Homeಅಂಕಣಗಳುಬಹುಜನ ಭಾರತ; ಫ್ಯಾಸಿಸ್ಟ್ ಕನ್ನಡಿಯನ್ನು ಒಡೆಯಿರೆಂಬ ಹರಾರಿ ಕಿವಿಮಾತು

ಬಹುಜನ ಭಾರತ; ಫ್ಯಾಸಿಸ್ಟ್ ಕನ್ನಡಿಯನ್ನು ಒಡೆಯಿರೆಂಬ ಹರಾರಿ ಕಿವಿಮಾತು

- Advertisement -
- Advertisement -

ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಮಹಾಸ್ಫೋಟಕ್ಕೆ ಭೂಮಂಡಲ ಸಾಕ್ಷಿಯಾಗಿದೆ. ಮಾಹಿತಿ ಅಥವಾ ಡೇಟಾವನ್ನು ಹೊಸ ಪ್ರಬಲ ಅಸ್ತ್ರ ಎಂದು ಬಣ್ಣಿಸಲಾಗುತ್ತಿದೆ. ಡೇಟಾವನ್ನು ನಿಯಂತ್ರಿಸುವಾತನೇ ಸರ್ವಶಕ್ತ ಎಂಬುದು ಈ ಯುಗದ ಹೊಸ ಸತ್ಯ.

ಚಿಂತಕರು, ತಂತ್ರಜ್ಞನಿಪುಣರು ಕೆಲವು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ ಈ ಅಂಶ ದಿನಗಳೆದಂತೆ ಮತ್ತಷ್ಟು ಗಟ್ಟಿಯಾಗಿ ಸ್ಫುಟವಾಗಿ ಹರಳುಗಟ್ಟತೊಡಗಿದೆ. ಜೊತೆಜೊತೆಗೆ ಸರ್ವಾಧಿಕಾರಗಳು, ಧ್ರುವೀಕರಣ ರಾಜಕಾರಣ ಬೇರಿಳಿಸುತ್ತಿರುವುದನ್ನು ಕಾಣುತ್ತಿದ್ದೇವೆ.

ತಮ್ಮ ಮೇಲೆ ಪ್ರಯೋಗಿಸಲಾಗಿರುವ ಮಂಕುಬೂದಿಯನ್ನು ಜನಸಮುದಾಯಗಳು ಕೊಡವಿಕೊಳ್ಳದಿದ್ದರೆ ಈ ಅಪಾಯ ಕೈಮೀರಲಿದೆ ಮತ್ತು ಗಹಗಹಿಸಲಿದೆ. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಈ ಸನ್ನಿವೇಶದಲ್ಲಿ ಇಸ್ರೇಲಿ ಮೂಲದ ಜಗತ್ಪ್ರಸಿದ್ಧ ಯುವ ಚಿಂತಕ ಯುವಾಲ್ ನೋವಾ ಹರಾರಿ ಅವರ ಕೆಳಕಂಡ ಚಿಂತನೆಗೆ ಕಿವಿಗೊಟ್ಟು ಧೇನಿಸಬೇಕಿದೆ.

ಹರಾರಿ ಹೇಳುತ್ತಾರೆ… ಆರಂಭದಲ್ಲಿ ಭೂವಿಸ್ತಾರ, ಆನಂತರ ಯಂತ್ರಗಳು, ಇದೀಗ ಡೇಟಾ ಬಹುದೊಡ್ಡ ಆಸ್ತಿಯೆಂದು ಪರಿಗಣಿಸಲಾಗಿದೆ. ಡೇಟಾವನ್ನು ನಿಯಂತ್ರಿಸುವವರು ಭಾರೀ ಜನಸಮೂಹಗಳನ್ನು ಮತ್ತು ಆ ಮೂಲಕ ಅಧಿಕಾರವನ್ನು ನಿಯಂತ್ರಿಸುತ್ತಾರೆ ಎನ್ನುವ ವಾದ ಊರ್ಜಿತಗೊಂಡಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗಿರುವ ಕ್ರಾಂತಿಯೇ ಉದಾರವಾದಿ ಜನತಂತ್ರದ ಪಾಲಿಗೆ ಬಲು ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಮಾಹಿತಿ ತಂತ್ರಜ್ಞಾನವು ಕಟಾವು ಮಾಡಿರುವ ಡೇಟಾದ ಮಹಾ ಇಳುವರಿಯು ಜನತಂತ್ರಗಳಿಗೆ ಶಕ್ತಿ ತುಂಬುವ ಬದಲು ಸರ್ವಾಧಿಕಾರಗಳ ಕೈ ಬಲಪಡಿಸಲಿದೆ

ಸರ್ವಾಧಿಕಾರಗಳು ತಮ್ಮ ಲಾಭಕ್ಕಾಗಿ ಎಲ್ಲ ಡೇಟಾವನ್ನು ಒಂದೆಡೆ ಕೇಂದ್ರೀಕರಿಸುವಲ್ಲಿ ಯಶಸ್ವಿಯಾಗಿವೆ. ತಂತ್ರಜ್ಞಾನ ಬೆಳೆದಂತೆಲ್ಲ ಅಪಾರ ಡೇಟಾವನ್ನು ಒಂದೆಡೆ ಸಂಸ್ಕರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸಲೀಸಾಗಿ ಹೋಗಿದೆ.

ಮಾಹಿತಿ ತಂತ್ರಜ್ಞಾನ ಮತ್ತು ಜೀವತಂತ್ರಜ್ಞಾನ (ಐಟಿ ಮತ್ತು ಬಿಟಿ) ಒಂದರೊಡನೆ ಮತ್ತೊಂದು ವಿಲೀನಗೊಳ್ಳುವ ವಿದ್ಯಮಾನವು ’ಆಲ್ಗರಿದಮ್’ಗಳನ್ನು ಸೃಷ್ಟಿಸಿದೆ. ಈ ’ಆಲ್ಗರಿದಮ್’ಗಳು ವ್ಯಕ್ತಿಗಳ ಅನಿಸಿಕೆ ಆಶಯ ಆಯ್ಕೆಗಳನ್ನು ಖುದ್ದು ಅವರೇ ಅರಿತಿರುವುದಕ್ಕಿಂತ ಹೆಚ್ಚು ನಿಖರವಾಗಿ ನಿಚ್ಚಳವಾಗಿ ಅರಿಯಬಲ್ಲವು. ಸರ್ಕಾರದಂತಹ ಸಂಸ್ಥೆಗಳು ಈ ತಂತ್ರಜ್ಞಾನದ ಲಾಭ ಪಡೆದು ಜನಸಮುದಾಯಗಳ ಒಲವು ನಿಲುವುಗಳನ್ನು ಮುಂದಾಗಿಯೇ ಕಂಡುಕೊಳ್ಳಬಲ್ಲವು. ಆವರ ಭಾವನೆಗಳನ್ನು ತಮಗೆ ಬೇಕಾದಂತೆ ತಿದ್ದಿ ತೀಡಬಲ್ಲವು. ಉದಾಹರಣೆಗೆ ತನ್ನ ಜನರಿಗೆ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಲಾರದ ಸರ್ವಾಧಿಕಾರಿಯೊಬ್ಬನು ತನ್ನ ಜನರು ತನ್ನನ್ನು ಪ್ರೀತಿಸುವಂತೆಯೂ ಪ್ರತಿಪಕ್ಷಗಳನ್ನು ದ್ವೇಷಿಸುವಂತೆಯೂ ಮಾಡಬಲ್ಲ. ಅಂತಹ ವಿರೋಧಾಭಾಸದ ಪರಿಸ್ಥಿತಿಯಲ್ಲಿ ಜನತಂತ್ರ ಉಳಿದು ಬೆಳೆಯಲಾರದು. ಅಂತಹ ವಾತಾವರಣದಲ್ಲಿ ಜನತಂತ್ರವು ಸರಿತಪ್ಪುಗಳನ್ನು ವಿವೇಚಿಸುವ ಮಾನವ ಆಲೋಚನಾ ಶಕ್ತಿಯ ಆಧಾರವನ್ನು ಕಳೆದುಕೊಳ್ಳುತ್ತದೆ. ಬುದ್ಧಿಯ ಜಾಗವನ್ನು ಭಾವುಕತೆ ಆವರಿಸುತ್ತದೆ. ನಮ್ಮ ಭಾವನೆಗಳನ್ನು ಹ್ಯಾಕ್ ಮಾಡಿ ಧ್ರುವೀಕರಣ ಮಾಡಿ ಜನತಂತ್ರವನ್ನು ನಾಶ ಮಾಡಲು ಬಳಸಿಕೊಳ್ಳಲಾಗುತ್ತದೆ. ಜನತಂತ್ರವು ಕೇವಲ ಒಂದು ಭಾವನಾತ್ಮಕ ಗೊಂಬೆಯಾಟ ಆಗಿಬಿಡುತ್ತದೆ.

ಇಂತಹ ಅಪಾಯವನ್ನು ತಪ್ಪಿಸಲು ಭಾರೀ ಡೇಟಾ ಒಂದೇ ಕಡೆ ಕೇಂದ್ರೀಕೃತ ಆಗುವುದನ್ನು ತಪ್ಪಿಸಬೇಕು. ಡೇಟಾ ನಿಯಂತ್ರಿಸುವವರು ನಮ್ಮ ಭಾವನೆಗಳನ್ನು ತಮ್ಮ ಅಗತ್ಯಗಳಿಗೆ ತಕ್ಕಂತೆ ತಿದ್ದಿ ತೀಡಿಕೊಳ್ಳುವುದಕ್ಕೆ ಆಗ ಸಾಧ್ಯವಾಗುವುದಿಲ್ಲ.

ದೈನಂದಿನ ಗ್ರಾಹಕ ಸರಕು ಸರಂಜಾಮುಗಳನ್ನು ನಮಗೆ ಮಾರಾಟ ಮಾಡಲು ಮಾಹಿತಿ ತಂತ್ರಜ್ಞಾನದ ಆಲ್ಗರಿದಂ ವಿಧಾನದ ಪ್ರಯೋಗ ಈಗಾಗಲೆ ಜಾರಿಯಲ್ಲಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜನತಂತ್ರದ ಶತ್ರುಗಳು ಇದೇ ವಿಧಾನವನ್ನು ಅನುಸರಿಸಿ ಭಯ, ದ್ವೇಷ ಹಾಗೂ ಒಣಪ್ರತಿಷ್ಠೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಇವುಗಳ ಮಾರಾಟ ಶೂನ್ಯದಲ್ಲಿ ಸಾಧ್ಯವಿಲ್ಲ. ಅವರು ಜನಸಮೂಹಗಳ ದೌರ್ಬಲ್ಯಗಳನ್ನು ಗುರುತಿಸಿ ಅವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ತಮ್ಮ ದೌರ್ಬಲ್ಯಗಳು ಜನತಂತ್ರದ ಶತ್ರುಗಳ ಕೈಯಲ್ಲಿನ ಅಸ್ತ್ರವಾಗದಂತೆ ಜನಸಮೂಹಗಳು ಜಾಗ್ರತೆ ವಹಿಸಬೇಕು. ದೌರ್ಬಲ್ಯಗಳನ್ನು ಅರಿತು ಇಂತಹ ಎಚ್ಚರಿಕೆ ವಹಿಸುವುದು ಜನರನ್ನು ಫ್ಯಾಸಿಸ್ಟ್ ಕನ್ನಡಿಯಿಂದಲೂ ಕಾಪಾಡುತ್ತದೆ. ಫ್ಯಾಸಿಸಮ್ ನಮ್ಮ ಒಣಪ್ರತಿಷ್ಠೆಯಂತಹ ದೌರ್ಬಲ್ಯಗಳನ್ನು ಬಳಸಿಕೊಂಡು ಬೇರೂರುತ್ತದೆ. ನಾವು ಇರುವುದಕ್ಕಿಂತಲೂ ಹೆಚ್ಚು ಸುಂದರವಾಗಿ ನಮ್ಮನ್ನು ತೋರುತ್ತದೆ. ನಮ್ಮನ್ನು ನಾವು ಚೆನ್ನಾಗಿ ಬಲ್ಲೆವಾದರೆ ಈ ಮೋಹಪರವಶತೆಗೆ ಬಲಿ ಬೀಳುವುದು ಸಾಧ್ಯವಿಲ್ಲ. ಸರ್ವಾಧಿಕಾರಿಗಳು ನಿಮ್ಮ ಕಣ್ಣೆದುರಿಗೆ ಫ್ಯಾಸಿಸ್ಟ್ ಕನ್ನಡಿಯೊಂದನ್ನು ಇಡುತ್ತಾರೆ. ಆ ಕನ್ನಡಿಯು ನಿಮ್ಮ ಎಲ್ಲ ಕುರೂಪವನ್ನು ಅಡಗಿಸಿಟ್ಟು ನೀವು ಇರುವುದಕ್ಕಿಂತಲೂ ಹೆಚ್ಚು ಸುಂದರವಾಗಿ ತೋರಿಸುತ್ತದೆ. ನಿಮಗೆ ವಾಸ್ತವದಲ್ಲಿ ಇಲ್ಲದಸಲ್ಲದ ಪ್ರಾಮುಖ್ಯತೆಯನ್ನು ತೊಡಿಸುತ್ತದೆ. ಈ ಅವಾಸ್ತವಿಕ ಕನ್ನಡಿಯನ್ನು ಒಡೆಯಿರಿ….


ಇದನ್ನೂ ಓದಿ: ಬಹುಜನ ಭಾರತ; ಜನತಂತ್ರದ ಸ್ತಂಭಗಳ ಮೇಲೆ ನಡೆದ ಕರಾಳ ದಾಳಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...