ಕೊರೊನಾ ವೈರಸ್ ಕಾಯಿಲೆಯ ಮೂರನೇ ತರಂಗವು ಮಕ್ಕಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಒಕ್ಕೂಟ ಸರ್ಕಾರ ಶುಕ್ರವಾರ ಹೇಳಿದೆ. ಸಾಂಕ್ರಾಮಿಕ ರೋಗ ಹರಡಿದಾಗಿನಿಂದ ಹೆಚ್ಚುತ್ತಿರುವ ಇಂತಹ ತಪ್ಪು ಮಾಹಿತಿಯಿಂದ ಜನರು ದೂರವಿರಬೇಕೆಂದು ಸರ್ಕಾರ ಎಚ್ಚರಿಸಿದೆ.
ಭಾರತೀಯ ಸಾರ್ವಜನಿಕ ಆರೋಗ್ಯ ಸಂಘದ ಅಧ್ಯಕ್ಷ ಮತ್ತು ಏಮ್ಸ್ ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕ ಡಾ.ಸಂಜಯ್ ಕುಮಾರ್ ರೈ ಅವರು ‘ತಪ್ಪು ಮಾಹಿತಿ’ ಕುರಿತು ಇನ್ಫೋಡೆಮಿಕ್ ಸಾಂಕ್ರಾಮಿಕ ಇ-ಸಮ್ಮಿಟ್‌ನಲ್ಲಿ ಮಾತನಾಡುತ್ತಿದ್ದರು.
ಇದನ್ನೂ ಓದಿ: ಕೊರೊನಾ ಮೊದಲ ಅಲೆಯಿಂದ ಉತ್ತರ ಪ್ರದೇಶ ಪಾಠ ಕಲಿಯಲಿಲ್ಲ: ಆಡಳಿತ ಪಕ್ಷದ ನಾಯಕರಿಂದ ಟೀಕೆ
“ಕೊರೊನಾ ಸಾಂಕ್ರಾಮಿಕವು ಸ್ಫೋಟಗೊಂಡಾಗಿನಿಂದ ಇನ್ಫೋಡೆಮಿಕ್ ಎಂದು ಕರೆಯಲ್ಪಡುವ ತಪ್ಪು ಮಾಹಿತಿಯ ಸಂಯೋಜನೆಯು ನಡೆಯುತ್ತಿದೆ. ಇದರ ಇತ್ತೀಚಿನ ಉದಾಹರಣೆಯೆಂದರೆ, ಕೋವಿಡ್‌ನ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬುವುದು. ಇದು ಸಂಪೂರ್ಣ ತಪ್ಪು ಮಾಹಿತಿಯಾಗಿದ್ದು, ಇದರ ಹಿಂದೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ” ಎಂದು ಹೇಳಿದ್ದಾರೆ.
“ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಸೋಂಕಿಗೆ ಒಳಗಾಗುತ್ತಾರೆ ಎಂದು ವ್ಯಾಪಕವಾಗಿ ಹೇಳಲಾಗುತ್ತಿದೆ. ಎರಡನೇ ಅಲೆಯಲ್ಲಿ ಕೆಲವು ಮಕ್ಕಳು ಬಾಧಿತರಾಗಿದ್ದರೆ, ಇದುವರೆಗೆ ಸುಮಾರು 90% ದಷ್ಟು ಸೋಂಕುಗಳು ಸೌಮ್ಯ ಅಥವಾ ಲಕ್ಷಣರಹಿತವಾಗಿವೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ 3ನೇ ಅಲೆ: ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳಿಗೆ ಐಎಂಎ ಎಚ್ಚರಿಕೆ


