ಟೊಕಿಯೋ ಒಲಿಂಪಿಕ್‌ನ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಸಮಿಫೈನಲ್ ತಲುಪಿದ್ದ ದೇಶದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಚೈನೀಸ್ ತೈಪೈನ ಥಾಯಿ ತ್ಸು ಯಿಂಗ್‌‌ ಅವರ ವಿರುದ್ದ 18-12, 12-21 ಅಂತರದಲ್ಲಿ ಸೋತಿದ್ದಾರೆ. ಈ ಮೂಲಕ ಫೈನಲ್‌ ತಲುಪುವ ಅವರ ಕನಸು ಭಗ್ನಗೊಂಡಿದೆ.

ಕಂಚಿನ ಪದಕಕ್ಕಾಗಿ ಪಿವಿ ಸಿಂಧು ಭಾನುವಾರ ಚೀನಾದ ಹಿ ಬಿಂಗ್‌ಜಾವ್‌‌ ಅವರ ವಿರುದ್ದ ಸೆಣಸಲಿದ್ದಾರೆ. ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಸಿಂಧು ಅವರು ಬೆಳ್ಳಿ ಪದಕ ಗೆದ್ದಿದ್ದರು. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿಯನ್ನು ಸಿಂಧು 21-13, 22-20 ಅಂತರದಲ್ಲಿ ಸೋಲಿಸಿದ್ದರು.

ಇದನ್ನೂ ಓದಿ: ಒಲಿಂಪಿಕ್: ಭಾರತದ ಡಿಸ್ಕಸ್‌ ಎಸೆತ ಆಟಗಾರ್ತಿ‌ ಕಮಲ್‌‌ಪ್ರೀತ್‌ ಕೌರ್‌ ಫೈನಲ್‌ಗೆ

ಪಿವಿ ಸಿಂಧು ಸತತ ಎರಡು ಒಲಿಪಿಂಕ್‌ಗಳಲ್ಲಿ ಸೆಮಿಫೈನಲ್‌ಗೆ ಏರಿದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದಾರೆ. ಪಿವಿ ಸಿಂಧು ಮತ್ತು ಥಾಯಿ ತ್ಸು ಯಿಂಗ್‌‌ ಇದುವರೆಗೂ ಒಟ್ಟು 21 ಆಟಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಪಿವಿ ಸಿಂಧು 7 ಆಟಗಳಲ್ಲಿ ಮಾತ್ರವೆ ಜಯಗಳಿಸಿದ್ದಾರೆ.

ಶನಿವಾರ ಭಾರತದ ಡಿಸ್ಕಸ್ ಎಸೆತಗಾರ್ತಿ‌ ಕಮಲ್‌ಪ್ರೀತ್ ಕೌರ್ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು, ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು ಫೈನಲ್‌ಗೆ ತಲುಪಿದ್ದಾರೆ. 25 ವರ್ಷದ ಕಮಲ್‌ಪ್ರೀತ್‌‌‌ ಬಿ ಗ್ರೂಪ್‌ನಲ್ಲಿದ್ದು ತನ್ನ ಮೂರನೇ ಮತ್ತು ಅಂತಿಮ ಎಸೆತದಲ್ಲಿ ಡಿಸ್ಕಸ್ ಅನ್ನು 64 ಮೀಟರ್ ದೂರಕ್ಕೆ ಎಸೆದು ಎರಡನೆ ಸ್ಥಾನಕ್ಕೆ ತಲುಪಿದ್ದಾರೆ. ಫೈನಲ್‌ ಪಂದ್ಯವು ಆಗಸ್ಟ್‌‌ 2ರ ಸೋಮವಾರದಂದು ನಡೆಯಲಿದ್ದು, ಒಟ್ಟ 12 ಮಂದಿ ಸ್ಪರ್ಧಿಗಳಿದ್ದಾರೆ.

ಭಾರತದ ಬಾಕ್ಸರ್‌‌‌ ಲವ್ಲಿನಾ ಬೊರ್ಗೊಹೈನ್‌ ಅವರು ಈ ಹಿಂದಿನ ವಿಶ್ವ ಚಾಂಪಿಯನ್‌ ಚೀನಾದ ತೈಪೆಯ ಚೆನ್ ನಿಯೆನ್ ಚಿನ್ ಅವರನ್ನು ಸೋಲಿಸಿ ಮಹಿಳಾ ವೆಲ್ಟರ್‌ವೈಟ್ (69 ಕೆಜಿ) ವಿಭಾಗದ ಸೆಮಿಫೈನಲ್‌ಗೆ ತಲುಪಿದ್ದಾರೆ. ಈ ಮೂಲಕ ಅವರು ಭಾತರಕ್ಕೆ ಕಂಚಿನ ಪದಕವನ್ನು ಖಾತ್ರಿ ಪಡಿಸಿದ್ದಾರೆ. ಲವ್ಲಿನಾ ಮುಂದಿನ ಪಂದ್ಯವನ್ನು ಆಗಸ್ಟ್‌‌ 4 ರ ಬುಧವಾರದಂದು ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ದ ಸೆಣಸಲಿದ್ದಾರೆ. ಅಲ್ಲಿ ಗೆದ್ದರೆ ಅವರು ಚಿನ್ನದ ಪದಕ ಪಡೆಯಲು ಒಂದು ಪಂದ್ಯವನ್ನು ಆಡಬೇಕಿದೆ.

ಇದನ್ನೂ ಓದಿ: ಒಲಿಂಪಿಕ್: ಭಾರತದ ಡಿಸ್ಕಸ್‌ ಎಸೆತ ಆಟಗಾರ್ತಿ‌ ಕಮಲ್‌‌ಪ್ರೀತ್‌ ಕೌರ್‌ ಫೈನಲ್‌ಗೆ

ಭಾರತೀಯ ಮಹಿಳಾ ಹಾಕಿ ತಂಡವು ಶುಕ್ರವಾರ ಐರ್ಲೆಂಡ್ ವಿರುದ್ಧ 1-0 ಅಂತರದಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿದ್ದು, ಇಂದು ಮತ್ತೆ ಎರಡನೆ ಗೆಲುವನ್ನು ಸೌತ್‌ ಆಫ್ರಿಕಾ ತಂಡ ಎದುರು ಸಾಧಿಸಿದೆ. ‘ಎ’ ಫೋಲ್‌ನಲ್ಲಿರುವ ಭಾರತ ಮಹಿಳಾ ತಂಡವು ಸೌತ್‌ ಆಫ್ರಿಕಾ ಎದುರು 4-3 ಅಂತರದಲ್ಲಿ ಗೆದ್ದುಕೊಂಡಿದೆ.

ಪುರುಷರ ಸೂಪರ್‌ ಹೆವಿ ವೈಟ್‌ ಬಾಕ್ಸಿಂಗ್‌ನಲ್ಲಿ ಗುರುವಾರದಂದು ಭಾರತದ ಸತೀಶ್ ಕುಮಾರ್ ಅವರು ಜಮೈಕಾದ ರಿಕಾರ್ಡೊ ಬ್ರೌನ್ ವಿರುದ್ಧ 4: 1 ರ ಸುತ್ತಿನಲ್ಲಿ ಗೆದ್ದು, ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಭಾನುವಾರದಂದು ಉಜ್ಬೇಕಿಸ್ತಾನದ ಬಾಖೋದಿರ್‌ ಜಲಾಲೋವ್ ಅವರನ್ನು ಎದುರಿಸಲಿದ್ದಾರೆ.

ಪುರುಷರ ಹಾಕಿ ಪಂದ್ಯದಲ್ಲಿ ಭಾರತವು ಜಪಾನ್‌ ವಿರುದ್ದ 5-3 ಅಂತರದಲ್ಲಿ ಜಯಭೇರಿ ಬಾರಿಸಿ, ಕ್ವಾರ್ಟರ್‌ ಫೈನಲ್‌ ತಲುಪಿದೆ. ಮುಂದಿನ ಪಂದ್ಯವು ಗ್ರೇಟ್‌ ಬ್ರಿಟನ್ ಜೊತೆ ಭಾನುವಾರ ಸಂಜೆ 05:30 ಗೆ ನಡೆಯಲಿದೆ.

ಇನ್ನು, ಗುರುವಾರ ಪುರುಷರ ವೈಯಕ್ತಿಕ ಬಿಲ್ಲುಗಾರಿಕೆಯಲ್ಲಿ ಅತನು ದಾಸ್ ಅವರು 2012 ರ ಚಾಂಪಿಯನ್‌ ದಕ್ಷಣ ಕೊರಿಯಾದ ಓಹ್ ಜಿನ್ ಹೈಕಿನ್ ಅವರನ್ನು ಸೋಲಿಸಿ ಪ್ರೀ ಕ್ವಾಟರ್‌ ಫೈನಲ್‌ಗೆ ತಲುಪಿದ್ದರು. ಆದರೆ ಶನಿವಾರ(ಇಂದು) ನಡೆದ ಜಪಾನಿನ ತಕಹಾರು ಫುರುಕವ ಅವರ ವಿರುದ್ದ 4-6 ಅಂತರದಲ್ಲಿ ಅವರು ಸೋಲುಂಡಿದ್ದಾರೆ.

ಟೋಕಿಯೊ ಒಲಿಂಪಿಕ್‌ನಲ್ಲಿ 49 ಕೆಜಿ ವೈಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಮಣಿಪುರ ಮೂಲದ ಮಿರಾಬಾಯಿ ಚಾನು ಅವರು ಬೆಳ್ಳಿ ಗೆದ್ದುಕೊಂಡಿದ್ದರು. ಇದರ ನಂತರ ಭಾರತಕ್ಕೆ ಬಾಕ್ಸರ್‌‌‌ ಲವ್ಲಿನಾ ಬೊರ್ಗೊಹೈನ್‌ ಮೂಲಕ ಎರಡನೆ ಪದಕ ಖಚಿತಗೊಂಡಿದೆ.

ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌: ಭಾರತಕ್ಕೆ ಮತ್ತೊಂದು ಪದಕ ಖಚಿತ!

LEAVE A REPLY

Please enter your comment!
Please enter your name here