ಹೆಗಲಿಗೆ ಕೈಯಿಟ್ಟಿದ್ದಾರೆಂದು ಆರೋಪಿಸಿ ಪಕ್ಷದ ಕಾರ್ಯಕರ್ತರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯ ಬಿಜೆಪಿ ‘ರೌಡಿ ಡಿಕೆಶಿ’ ಎಂದು ಕರೆದಿದೆ. “ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ? ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದುಕೊಂಡು ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಹಲ್ಲೆ ಮಾಡಿರುವುದು ಅಕ್ಷಮ್ಯ” ಎಂದು ಬಿಜೆಪಿ ಶನಿವಾರ ಹೇಳಿದೆ.
ಮಂಡ್ಯದ ಎಂ.ಕೆ. ದೊಡ್ಡಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ತನ್ನ ಹೆಗಲ ಮೇಲೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಕೈಯಿಟ್ಟಿದ್ದಾರೆ ಎಂದು ಹೇಳಿ ಶಿವಕುಮಾರ್ ಅವರ ಕಪಾಳಕ್ಕೆ ಬಾರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, “ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಒಬ್ಬ ವ್ಯಕ್ತಿಯ ಮೇಲೆ ಸಾರ್ವಜನಿಕವಾಗಿ, ಮಾಧ್ಯಮಗಳ ಎದುರು ಹಲ್ಲೆ ನಡೆಸುವುದು ಡಿಕೆಶಿ ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತಿದೆ. ಈ ಹಿಂದೆ ಸೆಲ್ಫಿ ತೆಗೆಯಲು ಬಂದ ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ ಮಾಡಿದ್ದರು. ಡಿಕೆಶಿಯವರೇ, ನೀವು ರಾಜಕಾರಣಿಯೋ ಅಥವಾ ರೌಡಿಯೋ!?” ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಸಿನಿಮಾ ರಂಗಕ್ಕೂ ಕಾಲಿಟ್ಟ ಸುಮಲತಾ, ಹೆಚ್‌ಡಿಕೆ ವಾಗ್ವಾದ; ಅಣೆಕಟ್ಟೆಯಲ್ಲಿ ಬಿರುಕಿಲ್ಲ ಎಂದ ಸರ್ಕಾರ!
“ಕಾರ್ಯಕರ್ತ ಹತ್ತಿರ ಬಂದ ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ಹಲ್ಲೆ ಮಾಡುವ ಡಿಕೆಶಿ ಅವರ ಬಳಿ ಜನಸಾಮಾನ್ಯರು ಹೋದರೆ ಗತಿಯೇನು ? ಕೆಪಿಸಿಸಿ ಅಧ್ಯಕ್ಷರೇ, ನೀವು ಹೊಡಿ, ಬಡಿ ರಾಜಕಾರಣದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಹೊರಟಿದ್ದೀರಾ?” ಎಂದು ಬಿಜೆಪಿ ಕೇಳಿದೆ. ಜೊತೆಗೆ ಈ ಹಿಂದಿನ ಇಂತಹದ್ದೇ ಹಲವು ಘಟನೆಗಳನ್ನು ನೆನಪಿಸಿರುವ ಬಿಜೆಪಿ ತನ್ನ ಟ್ವಿಟರ್ ಪೇಜ್‌ನಲ್ಲಿ “ಇದೆಲ್ಲ ರೌಡಿ ಲಕ್ಷಣ ಅಲ್ಲದೆ ಮತ್ತೇನು?” ಎಂದು ಕೇಳಿದೆ.
ಟ್ವಿಟರ್‌ನಲ್ಲಿ ರೌಡಿ ಡಿಕೆಶಿ ಎಂಬ ಹ್ಯಾಶ್ ಟ್ಯಾಗ್ ಹಾಕಿರುವ ಬಿಜೆಪಿ, “ಶಿವಕುಮಾರ್ ತಮ್ಮ ವರ್ತನೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ನೀವು ಕೊತ್ವಾಲನ ಶಿಷ್ಯ ಆಗಿರಬಹುದು, ಜೈಲಿಗೂ ಹೋಗಿ ಬಂದಿರಬಹುದು ಆದರೆ ಆ ರಾಕ್ಷಸಿ ಗುಣಗಳನ್ನು ಅಮಾಯಕರ ಮೇಲೆ ತೋರ್ಪಡಿಸಬೇಡಿ. ರಾಜ್ಯಾಧ್ಯಕ್ಷರ ನಡೆ ಇತರರಿಗೆ ಮಾದರಿಯಾಗಿರಲಿ, ಇದು ಬಸವಣ್ಣನ ನಾಡು ಎಂಬುದು ನೆನಪಿರಲಿ” ಎಂದು ಬಿಜೆಪಿ ಹೇಳಿದೆ.
ಇದನ್ನೂ ಓದಿ: ಕೇಂದ್ರ ಚರ್ಚೆ ನಡೆಸಲು ಬಯಸಿದರೆ, ರೈತರಿಗೆ ಷರತ್ತು ವಿಧಿಸುವಂತಿಲ್ಲ- ರಾಕೇಶ್ ಟಿಕಾಯತ್
ಇದಕ್ಕೆ ಕಾಂಗ್ರೆಸ್ ಟ್ವಿಟರ್‌ನಲ್ಲೆ ಪ್ರತಿಕ್ರಿಯಿಸಿದ್ದು, “ಸಾರ್ವಜನಿಕ ಬದುಕಿನಲ್ಲಿರುವವರಿಗೆ ಸಾರ್ವಜನಿಕ ಸ್ಥಳದಲ್ಲಿ ಕಿರಿಕಿರಿ ಉಂಟಾಗುವುದು ಸಹಜ. ತಮ್ಮದೇ ಡ್ರೈವರ್ ಮೇಲೆ ಮಾದ್ಯಮದವರೆದುರು ಹಲ್ಲೆ ನಡೆಸಿದ ಯಡಿಯೂರಪ್ಪ ಅವರು ಭೂಗತ ಪಾತಕಿ ದಾವೂದ್ ಇಬ್ರಾಹಿಂನಿಂದ ಟ್ರೈನಿಂಗ್ ತೆಗೆದುಕೊಂಡಿದ್ದರೇ? ಇದಕ್ಕೆ ಬಿಜೆಪಿ ಉತ್ತರಿಸಬೇಕು! ಬಿಜೆಪಿ ಹುಟ್ಟಿಕೊಂಡಿದ್ದೇ ಹಲ್ಲೆ, ಕೊಲೆ, ಗಲಭೆಗಳಿಂದ” ಎಂದು ಹೇಳಿದೆ.
ಸಾರ್ವಜನಿಕ ಬದುಕಿನಲ್ಲಿರುವವರಿಗೆ ಸಾರ್ವಜನಿಕ ಸ್ಥಳದಲ್ಲಿ ಕಿರಿಕಿರಿ ಉಂಟಾಗುವುದು ಸಹಜ.
ತಮ್ಮದೇ ಡ್ರೈವರ್ ಮೇಲೆ ಮಾದ್ಯಮದವರೆದುರು ಹಲ್ಲೆ ನಡೆಸಿದ @BSYBJP ಅವರು ಭೂಗತ ಪಾತಕಿ ದಾವೂದ್ ಇಬ್ರಾಹಿಂನಿಂದ ಟ್ರೈನಿಂಗ್ ತೆಗೆದುಕೊಂಡಿದ್ದರೇ?@BJP4Karnataka ಉತ್ತರಿಸಬೇಕು!
ಬಿಜೆಪಿ ಹುಟ್ಟಿಕೊಂಡಿದ್ದೇ ಹಲ್ಲೆ, ಕೊಲೆ, ಗಲಭೆಗಳಿಂದ. https://t.co/4BESRCy6Vq pic.twitter.com/XjDEnOCe1J
— Karnataka Congress (@INCKarnataka) July 10, 2021
ಇದನ್ನೂ ಓದಿ: ಭಾರತ ಪ್ರಜಾಪ್ರಬುತ್ವದ ನೆಲೆ ಬೆಲೆ: ಬಿ ಶ್ರೀಪಾದ ಭಟ್
ವಿಡಿಯೋ ನೋಡಿ: ಆಕ್ಸಿಡೆಂಟ್ ನನ್ನನ್ನು ವಿಶೇಷ ಚೇತನನ್ನನ್ನಾಗಿ ಮಾಡಿತು, ಆದರೆ ಲಾಕ್‌ಡೌನ್ ನಮ್ಮ ಜೀವನವನ್ನೇ ಕಿತ್ತುಕೊಂಡಿತು!


