ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಜನರನ್ನು ಕೆಲಸಕ್ಕೆ ನೇಮಿಸಿರುವ ಎಲ್ಲಾ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ವರ್ಷದ ಎಲ್ಲಾ ದಿನಗಳಲ್ಲಿ 24×7 ಆಧಾರದ ಮೇಲೆ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಕ್ರಮವು ಉದ್ಯೋಗ ಸೃಷ್ಟಿಸುವ ಮತ್ತು ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ ರಾಜ್ಯ ಸರ್ಕಾರ ಶನಿವಾರ ತಿಳಿಸಿದೆ.
ಆದರೆ ದಿನಕ್ಕೆ ಹತ್ತು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವಂತೆ ಯಾವುದೇ ಉದ್ಯೋಗಿಯನ್ನು ಒತ್ತಾಯಿಸಬಾರದು ಎಂದು ರಾಜ್ಯ ಸರ್ಕಾರ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ನಾಳೆಯೇ ಚುನಾವಣೆ ನಡೆದರೂ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ: ಸಿದ್ದರಾಮಯ್ಯ
“ಎಲ್ಲಾ ಉದ್ಯೋಗದಾತರು ಯಾವುದೇ ದಿನದಲ್ಲಿ ಎಂಟು ಗಂಟೆಗಳಿಗಿಂತ ಹೆಚ್ಚು ಮತ್ತು ವಾರದಲ್ಲಿ ನಲವತ್ತೆಂಟು ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಲು ಒತ್ತಾಯಿಸಬಾರದು. ಹೆಚ್ಚುವರಿ ದುಡಿಮೆ ಸೇರಿದಂತೆ ಕೆಲಸದ ಅವಧಿಯು ಯಾವುದೇ ದಿನದಲ್ಲಿ ಹತ್ತು ಗಂಟೆಗಳ ಮೀರಬಾರದು” ಎಂದು ಸರ್ಕಾರದ ಆದೇಶ ಹೇಳಿದೆ.
ಎಲ್ಲಾ ಉದ್ಯೋಗಿಗಳಿಗೆ ಕನಿಷ್ಠ ವಾರದಲ್ಲಿ ರಜೆ ಪಡೆಯಲು ಅರ್ಹತೆ ಇದೆ ಎಂದು ಸರ್ಕಾರ ತಿಳಿಸಿದೆ. ಉದ್ಯೋಗಿಯನ್ನು ದಿನದಲ್ಲಿ ಎಂಟು ಗಂಟೆಗಳ ಮೀರಿ ಕೆಲಸ ಮಾಡಿದರೆ, ಅವರಿಗೆ ಹೆಚ್ಚುವರಿ ದುಡಿಮೆಯ ಭತ್ಯೆ ನೀಡಬೇಕಾಗುತ್ತದೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಗುಂಡ್ಲುಪೇಟೆ: ಗ್ರಾ.ಪಂ ಚುನಾವಣೆ ವಿಜಯೋತ್ಸವ ನೆಪದಲ್ಲಿ ದಲಿತ ಕೇರಿಗೆ ನುಗ್ಗಿ ಹಲ್ಲೆ
ಮಹಿಳಾ ಉದ್ಯೋಗಿಗಳನ್ನು ಸಾಮಾನ್ಯ ಸಂದರ್ಭಗಳಲ್ಲಿ ಯಾವುದೇ ದಿನ ರಾತ್ರಿ 8.00 ನಂತರ ಕೆಲಸ ಮಾಡಲು ಅನುಮತಿ ಇಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.
“ಮಹಿಳಾ ಉದ್ಯೋಗಿಯಿಂದ ಲಿಖಿತ ಒಪ್ಪಿಗೆ ಪಡೆದ ನಂತರ ಉದ್ಯೋಗದಾತರು ಮಹಿಳೆಯ ಘನತೆ, ಗೌರವ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ಕೊಟ್ಟು ರಾತ್ರಿ 8.00 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕೆಲಸ ಮಾಡಲು ಅವಕಾಶ ನೀಡಬಹುದು” ಎಂದು ಸರ್ಕಾರ ಹೇಳಿದೆ.
ಈ ಹೊಸ ವ್ಯವಸ್ಥೆಯು ಮುಂದಿನ ಮೂರು ವರ್ಷಗಳವರೆಗೆ ಅನ್ವಯವಾಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 4 ಜನ ಆಯ್ಕೆ