Homeಮುಖಪುಟ5 ವರ್ಷದಲ್ಲಿ 14 ಸರ್ಕಾರಿ ಹುದ್ದೆಗೆ ಆಯ್ಕೆಯಾದ ಬಾಗಲಕೋಟೆಯ ಮಹಂತೇಶ್ ಬ್ಯಾಡಗಿ

5 ವರ್ಷದಲ್ಲಿ 14 ಸರ್ಕಾರಿ ಹುದ್ದೆಗೆ ಆಯ್ಕೆಯಾದ ಬಾಗಲಕೋಟೆಯ ಮಹಂತೇಶ್ ಬ್ಯಾಡಗಿ

- Advertisement -
- Advertisement -

ಸರ್ಕಾರಿ ಹುದ್ದೆಯ ಕನಸು ಎಲ್ಲರಿಗೂ ಇರುತ್ತದೆ. ಅನೇಕರು ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಲೇ ಹತಾಶರಾಗುತ್ತಾರೆ. ಕೆಲವರು ಛಲ ಬಿಡದೇ ಪರೀಕ್ಷೆಗಳನ್ನು ಬರೆದು ಸರ್ಕಾರಿ ನೌಕರಿಯನ್ನು ಪಡೆಯುತ್ತಾರೆ. ಆದರೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಜಂಬಗಿ ಬಿ.ಕೆ ಗ್ರಾಮದ ಮಹಂತೇಶ್‌ ರಾಮಪ್ಪ ಬಾಡಗಿ ಎಂಬ ಪ್ರತಿಭಾವಂತ ಯುವಕ ಹಲವು ಸರ್ಕಾರಿ ಹುದ್ದೆಗಳನ್ನು ಪಡೆದು ಅಚ್ಚರಿಗೆ ಕಾರಣರಾಗಿದ್ದಾರೆ.

ಮಹಾಂತೇಶ್‌ ಬಾಡಗಿ ಒಂದಲ್ಲ ಎರಡಲ್ಲ ಬರೋಬ್ಬರಿ 14 ಸರ್ಕಾರಿ ಹುದ್ದೆಗೆ ಆಯ್ಕೆಯಾಗಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. 2016 ರಿಂದ 2021 ರ ವರೆಗೆ 5 ವರ್ಷದ ಕಾಲ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿದ್ದಾರೆ. ಸದ್ಯ ಅವರು ತುಮಕೂರು ಜಿಲೆ ಗುಬ್ಬಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದಾರೆ.

ಅಲ್ಪಸಂಖ್ಯಾತ ಪಿಯು ಕಾಲೇಜ್‌ ಉಪನ್ಯಾಸಕರ ನೇಮಕಾತಿಯಲ್ಲಿ ಪ್ರಥಮ, BCM ಇಲಾಖೆ FDA ನೇಮಕಾತಿಯಲ್ಲಿ ದ್ವಿತೀಯ, ಗ್ರಾಮಪಂಚಾಯತಿ ಕಾರ್ಯದರ್ಶಿ ನೇಮಕಾತಿಯಲ್ಲಿ 12 ನೇ ರ್ಯಾಂಕ್‌ ಹೀಗೆ ವಿವಿಧ ಹುದ್ದೆಗಳಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಹಂತೇಶ್‌ ಉತ್ತಮ ರ್ಯಾಂಕ್‌ ಪಡೆದು ಕೆಲಸಕ್ಕೆ ಆಯ್ಕೆಯಾಗಿದ್ದರು. ಆದರೆ ಸದ್ಯ ಅವರ ಎಲ್ಲ ಗಮನ ಈಗ ಕೆಎಎಸ್‌ ಪರೀಕ್ಷೆಗಳ ಕಡೆಗೆ ನೆಟ್ಟಿದೆ.

ಮಹಂತೇಶ್‌ ಎಂಎ, ಬಿಎಡ್‌ ಶಿಕ್ಷಣ ವನ್ನು ಪಡೆದಿದ್ದಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಜಂಬಗಿಯ ಸರ್ಕಾರಿ ಶಾಲೆಯಲ್ಲಿ ಮುಗಿಸಿದ್ದಾರೆ. ಪ್ರೌಢ ಶಿಕ್ಷಣವನ್ನು ತುಂಬಳದಲ್ಲಿ  ಪ್ರೌಢಶಿಕ್ಷಣವನ್ನು ಪಡೆದಿದ್ದಾರೆ.

ಗ್ರಾಮಸ್ಥರ ಮತ್ತು ನಮ್ಮೆಲ್ಲರ ಆಶೀರ್ವಾದ ಮಹಂತೇಶ್‌ ಮೇಲಿದೆ. ಮಗ ಕೆಎಎಸ್‌ ಮಾಡಬೇಂಕೆಂಬ ಕನಸು ಹೊಂದಿದ್ದಾರೆ. ಅವರು ಕೆಎಎಸ್‌ ಬರೆದು ಉತ್ತೀರ್ಣರಾಗಲಿ ಎಂದು ಆಶಿಸುತ್ತೇವೆ ಎಂದು ಮಹಂತೇಶ್‌ ತಂದೆ ತಿಳಿಸಿದ್ದಾರೆ.

ಎರಡು ವರ್ಷದಿಂದ ಸತತವಾಗಿ ನಾನು KAS ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ನನ್ನ ಸಹೋದರ ಸಂತೋಶ್‌ ಬ್ಯಾಡಗಿ ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಬಂಧು ಬಾಂಧವರು ಮತ್ತು ಸ್ನೇಹಿತರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಮಹಂತೇಶ್‌ ಹೇಳುತ್ತಾರೆ.

ಸರ್ಕಾರಿ ಕೆಲಸವೆಂಬುದು ಇಂದು ಗಗನ ಕುಸುಮವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸತತ ಪರಿಶ್ರಮ ಮತ್ತು ಪ್ರಯತ್ನದಿಂದ  ಅನೇಕ ಸರ್ಕಾರಿ ಹುದ್ದೆಗಳಿಗೆ ನಡೆದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಅವರ KAS ಕನಸು ಕೂಡ ನನಸಾಗಲಿ.


ಇದನ್ನೂ ಓದಿ: ಪ್ರಜಾಪ್ರಭುತ್ವದ ಸಾಕ್ಷಿಪ್ರಜ್ಞೆ ದೇವನೂರು ಮಹಾದೇವರಿಗೆ 74 ತುಂಬಿದ ಸಂದರ್ಭದಲ್ಲಿ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಕ್ಕಳಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಮಾಂಸಾಹಾರ ತರದಂತೆ ಸೂಚಿಸಿದ ಶಾಲೆ: ಆರೋಪ

0
ಜೈಪುರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಮಕ್ಕಳಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಮಾಂಸಾಹಾರವನ್ನು ತರದಂತೆ ನಿಷೇಧಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಈ ಬಗೆಗಿನ ಆರೋಪವನ್ನು ಶಾಲೆಯ ಮುಖ್ಯೋಪಾಧ್ಯಾಯರು ನಿರಾಕರಿಸಿದ್ದಾರೆ. ಕಥೆಗಾರ ಮತ್ತು ಚಿತ್ರಕಥೆಗಾರ, ದರಾಬ್...