ಜವಾಹರಲಾಲ್ ನೆಹರೂ ಅವರ ನಾಯಕತ್ವದಿಂದಾಗಿ ಸ್ವಾತಂತ್ರ್ಯದ ಸಮಯದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಸಾಧ್ಯವಾಗಿಲ್ಲ ಎಂದು ಉತ್ತರ ಪ್ರದೇಶದ ಬಲ್ಲಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಶನಿವಾರ ಹೇಳಿದ್ದಾರೆ. ಅವರು ನೆಹರೂ ಅವರನ್ನು ಹೇಡಿ ಎಂದು ಹೇಳಿ ವಿವಾದವೆಬ್ಬಿಸಿದ್ದಾರೆ.
ಭಾರತದ ವಿಭಜನೆಗೆ ಕಾಂಗ್ರೆಸ್ಸಿನ ಕೊಳಕು ಚಿಂತನೆಯೆ ಕಾರಣ ಎಂದು ಆರೋಪಿಸಿದ ಸುರೇಂದ್ರ ಸಿಂಗ್, “ಒಂದು ವೇಳೆ ನೆಹರೂ ಪ್ರಧಾನ ಮಂತ್ರಿಯಾಗಿರದಿದ್ದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬಹುದಿತ್ತು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗಾಂಧಿ, ನೆಹರೂ, ಪಟೇಲ್ ಬಾಂಧವ್ಯದ ಬಗ್ಗೆ: ಸ್ವಾತಂತ್ಯ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ
“ಎರಡು ಸಂಸ್ಕೃತಿಗಳನ್ನು ಆಧರಿಸಿ ಎರಡು ರಾಷ್ಟ್ರಗಳು ರೂಪುಗೊಂಡವು. ಆದರೆ ಹೇಡಿ ನೆಹರೂ ಅವರ ನಾಯಕತ್ವದಿಂದಾಗಿ ಸ್ವಾತಂತ್ರ್ಯದ ಸಮಯದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲಾಗಿಲ್ಲ” ಎಂದು ಬಿಜೆಪಿ ಶಾಸಕ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೆಹರೂ ಬದಲಿಗೆ ಸರ್ದಾರ್ ಪಟೇಲ್ ಪ್ರಧಾನಿಯಾಗಿದ್ದರೆ ಭಾರತ ಹಿಂದೂ ರಾಷ್ಟ್ರವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದರು ಸರ್ದಾರ್ ಪಟೇಲ್; ಉಳಿಸಿದವರು ನೆಹರೂ!
ಕಾಶ್ಮೀರದಲ್ಲಿ 370 ನೇ ವಿಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಸುರೇಂದ್ರ ಸಿಂಗ್, “ಅವರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಜಮ್ಮು ಕಾಶ್ಮೀರದ 370 ನೇ ವಿಧಿಯನ್ನು ತೆಗೆದುಹಾಕುವ ನಿರ್ಧಾರ ಅತ್ಯಂತ ದುಃಖಕರವಾದುದು. ಕಾಂಗ್ರೆಸ್ ಪಕ್ಷವು ಖಂಡಿತವಾಗಿಯೂ ಈ ವಿಷಯದ ಬಗ್ಗೆ ಮರುಚಿಂತನೆ ಮಾಡುತ್ತಿತ್ತು ಎಂದು ಸಾಮಾಜಿಕ ಜಾಲತಾಣದ ಸಂವಾದವೊಂದರಲ್ಲಿ ತಿಳಿಸಿದ್ದರು. ಇದನ್ನು ಬಿಜೆಪಿಯು ವಿವಾದವನ್ನಾಗಿ ಮಾಡಿದೆ.
ಇದನ್ನೂ ಓದಿ: ನೆಹರೂ ಬಗ್ಗೆ ನೀಚರಿಗೇನು ಗೊತ್ತು?: ಯಾಹೂ ರವರ ಥೂತ್ತೇರಿ ಓದಿ
ಕೋಮುವಾದದ ಕುರಿತು: ರಾಜ್ಯದ ಮುಖ್ಯಮಂತ್ರಿಗಳಿಗೆ ನೆಹರೂ ಪತ್ರಗಳು


