‘ಬಡತನದ ಸ್ಮಾರಕ’ ಎಂದು ಮೋದಿ ಟೀಕಿಸಿದ್ದ ನರೇಗಾ ಯೋಜನೆಯನ್ನು, ‘ಜೀವಸೆಳೆ’ ಎಂದ ಗುಜರಾತ್‌ ಸರ್ಕಾರ!

ಕಳೆದ ವರ್ಷದ ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ತಮ್ಮ ಹಳ್ಳಿಗಳಿಗೆ ಮರಳಿದ್ದ ವಲಸೆ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ)ಯು “ಜೀವಸೆಳೆ” ಆಗಿ ಪರಿಣಮಿಸಿತು ಎಂದು ಕಳೆದ ವಾರ ಗುಜರಾತ್‌‌ ಮುಖ್ಯಮಂತ್ರಿ ವಿಜಯ್‌‌ ರೂಪಾನಿ ಬಿಡುಗಡೆ ಮಾಡಿದ ವರದಿಯಲ್ಲಿ ರಾಜ್ಯ ಸರ್ಕಾರ ಶ್ಲಾಘಿಸಿದೆ.

ನರೇಗಾ ಯೋಜನೆಯು ಕಾಂಗ್ರೆಸ್ ನೇತೃತ್ವ ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ ಜಾರಿ ಮಾಡಲಾಗಿದ್ದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ಗ್ರಾಮೀಣ ಪ್ರದೇಶದ ಜನರಿಗೆ ನೂರು ದಿನಗಳವರೆಗೂ ಉದ್ಯೋಗವನ್ನು ನೀಡುತ್ತದೆ. ಈ ಯೋಜನೆಯು ಗ್ರಾಮೀಣ ಪ್ರದೇಶದ ಜನರ ವಲಸೆಯನ್ನು ತಪ್ಪಿಸಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.

ಪ್ರಧಾನಿ ಮೋದಿ 2015 ರಲ್ಲಿ, “ಬಡತನವನ್ನು ನಿಭಾಯಿಸುವಲ್ಲಿ 60 ವರ್ಷಗಳಿಂದ ವಿಫಲವಾದ ಕಾಂಗ್ರೆಸ್‌ ಪಕ್ಷದ ಜೀವಂತ ಸ್ಮಾರಕ” ಎಂದು ಈ ಯೋಜನೆಯನ್ನು ಸಂಸತ್ತಿನಲ್ಲಿ ಟೀಕಿಸಿದ್ದರು.

ಇದನ್ನೂ ಓದಿ: ಅಲೋಪತಿ ವೈದ್ಯರು ದೇವದೂತರು, ಲಸಿಕೆ ಪಡೆಯುವೆ; ಯೂಟರ್ನ್ ಹೊಡೆದ ಬಾಬಾ ರಾಮ್‌ದೇವ್

“ಕಳೆದ ವರ್ಷ ಕೊರೊನಾ ಲಾಕ್‌ಡೌನ್ ನಂತರ, ಗುಜರಾತ್‌ನ ಬುಡಕಟ್ಟು ಜಿಲ್ಲೆಯಾದ ದಾಹೋಡ್‌ನ ಹಳ್ಳಿಗಳಿಗೆ ಸರಿಸುಮಾರು ಒಂದು ಲಕ್ಷ ವಲಸೆ ಕಾರ್ಮಿಕರು ಮರಳಿದರು. ಇವರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ. ನರೇಗಾ ಯೋಜನೆಯು ತಮ್ಮ ಮನೆಗಳಿಗೆ ಮರಳುವಂತೆ ಅನಿವಾರ್ಯ ಪರಿಸ್ಥಿತಿಗೆ ಬಿದ್ದ ಕಾರ್ಮಿಕರಿಗೆ ಜೀವಸೆಳೆಯಾಗಿದೆ” ಗುಜರಾತ್‌ ಸರ್ಕಾರ ಬಿಡುಗಡೆ ಮಾಡಿದ ವರದಿಯು ಬಣ್ಣಿಸಿದೆ.

ದಾಹೋಡ್‌ನ ಧಾರಾ ಡೊಂಗ್ರಿ ಗ್ರಾಮದಲ್ಲಿ, ಸಣ್ಣ ಭೂಹಿಡುವಳಿ ಮತ್ತು ನೀರಾವರಿ ಸೌಲಭ್ಯಗಳಿಲ್ಲದ ವಲಸೆ ಕಾರ್ಮಿಕರು ನರೇಗಾ ಅಡಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

“ವಲಸಿಗ ಕಾರ್ಮಿಕರು ನಗರಗಳಲ್ಲಿ ಗಳಿಸುತ್ತಿರುವುದಕ್ಕೆ ಹೋಲಿಸಿದರೆ, ನರೇಗಾ ಅಡಿಯಲ್ಲಿನ ವೇತನವು ಕನಿಷ್ಠವಾಗಿದ್ದರೂ (ದಿನಕ್ಕೆ 224 ರೂ.),ಕೊರೊನಾದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಕುಟುಂಬವನ್ನು ನಿಭಾಯಿಸಲು ಇದು ನೆರವಾಯಿತು” ಎಂದು ವರದಿ ಹೇಳುತ್ತದೆ. ಅದೇ ಹಳ್ಳಿಯ ಗುತ್ತಿಗೆ ಕಾರ್ಮಿಕರ ಉದಾಹರಣೆಯನ್ನು ಉದಾಹರಿಸಿ, ಈ ಸಂಕಷ್ಟದ ಸಮಯದಲ್ಲಿ ನರೇಗಾ ಹೇಗೆ “ಸಕಾರಾತ್ಮಕ ಪಾತ್ರ” ವಹಿಸಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಗುಜರಾತ್‌ನಲ್ಲಿ ದಾಹೋಡ್‌‌ ಜಿಲ್ಲೆ ಅತೀ ಹೆಚ್ಚು ನರೇಗಾ ಚಟುವಟಿಕೆ ಏರ್ಪಟ್ಟ ಜಿಲ್ಲೆಯಾಗಿದೆ. ಅಲ್ಲಿ ಸುಮಾರು 2.38 ಲಕ್ಷ ಜನರು ಉದ್ಯೋಗ ಪಡೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಭಾವನಗರ (77,659) ಮತ್ತು ನರ್ಮದಾ (59,208) ಜಿಲ್ಲೆಗಳು ಸೇರಿದೆ.

ಇದನ್ನೂ ಓದಿ: ಖಾಸಗಿ ಭೇಟಿಯೆಂದ ಪ್ರಶಾಂತ್ ಕಿಶೋರ್: ವಿರೋಧ ಪಕ್ಷಗಳ ಒಗ್ಗಟ್ಟು ಎಂದ NCPಯ ನವಾಬ್ ಮಲ್ಲಿಕ್!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here