Homeಕರ್ನಾಟಕಮುಂದಿನ 10 ವರ್ಷದಲ್ಲಿ ದೇಶದ ಡಿಜಿಟಲ್ ಜಾಹೀರಾತು ಮಾರುಕಟ್ಟೆ 10 ಪಟ್ಟು ಹೆಚ್ಚಳ: ವರದಿ

ಮುಂದಿನ 10 ವರ್ಷದಲ್ಲಿ ದೇಶದ ಡಿಜಿಟಲ್ ಜಾಹೀರಾತು ಮಾರುಕಟ್ಟೆ 10 ಪಟ್ಟು ಹೆಚ್ಚಳ: ವರದಿ

- Advertisement -
- Advertisement -

ಭಾರತದ ಡಿಜಿಟಲ್ ಜಾಹೀರಾತು ಮಾರುಕಟ್ಟೆ ಮುಂದಿನ ಹತ್ತು ವರ್ಷದಲ್ಲಿ 10 ಪಟ್ಟು ಬೆಳೆಯುವ ನಿರೀಕ್ಷೆಯಿದ್ದು, ಇದು 2020 ರ 30 ಲಕ್ಷ ಡಾಲರ್‌ನಿಂದ 2030 ರಲ್ಲಿ 2.5-03 ಕೋಟಿ ಡಾಲರ್‌ಗೆ ಏರಿಕೆಯಾಗಲಿದೆ ಎಂದು ಹೊಸ ವರದಿ ಸೋಮವಾರ ಬಹಿರಂಗಪಡಿಸಿದೆ.

ಬೆಂಗಳೂರು ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ರೆಡ್‌ಸೀರ್‌ನ ವರದಿಯ ಪ್ರಕಾರ, ಮುಂದಿನ ಹತ್ತು ವರ್ಷಗಳಲ್ಲಿ ಡಿಜಿಟಲ್ ಜಾಹೀರಾತು ಮಾರುಕಟ್ಟೆ ಒಟ್ಟು ಜಾಹೀರಾತು ಮಾರುಕಟ್ಟೆಯ 70-85% ರಷ್ಟು ಕೊಡುಗೆ ನೀಡುವ ಸಾಧ್ಯತೆಯಿದೆ.

ಪ್ರಸ್ತುತ ದೇಶದ ಜಾಹಿರಾತು ಮಾರುಕಟ್ಟೆಯಲ್ಲಿ 33% ದಷ್ಟು ಕೊಡುಗೆಯನ್ನು ಡಿಜಿಟಲ್ ಮಾರುಕಟ್ಟೆ ನೀಡುತ್ತದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ 24×7 ಅನುಮತಿ ನೀಡಿದ ರಾಜ್ಯ ಸರ್ಕಾರ

“ಹೊಸ ತಲೆಮಾರಿನ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಜಾಹೀರಾತುಗಳಿಗಾಗಿ ಹೆಚ್ಚಾಗಿ ಖರ್ಚು ಮಾಡುತ್ತಿದೆ. ಸಾಂಪ್ರದಾಯಿಕ ಕಂಪನಿಗಳು ಸಹ ಡಿಜಿಟಲ್‌ಗಳಿಗಾಗಿ ಹೆಚ್ಚು ಖರ್ಚು ಮಾಡುತ್ತಿವೆ. ಈ ಬೆಳೆಯುತ್ತಿರುವ ಪ್ರವೃತ್ತಿಯ ಪ್ರಮುಖ ಅಂಶವೆಂದರೆ ಕಳೆದ ಎರಡು ತಲೆಮಾರು(ಮಿಲೇನಿಯಲ್ಸ್‌ ಮತ್ತು ಜನರೇಷನ್‌ ಝೆಡ್‌) ಹೆಚ್ಚಿನ ಸಮಯವನ್ನು ಡಿಜಿಟಲ್‌ ವೇದಿಕೆಯಲ್ಲಿ ಕಳೆಯುತ್ತಿದ್ದಾರೆ” ಎಂದು ರೆಡ್‌ಸೀರ್‌ನ ಎಂಗೇಜ್‌ಮೆಂಟ್‌‌ ವ್ಯವಸ್ಥಾಪಕ ಅಭಿಷೇಕ್ ಗುಪ್ತಾ ಹೇಳಿದ್ದಾರೆ.

ಅಲ್ಲದೆ, 2 ನೇ ಶ್ರೇಣಿಯ ನಗರಗಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಪ್ರವೇಶವು ಹೊಸ ಮಾರುಕಟ್ಟೆ ಮತ್ತು ಡಿಜಿಟಲ್ ಮಾರಾಟಗಾರರಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಮೆಟ್ರೋಪೊಲಿಟನ್ ನಗರಗಳನ್ನು 1 ನೇ ಶ್ರೇಣಿಯ ನಗರಗಳು ಎಂದು ಕರೆಯುತ್ತಾರೆ. ನಂತರದ ಹಂತದಲ್ಲಿ 2 ನೇ ಶ್ರೇಣಿಯ ನಗರಗಳು ಬರುತ್ತದೆ.

“ವಿಶೇಷವಾಗಿ 2 ನೇ ಶ್ರೇಣಿ ನಗರಗಳಲ್ಲಿ ಹೆಚ್ಚಿನ ಜನರು ವೆಬ್‌ಸೈಟ್‌ಗಳು, ಅಪ್ಲಿಕೇಶನ್‌ಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚು ಡಿಜಿಟಲ್‌ನಲ್ಲಿ ತೊಡಗಿಸಿಕೊಳ್ಳುವುದರಿಂದ ಈ ಪ್ರವೃತ್ತಿ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕಾರ್ಪೊರೆಟ್ ಧೃತರಾಷ್ಟ್ರ ಬಾಹುಗಳಿಗೆ ವಾಣಿಜ್ಯ ಬ್ಯಾಂಕುಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...