Homeಕರ್ನಾಟಕರಂಜನ್ ಗಗೋಯಿರವರಿಗೆ ಕ್ಲೀನ್ ಚಿಟ್ ವಿರುದ್ಧ ರಾಷ್ಟ್ರದ್ಯಂತ ಪ್ರತಿಭಟನೆ

ರಂಜನ್ ಗಗೋಯಿರವರಿಗೆ ಕ್ಲೀನ್ ಚಿಟ್ ವಿರುದ್ಧ ರಾಷ್ಟ್ರದ್ಯಂತ ಪ್ರತಿಭಟನೆ

- Advertisement -
- Advertisement -

ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸುಪ್ರಿಂ ಕೋರ್ಟ್‍ನ ಮುಖ್ಯ ನ್ಯಾಯಾಮೂರ್ತಿ ರಂಜನ್ ಗೊಗಯಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಪ್ರಕರಣ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಿದೆ. ಸುಪ್ರೀಂ ಕೋರ್ಟ್‍ನ ಮೂವರು ನ್ಯಾಯಾಧೀಶರ ಸಮಿತಿಯು ಸಮರ್ಪಕವಾಗಿ ವಿಚಾರಣೆ ನಡೆಸದೇ ಪ್ರಕರಣವನ್ನು ವಜಾ ಗೊಳಿಸಿರುವುದು ಸರಿಯಲ್ಲ ಎಂದು ಆರೋಪ ದೇಶದೆಲ್ಲೆಡೆ ಕೇಳಿ ಬರುತ್ತಿದ್ದು ಪ್ರತಿಭಟನೆಗಳು ನಡೆದಿವೆ. ಈ ವಿಷಯವಾಗಿ ಬೆಂಗಳೂರಿನಲ್ಲಿ ಗುರುವಾರ ವಕೀಲರು, ಕಾನೂನು ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಾಧೀಶ ರಂಜನ್ ಗೊಗಯಿ ಅವರ ಮೇಲೆ ಸುಪ್ರೀಂ ಕೋರ್ಟ್‍ನಲ್ಲಿ ಕೆಲಸ ಮಾಡಿದ್ದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಇತ್ತೀಚೆಗೆ ದೂರು ನೀಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‍ನ ಮೂವರು ನ್ಯಾಯಾಧೀಶರ ಸಮಿತಿಯು ‘ಈ ಆರೋಪದಲ್ಲಿ ಹುರುಳಿಲ್ಲ’ ಎಂದು ವರದಿ ನೀಡಿ, ರಂಜನ್ ಗಗೋಯ್ ರವರಿಗೆ ಕ್ಲೀನ್ ಚಿಟ್ ನೀಡಿತ್ತು.

‘ಸುಪ್ರೀಂ ಕೋರ್ಟ್‍ನ ವಿಶ್ವಾಸಾರ್ಹತೆಯ ಗಂಭೀರ ಬಿಕ್ಕಟ್ಟಿನಲ್ಲಿದೆ. ನ್ಯಾಯಾಲಯವು ದೂರುದಾರರ ದೂರನ್ನು ಸರಿಯಾದ ರೀತಿಯಲ್ಲಿ ಆಲಿಸುವಲ್ಲಿ ವಿಫಲವಾಗಿದೆ. ದೂರುದಾರಳ ಬೇಡಿಕೆಯಾದ ‘ವಿಶೇಷ ವಿಚಾರಣಾ ಸಮಿತಿ’ಯನ್ನು ಕಡೆಗಣಿಸಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಕಿರಿಯರಾದ (ಜೂನಿಯರ್ಸ್) ನ್ಯಾಯಮೂರ್ತಿಗಳನ್ನು ಒಳಗೊಂಡ ಇನ್-ಹೌಸ್ ಸಮಿತಿಯನ್ನು ರಚಿಸಿತು. ಈ ಸಮಿತಿ 2019ರ ಮೇ 6 ರಂದು ‘ದೂರಿನಲ್ಲಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ’ ಎನ್ನುವ ತೀರ್ಮಾನ ನೀಡಿದ್ದಕ್ಕೆ ಆಶ್ಚರ್ಯ ಪಡಬೇಕಿಲ್ಲ.’ ಎಂದು ಪ್ರತಿಭಟನೆಯಲ್ಲಿ ಭಾಗಿಯಾದ ವಕೀಲರಾದ ವಿನಯ್ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸುತ್ತಾರೆ.

ವಿನಯ್ ಶ್ರೀನಿವಾಸನ್

‘ನಾವೆಲ್ಲ ದೂರುದಾರ ಮಹಿಳೆಯೊಂದಿಗೆ ಐಕ್ಯಮತವಾಗಿ ನಿಂತುಕೊಳ್ಳುತ್ತೇವೆ. ಒಂದು ಸ್ವತಂತ್ರ ಮತ್ತು ನ್ಯಾಯಸಮ್ಮತ ವಿಚಾರಣೆಯ ನೀತಿನಿಯಮಗಳನ್ನು ಪಾಲಿಸದೇ ಸಮಿತಿ ನೀಡಿದ ತೀರ್ಮಾನವನ್ನು ತಿರಸ್ಕರಿಸುತ್ತೇವೆ. ಈ ಪ್ರಕರಣದಲ್ಲಿ ಪಾಲಿಸಲಾದ ಪ್ರಕ್ರಿಯೆಯಲ್ಲಿ ಬರೀ ಸ್ವಾಭಾವಿಕ ನ್ಯಾಯದ ತತ್ವಗಳನ್ನು ಮಾತ್ರ ಉಲ್ಲಂಘನೆಯಾಗದೇ ವಿಶಾಖ ತೀರ್ಪಿನ ಚೈತನ್ಯ ಮತ್ತು ಅದರಿಂದ ರೂಪಿಸಲಾದ ನೀತಿಗಳ ಉಲ್ಲಂಘನೆಯೂ ಆಗಿದೆ. ಇಷ್ಟೇ ಅಲ್ಲದೇ ಕೆಲಸ ಮಾಡುವ ಸ್ಥಳಗಳಲ್ಲಿ ಆಗುವ ಅಧಿಕಾರದ ಅಸಮತೋಲನಗಳನ್ನು ಗುರುತಿಸಿ ಅದನ್ನು ಸರಿಪಡಿಸಲು ಇರುವ ಸೆಕ್ಷುವಲ್ ಹ್ಯಾರ್ಯಾಸ್‍ಮೆಂಟ್ ಆಫ್ ವಿಮೆನ್ ಎಟ್ ವಕ್‍ಪ್ಲೇಸ್ ಆ್ಯಕ್ಟ್ 2013 (POSH ACT) ನ ಉಲ್ಲಂಘನೆಯೂ ಆಗಿದೆ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

 

ಇದನ್ನು ಓದಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

ನಾವೆಲ್ಲರೂ ನ್ಯಾಯಾಂಗದ ಸ್ವಾತಂತ್ರ ಮತ್ತು ಸ್ವಾಯತ್ತತೆಯ ಪರವಾಗಿದ್ದು, ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇವೆ ಮತ್ತು ಗೌರವಿಸುತ್ತೇವೆ. ಆದರೆ ನಾವು ನ್ಯಾಯಾಂಗ ವ್ಯವಸ್ಥೆಯಲ್ಲಿ ಆಗುವ ಲೋಪದೋಷಗಳನ್ನು ಗುರುತಿಸಿ ಅವುಗಳನ್ನು ತೋರಿಸುವುದರಲ್ಲಿಯೂ ನಂಬಿಕೆ ಇಡುತ್ತೇವೆ, ಅದರಿಂದ ಲೋಪದೋಷಗಳನ್ನು ತಿದ್ದುಕೊಳ್ಳಲು ಸಹಾಯ ಆಗಿ ನ್ಯಾಯಾಂಗದ ಸ್ವಾತಂತ್ರದ ರಕ್ಷಣೆ ಆಗುತ್ತದೆಯೇ ಹೊರತು ಅದರ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗುವುದಿಲ್ಲ. ನಮ್ಮ ದೇಶದ ಅತ್ಯುನ್ನತ ಸಾಂವಿಧಾನಿಕ ಪ್ರಾಧಿಕಾರವಾದ ಭಾರತದ ಸುಪ್ರೀಮ್ ಕೋರ್ಟಿನಿಂದ ಆದ ಅಧಿಕಾರದ ಈ ಸ್ಪಷ್ಟ ದುರ್ಬಳಕೆಯಿಂದ ನಮಗೆ ಹತಾಶೆ ಆಘಾತವಾಗಿದೆ ಎನ್ನುತ್ತಾರೆ ಪ್ರತಿಭಟನಾಕಾರರು.

ಸುಪ್ರೀಂ ಕೋರ್ಟ್ ತಾನು ಮಾಡಿದ ತಪ್ಪನ್ನು ತಿದ್ದಬೇಕು ಎಂದು ನಾವು ಆಗ್ರಹಿಸುತ್ತೇವೆ ಹಾಗೂ ದೂರುದಾರರ ಮೇಲೆ ಆಗಿರುವ ಘೋರ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸುತ್ತೇವೆ. ಸ್ಪಷ್ಟವಾದ ಕಾರ್ಯವಿಧಾನಗಳ ಅನುಪಸ್ಥಿತಿಯಲ್ಲಿ, ಸಹಜ ನ್ಯಾಯದ ತತ್ವಗಳನ್ನು ಪಾಲಿಸದೇ ಹಾಗೂ ದೂರುದಾರರ ಪರಿಣಾಮಕಾರಿಯಾದ ಪ್ರಾತಿನಿಧ್ಯ ಇಲ್ಲದೇ ಆಗಿರುವ ಈ ವರದಿ (ಇದನ್ನು ಸಾರ್ವಜನಿಕಗೊಳಿಸದೇ ಇದ್ದರೂ) ಯನ್ನು ಈ ವಿಷಯಕ್ಕೆ ಸಂಬಂಧಪಟ್ಟಂತೆ ಇದೇ ಕೊನೆಯ ಮತ್ತು ಅಂತಿಮ ತೀರ್ಪು ಎಂದು ಒಪ್ಪಿಕೊಳ್ಳಲಾಗದು ಎಂದರು.

ಪ್ರತಿಭಟನಾಕಾರರು ಸುಪ್ರೀಂ ಕೋರ್ಟಿನ ಮುಂದಿಟ್ಟಿರುವ ಹಕ್ಕೊತ್ತಾಯಗಳು ಕೆಳಗಿನಂತಿವೆ.

1. ದೂರುದಾರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸುಪ್ರೀಂ ಕೋಟ್‍ನ ಪೂರ್ಣ ಪೀಠ ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ಸುಪ್ರೀಂಕೋರ್ಟ್ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಪುನರ್‍ಗಳಿಸಬೇಕು.
2. ವಿಶಾಖ ಗೈಡ್‍ಲೈನ್ಸ್, POSH ACT ಬದ್ಧವಾಗಿರುವಂತಹ ಹೊಸ ಸಮಿತಿಯನ್ನು ಸೂಕ್ತ ಪ್ರಕ್ರಿಯೆಯ ಮೂಲಕ ರಚಿಸಿ ದೂರುದಾರರ ಹಿತಾಸಕ್ತಿಯನ್ನು ಕಾಪಾಡಬೇಕು.
3. ಜಸ್ಟೀಸ್ ಬಾಬ್ಡೆ ಪ್ಯಾನಲ್ ವರದಿಯ ಪ್ರತಿಯೊಂದನ್ನು ದೂರುದಾರರಿಗೆ ನೀಡಬೇಕು
4. ದೂರುದಾರರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು
5. ರಚಿಸಬೇಕಿರುವ ಹೊಸ ಸಮಿತಿಗೆ ದಲಿತ ಸಮುದಾಯಕ್ಕೆ ಸೇರಿದ ಒಬ್ಬರಾದರೂ ನ್ಯಾಯಾಂಗ (ವಕೀಲರು/ನ್ಯಾಯಾಧೀಶರು/ನಿವೃತ್ತ ನ್ಯಾಯಾಧೀಶರು) ವ್ಯಕ್ತಿಯನ್ನು ನೇಮಿಸಬೇಕು.
6. ಎಸ್‍ಸಿ/ಎಸ್‍ಟಿ/ಒಬಿಸಿ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಿಗೆ ನ್ಯಾಯಾಂಗದ ಉನ್ನತ ಸ್ಥಾನಗಳಲ್ಲಿ ಮೀಸಲಾತಿಯನ್ನು ಒದಗಿಸಬೇಕು
ಈ ಮೊಕದ್ದಮೆಗೆ ಸಂಬಂಧಿಸಿ ನ್ಯಾ.ಚಂದ್ರಚೂಡ್ ಅವರ ಸಲಹೆಗಳನ್ನು ನಾವು ಅನುಮೋದಿಸುತ್ತೇವೆ.
7. ಹೊಸ ಸಮಿತಿಗೆ ನಿವೃತ್ತ ಮಹಿಳಾ ನ್ಯಾಯಾಧೀಶರನ್ನು ಬಾಹ್ಯ ಸದಸ್ಯರಾಗಿ ಕಡ್ಡಾಯವಾಗಿ ನೇಮಕ ಮಾಡಬೇಕು
8. ಬಾರ್ ಕೌನ್ಸಿಲ್‍ನ ಗೌರವಾನ್ವಿತ ಮಹಿಳಾ ಸದಸ್ಯರನ್ನು ಅಮಿಕಸ್ ಕ್ಯೂರಿ (ಕೋರ್ಟ್‍ನ ಸ್ನೇಹಿತರು) ಎಂದು ಪರಿಗಣಿಸಬೇಕು
9. ದೂರುದಾರರು ಮುಂದಿಟ್ಟಿರುವ ಕುಂದುಕೊರತೆಗಳನ್ನು, ಅದರಲ್ಲೂ ವಕೀಲರೊಬ್ಬರ ನೆರವನ್ನು ಪಡೆಯುವಂತಹವನ್ನು ಪರಿಗಣಿಸಿ ಪರಿಹಾರ ಕಲ್ಪಿಸಬೇಕು.

ಪ್ರತಿಭಟನೆಗೆ ಭಾಗವಹಿಸಿದ, ಬೆಂಬಲಿಸಿದ ಸಂಘಟನೆಗಳು

ಸಿಐಇಡಿಎಸ್ ಕಲೆಕ್ಟಿವ್, ಬೆಂಗಳೂರು
2. ಪರ್ಯಾಯ ಕಾನೂನು ವೇದಿಕೆ, ಬೆಂಗಳೂರು
3. ನ್ಯಾಷನಲ್ ನೆಟ್‍ವರ್ಕ್ ಆಫ್ ಸೆಕ್ಸ್ ವರ್ಕರ್ಸ್
4. ಕರ್ನಾಟಕ ಜನಾರೋಗ್ಯ ಚಳವಳಿ
5. ವಂಪ್
6. ಮುಸ್ಕಾನ್
7. ಕರ್ನಾಟಕ ಸೆಕ್ಸ್ ವರ್ಕ್‍ರ್ಸ್ ಯೂನಿಯನ್
8. ಸ್ತ್ರೀ ಜಾಗೃತಿ ಸಮಿತಿ
9. ಡೊಮೆಸ್ಟಿಕ್ ವರ್ಕ್‍ರ್ಸ್ ರೈಟ್ಸ್ ಯೂನಿಯನ್
10. ಮಹಿಳಾ ಮುನ್ನಡೆ
11. ಕರ್ನಾಟಕ ಜನಶಕ್ತಿ
12. ಸಂವಿಧಾನ ಉಳಿವಿಗಾಗಿ ಕರ್ನಾಟಕ
13. ಸೌಥ್ ಇಂಡಿಯಾ ಸೆಲ್ ಫಾರ್ ಹ್ಯುಮನ್ ರೈಟ್ಸ್, ಎಡುಕೇಷನ್ ಅಂಡ್ ಮಾನಿಟರಿಂಗ್ (ಎಸ್‍ಐಸಿಎಚ್‍ಆರ್‍ಇಎಂ)
14. ರಾಮದಾಸ್ ರಾವ್
15. ತಾರಾ ಕೃಷ್ಣಮೂರ್ತಿ, ಕೋ ಫೌಂಡರ್, ಶಕ್ತಿ – ಪೊಲಿಟಿಕಲ್ ಪವರ್ ಟು ವುಮೆನ್
16. ಗಮನ ವರ್ಕರ್ಸ್ ಕಲೆಕ್ಟಿವ್, ಬೆಂಗಳೂರು
17. ಸಾಧನ ಮಹಿಳೆಯರ ಸಂಘ, ಬೆಂಗಳೂರು
18. ಲೈಂಗಿಕ ಹಿಂಸೆಯ ವಿರೋಧಿ ಜನಚಳವಳಿ
19. ಕರ್ನಾಟಕ ಗಾರ್ಮೆಂಟ್ಸ್ ವರ್ಕರ್ಸ್ ಯೂನಿಯನ್ (ಏಔಔಉU)
20. ಸೌತ್ ಇಂಡಿಯಾ ಫೆಡೆರೇಷನ್ ಆಫ್ ಟ್ರೇಡ್ ಯೂನಿಯನ್ಸ್ (SIಈಖಿU)
21. ಂIಏಙಂಖಿಂ (ಸೀನಿಯರ್ ಸಿಟಿಜನ್ಸ್ ಗ್ರೂಪ್)
22. ಮನೆಗೆಲಸ ಕಾರ್ಮಿಕರ ಯೂನಿಯನ್ (ಒಂಏಂಂಙU)
23. ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕರ ಯೂನಿಯನ್ (ಂಏಏಏU)
24. ಫೆಡಿನಾ
25. ರಾಜೇಶ್, ಉಮಾದೇವಿ, ಶ್ರೀನಿವಾಸ್

‘ನ್ಯಾಯಾಧೀಶರೇ ಆರೋಪಿಯಾದರೆ… ವಿಚಾರಣಾ ಪೀಠದಲ್ಲಿ ಸ್ವತಃ ನ್ಯಾಯಮೂರ್ತಿಯಾಗಿ ಕುಳಿತರೇ?’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...