Homeಮುಖಪುಟರಾಜ್ಯದ ಜನರಿಗೆ ಹೆಚ್ಚು ‘ಬೀಫ್’ ತಿನ್ನುವಂತೆ ಹೇಳಿದ ಮೇಘಾಲಯದ ಬಿಜೆಪಿ ಸಚಿವ!

ರಾಜ್ಯದ ಜನರಿಗೆ ಹೆಚ್ಚು ‘ಬೀಫ್’ ತಿನ್ನುವಂತೆ ಹೇಳಿದ ಮೇಘಾಲಯದ ಬಿಜೆಪಿ ಸಚಿವ!

- Advertisement -
- Advertisement -

ಮೇಘಾಲಯ ಸರ್ಕಾರದಲ್ಲಿ ಸಚಿವರಾಗಿರುವ ಬಿಜೆಪಿಯ ಸಂಬೋರ್ ಶುಲ್ಲೈ ಅವರು, ರಾಜ್ಯದ ಜನರಿಗೆ ಕೋಳಿ, ಕುರಿ ಮತ್ತು ಮೀನುಗಳಿಗಿಂತ ಹೆಚ್ಚು ಬೀಫ್‌‌ ತಿನ್ನುವಂತೆ ಪ್ರೋತ್ಸಾಹಿಸಿದ್ದಾರೆ. ಕಳೆದ ವಾರವಷ್ಟೇ ಮೇಘಾಲಯದ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ಹಿರಿಯ ನಾಯಕರಾಗಿರುವ ಸಂಬೋರ್‌‌ ಶುಲ್ಲೈ, ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ತಿನ್ನಲು ಸ್ವತಂತ್ರರು ಎಂದು ಹೇಳಿದ್ದಾರೆ.

“ನಾನು ಜನರನ್ನು ಚಿಕನ್, ಮಟನ್ ಅಥವಾ ಮೀನಿಗಿಂತ ಹೆಚ್ಚು ಗೋಮಾಂಸವನ್ನು ತಿನ್ನಲು ಪ್ರೋತ್ಸಾಹಿಸುತ್ತೇನೆ. ಜನರನ್ನು ಹೆಚ್ಚು ಗೋಮಾಂಸ ತಿನ್ನಲು ಪ್ರೋತ್ಸಾಹಿಸುವ ಮೂಲಕ, ಬಿಜೆಪಿ ಗೋಹತ್ಯೆಯ ಮೇಲೆ ನಿಷೇಧ ಹೇರುತ್ತದೆ ಎಂಬ ಗ್ರಹಿಕೆಯನ್ನು ಹೋಗಲಾಡಿಸಬೇಕು” ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ನಿರ್ಗಮನ; ಜಾತಿ ಓಲೈಕೆ ಮತ್ತು ದೆಹಲಿ ದರ್ಬಾರ್‌ನ ಮುಂದಿನ ನಡೆಗಳೇನಾಗಿರಬಹುದು?

ಪಶು ಸಂಗೋಪನೆ ಮತ್ತು ಪಶುವೈದ್ಯ ಸಚಿವರಾಗಿರುವ ಸಂಬೋರ್‌, ನೆರೆಯ ರಾಜ್ಯದ ಹೊಸ ‘ಗೋಹತ್ಯೆ ಶಾಸನ’ದಿಂದ ಮೇಘಾಲಯಕ್ಕೆ ಜಾನುವಾರು ಸಾಗಾಣಿಕೆಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.

ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸಂಬೋರ್‌‌, ಮೇಘಾಲಯ ಮತ್ತು ಅಸ್ಸಾಂ ನಡುವಿನ ಗಡಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಜನರನ್ನು ರಕ್ಷಿಸಲು ರಾಜ್ಯವು ತನ್ನ ಪೊಲೀಸ್ ಪಡೆಯನ್ನು ಬಳಸಿಕೊಳ್ಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

“ಅಸ್ಸಾಂನ ಜನರು ಗಡಿ ಪ್ರದೇಶದಲ್ಲಿ ನಮ್ಮ ಜನರಿಗೆ ಕಿರುಕುಳ ನೀಡುತ್ತಿದ್ದರೆ, ಮಾತನಾಡಲು ಮತ್ತು ಚಹಾ ಕುಡಿಯುವ ಸಮಯ ಇದಲ್ಲ. ನಾವು ಪ್ರತಿಕ್ರಿಯಿಸಬೇಕು, ಸ್ಥಳದಲ್ಲೇ ಕಾರ್ಯನಿರ್ವಹಿಸಬೇಕು” ಎಂದು ಅವರು ಹೇಳಿದ್ದು, ಆದರೆ, ತಾನು ಹಿಂಸೆಯ ಪರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಿಂದ ಗೋಮಾಂಸ ಆಮದು ಮಾಡಿಕೊಳ್ಳುವುದಾಗಿ ಗೋವಾ ಸಿಎಂ ಹೇಳಿಕೆ: ಕಾಂಗ್ರೆಸ್ ಟೀಕೆ

“ನಾವು ನಮ್ಮ ಜನರನ್ನು ರಕ್ಷಿಸುವ ಮನೋಭಾವವನ್ನು ಹೊಂದಿರಬೇಕು, ನಾವು ನಮ್ಮ ಬಲವನ್ನು ಬಳಸಿಕೊಳ್ಳಬೇಕು, ಅಸ್ಸಾಂ ಪೊಲೀಸರೊಂದಿಗೆ ಮಾತನಾಡಲು ಪೊಲೀಸರು ಮುಂಚೂಣಿಗೆ ಹೋಗಬೇಕು” ಎಂದು ಅವರು ಹೇಳಿದ್ದಾರೆ.

ಮಿಜೋರಾಂ ಪೋಲಿಸರು ತನ್ನ ಭೂಮಿ ಮತ್ತು ಜನರನ್ನು ರಕ್ಷಿಸಲು ನಿಂತಿದ್ದಾರೆ ಎಂದು ಶ್ಲಾಘಿಸಿದ ಸಂಬೋರ್‌, ಗಡಿ ನಿವಾಸಿಗಳನ್ನು ರಕ್ಷಿಸುವ ವಿಚಾರದಲ್ಲಿ ಮೇಘಾಲಯ ಪೊಲೀಸರು ಯಾವಾಗಲೂ ಹಿಂದಡಿಯಿಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

“ಜನರನ್ನು ರಕ್ಷಿಸಲು ಪೊಲೀಸರು ಮುಂಚೂಣಿಯಲ್ಲಿರುವಂತೆ ಉನ್ನತ ಅಧಿಕಾರಿಗಳು ಆದೇಶ ನೀಡಬೇಕು. ನಿಮ್ಮ ಮನೆಗೆ ಶತ್ರುಗಳು ಬಂದರೆ, ನಿಮ್ಮ ಮತ್ತು ನಿಮ್ಮ ಹೆಂಡತಿ ಮತ್ತು ಮಕ್ಕಳ ಮೇಲೆ ದಾಳಿ ಮಾಡಿದರೆ, ನೀವು ಕೂಡ ಆತ್ಮರಕ್ಷಣೆಗಾಗಿ ದಾಳಿ ಮಾಡಬೇಕಾಗುತ್ತದೆ. ಅದೇ ಕೆಲಸವನ್ನು ನಮ್ಮ ಗಡಿಗಳಲ್ಲಿ ಮಾಡಬೇಕು. ನಿಮ್ಮ ಮನೆಯನ್ನು ಕದಿಯಲು ಅಥವಾ ದೋಚಲು ಶತ್ರುಗಳು ಬಂದರೆ, ನೀವು ನಿಮ್ಮನ್ನು ರಕ್ಷಿಸಿಕೊಳ್ಳಬೇಕು, ಅದು ಕಾನೂನುಬದ್ಧವಾಗಲಿ ಅಥವಾ ಕಾನೂನುಬಾಹಿರವಾಗಲಿ, ನೀವು ರಕ್ಷಿಸಿಕೊಳ್ಳಲೇಬೇಕು” ಎಂದು ಸಂಬೋರ್‌‌ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಹುಲಿಗಳಿಗೆ ಗೋಮಾಂಸ ನೀಡುವುದಕ್ಕೆ ಬಿಜೆಪಿ ಪ್ರತಿಭಟನೆ: ಹಾಗಾದರೆ ಇಡ್ಲಿ-ಸಾಂಬಾರ್ ಕೊಡಿ ಎಂದ ನೆಟ್ಟಿಗರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತ್ತೆ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

ಮತ್ತೇ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

0
ಜೂನ್ 10 ರಿಂದ ಗೋಧಿಗೆ ಬೋನಸ್ ಮತ್ತು ಭತ್ತ ಬಿತ್ತನೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಒತ್ತಾಯಿಸಿರುವ ಪಂಜಾಬ್‌ನ ರೈತರು ಮೇ 17 ರ ಮಂಗಳವಾರದಂದು ಚಂಡೀಗಢ...