ಅನನ್ಯ ಪ್ರಯತ್ನವೆನಿಸುತ್ತದೆ.

ಅನ್ನಾ ಜರ್ಮನಿಯ ಹೋಟೆಲ್ ಒಂದರಲ್ಲಿ ಅಪರಚಿತನೊಬ್ಬನ ಜೊತೆಗೆ ಹಾಸಿಗೆಗೆ ಹೋಗುತ್ತಾಳೆ. ಆದರೆ ಹೊಂದಣಿಕೆಯಾಗದೆ, ಅವನು ಅಲ್ಲಿಂದ ಹೊರಟುಹೋಗುತ್ತಾನೆ. ಮರುದಿನ ಮಗಳ ಹುಟ್ಟುಹಬ್ಬದ ಸಲುವಾಗಿ ಮನೆಗೆ ಬರುವಂತೆ ಆಹ್ವಾನಿಸುತ್ತಾನೆ. ಅನ್ನಾ ಅವನ ಮನೆಗೆ ಹೋಗುತ್ತಾಳೆ. ಅವನ ಹೆಂಡತಿ ಕುಟುಂಬವನ್ನು ಬಿಟ್ಟು ಹೋಗಿರುವ ವಿಷಯ, ಅವನ ಮನೆಯ ಕುರಿತು ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲೂ ತನ್ನ ಮನೆ ಸುರಕ್ಷಿತವಾಗಿರುವುದರ ಬಗ್ಗೆ ಹೇಳುತ್ತಾನೆ. ಅನ್ನಾಳಿಗೆ ಟುಲಿಪ್ಸ್ ಹೂಗಳು ಇಷ್ಟವಾ ಎಂದು ಅವನು ಕೇಳಲು, ಅವಳು ಇಲ್ಲವೆನ್ನುತ್ತಾಳೆ. ಆಗ ಅನ್ನಾ ಎಲ್ಲ ಹೆಂಗಸರಂತಲ್ಲ ಎಂಬುದು ತಿಳಿಯುತ್ತದೆ.

ರೈಲ್ವೇ ನಿಲ್ದಾಣದಲ್ಲಿ ತನ್ನ ತಾಯಿಯ ಗೆಳತಿಯೊಬ್ಬಳನ್ನು ಭೇಟಿಯಾಗುತ್ತಾಳೆ. ಅವಳ ಕುಟುಂಬ ಮೊದಲು ಬೆಲ್ಜಿಯಂನ ಬ್ರಸೆಲ್ಸ್‌ನಿಂದ ವಲಸೆ ಬಂದು ಜರ್ಮನಿಯಲ್ಲಿ ನೆಲೆಯೂರಿರುತ್ತದೆ. ತನ್ನ ಸದಾ ಸುತ್ತುವ ಕೆಲಸದ ಕಾರಣದಿಂದ ತನ್ನ ಸಂಗಾತಿಯಿಂದ ಬೇರ್ಪಟ್ಟಿರುವುದಾಗಿ ಅನ್ನಾ ಹೇಳುತ್ತಾಳೆ. ಅದಕ್ಕೆ ತಾಯಿಯ ಗೆಳತಿ ತನ್ನ ಸುಂದರ ಮಗನನ್ನು ಮದುವೆಯಾಗಲು ಒತ್ತಾಯಿಸುತ್ತಾಳೆ. ಆದರೆ ಅದನ್ನು ನಿರಾಕರಿಸಿ ಅನ್ನಾ ಮುಂದೆ ಸಾಗುತ್ತಾಳೆ.

ಮೀಟಿಂಗ್ಸ್ ಅಫ್ ಅನ್ನಾ

ರೈಲಿನಲ್ಲಿ ಮತ್ತೊಬ್ಬ ಅಪರಿಚತನೊಂದಿಗೆ ಲೋಕಾಭಿರಾಮದ ಸಂವಾದ. ಯಾರು ಯಾರ ಕುರಿತೂ ಆಸಕ್ತಿ ತೋರದೆ, ಸಿಗರೇಟ್‌ಗಳನ್ನು ಸೇದುತ್ತಾ ರೈಲಿನ ಕಿಟಕಿಯಿಂದ ಹೊರ ನೋಡುತ್ತಾ ಮಾತಾಡುತ್ತಾರೆ.

ಹೀಗೆ ಸಿನಿಮಾದಲ್ಲಿ ನೇರವಾಗಿ ಏನನ್ನೂ ಹೇಳದೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಗಿದೆ. ಆರ್ಥಿಕ ಕುಸಿತದಿಂದ ಇಡೀ ಯೂರೋಪ್ ಅನುಭವಿಸುತ್ತಿರುವ ಯಾತನೆ, ಹಣದುಬ್ಬರ, ಬೆಲೆ ಏರಿಕೆ, ವಲಸೆ ಮುಂತಾದ ವಿಷಯಗಳ ಜೊತೆಗೇ, ಜರ್ಮನಿಯನ್ನು ಯುದ್ಧದ ನಂತರ ಹೇಗೆ ಕಟ್ಟಿದರೆಂಬುದು ಒಂದು ಕಡೆಯಾದರೆ, ಮತ್ತೊಂದು ಕಡೆ ಒಂಟಿತನ, ಬದುಕಿನ ಅರ್ಥಹೀನತೆ, ಲೆಸ್ಬಿಯನ್‌ಗಳ ಕುರಿತು ನಿರ್ದೇಶಕಿಯ ವ್ಯಾಖ್ಯಾನ ಸಿನಿಮಾದಲ್ಲಿ ಮೂಡುತ್ತದೆ.

ಶಾಂತಾಲ್ ಅಕೆಮನ್: ಶಾಂತಾಲ್ ಅಕೆಮನ್‌ರ ಸಿನಿಮಾಗಳನ್ನು ಕೇವಲ ಫೆಮಿನಿಸಂ ಸಿನಿಮಾಗಳೆಂದು ವಿಂಗಡಿಸಿ ನೋಡದೆ, ಅವರ ಕಥಾವಸ್ತು ವೈಶಿಷ್ಟ್ಯಗಳಿಗೆ ಅತಿಯಾಗಿ ಒತ್ತು ನೀಡದೆ, ಅವರು ಸಿನಿಮಾ ಕಟ್ಟುವ ಕ್ರಮವನ್ನು ನೋಡುವುದು ಅತಿ ಮುಖ್ಯ.

ಸಿನಿಮಾದಲ್ಲಿ ಪುಲ್ ಶಾಟ್, ಮಿಡ್ ಶಾಟ್, ಕ್ಲೋಸ್‌ಅಪ್, ಎಕ್‌ಸ್ಟ್ರೀಮ್ ಕ್ಲೋಸ್‌ಅಪ್‌ಗಳೆಂದು ದೃಶ್ಯವನ್ನು ಕಟ್ಟುವ ವ್ಯಾಕರಣವಿರುತ್ತದೆ. ಇಲ್ಲಿ ಶಾಂತಾಲ್‌ರವರ ಶೈಲಿ ಅತಿ ಸರಳವಾದದ್ದು. ಅವರು ಮಿಡ್ ಶಾಟ್‌ನಿಂದ ದೃಶ್ಯವನ್ನು ಸಂಪೂರ್ಣವಾಗಿ ಚಿತ್ರಿಸುತ್ತಾರೆ. ಯಾವುದೇ ಕಾರಣಕ್ಕು ಕ್ಲೋಸ್‌ಅಪ್, ಪ್ರೊಫೈಲ್ ಶಾಟ್ಸ್ ಚಿತ್ರಿಸುವುದಿಲ್ಲ.

ಇದರ ಮೂಲ ಉದ್ದೇಶವೆಂದರೆ ಒಂದು ಕನಿಷ್ಠತೆಯಲ್ಲಿ ಸಿನಿಮಾ ಕಟ್ಟುವುದು. ಎರಡನೆಯದು, ಪ್ರತಿ ಬಾರಿಯೂ ಕ್ಯಾಮರಾವನ್ನು ಚಲಿಸುತ್ತಾ ಅಥವಾ ದೃಶ್ಯವನ್ನು ತುಂಡರಿಸುತ್ತಾ ಬೇರೆ ಕೋನಗಳಲ್ಲಿ ಚಿತ್ರಿಸದೇ, ದೃಶ್ಯದಲ್ಲಾಗುವ ಚಟುವಟಿಕೆಗಳನ್ನು ಯಾವುದೇ ರೀತಿ ಮ್ಯಾನಿಪುಲೇಟ್ ಮಾಡದೇ ಯಥಾವತ್ತಾಗಿ ಪ್ರೇಕ್ಷಕರ ಮುಂದಿಡುವ ದಿಟ್ಟ ನಿರ್ಧಾರ.

PC : The Guardian, (ಶಾಂತಾಲ್ ಅಕೆಮನ್)

ಹಾಗೂ ಕಥೆ ಮತ್ತು ಕಥೆಯಲ್ಲಾಗುವ ಏರಿಳಿತಗಳೇ ಮುಖ್ಯವೆನ್ನದೆ ದೃಶ್ಯ ಮತ್ತು ಶಬ್ದಗಳಿಂದ ಸಿನಿಮಾವನ್ನು ಕಟ್ಟುತ್ತಾರೆ. ಸಿನಿಮಾದಲ್ಲಿ ಖಾಲಿತನ ತುಂಬಲು ಮತ್ತು ಪ್ರೇಕ್ಷಕನ ಭಾವನೆಗಳನ್ನು ಮ್ಯಾನಿಪುಲೇಟ್ ಮಾಡುವ ಉದ್ದೇಶದಿಂದ ವೇಗದ ಎಡಿಟಿಂಗ್ ಮಾಡುವುದನ್ನು ಬಳಸದೆ, ಹಿನ್ನೆಲೆ ಸಂಗೀತವನ್ನು ಉಪಯೋಗಿಸದೆ ಬದುಕಿಗೆ ಹತ್ತಿರವಾಗಿರುವ ಸಿನಿಮಾಗಳನ್ನು ಶಾಂತಾಲ್ ಅಕೆಮನ್ ನಿರ್ದೇಶಿಸಿರುವುದು ಶ್ಲಾಘನಿಯ.

ಶಾಂತಾಲ್‌ರ ಸಿನಿಮಾಗಳು ಲಾಂಗ್ ಟೇಕ್ಸ್, ಹಿನ್ನೆಲೆ ಸಂಗೀತವಿಲ್ಲದೆ, ಕಥೆಗೆ ಜೋತು ಬೀಳದೆ, ಅಸಂಬದ್ಧವಾಗಿ ಮತ್ತು ಅಮೂರ್ತವಾಗಿ ಕಾಣುತ್ತದೆ. ಇವರು ಮೊದಮೊದಲು ಫ್ರೆಂಚ್ ನಿರ್ದೇಶಕ ಗೊದಾರ್ದ್‌ನ ಸಿನಿಮಾಗಳಿಂದ ಪ್ರಭಾವಿತಗೊಂಡಿದ್ದರೂ, ಸಿನಿಯಾನದಲ್ಲಿ ತಮ್ಮದೇ ಆದ ಶೈಲಿಯನ್ನು ಕಂಡುಕೊಂಡಿದ್ದಾರೆ.

ಶಾಂತಾಲ್‌ರ ಸಿನಿಮಾಗಳಲ್ಲಿ ಜೀನ್ ಡೀಲ್‌ಮನ್ ಚಿತ್ರ ಸಿನಿ ಇತಿಹಾಸದಲ್ಲಿ ಅತಿ ಮುಖ್ಯವಾದ ಸಿನಿಮಾ. ಮುಂದಿನ ಹಲವು ಪೀಳಿಗೆಯ ಸಿನಿಮಾ ವಿದ್ಯಾರ್ಥಿಗಳಿಗೆ ಇವರ ಸಿನಿಮಾಗಳು ಮತ್ತು ಶೈಲಿಯನ್ನು ನೋಡಿ ಕಲಿಯುವುದು ಸಾಕಷ್ಟಿದೆ.


ಇದನ್ನೂ ಓದಿ:  ಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...