ಹೊಸ ಸರ್ಕಾರ ರಚನೆಯಾದ ಕೆಲವೆ ದಿನಗಳ ಅಂತರದಲ್ಲಿ ಮಂಗಳವಾರ ಗಾಝಾದ ಮೇಲೆ ಇಸ್ರೇಲ್ ಮತ್ತೆ ವಾಯುದಾಳಿ ಪ್ರಾರಂಭಿಸಿದೆ. ಇಸ್ರೇಲ್ ಆಕ್ರಮಿಸಿದ ದಕ್ಷಿಣ ಇಸ್ರೇಲ್ ಗಡಿಗೆ ಪ್ಯಾಲೆಸ್ತೀನಿಯನ್ ಹೋರಾಟಗಾರರು ಬೆಂಕಿಯ ಬಲೂನ್‌ಗಳನ್ನು ಕಳುಹಿಸಿದ್ದರಿಂದ ಈ ವಾಯುದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ಹೇಳಿದೆ.
ಇಸ್ರೇಲ್ ಮತ್ತು ಹಮಾಸ್ ಕಳೆದ ತಿಂಗಳು ಕದನ ವಿರಾಮಕ್ಕೆ ಒಪ್ಪಿದ 11 ದಿನಗಳ ನಂತರ ಈ ವಾಯುದಾಳಿ ಪ್ರಾರಂಭವಾಗಿದೆ. ಕಳೆದ ಬಾರಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಪ್ಯಾಲೆಸ್ತೀನಿನ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
Gaza tonight ??
Gaza under attack #FreePalestine#فريق_نبض_الأقصىpic.twitter.com/s1NxkSqKQl— جلنار (@Ffsbz5J6Xet53xx) June 15, 2021
ಇದನ್ನೂ ಓದಿ: ‘ಗಾಝಾದಲ್ಲಿ ಈದ್ ಪ್ರಾರಂಭ!’ – ಕದನ ವಿರಾಮ ಘೋಷಿಸಿದ ಇಸ್ರೇಲ್
ನಗರದ ಪೂರ್ವ ವಲಯವನ್ನು ಇಸ್ರೇಲ್ ಆಕ್ರಮಿಸಿಕೊಂಡ 1967 ರ ವಾರ್ಷಿಕೋತ್ಸವವನ್ನು ಆಚರಿಸಿ, ಜೆರುಸಲೆಮ್‌ನ ಓಲ್ಡ್ ಸಿಟಿ ಮೂಲಕ ಬಲಪಂಥೀಯ ಇಸ್ರೇಲಿಗಳು ನಡೆಸಿದ ಮೆರವಣಿಗೆಗೆ ಪ್ರತಿಕ್ರಿಯೆಯಾಗಿ ಬೆಂಕಿಯ ಬಲೂನ್‌ಗಳನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಇಸ್ರೇಲಿ ವಿಮಾನವು ಗಾಜಾದ ಪ್ಯಾಲೆಸ್ತೀನಿಯನ್ ತರಬೇತಿ ಶಿಬಿರವನ್ನು ಗುರಿಯಾಗಿಸಿಕೊಂಡಿದೆ ಎಂದು ಹಮಾಸ್ ರೇಡಿಯೊ ಕೇಂದ್ರ ಹೇಳಿದೆ ಎಂದು ವರದಿಯಾಗಿದೆ.
BREAKING: Israel confirmed it launched airstrikes on occupied Gaza.
The attack comes weeks after Israeli airstrikes in May killed over 250 Palestinians, and hours after Israel allowed a far-right nationalist march in occupied East Jerusalem. pic.twitter.com/w1QNodXBye
— AJ+ (@ajplus) June 15, 2021
ಮಂಗಳವಾರ ತಡರಾತ್ರಿ ಗಾಜಾ ಪ್ರದೇಶದ ಹಮಾಸ್‌ಗೆ ಸೇರಿದ ಹಲವಾರು ಮಿಲಿಟರಿ ತಾಣಗಳಿಗೆ ದಾಳಿ ಮಾಡಲಾಗಿದೆ ಎಂದು ಇಸ್ರೇಲಿ ರಕ್ಷಣಾ ಪಡೆ ದೃಡಪಡಿಸಿದೆ. ವಾಯುದಾಳಿಯಲ್ಲಿ ಗಾಝಾದ ಯಾವುದೆ ನಾಗರಿಕರು ಗಾಯಗೊಂಡಿಲ್ಲ ಎಂದು ಹಮಾಸ್ ಅಂಗಸಂಸ್ಥೆ ಮಾಧ್ಯಮ ವರದಿ ಮಾಡಿದೆ ಎಂದು ಬಿಬಿಸಿ ವರದಿ ಮಾಡಿದೆ.
ಇಸ್ರೇಲ್ ಅತಿಕ್ರಮಣವನ್ನು ವಿರೋಧಿಸಿ ಹಮಾಸ್, ‘ಆಕ್ರೋಶ ದಿನ’ ಆಚರಿಸಲು ಕರೆ ನೀಡಿತ್ತು.
ಇದನ್ನೂ ಓದಿ: ಪ್ಯಾಲೆಸ್ಟೀನೀಯರ ಹೋರಾಟ; ದಬ್ಬಾಳಿಕೆಯ ವಿರೋಧ ಅದು ಜಗಳಗಂಟತನವಲ್ಲ
“ಮುಂದಿನ ಮಂಗಳವಾರ ಸಜ್ಜುಗೊಳ್ಳುವ ದಿನವಾಗಿರಲಿ, ಅಲ್-ಅಕ್ಸಾ ಮಸೀದಿಯ ಕಡೆಗಿನ ಪ್ರೀತಿಯಿಂದಾಗಿರಲಿ, ಆಕ್ರಮಣಕಾರನ್ನು ಧಿಕ್ಕರಿಸುವ ದಿನವಾಗಲಿ. ನೀವು ಏನು ಮಾಡಿದ್ದೀರಿ ಎಂದು ದೇವನಿಗೆ ಮತ್ತು ನಿಮ್ಮ ಜನರಿಗೆ ತೋರಿಸಿ. ಜೆರುಸಲೆಮ್ ಮತ್ತು ಅಲ್-ಅಕ್ಸಾಗೆ ಅತ್ಯುತ್ತಮ ಖಡ್ಗವಾಗಿರಿ” ಎಂದು ಹಮಾಸ್ ಕರೆ ನೀಡಿತ್ತು.
ಬಲಪಂಥೀಯ ಇಸ್ರೇಲಿಗರು ಮೆರವಣಿಗೆಯಲ್ಲಿ, “ಇದು ನಮ್ಮ ಮನೆ”, “ಜೆರುಸಲೆಮ್ ನಮ್ಮದು”, “ಅರಬ್ಬರ ಸಾವು” ಎಂಬ ಘೋಷಣೆಗಳನ್ನು ಕೂಗಿದ್ದರು ಎಂದು CNN ವರದಿ ಮಾಡಿದೆ. ಆದರೆ ಈ ಘೋಷಣೆಗಳನ್ನು ವಿರೋಧಿಸಿ ಸ್ವತಃ ಇಸ್ರೇಲ್‌ನ ಹೊಸ ವಿದೇಶಾಂಗ ಸಚಿವ ಯಾಯರ್ ಲ್ಯಾಪಿಡ್ ಹೇಳಿಕೆ ನೀಡಿದ್ದಾರೆ.
“ಇಸ್ರೇಲಿ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ‘ಅರಬ್ಬರ ಸಾವು’ ಎಂದು ಕೂಗುವುದು ಹೇಗೆ ಎಂದು ಊಹಿಸಲಾಗದು. ಇದು ಜುಡಾಯಿಸಂ ಅಥವಾ ಇಸ್ರೇಲ್ ಅಲ್ಲ. ಆ ಘೋಷಣೆಯು ಖಂಡಿತವಾಗಿಯೂ ನಮ್ಮ ಧ್ವಜವನ್ನು ಸಂಕೇತಿಸುವುದಿಲ್ಲ. ಈ ಜನರು ಇಸ್ರೇಲ್‌ನ ಜನತೆಗೆ ನಾಚಿಕೆಗೇಡು” ಎಂದು ಅವರು ಹೇಳಿದ್ದಾರೆ.
ಜೆರುಸಲೆಮ್‌ನಲ್ಲಿ ಮಂಗಳವಾರ ಕನಿಷ್ಠ 17 ಪ್ಯಾಲೆಸ್ತೀನಿಯನ್ನರನ್ನು ಭದ್ರತಾ ಪಡೆಗಳು ಬಂಧಿಸಿವೆ ಮತ್ತು ಘರ್ಷಣೆಯಲ್ಲಿ ಕನಿಷ್ಠ 33 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್-ಜಝೀರಾ ವರದಿ ಮಾಡಿದೆ.
ಇದನ್ನೂ ಓದಿ: ಪ್ಯಾಲೆಸ್ತೀನ್ ಸಂಘರ್ಷ ಕೊನೆಗೊಳಿಸಲು ’ದ್ವಿರಾಷ್ಟ್ರ’ ಪರಿಹಾರವನ್ನು ಬೆಂಬಲಿಸಿದ ಭಾರತ!


