20 ವರ್ಷದ ದಲಿತ ಯುವಕನ ಮೇಲೆ ಜನರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜನರ ಗುಂಪೊಂದು ಯುವಕನ ಕೂದಲನ್ನು ಎಳೆಯುತ್ತಿರುವುದು, ಮೊಣಕೈಗಳಿಂದ ಮುಖಕ್ಕೆ ಗುದ್ದುತ್ತಿರುವುದು, ಬಟ್ಟೆ ಎಳೆದು ಕಸದ ಹತ್ತಿರ ಎಳೆ ತಂದು ಕೋಲುಗಳಿಂದ ಹೊಡೆಯುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳನ್ನು ಹುಡುಕಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ಎರಡು ದಿನಗಳ ಹಿಂದೆ ಕಾನ್ಪುರ್ ದೇಹತ್‌ನ ಅಕ್ಬರ್‌ಪುರ ಪ್ರದೇಶದಲ್ಲಿ ನಡೆದಿದೆ.
ಮೊದಲು ಯುವಕನ ಜಾತಿಯನ್ನು ಕೇಳಿ, ಬಳಿಕ ಆತ ದಲಿತ ಸಮುದಾಯದವನು ಎಂದು ತಿಳಿದ ಬಳಿಕ ಹಲ್ಲೆ ನಡೆಸಲಾಗಿದೆ. ಯುವಕ ನೋವಿನಿಂದ ಕೂಗುತ್ತಿದ್ದರೂ ಕೂಡ, ಹೊಡೆತಕ್ಕೆ ಪ್ರತಿರೋಧ ತೋರಿಸದೇ ಈ ಮಾರಣಾಂತಿಕ ಹಲ್ಲೆಯನ್ನು ಸಹಿಸಿಕೊಳ್ಳತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ: ಮೇಲ್ಜಾತಿ ಹುಡುಗಿಗೆ ಮೊಬೈಲ್ ನೀಡಿದ್ದಕ್ಕೆ ದಲಿತ ಯುವಕರ ತಲೆ ಬೋಳಿಸಿ, ಎಂಜಲು ತಿನ್ನಿಸಿದ ಅಮಾವೀಯ ಘಟನೆ
पीटने वाला: "कौन कास्ट हो?"
पिटने वाला: "चमार हैं."फिर डंडों की बौछार बढ़ जाती है।उसे लात, घूसों,डंडों से बेरहमी से पीटा। जिस्म के नाज़ुक हिस्सों में डंडे घुसेड़े।कानपुर देहात में मामला प्रेम प्रसंग का बताते हैं।पुलिस ने एफ़ आई आर कर एक को पकड़ लिया है।दो की तलाश है। pic.twitter.com/BAU4QN2IiZ
— Kamal khan (@kamalkhan_NDTV) July 10, 2021
ವಿಡಿಯೊವನ್ನು ಹಂಚಿಕೊಂಡಿರುವ ಹಲವು ಮಂದಿ ಇದೊಂದು ಪ್ರೇಮ ಪ್ರಸಂಗಕ್ಕೆ ಸಂಬಂಧಿಸಿ ನಡೆದಿರುವ ಮಾರಣಾಂತಿಕ ಹಲ್ಲೆ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾನ್ಪುರ್ ದೇಹತ್ ಹೆಚ್ಚುವರಿ ಎಸ್ಪಿ ಘಾನಶ್ಯಾಂ ಚೌರಾಸಿಯಾ, “ನಾವು ವಿಡಿಯೊವನ್ನು ನೋಡಿದ ತಕ್ಷಣ, ಘಟನೆ ಕುರಿತು ಪೊಲೀಸ್ ಪ್ರಕರಣವನ್ನು ದಾಖಲಿಸಲಾಗಿದೆ. ವೈರಲ್ ವಿಡಿಯೊದಲ್ಲಿ ಗುರುತಿಸಲ್ಪಟ್ಟ ವ್ಯಕ್ತಿಯನ್ನು ಬಂಧಿಸಲಾಗಿದೆ. ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಇನ್ನೂ ಇಬ್ಬರನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಅವರನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ” ಎಂದಿದ್ದಾರೆ.
ಮತ್ತೊಂದು ವಿಡಿಯೊದಲ್ಲಿ, ಮರಕ್ಕೆ ಯುವನೊಬ್ಬನನ್ನು ಕಟ್ಟಿ, ಪ್ಯಾಂಟ್ ಬಿಚ್ಚಿ ಆತನ ಖಾಸಗಿ ಭಾಗಗಳಿಗೆ ಕೋಲಿನಿಂದ ತಿವಿಯುತ್ತಿರುವ ದೃಶ್ಯ ಸೆರೆಯಾಗಿದೆ. ಹಲ್ಲೆಗೊಳಗಾದ ಯುವಕನನ್ನು ಕಾನ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು, ಆಡಳಿತ ಪಕ್ಷ ಬಿಜೆಪಿಯ ಇಬ್ಬರು ಕಾರ್ಯಕರ್ತರು, ಬ್ಲಾಕ್ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಹೋಗುತ್ತಿದ್ದ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಬೆಂಬಲಿಗ ಮಹಿಳೆಯ ಸೀರೆಯನ್ನು ಎಳೆದಿದ್ದ ಘಟನೆ ಉತ್ತರ ಪ್ರದೇಶದಲ್ಲಿ ಕಳೆದೆರಡು ದಿನಗಳ ಹಿಂದೆ ನಡೆದಿದೆ.
ಇದನ್ನೂ ಓದಿ: ಕೊಪ್ಪಳ: ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಬರ್ಬರ ಕೊಲೆ


