Homeಅಂತರಾಷ್ಟ್ರೀಯಭಾರತ, ಬ್ರಿಟನ್‌ನ ಹೊಸ ರೂಪಾಂತರಿ ಕೊರೋನಾ ವೈರಸ್‌ ಗಾಳಿಯಲ್ಲಿ ಅತಿ ಬೇಗ ಹರಡಬಲ್ಲದು: ವಿಯೆಟ್ನಾಮ್‌

ಭಾರತ, ಬ್ರಿಟನ್‌ನ ಹೊಸ ರೂಪಾಂತರಿ ಕೊರೋನಾ ವೈರಸ್‌ ಗಾಳಿಯಲ್ಲಿ ಅತಿ ಬೇಗ ಹರಡಬಲ್ಲದು: ವಿಯೆಟ್ನಾಮ್‌

- Advertisement -
- Advertisement -

ಭಾರತ ಮತ್ತು ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿ ಕೊರೋನಾ ವೈರೈಸ್‌ ಈಗ ವಿಯೆಟ್ನಾಂ ದೇಶದಲ್ಲೂ ಕಾಣಿಸಿಕೊಂಡಿದೆ. ಈ ಮಾದರಿಯ ವೈರಸ್‌ಗಳು ಗಾಳಿಯಲ್ಲಿ ಅತಿ ಶೀಘ್ರವಾಗಿ ಹರಡಬಲ್ಲದು ಎಂದು ವಿಯೆಟ್ನಾಂ ತನ್ನ ಸಂಶೋಧನೆಯ ಮೂಲಕ ತಿಳಿಸಿದೆ. ಗಂಟಲ ದ್ರವದಲ್ಲಿ ಸೇರಿರುವ ಹೊಸ ರೂಪಾಂತರಿ ವೈರಸ್‌ ಶೀಘ್ರವಾಗಿ ಸುತ್ತಲಿನ ವಾತಾವರಣಕ್ಕೆ ಹರಡುವ ಶಕ್ತಿ ಹೊಂದಿದೆ ಎಂದು ಹೇಳಿದೆ.

ವಿಯೆಟ್ನಾಂ ದೇಶದಲ್ಲಿ ಇದುವರೆಗೆ 6800 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 47 ಜನರು ಈ ವೈರಸ್‌ ಗೆ ಬಲಿಯಾಗಿದ್ದಾರೆ ಎಂದು ವಿಯೆಟ್ನಾಂ ಸರ್ಕಾರ ತಿಳಿಸಿದೆ. ವಿಯೆಟ್ನಾಂ ನಲ್ಲಿ ಇದು ವರೆಗೆ 10 ಲಕ್ಷ ಜನರಿಗೆ ಕೋವಿಡ್‌ ವ್ಯಾಕ್ಸಿನ್‌ ನೀಡಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಬ್ರಿಟನ್‌ ಮತ್ತು ಭಾರತದಲ್ಲಿ ರೂಪಾಂತರಗೊಂಡ ಹೊಸ ಕೋರೋನಾ ವೈರಸ್‌ ತಳಿ ವಿಯೆಟ್ನಾಂ ನಲ್ಲಿ ತೀವ್ರವಾಗಿ ಹರಡುತ್ತಿದೆ ಇದೆ ಎಂದು ವಿಯೆಟ್ನಾಂ ಆರೋಗ್ಯ ಸಚಿವಾಲಯ ತಿಳಿಸಿದೆ. ಕೊರೋನಾ ಎರಡನೇಯ ಅಲೆಯ ಸಂದರ್ಭದಲ್ಲಿ ವಿಯೆಟ್ನಾಂ ನ ಅರ್ಧದಷ್ಟು ಭಾಗಕ್ಕೆ ಕೊರೋನಾ ವೈರಸ್‌ ಹರಡಿದೆ. ಹನೋಯಿ ಮತ್ತು ಹೋ ಚಿನ್‌ ಮಿನ್ಹ್‌ ನಂತಹ ಕೈಗಾರಿಕಾ ನಗರಗಳಲ್ಲಿ ಕೊರೋನಾ ಹೊಸ ರೂಪಾಂತರಿ ತಳಿ ವೈರಸ್‌ ತೀವ್ರವಾಗಿ ಹರಡುತ್ತಿದೆ. ಕೊರೋನಾ ಸೋಂಕಿನ ಹರಡುವಿಕೆ ಕಳೆದ ವರ್ಷಕ್ಕಿಂತ ಈ ವರ್ಷ ತೀವ್ರವಾಗಿದೆ ಎಂದು ವಿಯೆಟ್ನಾಂ ಸರ್ಕಾರ ತಿಳಿಸಿದೆ.

ನಾವು ಭಾರತ ಮತ್ತು ಬ್ರಿಟನ್‌ ನಲ್ಲಿ ಮೊತ್ತ ಮೊದಲಿಗೆ ಕಾಣಿಸಿಕೊಂಡ ಕೊರೋನಾ ಹೊಸ ರೂಪಾಂತರಿಯನ್ನು ವಿಯಾಟ್ನಾಂ ನಲ್ಲಿಯೂ ಪತ್ತೆ ಹಚ್ಚಿದ್ದೇವೆ. ಗಂಟಲುದ್ರವದಲ್ಲಿ ಸೇರಿರುವ ಈ ಹೊಸ ತಳಿ ವೈರಸ್‌ಗಳು ಅತ್ಯಂತ ಶೀಘ್ರವಾಗಿ ಮತ್ತು ತೀವ್ರ ಸ್ವರೂಪದಲ್ಲಿ ಗಾಳಿಯ ಮೂಲಕ ಸುತ್ತಲಿನ ಪರಿಸರಕ್ಕೆ ಹರಡುತ್ತಿರುವುದನ್ನು ಕಂಡುಕೊಂಡಿದ್ದೇವೆ ಎಂದು ವಿಯೆಟ್ನಾಂ ಆರೋಗ್ಯ ಸಚಿವ ನುಗುಯೆನ್‌ ಥಾನ್‌ ಲಾಂಗ್‌ ಶನಿವಾರ ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ವಿಯೆಟ್ನಾಂನ ವಿಜ್ಞಾನಿಗಳು ಇತ್ತೀಚೆಗೆ ಪರೀಕ್ಷಿಸಲಾದ 32 ಜನರಲ್ಲಿ 4 ಜನರಲ್ಲಿ ಹೊಸ ರೂಪಾಂತರಿ ಕೊರೋನಾ ವೈರಸ್‌ ಅಂಶಗಳು ಕಂಡುಬಂದಿವೆ ಎಂದು ತಿಳಿಸಿದೆ.
ವಿಯೇಟ್ನಾಂ ಆರೋಗ್ಯ ಮಂತ್ರಿ ಶನಿವಾರ ಮೇ 29 ರಂದು ಹೊಸ ತಳಿಯನ್ನು ಘೋಷಿಸುವ ಮೊದಲು ಇದುವರೆಗೆ ಏಳು ಮಾದರಿಯ ಕೊರೋನಾ ರೂಪಾಂತರಿ ತಳಿಗಳು ವಿಯೆಟ್ನಾಂ ನಲ್ಲಿ ಕಂಡುಬಂದಿದ್ದವು ಎಂದು ಹೇಳಲಾಗಿದೆ.

ಈ ಹಿಂದೆ ವಿಯೆಟ್ನಾಂ ಸರ್ಕಾರದ ಕೊರೋನಾ ನಿರ್ವಹಣೆಯ ಕುರಿತು ಜಗತ್ತಿನಾದ್ಯಂತ ಮೆಚ್ಚುಗೆಗಳು ಕೇಳಿ ಬಂದಿದ್ದವು. ಸೋಂಕಿತರ ಪತ್ತೆ ಮತ್ತು ಮಾಸ್‌ ಕ್ವಾರಂಟೈನ್‌ನಿಂದಾಗಿ ವಿಯೆಟ್ನಾಂ ನಲ್ಲಿ ಸೋಕಿಂಗೆ ತುತ್ತಾಗುವವರ ಶೇಕಡಾ ಪ್ರಮಾಣ ಅತ್ಯಂತ ಕಡಿಮೆಯಾಗಿತ್ತು.

ಹೊಸ ಮಾದರಿಯ ಕೊರೋನಾ ರೂಪಾಂತರಿ ತಳಿ ಮತ್ತು ಕೊರೋನಾ ಎರಡನೆ ಅಲೆಯು ವಿಯೆಟ್ನಾಂ ಸರ್ಕಾರ ಮತ್ತು ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅಲ್ಲಿನ ಸರ್ಕಾರ ಜನರ ಓಡಾಟದ ಮೇಲೆ ನಿರ್ಭಂದವನ್ನು ಹೇರಿದ್ದು ಹೊಟೇಲ್‌, ರೆಸ್ಟೋರೆಂಟ್, ಶಾಲಾ ಕಾಲೇಜು ಮತ್ತು ಇತರ ವಾಣಿಜ್ಯ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ.

ವಿಯೆಟ್ನಾಂ ಸರಿಸುಮಾರು 9.7 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಇವರಲ್ಲಿ 10 ಲಕ್ಷ ಜನರಿಗೆ ಕೊರೋನಾ ಲಸಿಕೆಯನ್ನು ನೀಡಲಾಗಿದೆ. ಈ ದೇಶದ ಅಂತ್ಯಕ್ಕೆ ಕೊರೋನಾ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸುವ ಗುರಿಯನ್ನು ಅಲ್ಲಿನ ಸರ್ಕಾರ ಇಟ್ಟುಕೊಂಡಿದೆ.

ವಿಯೆಟ್ನಾಂ ಸರ್ಕಾರ ಉದ್ಯಮಿಗಳು ಮತ್ತು ಇತರ ಶ್ರೀಮಂತರಲ್ಲಿ ಕೊರೋನಾ ನಿರ್ವಹಣೆಗೆ ತಮ್ಮ ಕೊಡುಗೆಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದೆ.

ವಿಯೆಟ್ನಾಂ ಗೆ ಅತ್ಯಂತ ಸಮೀಪದಲ್ಲಿರುವ ಥಾಯ್ಲೆಂಡ್‌ ನಲ್ಲಿ ಕೊರೋನಾ ಹೊಸ ರೂಪಾಂತರಿ ತಳಿ ವೈರಸ್‌ಗಳು ಕಾಣಿಸಿಕೊಂಡಿವೆ. ಥಾಯ್ಲೆಂಡ್‌ ಸರ್ಕಾರ ಶನಿವಾರ ಸುದ್ದಿಗೋಷ್ಠಿಯನ್ನು ನಡೆಸಿ ಹೊಸ ತಳಿಯ ವೈರಸ್ ಅನ್ನು ಮಾಧ್ಯಮಗಳು ʼಥಾಯ್‌ ವೇರಿಯೆಂಟ್‌ʼ ಎಂದು ಬಿಂಬಿಸುತ್ತಿರುವುದನ್ನು ವ್ಯಾಪಕವಾಗಿ ಖಂಡಿಸಿದೆ. ಈ ರೀತಿಯ ಆಧಾರ ರಹಿತವಾದ ಸುದ್ದಿ ಅಪಪ್ರಚಾರಗಳನ್ನು ನಿಲ್ಲಿಸುವಂತೆ ಮಾಧ್ಯಮಗಳಲ್ಲಿ ಥಾಯ್ಲೆಂಡ್‌ ಸರ್ಕಾರ ಮನವಿಯನ್ನು ಮಾಡಿಕೊಂಡಿದೆ.

ಚರ್ಚೆಯಾಗುತ್ತಿರುವ ಹೊಸ ಕೊರೋನಾ ರೂಪಾಂತರಿ ತಳಿ ಮೊಟ್ಟಮೊದಲ ಬಾರಿಗೆ ಥಾಯ್ಲೆಂಡಿನಲ್ಲಿ 33 ವರ್ಷದ ಈಜಿಪ್ಟ್‌ ದೇಶದ ಪ್ರವಾಸಿಯೊಬ್ಬರಲ್ಲಿ ಕಾಣಿಸಿಕೊಂಡಿತ್ತು. ನಂತರ ಬ್ರಿಟನ್‌ ನಲ್ಲಿ ಈ ಹೊಸ ರೂಪಾಂತರಿ ಕೊರೋನಾ ವೈರಸ್‌ ಸಂಬಂಧಿಸಿದ 109 ಪ್ರಕರಣಗಳು ವರದಿಯಾಗಿವೆ ಎಂದು ಬ್ರಿಟನ್‌ ದೇಶದ ಅಧಿಕಾರಿಗಳು ತಿಳಿಸಿವೆ.


ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳು ಹೊಟೇಲ್‌ಗಳ ಜೊತೆ ಸೇರಿ ಲಸಿಕೆ ಪ್ಯಾಕೇಜ್ ನೀಡುವಂತಿಲ್ಲ: ಕೇಂದ್ರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ: ದಲಿತ ಬಾಲಕಿಯ ಸಜೀವ ದಹನ

0
ಬಯಲು ಶೌಚಾಲಯಕ್ಕೆ ತೆರಳಿದ್ದ 13 ವರ್ಷದ ದಲಿತ ಬಾಲಕಿಯನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಹರಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಬಲರಾಂಪುರ್ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ 13...