ಟಿವಿ ಚರ್ಚೆಗಳ ತುಣುಕುಗಳನ್ನು ಪೋಸ್ಟ್ ಮಾಡುವ ಮೂಲಕ ಹಕ್ಕುಸ್ವಾಮ್ಯ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂಬ ದೂರುಗಳ ಮೇಲೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟರ್ ಖಾತೆಗೆ ಒಂಉ ಗಂಟೆ ನಿರ್ಬಂಧ ವಿಧಿಸಲಾಗಿದೆ.
“ಯುಎಸ್ಎದ ಡಿಜಿಟಲ್ ಮಿಲೇನಿಯಮ್ ಕೃತಿಸ್ವಾಮ್ಯ ಕಾಯ್ದೆಯ ಉಲ್ಲಂಘನೆ ಇದೆ ಎಂದು ಆರೋಪಿಸಿ ಸುಮಾರು ಒಂದು ಗಂಟೆಗಳ ಕಾಲ ನನ್ನ ಖಾತೆಗೆ ಟ್ವಿಟರ್ ನಿರ್ಬಂಧ ವಿಧಿಸಿತ್ತು ಎಂದು ಸಚಿವ ರವಿಶಂಕರ್ ಪ್ರಸಾದ್ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.
“ಟ್ವಿಟ್ಟರ್‌ನ ಈ ಕ್ರಮ, ಮಾಹಿತಿ ತಂತ್ರಜ್ಞಾನ ನಿಯಮಗಳು 2021 ರ ನಿಯಮ 4 (8) ಅನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ, ನನ್ನ ಸ್ವಂತ ಖಾತೆಗೆ ನನ್ನನ್ನು ನಿರ್ಬಂಧಿಸುವ ಮೊದಲು ಯಾವುದೇ ಮುನ್ಸೂಚನೆಯನ್ನು ನೀಡಿಲ್ಲ” ಎಂದು ಸಚಿವ ಆರೋಪಿಸಿದ್ದಾರೆ.
ಇದನ್ನೂ ಓದಿ: ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೈದ್ಯಕೀಯ ಆಮ್ಲಜನಕ ಬಳಸಿಕೊಂಡ ದೆಹಲಿ: ಸುಪ್ರೀಂ ಕೋರ್ಟ್ ಸಮಿತಿ
IT Minister @rsprasad: Twitter denied access to my account for almost an hour on the alleged ground that there was a violation of Digital Millennium Copyright Act of the USA and subsequently they allowed me to access the account@GoI_MeitY pic.twitter.com/sga2edEYaD
— DD News (@DDNewslive) June 25, 2021
“ಕೇಂದ್ರದ ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ಏಕೆ ನಿರಾಕರಿಸುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ. ಏಕೆಂದರೆ ಟ್ವಿಟರ್ ಈ ಮಾರ್ಗಸೂಚಿಗಳನ್ನು ಅನುಸರಿಸಿದರೆ, ಅವರ ಕಾರ್ಯಸೂಚಿಗೆ ಸರಿಹೊಂದದ ವ್ಯಕ್ತಿಯ ಖಾತೆಯನ್ನು ನಿರ್ಬಂಧಿಸುವುದು ಸಾಧ್ಯವಾಗುವುದಿಲ್ಲ” ಎಂದು ಟ್ವಿಟರ್ ವಿರುದ್ಧ ಕಿಡಿಕಾರಿದ್ದಾರೆ.
ಇದರ ಜೊತೆಗೆ “ಯಾವುದೇ ಪ್ಲಾಟ್‌ಫಾರ್ಮ್ ಇರಲಿ ಎಲ್ಲರು ಹೊಸ ಐಟಿ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಬೇಕಾಗುತ್ತದೆ. ಅದರ ಬಗ್ಗೆ ಯಾವುದೇ ರಾಜಿ ಇಲ್ಲ” ಎಂದು ಒತ್ತಿ ಹೇಳಿದ್ದಾರೆ.
ರವಿಶಂಕರ್ ಪ್ರಸಾದ್ ಅವರ ಟ್ವಿಟರ್ ಖಾತೆ ನಿರ್ಬಂಧಕ್ಕೆ ಕಾಂಗ್ರೆಸ್ ನಾಯಕ ಶ್ರೀವತ್ಸ ಪ್ರತಿಕ್ರಿಯೆ ನೀಡಿದ್ದು, ಟ್ವಿಟರ್ ನಿಯಮಗಳನ್ನು ಏಕೆ ಪಾಲಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
“ಅಮೆರಿಕಾದಲ್ಲಿ, ಟ್ವಿಟರ್ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ ಯುಎಸ್ ಅಧ್ಯಕ್ಷರನ್ನು ಬ್ಯಾನ್ ಮಾಡಲಾಗಿದೆ. ಭಾರತದಲ್ಲಿ, ಟ್ವಿಟರ್ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ ಕೆಲವು ಗಂಟೆಗಳ ಕಾಲ ಸಚಿವರಿಗೆ ಖಾತೆಯನ್ನು ಬಳಸಲಿ ನಿರ್ಬಂಧ ವಿಧಿಸಲಾಗಿದೆ. ಸಚಿವ ರವಿಶಂಕರ್ ಪ್ರಸಾದ್ ನಿಯಮಗಳನ್ನು ಏಕೆ ಅನುಸರಿಸಬಾರದು? ಸರ್ಕಾರ ಈಗ ಟ್ವಿಟರ್ ಮೇಲೆ ದಾಳಿ ನಡೆಸಿ, ಟ್ವಿಟರ್ ಎಂಡಿಗೆ ಕಿರುಕುಳ ನೀಡುತ್ತದೆಯೇ..?” ಎಂದು ಶ್ರಿವತ್ಸ ಪ್ರಶ್ನಿಸಿದ್ದಾರೆ.
In ?? America, @Twitter banned US President for not following the platform's rules
In ?? India, @Twitter denied access to a Minister for few hrs for not following the platform's rules
Why is @rsprasad cribbing? Why not follow rules? Will Govt raid & harass Twitter MD more now?
— Srivatsa (@srivatsayb) June 25, 2021
ಇದನ್ನೂ ಓದಿ: ‘ಟ್ವಿಟರ್ ವಿರುದ್ದ ಹೋರಾಡುವ ಬದಲು ವ್ಯಾಕ್ಸಿನೇಷನ್ ಕಡೆ ಗಮನಹರಿಸಿ’ – ಒಕ್ಕೂಟ ಸರ್ಕಾರಕ್ಕೆ ಮಹಾರಾಷ್ಟ್ರ


