Homeಮುಖಪುಟಫ್ರೆಡೆರಿಕ್ ಏಂಗೆಲ್ಸ್ ಮತ್ತು ಜರ್ಮನ್ ಸಿದ್ಧಾಂತ ಪುಸ್ತಕಗಳ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮ

ಫ್ರೆಡೆರಿಕ್ ಏಂಗೆಲ್ಸ್ ಮತ್ತು ಜರ್ಮನ್ ಸಿದ್ಧಾಂತ ಪುಸ್ತಕಗಳ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮ

ಈ ಎರಡು ಕಾರ್ಯಕ್ರಮಗಳು ಜನಶಕ್ತಿ ಮೀಡಿಯಾ (Janashakthi Media) ಫೇಸ್ ಬುಕ್ ಮತ್ತು ಯೂಟ್ಯೂಬ್ ತಾಣಗಳಲ್ಲಿ ಲೈವ್ ಆಗಿ ಪ್ರಸಾರವಾಗಲಿವೆ.

- Advertisement -
- Advertisement -

ಜರ್ಮನ್ ತತ್ವಶಾಸ್ತ್ರಜ್ಞ, ಇತಿಹಾಸಕಾರ, ರಾಜಕೀಯ ಶಾಸ್ತ್ರಜ್ಞ, ಪತ್ರಕರ್ತ ಮತ್ತು ಕ್ರಾಂತಿಕಾರಿ ಸಮಾಜವಾದಿ ಫ್ರೆಡೆರಿಕ್ ಏಂಗೆಲ್ಸ್‌ರವರ ಜನ್ಮ ದ್ವಿಶತಮಾನೋತ್ಸವದ ಅಂಗವಾಗಿ ಅವರ ಫ್ರೆಡೆರಿಕ್ ಏಂಗೆಲ್ಸ್ ಮತ್ತು ಜರ್ಮನ್ ಸಿದ್ಧಾಂತ ಕನ್ನಡ ಪುಸ್ತಕಗಳು ಜುಲೈ 20, 21 ರಂದು ಲೋಕಾರ್ಪಣೆಗೊಳ್ಳಲಿವೆ.

ಮಾರ್ಕ್ಸ್‌ವಾದ ಎಂದು ಕರೆಯಲಾಗುತ್ತಿರುವ ವಿಶಿಷ್ಟ ಲೋಕದೃಷ್ಟಿಯನ್ನು ಬೆಳೆಸುವಲ್ಲಿ ಮಾರ್ಕ್ಸ್‌ರ ಜತೆ ಏಂಗೆಲ್ಸ್ ಅವರ ಪಾತ್ರ ಹೆಚ್ಚು ಕಡಿಮೆ ಸಮಾನವಾಗಿತ್ತು. ಹಾಗಾಗಿ ಏಂಗೆಲ್ಸ್ ಅವರ ಜನ್ಮ ದ್ವಿಶತಮಾನೋತ್ಸವವನ್ನು ಮಾರ್ಕ್ಸ್ ವಾದದ ಲೋಕದೃಷ್ಟಿಯ ಆಧಾರಸ್ತಂಭಗಳು ಎನಿಸಿಕೊಂಡಿರುವ ಅವರ ಪ್ರಮುಖ ಕೃತಿಗಳನ್ನು ಕನ್ನಡದಲ್ಲಿ ಪ್ರಕಟಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ನಾಡಿನ ಪ್ರಗತಿಪರ ಪುಸ್ತಕಗಳ ಪ್ರಕಾಶನ ಸಂಸ್ಥೆಗಳಾದ (ಈ ಹಿಂದೆ ಮಾರ್ಕ್ಸ್200–ಕ್ಯಾಪಿಟಲ್ 150 ಯೋಜನೆಯನ್ನು ಸಫಲವಾಗಿ ಪೂರ್ಣಗೊಳಿಸಿದ) ನವಕರ್ನಾಟಕ ಮತ್ತು ಕ್ರಿಯಾ ಮಾಧ್ಯಮಗಳು ಜಂಟಿಯಾಗಿ ಯೋಜಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹಿರಿಯ ಹೋರಾಟಗಾರರಾದ ಡಾ.ಜಿ.ರಾಮಕೃಷ್ಣರವರು ರಚಿಸಿರುವ ಫ್ರೆಡೆರಿಕ್ ಎಂಗೆಲ್ಸ್ ಪುಸ್ತಕವನ್ನು ಜುಲೈ 20 ರಂದು ಝೂಮ್ ಆನ್‌ಲೈನ್ ಕಾರ್ಯಕ್ರದಲ್ಲಿ ಹಿರಿಯ ಮಾರ್ಕ್ಸ್ ವಾದಿ ವಿದ್ವಾಂಸರಾದ ಪ್ರೊ. ಕೆ.ಕೆ.ತೆಕ್ಕೆಡೆತ್ ರವರು ಬಿಡುಗಡೆಗೊಳಿಸಲಿದ್ದಾರೆ. ಜೊತೆಗೆ  “ವೈಜ್ಞಾನಿಕ ಸಮಾಜವಾದಕ್ಕೆ ಏಂಗೆಲ್ಸ್ ಕೊಡುಗೆ”  ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಅದೇ ರೀತಿಯಲ್ಲಿ ಜುಲೈ 21ರಂದು ಪ್ರೊ.ವಿ.ಎನ್.ಲಕ್ಷ್ಮಿನಾರಾಯಣರವರು ರಚಿಸಿರುವ “ಜರ್ಮನ್ ಸಿದ್ಧಾಂತ’ದ ಪುಸ್ತಕವನ್ನು ಪ್ರೊ.ರಾಜೇಂದ್ರ ಚೆನ್ನಿಯವರು ಬಿಡುಗಡೆಗೊಳಿಸಿ  ‘ಕರ್ನಾಟಕದ ಬೌದ್ಧಿಕ ಪರಂಪರೆ ಮತ್ತು ಸಂಕಥನಗಳಲ್ಲಿ ಭಾವನಾವಾದದ ಪ್ರಭಾವ’ ದ ಕುರಿತು ಸಂವಾದದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಇದರೊಂದಿಗೆ ಏಂಗೆಲ್ಸ್ 200 ಮಾಲಿಕೆಯಲ್ಲಿ ಮುಂದೆ ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವದ ಉಗಮ (ಡಾ.ಎಚ್.ಜಿ.ಜಯಲಕ್ಷ್ಮಿ), ಪ್ರಕೃತಿಯ ಗತಿತಾರ್ಕಿಕತೆ (ಸುಬ್ರಮಣ್ಯ ಗುಡ್ಗೆ), ಜರ್ಮನಿಯ ರೈತ ಯುದ್ಧಗಳು (ನಾ. ದಿವಾಕರ್), ಬಂಡವಾಳ ಸಂಪುಟ- 2 (ಪ್ರೊ.ವಿ.ಎನ್.ಲಕ್ಷ್ಮಿನಾರಾಯಣ, ಪಿ.ಎ.ಕುಮಾರ್) ಪುಸ್ತಕಗಳನ್ನು ಕನ್ನಡದಲ್ಲಿ ತರುವುದಾಗಿ ನವಕರ್ನಾಟಕ ಮತ್ತು ಕ್ರಿಯಾ ಮಾಧ್ಯಮಗಳು ಘೋಷಿಸಿವೆ. ರೂ. 1800 ಬೆಲೆಯ 6 ಪುಸ್ತಕಗಳ ಸೆಟ್  ಖರೀದಿಗೆ  ರೂ. 1200 ವಿಶೇಷ ಪ್ರಕಟಣಾ-ಪೂರ್ವ ರಿಯಾಯಿತಿ ಕೂಪನು ಖರೀದಿಸುವ ಮೂಲಕ ಪಡೆಯಬಹುದು.

ಈ ಎರಡು ಕಾರ್ಯಕ್ರಮಗಳು ಜನಶಕ್ತಿ ಮೀಡಿಯಾ (Janashakthi Media) ಫೇಸ್ ಬುಕ್ ಮತ್ತು ಯೂಟ್ಯೂಬ್ ತಾಣಗಳಲ್ಲಿ ಲೈವ್ ಆಗಿ ಪ್ರಸಾರವಾಗಲಿವೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಕ್ಕೆ ದೆಹಲಿ ಪೊಲೀಸರಿಂದ ಬಂಧನ-ಹಲ್ಲೆ: ಇಬ್ಬರು ಪತ್ರಕರ್ತೆಯರ ಆರೋಪ

ಸುದ್ದಿ ಮಾಡುತ್ತಿದ್ದಾಗ ದಕ್ಷಿಣ ದೆಹಲಿಯಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮನ್ನು ವಶಕ್ಕೆ ಪಡೆದು ಥಳಿಸಿದ್ದಾರೆ ಎಂದು ಇಬ್ಬರು ಮುಸ್ಲಿಂ ಸ್ವತಂತ್ರ ಮಹಿಳಾ ಪತ್ರಕರ್ತೆಯರು ಆರೋಪಿಸಿದ್ದಾರೆ. '4 ಪಿಎಮ್ ನ್ಯೂಸ್ ನೆಟ್‌ವರ್ಕ್' (4 PM News...

ತ್ರಿಪುರಾ: ‘ದನ ಕಳ್ಳ’ ಎಂದು, ಖರೀದಿಸಿದ ದನಗಳೊಂದಿಗೆ ಹಿಂತಿರುಗುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ಗುಂಪು ಹಲ್ಲೆ: 46 ವರ್ಷದ ಜಲೀಲುರ್ ರೆಹಮಾನ್ ಸಾವು

ಅಗರ್ತಲಾ: ಖರೀದಿಸಿದ ಎರಡು ದನಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ದನ ವ್ಯಾಪಾರಿಯೊಬ್ಬರನ್ನು ‘ದನ ಕಳ್ಳ’ ಎಂದು ಆರೋಪಿಸಿ ಗುಂಪೊಂದು ಥಳಿಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ತ್ರಿಪುರಾದ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯ...

ಪ್ರಶ್ನಿಸುವವರನ್ನು ‘ದಿಮಾಗಿ ನಕ್ಸಲ್’ ಎಂದು ಕರೆಯುವುದು ಸೂಕ್ಷ್ಮತೆಯಿಲ್ಲದ ನಡವಳಿಕೆ: ಗೀತಾಂಜಲಿ ಅಂಗಮೋ

ಪ್ರಶ್ನೆ ಕೇಳುವ ವ್ಯಕ್ತಿಯನ್ನು ‘ದಿಮಾಗಿ ನಕ್ಸಲ್’ (ಬುದ್ಧಿಜೀವಿ ನಕ್ಸಲರು) ಎಂದು ಕರೆಯುವುದು ಅತ್ಯಂತ ಸೂಕ್ಷ್ಮತೆಯಿಲ್ಲದ ರೀತಿಯಾಗಿದೆ ಎಂದು ಪ್ರಸಿದ್ಧ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ...

ಬಸವರಾಜ ಕನ್ನಾಳೆ ಸಿಂಡಿಕೇಟ್ ಸದಸ್ಯತ್ವ ರದ್ದಾಗುತ್ತಾ? ರಾಜಭವನದ ಮೌನಕ್ಕೆ ಮೂಡಿದ ಅನುಮಾನ

ತುಮಕೂರು ವಿಶ್ವವಿದ್ಯಾಲಯದ ರಾಜ್ಯಪಾಲರ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ಬಂಧನದ ಬೆನ್ನಲ್ಲೇ, ತನಿಖಾ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ವಿವಿಯ ಪ್ರಭಾರ ಕುಲಪತಿ ಪ್ರೊ. ನಾಗಭೂಷಣ ಅವರಿಂದ...

‘ಜಿಡಿಪಿ ಬಿಟ್ಟು ನಿಮ್ಮ ಮುಖದ ಸೌಂದರ್ಯದ ರಹಸ್ಯ ತಿಳಿಸಿ..’; ಪ್ರಧಾನಿ ಮೋದಿ ಕಾಲೆಳೆದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಇತ್ತೀಚೆಗೆ ಬಿಡುಗಡೆಯಾದ ಭಾರತದ ತ್ರೈಮಾಸಿಕ ಜಿಡಿಪಿ ಅಂಕಿಅಂಶಗಳ ಕುರಿತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ. 2026-27ರ ಹಣಕಾಸು ವರ್ಷದ ಮೊದಲ...

ರಾಜಕೀಯ ಪಕ್ಷಗಳ ಬಿಎಲ್‌ಎಗಳು ಎಸ್‌ಐಆರ್‌ನ ಎಲ್ಲ ಮಾಹಿತಿಗಳನ್ನೂ ಪರಿಶೀಲಿಸಲು ಜವಾಬ್ದಾರರಲ್ಲ : ದೆಹಲಿ ಹೈಕೋರ್ಟ್

ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳು (ಬಿಎಲ್‌ಎ) ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಎಣಿಕೆ ನಮೂನೆಗಳಲ್ಲಿರುವ (ಎನ್ಯುಮರೇಷನ್ ಫಾರಂ) ಎಲ್ಲ ವಿವರಗಳನ್ನು ಪರಿಶೀಲಿಸಲು ಜವಾಬ್ದಾರರಲ್ಲ ಎಂದು ದೆಹಲಿ ಹೈಕೋರ್ಟ್...

‘ಕೈಯಿಂದ ಮಲ ಹೊರುವ ಪದ್ಧತಿ ಇಲ್ಲ’ ಎಂದ ಸರ್ಕಾರ: ‘ಹಾಗಾದರೆ ನಾವು ಇನ್ನೂ ಏಕೆ ಈ ಕೆಲಸ ಮಾಡುತ್ತಿದ್ದೇವೆ?’ ಎಂದು ಪ್ರಶ್ನಿಸಿದ ಮಹಿಳಾ ಕಾರ್ಮಿಕರು

ನವದೆಹಲಿ: ದೇಶದಲ್ಲಿ ಕೈಯಿಂದ ಮಲ ಹೊರುವ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹೇಳಿರುವ ಬೆನ್ನಲ್ಲೇ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಜಮ್ಮು ಮತ್ತು ಕಾಶ್ಮೀರದ ಮಹಿಳಾ ನೈರ್ಮಲ್ಯ...

ಕಾನೂನು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಅಧಿಕಾರ ಬಾರ್ ಕೌನ್ಸಿಲ್‌ಗಳಿಗೆ ಇಲ್ಲ; ನಲ್ಸಾರ್ ವಿವಿ ವಿರುದ್ಧದ ಬಿಸಿಐ ಅಧ್ಯಕ್ಷರ ಆದೇಶ ಕಾನೂನುಬಾಹಿರ : ಸುಪ್ರೀಂ ಕೋರ್ಟ್

ಕಾನೂನು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಮತ್ತು ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ (ಸೆ.3) ಮಹತ್ವದ...

ದೇಶದ ಆರ್ಥಿಕ ಸ್ಥಿರತೆಯ ಬಗ್ಗೆ ಕೇಂದ್ರ ಸರ್ಕಾರದಿಂದ ಸುಳ್ಳು ನಿರೂಪಣೆ ಸೃಷ್ಟಿ: ಶರದ್ ಪವಾರ್

ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಸಂಕಷ್ಟದಲ್ಲಿರುವ ನೈಜ ಆರ್ಥಿಕತೆಯನ್ನು ಮರೆಮಾಚಲು ಕೇಂದ್ರ ಸರ್ಕಾರವು 'ಸಂಖ್ಯಾಶಾಸ್ತ್ರೀಯ ವಿಧಾನಗಳನ್ನು ತಿರುಚುತ್ತಿದೆ' ಎಂದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ. "ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡಾ...

ಮಹದೇವಪುರ, ಗಾಂಧಿನಗರ ವೋಟರ್ ಲಿಸ್ಟ್ ಹಗರಣ: ಇಸಿಐ ತನಿಖೆಗೆ ರಾಜ್ಯ ಚುನಾವಣಾ ಆಯೋಗ ಶಿಫಾರಸು

ಮಹದೇವಪುರ ಮತ್ತು ಗಾಂಧಿನಗರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಸಂಸದ ಮನ್ಸೂರ್ ಅಲಿ ಖಾನ್ ನೀಡಿದ್ದ ದೂರನ್ನು ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಕೇಂದ್ರ ಚುನಾವಣಾ ಆಯೋಗಕ್ಕೆ...