ಕುಟುಂಬ ರಾಜಕಾರಣವನ್ನ ಪೋಷಿಸುತ್ತಾ ಇನ್ನೊಬ್ಬರತ್ತ ಕಲ್ಲೆಸೆಯುವ ಬಿಜೆಪಿಗೆ ತಮ್ಮ ಮಾತುಗಳಿಗಾಗಲಿ ಬದ್ಧತೆ ಪ್ರದರ್ಶಿಸಬೇಕೆನ್ನುವ ಕನಿಷ್ಠ ಪ್ರಜ್ಞೆ ಇಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿದೆ. ಬಿಜೆಪಿ ಅದನ್ನು ಪೋಷಿಸುತ್ತಾ ಇತರರ ಕಡೆ ಕಲ್ಲು ಎಸೆಯುತ್ತಿದೆ ಎಂದಿದೆ.
ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ತಂದೆ ಎಸ್.ಅರ್. ಬೊಮ್ಮಾಯಿಯವರು 1988 ರಿಂದ 1989 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಹೀಗಾಗಿ ಕುಟುಂಬ ರಾಜಕಾರಣದ ಕುರಿತು ಕಾಂಗ್ರೆಸ್ ಬಿಜೆಪಿಯನ್ನು ಕುಟುಕಿದೆ.
ಇದನ್ನೂ ಓದಿ: ಒಬ್ಬ ಭ್ರಷ್ಟನ ಬದಲು ಮತ್ತೊಬ್ಬ ಭ್ರಷ್ಟ: ಸಿಎಂ ಬದಲಾವಣೆ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ
ತಾನೇ "ಕುಟುಂಬ ರಾಜಕಾರಣ" ಎಂಬ ಗಾಜಿನ ಮನೆಯಲ್ಲಿ ಕುಳಿತು ಇತರರತ್ತ ಕಲ್ಲು ಎಸೆಯುವ @BJP4Karnataka ನಡೆ ಬಂಡತನದ್ದು!
ಪುಂಖಾನುಪುಂಖವಾಗಿ ಭಾಷಣ ಬಿಗಿಯುವ @narendramodi ರಾಜ್ಯದ ಸಿಎಂ ಆಯ್ಕೆಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದೇಕೆ!?
ಮಾಜಿ ಸಿಎಂ ಪುತ್ರನನ್ನು ಸಿಎಂ ಮಾಡುವಾಗ ತಮ್ಮ ಮಾತು ನೆನಪಾಗಲಿಲ್ಲವೇ ಮೋದಿಯವರಿಗೆ!? pic.twitter.com/mgHPIvi5G7
— Karnataka Congress (@INCKarnataka) July 28, 2021
“ತಾನೇ “ಕುಟುಂಬ ರಾಜಕಾರಣ” ಎಂಬ ಗಾಜಿನ ಮನೆಯಲ್ಲಿ ಕುಳಿತು ಇತರರತ್ತ ಕಲ್ಲು ಎಸೆಯುವ ಕರ್ನಾಟಕ ಬಿಜೆಪಿ ನಡೆ ಬಂಡತನದ್ದು!. ಪುಂಖಾನುಪುಂಖವಾಗಿ ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯದ ಸಿಎಂ ಆಯ್ಕೆಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದೇಕೆ!?. ಮಾಜಿ ಸಿಎಂ ಪುತ್ರನನ್ನು ಸಿಎಂ ಮಾಡುವಾಗ ತಮ್ಮ ಮಾತು ನೆನಪಾಗಲಿಲ್ಲವೇ ಮೋದಿಯವರಿಗೆ!?” ಎಂದು ಪ್ರಶ್ನಿಸಿದೆ.
ಕುಟುಂಬ ರಾಜಕಾರಣವನ್ನ ಪೋಷಿಸುತ್ತಾ ಇನ್ನೊಬ್ಬರತ್ತ ಕಲ್ಲೆಸೆಯುವ ಬಿಜೆಪಿಗೆ ತಮ್ಮ ಮಾತುಗಳಿಗಾಗಲಿ ಬದ್ಧತೆ ಪ್ರದರ್ಶಿಸಬೇಕೆನ್ನುವ ಕನಿಷ್ಠ ಪ್ರಜ್ಞೆ ಇಲ್ಲ.@BJP4Karnataka
ಒಬ್ಬ ಮಾಜಿ ಸಿಎಂ ಪುತ್ರನನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡಿ, ಇನ್ನೊಬ್ಬ ಮಾಜಿ ಸಿಎಂ ಪುತ್ರನನ್ನು ಸಿಎಂ ಮಾಡಿದ್ದೀರಿ!ಬಿಜೆಪಿ = ಫ್ಯಾಮಿಲಿ ಪಾರ್ಟಿ ಅಲ್ಲವೇ!?
— Karnataka Congress (@INCKarnataka) July 28, 2021
“ಕುಟುಂಬ ರಾಜಕಾರಣವನ್ನ ಪೋಷಿಸುತ್ತಾ ಇನ್ನೊಬ್ಬರತ್ತ ಕಲ್ಲೆಸೆಯುವ ಬಿಜೆಪಿಗೆ ತಮ್ಮ ಮಾತುಗಳಿಗಾಗಲಿ ಬದ್ಧತೆ ಪ್ರದರ್ಶಿಸಬೇಕೆನ್ನುವ ಕನಿಷ್ಠ ಪ್ರಜ್ಞೆ ಇಲ್ಲ. ಒಬ್ಬ ಮಾಜಿ ಸಿಎಂ ಪುತ್ರನನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡಿ, ಇನ್ನೊಬ್ಬ ಮಾಜಿ ಸಿಎಂ ಪುತ್ರನನ್ನು ಸಿಎಂ ಮಾಡಿದ್ದೀರಿ! ಬಿಜೆಪಿ = ಫ್ಯಾಮಿಲಿ ಪಾರ್ಟಿ ಅಲ್ಲವೇ!?” ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದೆ.
ಜನತಾ ಪರಿವಾರದಿಂದ ವಲಸೆ ಬಂದ @BSBommai ಅವರನ್ನು ಸಿಎಂ ಮಾಡಿರುವ ಬಿಜೆಪಿ ತನ್ನದೇ ಕಾರ್ಯಕರ್ತರನ್ನು ಸಿಎಂ ಆಗಬಲ್ಲಂತಹ ನಾಯಕರನ್ನಾಗಿ ಬೆಳೆಸಲಿಲ್ಲವೇ!?@siddaramaiahಅವರ ಬಗ್ಗೆ ಮಾತನಾಡುತ್ತಿದ್ದ @BJP4Karnataka ಈಗ ತಾವು ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ ಎಂಬಂತೆ ನಡೆದುಕೊಂಡಿದ್ದರ ಬಗ್ಗೆ ಚರ್ಚೆಗೆ ಸಿದ್ಧವೇ?
— Karnataka Congress (@INCKarnataka) July 28, 2021
ಇನ್ನೂ,”ಜನತಾ ಪರಿವಾರದಿಂದ ವಲಸೆ ಬಂದ ಬಸವರಾಜ್ ಬೊಮ್ಮಾಯಿ ಅವರನ್ನು ಸಿಎಂ ಮಾಡಿರುವ ಬಿಜೆಪಿ ತನ್ನದೇ ಕಾರ್ಯಕರ್ತರನ್ನು ಸಿಎಂ ಆಗಬಲ್ಲಂತಹ ನಾಯಕರನ್ನಾಗಿ ಬೆಳೆಸಲಿಲ್ಲವೇ!? ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಿದ್ದ ಕರ್ನಾಟಕ ಬಿಜೆಪಿ, ಈಗ ತಾವು ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ ಎಂಬಂತೆ ನಡೆದುಕೊಂಡಿದ್ದರ ಬಗ್ಗೆ ಚರ್ಚೆಗೆ ಸಿದ್ಧವೇ..?” ಎಂದು ಬಹಿರಂಗ ಚರ್ಚೆಗೆ ಕಾಂಗ್ರೆಸ್ ಆಹ್ವಾನಿಸಿದೆ.
“ವಿಫಲ ಹಾಗೂ ಪಕ್ಷಪಾತಿ ಗೃಹಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರ ಕೈಯ್ಯಲ್ಲಿ ರಾಜ್ಯ ಅಧೋಗತಿಗೆ ಇಳಿಯಲಿದೆ ಎಂಬುದಕ್ಕೆ ಕೆಲವು ಸಾಕ್ಷಿಗಳು.
1. ಮಂಗಳೂರು ಗಲಭೆ ನಿಯಂತ್ರಣದಲ್ಲಿ ವೈಫಲ್ಯ,
2.ದಲಿತ ಯುವಕನಿಗೆ ಮೂತ್ರ ಕುಡಿಸಿದ ಪೊಲೀಸರು
3. ಅತ್ಯಾಚಾರ ಆರೋಪಿ ಜಾರಕಿಹೊಳಿ ರಕ್ಷಣೆ
4. ಹಲ್ಲೆ ಆರೋಪಿ ಸಿದ್ದು ಸವದಿ ರಕ್ಷಣೆ
5. ಗಲಭೆಕೋರರ ಕೇಸ್ ಹಿಂತೆಗೆತ
ಎಂದು ಪ್ರಕರಣಗಳನ್ನು ಪಟ್ಟಿ ಮಾಡಿ, ಬಸವರಾಜ್ ಬೊಮ್ಮಾಯಿ ಆಡಳಿತದಲ್ಲಿ ರಾಜ್ಯ ಅಧೋಗತಿಗೆ ಇಳಿಯಲಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನೂ ಓದಿ: ಪ್ರಜೆಗಳ ಖಾಸಗಿ ಬದುಕಿನೊಳಗೆ ಇಣುಕಿ ನೋಡುವ ಚಟ ಸಂವಿಧಾನ ವಿರೋಧಿ: ಸಿದ್ದರಾಮಯ್ಯ


