Homeಕರೋನಾ ತಲ್ಲಣಗ್ರಾಮೀಣ ಭಾಗದ ಆಸ್ಪತ್ರೆಗಳ ಅವ್ಯಸ್ಥೆಯನ್ನು ತೆರೆದಿಟ್ಟ ಕೊರೋನಾ ಸಾಂಕ್ರಾಮಿಕ

ಗ್ರಾಮೀಣ ಭಾಗದ ಆಸ್ಪತ್ರೆಗಳ ಅವ್ಯಸ್ಥೆಯನ್ನು ತೆರೆದಿಟ್ಟ ಕೊರೋನಾ ಸಾಂಕ್ರಾಮಿಕ

ಬೆಂಗಳೂರಿನ ಪಕ್ಕದ ಕೋಲಾರ ಜಿಲ್ಲೆಯ ದುರಂತವೇ ರಾಜ್ಯದ ಗ್ರಾಮೀಣ ಭಾಗದ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆಗೆ ಸಾಕ್ಷಿಯಾಗಿದೆ.

- Advertisement -
- Advertisement -

ಕೃಪೆ : ಇಂಡಿಯನ್‌ ಎಕ್ಸ್‌ಪ್ರೆಸ್‌
ಅನುವಾದ : ರಾಜೇಶ್‌ ಹೆಬ್ಬಾರ್‌

ಕಳೆದ ತಿಂಗಳು ಅಂದರೆ ಏಪ್ರಿಲ್‌ನಲ್ಲಿ ಕರ್ನಾಟದಾದ್ಯಂತ ವೈದ್ಯಕೀಯ ಆಕ್ಸಿಜನ್‌ ಸಮಸ್ಯೆ ತಲೆದೋರಿತ್ತು. ಚಾಮರಾಜನಗರ, ಕಲಬುರಗಿ, ಬೆಳಗಾವಿ, ಕೋಲಾರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರು ಮತ್ತು ಇತರ ರೋಗಿಗಳು ಸೂಕ್ತ ಸಮಯದಲ್ಲಿ ಅಗತ್ಯ ಆಮ್ಲಜನಕ ಸಿಗದೇ ಮೃತಪಟ್ಟಿದ್ದರು. ಚಾಮರಾಜನಗರ ಘಟನೆಯ ನಡುವೆ ಕೋಲಾರದ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ 4 ಜನ ರೋಗಿಗಳು ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದಾರೆ. ಚಾಮರಾಜನಗರ ಘಟನೆಯಂತೆ ಕೋಲಾರದ ದುರಂತ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗಿಲ್ಲ. ಘಟನೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿಯನ್ನು ಹೊಣೆಮಾಡಿ ಸರ್ಕಾರ ಕೈತೊಳೆದುಕೊಂಡಿದೆ. ಆದರೆ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಹೇಳುವ ಕಥೆ ಸರ್ಕಾರದ ವರದಿಗಿಂತ ಭಿನ್ನವಾಗಿದ್ದು, ಸರ್ಕಾರದ ನಿರ್ಲಕ್ಷ್ಯಗಳಿಂದಲೇ ಆಮ್ಲಜನಕದ ಕೊರತೆ ಉಂಟಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಕೋಲಾರದ ಎಸ್‌ಎನ್‌ಆರ್‌ ಆಸ್ಪತ್ರೆಯ ಆಕ್ಸಿಜನ್‌ ದುರಂತದ ಬಗ್ಗೆ ಮಾತನಾಡುತ್ತ ಘಟನೆಯ ದಿನ ಕರ್ತವ್ಯದಲ್ಲಿದ್ದ ಆಸ್ಪತ್ರೆಯ ತಾಂತ್ರಿಕ ಸಿಬ್ಬಂದಿ ಸೋಮಣ್ನ ಏಪ್ರಿಲ್‌ 25 ರ ರಾತ್ರಿಯ ವಿದ್ಯಮಾನಗಳ ಕುರಿತು ಹೀಗೆ ಹೇಳುತ್ತಾರೆ.

ಮದುವೆಯ ಮನೆಯ ಅಡಿಗೆ ಕೋಣೆಯಂತೆ ಆಗಿದೆ ನಮ್ಮ ಆಮ್ಲಜನಕದ ಪೂರೈಕೆ ವ್ಯವಸ್ಥೆ. ಮದುವೆಗಳಲ್ಲಿ 100 ಜನರ ಊಟವನ್ನು 200 ಜನರಿಗೆ ಬಡಿಸುವಂತೆ ಆಮ್ಲಜನಕವನ್ನು ಜನರಿಗೆ ನೀಡುವಂತೆ ಸರ್ಕಾರ ಹೇಳುತ್ತದೆ. ಕೊರತೆ, ದುರಂತಕ್ಕೆ ಕೊನೆಗೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹೊಣೆ ಮಾಡಿ ಮೇಲಿರುವವರು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತಾರೆ. ಏಪ್ರಿಲ್‌ 25 ರ ದುರಂತವೂ ನಮ್ಮಲ್ಲಿರುವ ಅವ್ಯವಸ್ಥೆಯ ಇಂತಹ ನಿದರ್ಶನಗಳಲ್ಲೊಂದು. -ಸೋಮಣ್ಣ, ಎಸ್‌ಎನ್‌ಆರ್‌ ಆಸ್ಪತ್ರೆಯ ತಾಂತ್ರಿಕ ಸಿಬ್ಬಂದಿ

ಬೆಂಗಳೂರು ನಗರದಿಂದ ಕೇವಲ 60 ಕಿಲೋ ಮೀಟರ್‌ ದೂರದಲ್ಲಿರುವ ಕೋಲಾರ ಜಿಲ್ಲೆಯ ಎಸ್‌ಎನ್‌ಆರ್‌ ಆಸ್ಪತ್ರೆಗೆ ಆಕ್ಸಿಜನ್‌ ಪೂರೈಕೆಯ ಜವಾಬ್ಧಾರಿಯನ್ನು ಹೊತ್ತಿದ್ದ ಅಧಿಕಾರಿ ಏಪ್ರಿಲ್‌ 25 ರ ರಾತ್ರಿಯ ದುರಂತವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕೇವಲ 120 ಜನರಿಗೆ ಸಾಲುವಷ್ಟು ಪೂರೈಕೆಯಿದ್ದ ಆಮ್ಲಜನಕವನ್ನು ಆ ರಾತ್ರಿ 250 ಜನ ಕೋವಿಡ್‌ ಸೋಂಕಿತರಿಗೆ ನೀಡುವ ಪ್ರಯತ್ನ ಹೇಗೆ ನಡೆಯಿತೆಂಬುದನ್ನು ಅಧಿಕಾರಿ ನಮ್ಮ ಮುಂದೆ ತೆರೆದಿಟ್ಟಿದ್ದಾರೆ.

ಏಪ್ರಿಲ್‌ ಕೊನೆಯ ವಾರದ ವೇಳೆಗೆ ಕೋಲಾರ ಜಿಲ್ಲೆಯಲ್ಲಿ ಇದ್ದಕ್ಕಿದ್ದಂತೆ ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗತೊಡಗಿತು. ಬಹುತೇಕ ಸೋಂಕಿತರು ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಸಂದರ್ಭದಲ್ಲಿ ಮೇಲಿನ ಅಧಿಕಾರಿಗಳಿಗೆ ಘಟನೆಯ ಕುರಿತು ಹಲವು ಸಾರಿ ಮಾಹಿತಿಗಳನ್ನು ನೀಡಿದೆವು. 250 ಜನರಿಗೆ ಸಾಲುವಷ್ಟು ವೈದ್ಯಕೀಯ ಆಮ್ಲಜನಕದ ವ್ಯವಸ್ಥೆ ನಮ್ಮಲ್ಲಿಲ್ಲ ಎಂಬ ವಿಷಯವನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಟ್ಟಿದ್ದೆವು. ಆ ಸಂದರ್ಭದಲ್ಲಿ ಯಾರೊಬ್ಬರೂ ನಮ್ಮ ಮಾತನ್ನು ಕೇಳಿಸಿಕೊಳ್ಳಲಿಲ್ಲ. ಏಪ್ರಿಲ್‌ 25 ರ ರಾತ್ರಿ ಹೊತ್ತಿಗೆ ನಮ್ಮ ಆಕ್ಸಿಜನ್‌ ವ್ಯವಸ್ಥೆ ಸಂಪೂರ್ಣ ಡ್ರೈ ಆಗುವ ಹಂತಕ್ಕೆ ಬಂದಿತ್ತು. ರಾತ್ರಿಯಿಡೀ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಸೇರಿ ಆಮ್ಲಜನಕ ಘಟಕದ ಯಂತ್ರಗಳ ಮೇಲೆ ನೀರು ಸುರಿದು ಆಮ್ಲಜನಕದ ಒತ್ತಡ ಕಡಿಮೆಯಾಗುವಂತೆ ಪ್ರಯತ್ನಪಟ್ಟೆವು ಎಂದು ಎಸ್‌ಎನ್‌ಆರ್‌ ಆಸ್ಪತ್ರೆಯ ತಾಂತ್ರಿಕ ಸಿಬ್ಬಂದಿ ಸೋಮಣ್ಣ ಘಟನೆಯ ಹಿಂದಿನ ರಾತ್ರಿಯ ವಿದ್ಯಮಾನಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಆ ರಾತ್ರಿ ಜಿಲ್ಲಾ ಸರ್ಜನ್‌ ಕೂಡ ನಮ್ಮ ಜೊತೆ ನಿಂತು ಆಮ್ಲಜನಕ ಪೂರೈಕೆ ಸ್ಥಗಿತಗೊಳ್ಳದಂತೆ ನೋಡಿಕೊಳ್ಳುತ್ತಿದ್ದರು. ಆಮ್ಲಜನಕ ಘಟಕ ಸ್ಥಗಿತಗೊಳ್ಳದಂತೆ ತಡಯಲು ಒಂದು ಟ್ಯಾಂಕರ್‌ ನೀರನ್ನು ವ್ಯವಸ್ಥೆ ಮಾಡುವುದಾಗಿ ಜಿಲ್ಲಾ ಸರ್ಜನ್‌ ಸಿದ್ಧರಾದರು ಎಂದು ಆಸ್ಪತ್ರೆಯ ತಾಂತ್ರಿಕ ಸಿಬ್ಬಂದಿ ಸೋಮಣ್ಣ ಹೇಳುತ್ತಾರೆ.

ಮಾರನೇ ದಿನ ಏಪ್ರಿಲ್‌ 26, 2021 ರಂದು ನಾಲ್ವರು ರೋಗಿಗಳು ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಮೃತಪಟ್ಟ ಘಟನೆ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ನಡೆಯಿತು.

ಕರ್ನಾಟಕ ಸರ್ಕಾರ ತನಿಖೆ ನಡೆಸಿ ಎಸ್‌ಎಸನ್‌ಆರ್‌ ಆಸ್ಪತ್ರೆಯು ಅಗತ್ಯಕ್ಕಿಂತ ಹೆಚ್ಚು ಆಮ್ಲಜನಕವನ್ನು ಪೂರೈಸುವ ಹಳೆಯ ಯಂತ್ರಗಳ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿರುವುದೇ ಘಟನೆಗೆ ಕಾರಣ. ಪಿಎಂ ಕೇರ್ಸ್‌ ಫಂಡ್‌ ಅಡಿಯಲ್ಲಿ ಜಿಲ್ಲೆಗೆ ನೀಡಲಾದ 20 ಸುಧಾರಿತ ವೆಂಟಿಲೇಟರ್‌ಗಳನ್ನು ಬಳಸಿಕೊಳ್ಳಲು ಆಸ್ಪತ್ರೆ ಮತ್ತು ಜಿಲ್ಲಾಡಳಿತ ವಿಫಲವಾಗಿದೆ ಎಂದು ವರದಿ ನೀಡಿ ಜಿಲ್ಲಾ ಸರ್ಜನ್‌ ಮತ್ತು ಕೋಲಾರದ ಜಿಲ್ಲಾ ವೈದ್ಯಾಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿತು.

ಇದನ್ನೂ ಓದಿ: 8 ಸಾವುಗಳಾದರೂ ಎಚ್ಚೆತ್ತುಕೊಳ್ಳದ ಕೋಲಾರದ ಜಿಲ್ಲಾಸ್ಪತ್ರೆ: ಅಲ್ಲೆ ದಾಖಲಾಗಿರುವ ಮಹಿಳಾ ಮುಖಂಡೆ ವಿ.ಗೀತಾ ಆಕ್ರೋಶ – ವಿಡಿಯೋ ನೋಡಿ

ಏಪ್ರಿಲ್‌ 26 ರಂದು ನಾಲ್ಕು ಜನ ಕೋವಿಡ್‌ ಸೋಂಕಿತರು ಮೃತಪಟ್ಟ ದಿನ ಆಮ್ಲಜನಕದ ಪೂರೈಕೆ ನಿಂತಿರಲಿಲ್ಲ. ಆದರೆ ಆಸ್ಪತ್ರೆಯ ಆಕ್ಸಿಜನ್‌ ಪೂರೈಕೆ ಸಾಮರ್ಥ್ಯವನ್ನೂ ಮೀರಿ ರೋಗಿಗಳ ಸಂಖ್ಯೆ ಹೆಚ್ಚಿದ್ದರಿಂದ ಆಕ್ಸಿಜನ್‌ ಪೂರೈಕೆ ಮೇಲೆ ಹೆಚ್ಚಿನ ಒತ್ತಡ ಉಂಟಾಯಿತು. ಹೀಗಾಗಿ ರೋಗಿಗಳಿಗೆ ಅಗತ್ಯವಾಗಿದ್ದ ಪ್ರಮಾಣದ ಆಕ್ಸಿಜನ್ ಒತ್ತಡವನ್ನು ಪೂರೈಸಲು ಸಾಧ್ಯವಾಗಿಲ್ಲ ಎಂದು ಎಸ್‌ಎನ್‌ಆರ್‌ ಕೋಲಾರ ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಹೇಳುತ್ತಾರೆ.

ಆದಿನ ಜಿಲ್ಲಾಸ್ಪತ್ರೆಯ ಸಾಮರ್ಥ್ಯಕ್ಕೂ ಮೀರಿದ ಪ್ರಮಾಣದಲ್ಲಿ ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾದರು. ಈ ಅಗತ್ಯವನ್ನು ಯಾರೂ ಅಂದಾಜಿಸಿರಲಿಲ್ಲ. ಸರ್ಕಾರ ದುರಂತವೊಂದು ಸಂಭವಿಸಿದ ಮೇಲೆ ವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗುತ್ತದೆ. ನಾವು ಮೊದಲೇ ಆಕ್ಸಿಜನ್‌ ಅಗತ್ಯವಿರುವ ಸೋಂಕಿತರನ್ನು ಹೆಚ್ಚಿನ ಸೌಲಭ್ಯವಿರುವ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದೆವು. ಆದರೆ ಆಸಂದರ್ಭದಲ್ಲಿ ಯಾರೂ ನಮ್ಮ ಮಾತನ್ನು ಕೇಳಿಸಿಕೊಳ್ಳಲಿಲ್ಲ ಎಂದು ಕೋಲಾರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯ ತಾಂತ್ರಿಕ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಏಪ್ರಿಲ್‌ 26 ರ ಘಟನೆಯ ಬಳಿಕವಷ್ಟೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಸದ್ಯ 250 ಕೋವಿಡ್‌ ಬೆಡ್‌ಗಳನ್ನು 40 ಐಸಿಯು ಬೆಡ್‌ಗಳನ್ನು ಮತ್ತು ನಾಲ್ಕು ವೆಂಟಿಲೇಟರ್‌ ವ್ಯವಸ್ಥೆಯಿರುವ ಬೆಡ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ತಾಂತ್ರಿಕ ಸಿಬ್ಬಂದಿ ಹೇಳುತ್ತಾರೆ.

ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಸಂಭವಿಸಿದ ಆರೋಗ್ಯದ ಬಿಕ್ಕಟ್ಟು ಕರ್ನಾಟಕದ ಗ್ರಾಮೀಣ ಭಾಗಗಳ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆಗೆ ಸಾಕ್ಷಿಯಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಕೇವಲ 60 ಕಿಲೋ ಮೀಟರ್‌ ದೂರದಲ್ಲಿರುವ ಕೋಲಾರ ಜಿಲ್ಲೆಯ ಕಥೆಯೇ ಇದಾದರೆ ದೂರದ ಜಿಲ್ಲೆಗಳ ಪರಿಸ್ಥಿತಿ ಇನ್ನಷ್ಟು ಕರುಣಾಜನಕವಾಗಿದೆ. ಬೆಂಗಳೂರು ನಗರಕ್ಕೆ ಅತ್ಯಂತ ಹತ್ತಿರದಲ್ಲಿದ್ದರೂ ಇಂದಿಗೂ ಕೋಲಾರ ಜಿಲ್ಲಾಸ್ಪತ್ರೆಯ ಮುಂದೆ ಸಾಲುಗಟ್ಟಿ ನಿಂತಿರುವ ಆಂಬುಲೆನ್ಸ್ ಗಳ ಸಂಖ್ಯೆ ಇಳಿದಿಲ್ಲ. ಇದು ಸರ್ಕಾರ ಕೊರೋನಾ ಸಾಂಕ್ರಾಮಿಕವನ್ನು ನಿರ್ವಹಿಸಿದ ರೀತಿಗೆ ಒಂದು ಚಿಕ್ಕ ಉದಾಹರಣೆಯಾಗಿ ನಿಲ್ಲುತ್ತದೆ ಅಷ್ಟೆ. ವಿಚಿತ್ರ ಎಂದರೆ ಕೋಲಾರ ಸುತ್ತಮುತ್ತಲಿನ ಭಾಗದಲ್ಲಿ ಇರುವ ಕೊರೋನಾ ಸೋಂಕಿತರಿಗೆ ಆಕ್ಸಿಜನ್‌ ಮತ್ತು ಐಸಿಯು ವೆಂಟಿಲೇಟರ್‌ ವ್ಯವಸ್ಥೆಯನ್ನು ಹೊಂದಿದ ಏಕೈಕ ಸರ್ಕಾರಿ ಆಸ್ಪತ್ರೆಯೆಂದರೆ ಕೋಲಾರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯೊಂದೆ. ಇರುವ ಒಂದು ಆಸ್ಪತ್ರೆಯ ಕಥೆಯೇ ಇದಾದರೆ ಉಳಿದ ಆಸ್ಪತ್ರೆಗಳ ಅವಸ್ಥೆ ಏನಾಗಿರಬೇಕು?

ಏಪ್ರಿಲ್‌ 26 ರಂದು ಬಂಗಾರಪೇಟೆ ತಾಲೂಕಿನ ಚಿಕ್ಕಪ್ಪ ಎಂಬ ಕೋವಿಡ್‌ ಸೋಂಕಿತರನ್ನು ಆಕ್ಸಿಜನ್ ಸ್ಯಾಚುರೇಷನ್ ಲೆವಲ್‌ ಇಳಿದ ಕಾರಣದಿಂದ ಎಸ್‌ಎನ್‌ಆರ್‌ ಆಸ್ಪತ್ರೆಗೆ ಆಂಬುಲೆನ್ಸ್‌ ನಲ್ಲಿ ಕರೆತರಲಾಯಿತು. ಆದರೆ ರೋಗಿಗೆ ಆಸ್ಪತೆಯ ತುರ್ತು ಘಟಕದಲ್ಲಿ ಯಾವುದೇ ಬೆಡ್‌ ಇರಲಿಲ್ಲ. ಸೋಂಕಿತ ಚಿಕ್ಕಪ್ಪ ಅವರನ್ನು ಅನೇಕ ಗಂಟೆಗಳ ಕಾಲ ಆಸ್ಪತ್ರೆಯ ಮುಂದೆ ಆಂಬುಲೆನ್ಸ್‌ ನಲ್ಲಿಯೇ ಆಕ್ಸಿಜನ್‌ ಪೂರೈಕೆಯ ವ್ಯವಸ್ಥೆ ಮಾಡಿ ಇರಿಸಲಾಯಿತು.

ಆಸ್ಪತ್ರೆಯಲ್ಲಿ ಐಸಿಯು ಬೆಡ್‌ಗಳೇ ಇರಲಿಲ್ಲ. ಆಸ್ಪತ್ರೆಯವರು ನಮ್ಮ ಚಿಕ್ಕಪ್ಪನವರನ್ನು ಬೆಡ್‌ ಖಾಲಿಯಾಗುವವರೆಗೆ ಕಾಯಿರಿ ನಂತರ ತುರ್ತು ವಿಭಾಗಕ್ಕೆ ಕರೆದುಕೊಂಡು ಹೋಗುವುದಾಗಿ ಆಸ್ಪತ್ರೆಯವರು ತಿಳಿಸಿದರು ಎಂದು ರೋಗಿಯ ಸಂಬಂಧಿಕರು ಹೇಳುತ್ತಾರೆ.

ನಮ್ಮಲ್ಲಿ ಸದ್ಯ 250 ಆಕ್ಸಿಜನ್‌ ಬೆಡ್‌ಗಳು ಇವೆ. ಬೆಡ್‌ಗಳನ್ನೇನೊ ಹೆಚ್ಚಿಸಬಹುದು. ಆದರೆ ಅದಕ್ಕೆ ಅಗತ್ಯವಿರುವ ಸಿಬ್ಬಂದಿ ನಮ್ಮಲ್ಲಿ ಇಲ್ಲ. 20 ವೆಂಟಿಲೇಟರ್‌ ಬೆಡ್‌ಗಳು ಇವೆ. ಆದರೆ ಇದುವರೆಗೆ ಕೇವಲ 4-5 ನ್ನು ಮಾತ್ರ ಉಪಯೋಗಿಸುತ್ತಿದ್ದೇವೆ. ವೆಂಟಿಲೇಟರ್‌ ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಯ ಕೊರತೆಯಿರುವುದರಿಂದ ಎಲ್ಲಾ ವೆಂಟಿಲೇಟರ್‌ಗಳ ಬಳಕೆ ಸಾಧ್ಯವಾಗುತ್ತಿಲ್ಲ. 20 ಐಅಸಿಯು ಬೆಡ್‌ಗಳೂ ಕೂಡ ನಮ್ಮಲ್ಲಿ ಇವೆ. ಅಲ್ಲೂ ವೈದ್ಯಕೀಯ ಸಿಬ್ಬಂದಿಯ ಕೊರತೆ ಇದೆ ಎಂದು ಹೊಸದಾಗಿ ನೇಮಕವಾಗಿರುವ ಕೋಲಾರ ಜಿಲ್ಲಾ ಸರ್ಜನ್‌ ಡಾ. ರವಿಕುಮಾರ್‌ ಹೇಳುತ್ತಾರೆ.

ಕೋಲಾರದಲ್ಲಿ ಕಳೆದ 28 ದಿನಗಳಲ್ಲಿ 588% ಕೋವಿಡ್‌ ಪ್ರಕರಣಗಳ ಹೆಚ್ಚಳವಾಗಿವೆ. ಏಪ್ರಿಲ್‌ 26 ರಿಂದ ಮೇ 26 ರ ಒಂದು ತಿಂಗಳ ಅವಧಿಯಲ್ಲಿ ಕೋಲಾರದಲ್ಲಿ 19,887 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಅದೇ ಮಾರ್ಚ್‌ 26 ರಿಂದ ಏಪ್ರಿಲ್‌ 26 ರ ಅವಧಿಯಲ್ಲಿ ಜಿಲ್ಲೆಯಲ್ಲಿ ಕೇವಲ 5567 ಸಕ್ರಿಯ ಪ್ರಕರಣಗಳು ಮಾತ್ರ ಇದ್ದವು. ಕೋವಿಡ್‌ ಪಾಸಿಟಿವಿಟಿ ಪ್ರಮಾಣವೂ 28.56 ರಷ್ಟಿದೆ. ರಾಜ್ಯದಲ್ಲಿ ಸದ್ಯ ಕೋವಿಡ್‌ ಪಾಸಿಟಿವಿಯ ರೇಟ್‌ 19 ರಷ್ಟಿದೆ. ಕೋವಿಡ್‌ ಸೋಂಕಿತರ ಸಂಖ್ಯೆ ತಿಂಗಳ ಅವಧಿಯಲ್ಲಿ ಗಣನೀಯವಾಗಿ ಹೆಚ್ಚುತ್ತಿದ್ದರೂ ಅಗತ್ಯ ಸಿದ್ಧತೆಗಳನ್ನು ಸರ್ಕಾರ ಮತ್ತು ಅಧಿಕಾರಿಗಳು ಮಾಡಿಕೊಳ್ಳದಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಇಂದು ಕೇವಲ ಕೋಲಾರದಲ್ಲಿ ಮಾತ್ರವಲ್ಲ ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಕೊರೋನಾ ಸೋಂಕನ್ನು ಎದುರಿಸಲು ಸರ್ಕಾರದ ಬಳಿ ಸಮರ್ಥ ವ್ಯವಸ್ಥೆಯಿಲ್ಲ. ಬದಲಾಗಿ ಸಿಬ್ಬಂದಿ ಮತ್ತು ವೈದ್ಯಕೀಯ ವ್ಯವಸ್ಥೆಯ ಮೇಲೆ ಇರುವ ಮಿತಿಯಲ್ಲಿಯೇ ಹೆಚ್ಚಿನ ಒತ್ತಡಗಳನ್ನು ಕೊರೋನಾ ತೀವ್ರತೆಯನ್ನು ನಿಭಾಯಿಸುವಂತೆ ಸರ್ಕಾರ ಒತ್ತಡ ಹೇರುತ್ತದೆ. ಸರ್ಕಾರದ ಗಮನ ತಾನು ಮುಜುಗರದಿಂದ ತಪ್ಪಿಸಿಕೊಳ್ಳುವುದೊಂದೇ. ಆ ಪ್ರಯತ್ನದಲ್ಲಿ ತನ್ನ ವೈಫಲ್ಯಗಳಿಗೂ ಅಧಿಕಾರಿಗಳು, ವೈದ್ಯರು ಮತ್ತು ಸಿಬ್ಬಂದಿಯನ್ನೇ ಹೊಣೆ ಮಾಡುತ್ತದೆ. ಮೂಲಭೂತ ವ್ಯವಸ್ಥೆಗಳನ್ನು ಆಸ್ಪತ್ರೆಗಳ ಪರಿಸ್ಥಿತಿಯನ್ನು ಸುಧಾರಿಸಲು ಮುಂದಾಗಿರುವ ಯಾವ ಪ್ರಯತ್ನಗಳು ಸರ್ಕಾರದ ಕಡೆಯಿಂದ ಕಂಡುಬರುತ್ತಿಲ್ಲ.

ಏಪ್ರಿಲ್‌ 21 ರಿಂದ ಮೇ 19 ರ 28 ದಿನಗಳ ಅವಧಿಯಲ್ಲಿ ಕೋಲಾರ ದೇಶದಲ್ಲೇ ಅತಿಹೆಚ್ಚು ಕೋವಿಡ್‌ ಪಾಸಿಟಿವಿಟಿಯನ್ನು ಹೊಂದಿರುವ 50 ಜಿಲ್ಲೆಗಳಲ್ಲಿ ಒಂದಾಗಿತ್ತು. ಕೋಲಾರದಲ್ಲಿ ಒಂದು ತಿಂಗಳ ಅವಧಿಯಲ್ಲಿ ಹೊಸದಾಗಿ ಸೋಂಕಿಗೆ ಒಳಗಾಗುವವರ ಪ್ರಮಾಣ 558% ರಷ್ಟು ಹೆಚ್ಚಾಗಿದೆ. ಇಳಿಮುಖವಾಗದ ಸೋಂಕಿತರ ಸಂಖ್ಯೆ ಜಿಲ್ಲೆಗೆ ತುರ್ತಾಗಿ ದೊಡ್ಡ ಪ್ರಮಾಣದ ವೈದೈಕೀಯ ಮೂಲಭೂತ ವ್ಯವಸ್ಥೆಯ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಆಗ ಮಾತ್ರ ಕೊರೋನಾ ಕಾರಣದಿಂದ ಉಂಟಾಗುವ ಸಾವುಗಳನ್ನು ತಡೆಯಲು ಸಾಧ್ಯ.

ಕೋಲಾರ ಜಿಲ್ಲೆಯೊಂದರಲ್ಲಿ ಏಪ್ರಿಲ್‌ 26 ರಿಂದ ಮೇ 26 ರ ಅವಧಿಯಲ್ಲಿ 162 ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ. ಮಾರ್ಚ್‌ 26 ರಂದ ಏಪ್ರಿಲ್‌ 26 ರ ಅವಧಿಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 26 ಅಷ್ಟೆ. ಮೇ 25 ರೊಂದೇ ದಿನ ಜಿಲ್ಲೆಯಲ್ಲಿ 11 ಜನರು ಕೋವಿಡ್‌ ನಿಂದ ಮೃತಪಟ್ಟಿದ್ದಾರೆ. ಕೋವಿಡ್‌ ಕಾರಣಗಳಿಂದ ಜಿಲ್ಲೆಯಲ್ಲಿ ಮೃತಪಡುತ್ತಿರುವ ಸಂಖ್ಯೆ ಇನ್ನು ಹೆಚ್ಚಿರುವ ಸಾಧ್ಯತೆಯಿದೆ. ಬಹುತೇಕ ಸೋಂಕಿತರು ಕೋಲಾರದ ಅವ್ಯವಸ್ಥೆಯ ಕಾರಣದಿಂದ ಹತ್ತಿರದ ಬೆಂಗಳೂರಿಗೆ ಚಿಕಿತ್ಸೆಗಾಗಿ ತೆರಳುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್‌ ಸಾವಿನ ಸಂಖ್ಯೆ ಕಡಿಮೆಯಿದೆ. ಕೋವಿಡ್‌ ಸಾವಿನ ರೇಟ್‌ ಸದ್ಯ 1.16 ಅಷ್ಟು ಇದ್ದು ಕಳೆದ ವಾರ 1.86 ಕೋವಿಡ್‌ ಸಾವಿನ ಪ್ರಮಾಣವಿತ್ತು ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ಬಹುಶಃ ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಸಾವಿನ ಸಂಖ್ಯೆಯ ಇಳಿಮುಖವಾಗಲೂ ಕಾರಣವಿರಬಹುದು.

ಬೆಂಗಳೂರಿನಿಂದ ಕೇವಲ 45 ಕಿಲೋ ಮೀಟರ್‌ ದೂರದಲ್ಲಿರುವ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ತಾಲೂಕಾಸ್ಪತ್ರೆಯಲ್ಲಿ ಇರುವ 70 ಕೋವಿಡ್‌ ಬೆಡ್‌ಗಳು, 4 ಐಸಿಯು ವೆಂಟಿಲೇಟರ್‌ ಗಳು ಈಗಾಗಲೇ ಭರ್ತಿಯಾಗಿವೆ. ಯಾವುದೇ ಬೆಡ್‌ಗಳು ಸದ್ಯ ಲಭ್ಯವಿರುವುದಿಲ್ಲ ಎಂದು ತಾಲೂಕಾಸ್ಪತ್ರೆಯ ಮುಂದೆ ಬೋರ್ಡ್‌ ಹಾಕಲಾಗಿದೆ.

ಕೋಲಾರದಲ್ಲಿ ವೈದ್ಯಕೀಯ ವ್ಯವಸ್ಥೆಯ ಮೇಲಿರುವ ಒತ್ತಡದಿಂದಾಗಿ ಕೆಜಿಎಫ್‌ ನ ಬೆಮೆಲ್‌ ನಗರದಲ್ಲಿರುವ ಹಳೆಯ ಭಾರತ್‌ ಗೋಲ್ಡ್‌ ಮೈನ್‌ ಸಂಸ್ಥೆಗೆ ಸೇರಿದ 140 ವರ್ಷ ಹಳೆಯ ಆಸ್ಪತ್ರೆಯನ್ನು ಮತ್ತೆ ರೋಗಿಗಳಿಗಾಗಿ ತೆರೆಯಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ 250 ಬೆಡ್‌ ಗಳಿರುವ ಕೋವಿಡ್‌ ಕೇರ್‌ ಸೆಂಟರ್‌ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಗಂಭೀರ ಪ್ರಕರಣಗಳಿಗೆ ಈ ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸೆಗಳು ಸದ್ಯಕ್ಕಂತೂ ಲಭ್ಯವಿಲ್ಲ. ಜೊತೆಗೆ 20 ವರ್ಷಗಳ ಹಿಂದೆ ಮುಚ್ಚಲಾದ 140 ವರ್ಷ ಹಳೆಯ ಈ ಆಸ್ಪತ್ರೆಯಲ್ಲಿ ಆಗತ್ಯವಿರುವ ವೈದ್ಯರಾಗಲೀ ವ್ಯದ್ಯಕೀಯ ಸಿಬ್ಬಂದಿಯಾಗಲೀ ಇಲ್ಲ. ಕೆಲ ಸ್ವಯಂ ಸೇವಕರು ಮತ್ತು ಕೆಲವೆ ಕೆಲವು ಸಿಬ್ಬಂದಿಗಳಿಂದ ಆಸ್ಪತ್ರಯನ್ನು ಸದ್ಯಕ್ಕೆ ನಡೆಸಲಾಗುತ್ತಿದೆ.

ಮೇ 26 ರಂದು ಕೆಜಿಎಫ್‌ ನ ಈ ಹಳೆಯ ಆಸ್ಪತ್ರೆಯಲ್ಲಿ 64 ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೇವಲ ಸಾಮನ್ಯ ಸೋಂಕಿನ ಲಕ್ಷಣವಿರುವ ರೋಗಿಗಳನ್ನು ಮಾತ್ರ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗುತ್ತಿದ್ದು, ಗಂಭೀರ ಸಮಸ್ಯೆ ಇರುವವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಕೆಜಿಎಫ್‌ ಸೇರಿದಂತೆ ಕರ್ನಾಟಕದ ಹೆಚ್ಚಿನ ತಾಲೂಕುಗಳಲ್ಲಿ ಕೋವಿಡ್‌ ಸಂಬಂಧಿ ಚಿಕಿತ್ಸೆಗೆ ಆಕ್ಸಿಜನ್‌, ವೆಂಟಿಲೇಟರ್‌, ಐಸಿಯು ಗಳ ವ್ಯವಸ್ಥೆಯಿಲ್ಲ. ಉತ್ತರ ಕನ್ನಡ, ಗುಲ್ಬರ್ಗಾ, ಬೆಳಗಾವಿ ಮುಂತಾದ ಕಡೆ ಗ್ರಾಮೀಣ ಭಾಗದ ನಿವಾಸಿಗಳು ಕೊರೋನಾ ಸೋಂಕಿನ ಚಿಕಿತ್ಸೆಗಾಗಿ 100 ಕಿಲೋ ಮೀಟರ್‌ ಗಿಂತಲೂ ದೂರವಿರುವ ಜಿಲ್ಲಾ ಕೇಂದ್ರಕ್ಕೆ ತೆರಳ ಬೇಕಾದ ಪರಿಸ್ಥಿತಿ ಇದೆ. ಕೆಲವು ಜಿಲ್ಲೆಗಳಲ್ಲಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಅನೇಕ ರೋಗಿಗಳು ಮೃತಪಡುತ್ತಿದ್ದಾರೆ. ರಾಜ್ಯ ರಾಜಧಾನಿಯ ಪಕ್ಕದ ಕೋಲಾರ ಜಿಲ್ಲೆಯ ಪರಿಸ್ಥಿತಿಯಲ್ಲೇ ಜನಪ್ರತಿನಿಧಿಗಳು ಮತ್ತು ಸರ್ಕಾರಿ ವ್ಯವಸ್ಥೆ ಜನರ ಆರೋಗ್ಯ ವ್ಯವಸ್ಥೆಯನ್ನು ಸರಿ ಪಡಿಸಲು ಇದುವರೆಗೆ ಹೆಚ್ಚಿನ ಕ್ರಮ ಕೈಗೊಳ್ಳದಿರುವಾಗ ರಾಜ್ಯದ ಗಡಿ ಮೂಲೆಯಲ್ಲಿರುವ ಹಳ್ಳಿಗಳ, ಜಿಲ್ಲೆಗಳ, ತಾಲೂಕುಗಳಿಗೆ ಅಗತ್ಯ ವೈದ್ಯಕೀಯ ವ್ಯವಸ್ಥೆಗಳು ತಲುಪದಿರುವುದು ಆಶ್ಚರ್ಯವೇನಲ್ಲ.

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಈಗ 1000 ಲೀಟರ್‌ ಸಾಮರ್ಥ್ಯದ ಲಿಕ್ವಿಡ್‌ ಆಕ್ಸಿಜನ್‌ ಸ್ಟೋರೇಜ್‌ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ವಿಪತ್ತಿನ ಸಂದರ್ಭದಲ್ಲಿ ನಮ್ಮಲ್ಲಿ ಆಕ್ಸಿಜನ್‌ ಪೂರೈಕೆಯಲ್ಲಿ ಕೊರತೆಯಿತ್ತು. ಈಗ ರೋಗಿಗಳ ಸಂಖ್ಯೆ ಮತ್ತು ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆಕ್ಸಿಜನ್‌ ಅಗತ್ಯತೆಯು ಮೊದಲಿನಷ್ಟು ಇಲ್ಲ. ನಮ್ಮಲ್ಲಿನ ಆಕ್ಸಿಜನ್‌ ಸಂಗ್ರಹಣೆ ಅಗತ್ಯಕ್ಕಿಂತಲೂ ಹೆಚ್ಚಿದೆ. ಯಾವಾಗ ವಿಪತ್ತು ಇರುತ್ತದೋ ಆಗ ಸರ್ಕಾರ ಏನೂ ಮಾಡುವುದಿಲ್ಲ. ವ್ಯವಸ್ಥೆಯನ್ನು ಸರಿ ಪಡಿಸಲು ಸರ್ಕಾರಕ್ಕೆ ದುರಂತವೊಂದು ಘಟಿಸಬೇಕಾಗುತ್ತದೆ ಎಂದು ಕೋಲಾರ ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಹೇಳುವಂತೆ ಸರ್ಕಾರ ದುರಂತವೊಂದು ನಡೆಯುವವರೆಗೆ ಯಾವುದೇ ಸಿದ್ಧತೆಗಳನ್ನು ಮಾಡಿಕೊಳ್ಳುವುದಿಲ್ಲ. ವಿಪತ್ತು ಬಂದಾಗ ತನ್ನ ವ್ಯವಸ್ಥೆಯ ಕೊನೆಯಲ್ಲಿರುವ ಸಿಬ್ಬಂದಿಯನ್ನು ಘಟನೆಗೆ ಹೊಣೆ ಮಾಡುವುದನ್ನೇ ವಿಪತ್ತು ನಿರ್ವಹಣೆಯ ತಂತ್ರವನ್ನಾಗಿ ಬಳಸುತ್ತದೆ. ಸರ್ಕಾರ ಇಂತಹ ಪಲಾಯನ ತಂತ್ರಗಳ ಮೂಲಕ ತಾತ್ಕಾಲಿಕವಾಗಿ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುವ ಬದಲು ಗ್ರಾಮೀಣ ಭಾಗದಲ್ಲಿ ಅಗತ್ಯ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ರಾಜ್ಯವನ್ನು ಮುಂದಿನ ವಿಪತ್ತುಗಳಿಂದ ರಕ್ಷಿಸುವ ಪ್ರಯತ್ನಕ್ಕೆ ಮುಂದಾಗಬೇಕು.


ಇದನ್ನೂ ಓದಿ: ಲಾಕ್‌ಡೌನ್‌ ವಿಸ್ತರಿಸುವ ಬಗ್ಗೆ ಜೂನ್‌ 5 ರಂದು ತೀರ್ಮಾನ: ಬಿಎಸ್‌ವೈ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...