Homeಥೂತ್ತೇರಿನೆಹರೂ ಬಗ್ಗೆ ನೀಚರಿಗೇನು ಗೊತ್ತು?: ಯಾಹೂ ರವರ ಥೂತ್ತೇರಿ ಓದಿ

ನೆಹರೂ ಬಗ್ಗೆ ನೀಚರಿಗೇನು ಗೊತ್ತು?: ಯಾಹೂ ರವರ ಥೂತ್ತೇರಿ ಓದಿ

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರವನ್ನ ಯುದ್ಧಮಾಡಿ ಗೆದ್ದಂತೆ ಬಿಂಬಿಸುತ್ತಿರುವ ಜಾಲತಾಣದ ಜನಿವಾರಿಗಳು 370ನೇ ವಿಧಿಯನ್ನು ನೆಹರು ಮಾಡಿದ ನೀಚ ಕೆಲಸವೆಂದು ಬಿಂಬಿಸುತ್ತಿವೆಯಲ್ಲಾ. ಅಂದು ನೆಹರೂ, ಹರಿಸಿಂಗ್ ಮುಂದಿಟ್ಟ 370ರ ಸವಲತ್ತನ್ನು ಒಪ್ಪದಿದ್ದರೆ, ಕಾಶ್ಮೀರ ಪಾಕಿಸ್ತಾನದ ಪಾಲಾಗುತ್ತಿತ್ತು ಎಂಬುದನ್ನು ಈ ಮಂದಮತಿಗಳಿಗೆ ಹೇಳುವರಾರು. ಈ ನೀಚರಿಗೆ ಮನವರಿಕೆ ಮಾಡಿಕೊಡುವ ಸಂಗತಿಗಳಾವು ಎಂದರೆ, 17 ವರ್ಷ ಜೈಲಿನಲ್ಲಿದ್ದ ನೆಹರು, ಪ್ರಧಾನಿಯಾಗಿಯೂ 17 ವರ್ಷ ಆಡಳಿತ ನಡೆಸಿದರು. ಆ ಅವಧಿಯಲ್ಲಿ ಪಂಚವಾರ್ಷಿಕ ಯೋಜನೆಗಳು ಪೂರ್ಣಗೊಂಡು ಕೈಗಾರಿಕೆ, ಆಣೆಕಟ್ಟು, ಕೃಷಿ ಮತ್ತು ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಬುನಾದಿ ಹಾಕಿದರು. ಜೊತೆಗೆ ಪ್ರಜಾಪ್ರಭುತ್ವ ಕಾಲೂರಿತು. ಅವರ ಅವಧಿಯಲ್ಲಿ ಆಗ ಲಡ್ಡಿಡಿದ ಲಾಠಿ ಬೀಸಿಕೊಂಡು ಅರೆಹೊಟ್ಟೆಯಲ್ಲೇ ಬದುಕಿದ್ದ ಬಡಜೀವಿಗಳು ಇಂದು ಭಾರತದ ಪ್ರಗತಿಯಲ್ಲಿ ಸ್ಫೋಟಿಸಿದ ಹೊಸ ಆವಿಷ್ಕಾರಗಳ ಫಲವಾದ ಜಾಲತಾಣದಲ್ಲಿ ಮುತ್ತಿಕೊಂಡು ಎಷ್ಟೇ ಮಸಲತ್ತು ನಡೆಸಿದರೂ ಪ್ರಜಾಪ್ರಭುತ್ವವಾದಿ ನಾಯಕರ ಹೆಸರನ್ನ ಅಳಿಸಲಾರವು. ಆದರೂ, ಅಂತಹ ಕೆಲಸವನ್ನ ನಿಲ್ಲಿಸಲಾರವಂತಲ್ಲಾ ಥೂತ್ತೇರಿ.

ಯಡಿಯೂರಪ್ಪನವರನ್ನು ಯಡ್ಡಿ ಎಂದು ಬರೆದವನು ಲಂಕೇಶರ ಮೆಚ್ಚಿನ ವರದಿಗಾರನಾಗಿದ್ದ ತ್ಯಾಗರಾಜ್. ನಿಜವಾಗಿ ಯಡ್ಡಿ ಎಂದರೆ ಸ್ತ್ರೀಲಿಂಗದ ಸಂಬೋಧನೆ. ಆದ್ದರಿಂದ ಯಡೂರಪ್ಪನನ್ನ ಯಡ್ಡ ಎನ್ನಬೇಕು. ಈ ಯಡ್ಡನ ಅವಧಿಯಲ್ಲಿ ಮುಗಿಲೇ ಕುಸಿದುಕೊಂಡು ಜಲಪ್ರಳಯವಾಗಿದೆ. ಇಂತಹ ಸಮಯದಲ್ಲಿ ಯಡ್ಡನ ಜಿಲ್ಲೆಯಾದ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಜನಾನುರಾಗಿ ಅಧಿಕಾರಿಯ ಎತ್ತಂಗಡಿಯಾಗಿದೆಯಲ್ಲಾ. ಹಳ್ಳಿ ತಿರುಗುತ್ತಾ ಜನರ ಕಷ್ಟಸುಖ ಕೇಳುತ್ತ ನೆರವು ನೀಡುತ್ತಿದ್ದ ಅಧಿಕಾರಿಯನ್ನು ಎತ್ತಂಗಡಿ ಮಾಡಲು ಯಡ್ಡನ ಸೇಡೇ ಕಾರಣವಂತಲ್ಲಾ. ಸೇಡಿಗೆ ತುತ್ತಾದವನು ಯಾವ ಕಾಲವನ್ನ ಪರಿಗಣಿಸುವುದಿಲ್ಲ. ಅವನ ಸೇಡಿನ ಕಾಲವನ್ನಷ್ಟೇ ಪರಿಗಣಿಸುತ್ತಾನೆ. ಜನರ ಬದುಕಿನ ಬಗ್ಗೆ ಕಾಳಜಿಯಿದ್ದವನಾರು ಈ ಯಡ್ಡನ ಕೃತ್ಯ ಎಸಗಲಾರ. ಹಿಂದೊಮ್ಮೆ ಚಿಕ್ಕಮಗಳೂರು ಜಿಲ್ಲೆ ರಕ್ಷಣಾಧಿಕಾರಿಯಾಗಿದ್ದ ಮಧುಕರ ಶೆಟ್ಟರನ್ನು ಕುಮಾರಣ್ಣನ ಸರಕಾರ ಕರ್ನಾಟಕದ ಸಮಸ್ಯೆಯಂತಿದ್ದ ರಾಜ್ಯಪಾಲನ ರಕ್ಷಣಾ ಕಾರ್ಯಕ್ಕೆ ನಿಯೋಜಿಸಿತ್ತು. ಅಂತ ಕುಮಾರಣ್ಣನ ಸರಕಾರ ಹೋಗಿ ಯಡ್ಡನ ಸರಕಾರ ಬಂದಿರೋದು, ಊದುವುದನ್ನ ಬಿಸಾಕಿ ಬಡಿಯುವುದನ್ನ ಹೆಗಲಿಗೆ ನೇತಾಕಿಕೊಂಡಂತಾಗಿದೆಯಲ್ಲಾ, ಥೂತ್ತೇರಿ!

ಜಲಪ್ರಳಯದೆದುರು ಏಕಾಂಗಿ ವೀರನಾಗಿ ಈಜುತ್ತಿರುವ ಎಡೂರಪ್ಪನವರು ಕಷ್ಟಪಟ್ಟು ಸೈರಣಿಯನ್ನ ಕಾಪಾಡಿಕೊಂಡು ಬರುತ್ತಿದ್ದಾರಂತಲ್ಲಾ. ಗೃಹ ಸಚಿವರು ಮತ್ತು ಹಣಕಾಸಿನ ಸಚಿವರು ಬಂದುಹೋದರೂ, ಬಿಡಿಗಾಸಿನ ನೆರವಿನ ಆಶ್ವಾಸನೆಯೂ ಬಾರದಿರುವಾಗ ನಮ್ಮ ರಾಘವೇಂದ್ರ ಮಠದ ಜಗದ್ಗುರುಗಳು “ಹೆದರಬೇಡಿ ಚಾತುರ್ಮಾಸ ಮುಗಿಸಿ ಪ್ರತ್ಯಕ್ಷನಾಗುತ್ತೇನೆ, ಅಷ್ಟರವರೆಗೂ ಯಾರೂ ಮುಳುಗಬೇಡಿ. ಅಕಸ್ಮಾತ್ ಮುಳುಗಿದರೂ ತೇಲುತ್ತಿರಿ, ನಾನು ಬರುತ್ತೇನೆ” ಎಂದು ಆಶ್ವಾಸನೆ ಕೊಟ್ಟಿದ್ದಾರಲ್ಲಾ. ಸಾವುಗಳ ಸಂದರ್ಭದಲ್ಲಿ ಹಾಸ್ಯ ಮಾಡುವುದು ಅಮಾನವೀಯವಾದರೂ ಇಲ್ಲೊಂದು ಪ್ರಕರಣ ನೋಡಿ ಹೇಗೆ ಸುಮ್ಮನಿರುವುದು. ಕೇವಲ ಒಂದೂವರೆ ಅಡಿ ಮೊಳಕಾಲುದ್ದ ನೀರಿನಲ್ಲಿ ಬೋಟಿನಲ್ಲಿ ಹುಟ್ಟು ಹಾಕುತ್ತಾ ಆ ಬೋಟನ್ನ ಎಳೆಸಿಕೊಂಡು ಬಂದು ಟಿವಿಗಳ ಕಡೆ ನೋಡಿ “ಸಾಕ” ಎಂದು ಕೇಳಿದ ಹೊನ್ನಾಳಿ ರೇಣುಕಾಚಾರಿ ಇಡೀ ನಾಡಿನಲ್ಲಿ ನಗೆಯುಕ್ಕಿಸಿದ್ದಾನಲ್ಲಾ. ಅಂದು ಯಡ್ಡಿಯನ್ನ ಬ್ಲಾಕ್‍ಮೇಲ್ ಮಾಡಿ ಮಂತ್ರಿಯಾಗಿದ್ದ ರೇಣುಕಾಚಾರಿ ಇಂದು ಮೊಣಕಾಲುದ್ದ ನೀರಿನಲ್ಲಿ ಹುಟ್ಟುಹಾಕಿ ದೋಣಿ ನಡಿಸಿ ಅದನ್ನ ಮಂತ್ರಿಗಿರಿ ಯೋಗ್ಯತೆಗೆ ಸರ್ಟಿಫಿಕೇಟ್ ಮಾಡಿಕೊಳ್ಳಲಿದ್ದಾನಂತಲ್ಲಾ, ಥೂತ್ತೇರಿ!

ಮುನಿರತ್ನನ ಮಹತ್ವಾಕಾಂಕ್ಷೆಯ ಕುರುಕ್ಷೇತ್ರ ಬಿಡುಗಡೆಯಾಗಿದೆ. ಪರಿಣಾಮ ಮಂಡ್ಯ, ಮದ್ದೂರು, ಮಳವಳ್ಳಿ, ರಾಮನಗರದಲ್ಲಿ ಡಿ ಬಾಸ್ ದರ್ಶನ್ ಕಟೌಟುಗಳನ್ನು ಹಗಲುರಾತ್ರಿ ನಮ್ಮ ಪೊಲೀಸರು ಕಾಯ್ದರಂತಲ್ಲಾ! ಯಾಕೆಂದು ವಿಚಾರಿಸಿದರೆ, ಕುಮಾರಣ್ಣನ ಅಭಿಮಾನಿಗಳು ಡಿ.ಬಾಸ್‍ನ ಕಟೌಟುಗಳನ್ನು ಪುಡಿಮಾಡಿಯಾರೆಂಬ ಮುನ್ನೆಚ್ಚರಿಕೆಯಾಗಿತ್ತು. ಮಂಡ್ಯದ ಚುನಾವಣಾ ಅಖಾಡಕ್ಕೆ ಕುಮಾರಣ್ಣ ಮಗ ನಿಖಿಲ್‍ನನ್ನ ನಿಲ್ಲಿಸಿದ್ದರು. ಎದುರಾಳಿ ಸುಮಲತಾ ಪರವಾಗಿ ದರ್ಶನ್ ಬಂದಿದ್ದರು. ಆಗ ಸಿಟ್ಟಾದ ಕುಮಾರಣ್ಣ `ಯೆಂತದದು ಡಿಬಾಸ್, ಸಿನುಮಾದಲ್ಲಿ ಡಿಬಾಸಾಗಬವುದು, ಜನಗಳ ಮಧ್ಯೆ ಡಿಬಾಸಾಗಕ್ಕಾಗಲ್ಲ’ ಎಂದು ಮೂದಲಿಸಿದ್ದರು. ಈ ಮಾತಿನ ಪರಿಣಾಮ ಏನಾಗಿದೆಯೆಂದರೆ ಕುಮಾರಣ್ಣನ ಅಭಿಮಾನಿಗಳಿರುವ ಕಡೆ ದರ್ಶನ್, ಯಶ್ ನಟಿಸಿರುವ ಚಿತ್ರಗಳ ಹಾಡನ್ನು ಕೇಳಲು ಅಡ್ಡಿಯಾಗಿದೆಯಂತಲ್ಲಾ. ಕನ್ನಡ ಚಿತ್ರರಂಗ ಮತ್ತು ಸಿನಿಮಾರಂಗ ಜೊತೆಯಾಗಿಯೇ ಹೆಜ್ಜೆ ಹಾಕಿದ ಇತಿಹಾಸ ನಮ್ಮದು. ರಾಜಕಾರಣಿಗಳು, ಅದರಲ್ಲೂ ಮುಖ್ಯಮಂತ್ರಿಯಾದವರು ನಾಲ್ಕು ದಿಕ್ಕನ್ನು ಯೋಚಿಸಿ ಮಾತನಾಡಬೇಕು. ಇಲ್ಲವಾದರೆ ಜಾತ್ಯತೀತರ ಅಭಿಮಾನಿಗಳು ಫ್ಯಾಸಿಸ್ಟ್ ಪುರೋಹಿತರಾಗುವ ಅಪಾಯವಿದೆಯಂತಲ್ಲಾ, ಥೂತ್ತೇರಿ!

ಹಳ್ಳಿಕಡೆ ನಾಟಕ ಆಡಲು ತೀರ್ಮಾನ ಮಾಡಿದಾಗ ನಾನೇ ಕೌರವ, ನೀನೇ ಕಿಸ್ಣ, ಅವುನೇ ಅರ್ಜುನ, ಯಾರ ತಂಟಿಗೂ ಹೋಗದಂಗಿರೋ ಇವುನೇ ಧರ್ಮರಾಯ ಎಂದು ಪಾತ್ರ ಹಂಚಿಕೊಂಡು ಪ್ರಾಕ್ಟಿಸ್ ಶುರುಮಾಡಿದಂತೆ, ನಮ್ಮ ಮುನಿರತ್ನನ ಕುರುಕ್ಷೇತ್ರ ಕಂಗೊಳಿಸಿದೆಯಲ್ಲಾ. ಮುಖ್ಯವಾಗಿ ಶ್ರಮಜೀವಿಯಲ್ಲದ ಸೋಮಾರಿ ದೇಹಾಕೃತಿಯ ಕೃಷ್ಣ, ಮುನಿರತ್ನನ ಕುರುಕ್ಷೇತ್ರದಲ್ಲಿ ಬ್ಲೋ ಹೊಡೆಸಿಕೊಂಡಂತೆ ಊದಿಕೊಂಡಿದ್ದಾನಲ್ಲಾ. ನೋಡಿದಕೂಡಲೇ ನಗೆಯುಕ್ಕಿಸುವ ಈ ಭಗವಂತ ರವಿಚಂದ್ರನಂತೆ! ಈ ಕೃಷ್ಣನ ಕುರಿತು ಯೋಚಿಸುವಾಗ ಮುನಿರತ್ನನ ರಾಜಕಾರಣದ ವರಸೆ ಅರಿವಾಗತೊಡಗಿತು. ರಾಜರಾಜೇಶ್ವರಿನಗರದಲ್ಲಿ ಚುನಾವಣೆಗೆ ನಿಂತಿದ್ದಾಗ ವಿಪರೀತ ಅಕ್ರಮವೆಸಗಿದ ಆಪಾದನೆಯಲ್ಲಿ ಚುನಾವಣೆ ಮುಂದೆಹೋಯ್ತು. ನಂತರದ ಚುನಾವಣೆಯಲ್ಲಿ ಜೆಡಿಎಸ್‍ನವರು ಈತನೆದುರು ಕಾಂಡೇಟ್ ಹಾಕಿದ್ದರು. ಆದರೆ ಮುನಿರತ್ನ ಮಂಡ್ಯದಲ್ಲಿ ಕುಮಾರಣ್ಣನ ಜೊತೆ ಕಾಣಿಸಿಕೊಂಡರು. ಅದಾದ ನಂತರ ಕುಮಾರಣ್ಣನನ್ನ ಇಳಿಸುವ ಸಂಚಿನ ಟೀಮಿನ ಮೂಂಚೂಣಿಯಲ್ಲಿ ಕಾಣಿಸಿಕೊಂಡರು. ವಾಸ್ತವದಲ್ಲಿ ಮುನಿರತ್ನನೇ ಕುರುಕ್ಷೇತ್ರದಲ್ಲಿ ಶಕುನಿ ಪಾತ್ರ ಮಾಡಬಹುದಿತ್ತಲ್ಲಾ, ಥೂತ್ತೇರಿ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. According to kumarsway and devegowda and neharu done lot of thing my dear come and ask our narth karnataka people what neharu did if sharada patel is not there where we would be, writing black letter is easy understand the inner pain why such words comes,

  2. Neharu paravaagi vakalattu vahiskondu matadta iddiralla. Nijavaglu Nehru ge Harisingh nanta ondu praantada raajana sharattugalige hediyante oppikollabekada anivaaryate ittenri? Indian military use madkollalikke aagta ilvenri? Sardar Patel Nijamara aadalita dallidda hyderabad na hengri India ge sersidru? Yuddha viraamada avashyakate itta? UNO ge tegedukond hogbekada avashyakate itta? Ulida kshetradalli Nehru madiro saadhanegalanna oppikoltene. Swatantrya bandanta sandarbha, abhivraddhi ge jasti scope irutte, abhivraddhi aagide aa time alli illa anta alla. Aadre Nehru kelavondu history kshamisalaarada tappugalannu madiddare annodu ashte satya.

  3. ವಿವೇಕಾನಂದ ಅವರೇ,
    ತಾವು ಹೇಳಿರುವಂತೆ ರಾಜಾ ಹರಿಸಿಂಗ್ ಅವರು article 370 ಯನ್ನು ಅಳವಡಿಸಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಭಾರತದಲ್ಲಿ ವಿಲೀನಗೊಳಿಸಲಿಲ್ಲ. ಬದಲಾಗಿ ಅವರು ಸ್ವತಂತ್ರ ರಾಷ್ಟ್ರವಾಗಿ ಉಳಿಯಬೇಕೆಂದಿದ್ದರು. ಆದರೆ ಪಾಕಿಸ್ತಾನ ಬುಡಕಟ್ಟು ಜನರನ್ನು ಬಳಸಿಕೊಂಡು ಜಮ್ಮು ಕಾಶ್ಮೀರದ ಮೇಲೆ ಆಕ್ರಮಣ ಮಾಡಿತು. (ಆಗಲೇ ಪಿಒಕೆ ಹುಟ್ಟಿದ್ದು.) ಆಗ ರಾಜಾ ಹರಿಸಿಂಗರು ಭಾರತದಲ್ಲಿ ವಿಲೀನವಾಗಲು ಸಮ್ಮತಿಸಿ ಪತ್ರವನ್ನು ಕೊಟ್ಟರು. ಇದು ಐತಿಹಾಸಿಕ ಸತ್ಯ.

  4. Vivekanand,Please read “My days with Nehru “& “Reminiscences of the Nehru age” by M O Mathai,Nehru’s PA for many years.You will come to know the real face of Nehru

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...