Homeಕ್ರೀಡೆಒಲಂಪಿಕ್ಮುರಿದ ಹಾಕಿ ಸ್ಟಿಕ್, ಸೆಲ್ವಾರ್ ಕಮೀಜ್‌ನಲ್ಲಿ ಅಭ್ಯಾಸ ನಡೆಸಿದ್ದೆ: ಸಾಧನೆ ಹಿಂದಿನ ನೋವಿನ ಕಥನ ಬಿಚ್ಚಿಟ್ಟ...

ಮುರಿದ ಹಾಕಿ ಸ್ಟಿಕ್, ಸೆಲ್ವಾರ್ ಕಮೀಜ್‌ನಲ್ಲಿ ಅಭ್ಯಾಸ ನಡೆಸಿದ್ದೆ: ಸಾಧನೆ ಹಿಂದಿನ ನೋವಿನ ಕಥನ ಬಿಚ್ಚಿಟ್ಟ ರಾಣಿ ರಾಂಪಾಲ್

ಮಳೆ ಹೆಚ್ಚಾಗಿ ಪ್ರವಾಹಕ್ಕೆ ತುತ್ತಾಗುತ್ತಿದ್ದ ಮನೆ, ಅರೆ ಹೊಟ್ಟೆ, ಮಲಗಲು ಬಿಡದೇ ಕಿವಿಯಲ್ಲಿ ಗುಯ್‌ ಗುಟ್ಟುತ್ತಿದ್ದ ಸೊಳ್ಳೆ.... ಇದು ನನ್ನ ಕುಟುಂಬದ ಪ್ರತಿನಿತ್ಯದ ಬದುಕಾಗಿತ್ತು.

- Advertisement -
- Advertisement -

ರಾಣಿ ರಾಂಪಾಲ್‌ ನಾಯಕತ್ವದಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು 2020ರ ಟೋಕಿಯೋ ಒಲಂಪಿಕ್ಸ್‌ನಲ್ಲಿ ಅತ್ಯುತ್ತಮ ಆಟವಾಡುತ್ತಿದ್ದು, ಸೆಮಿ ಫೈನಲ್ ಪ್ರವೇಶಿಸಿದೆ. ಹರಿಯಾಣದ ಪುಟ್ಟ ಹಳ್ಳಿಯಿಂದ ಬಂದ ರಾಣಿ ರಾಂಪಾಲ್ ಹಾಕಿ ಕ್ರೀಡೆಯತ್ತ ಗಮನ ಸೆಳೆದಿದ್ದು ಹೇಗೆ? ಕುಟುಂಬದ ಬೆಂಬಲ ಹೇಗಿತ್ತು ಎಂಬುದರ ಬಗ್ಗೆ ಅವರೇ ಹೇಳಿರುವ ಮಾತುಗಳು ಇಲ್ಲಿವೆ.

ಮಳೆ ಹೆಚ್ಚಾಗಿ ಪ್ರವಾಹಕ್ಕೆ ತುತ್ತಾಗುತ್ತಿದ್ದ ಮನೆ, ಅರೆ ಹೊಟ್ಟೆ, ಮಲಗಲು ಬಿಡದೇ ಕಿವಿಯಲ್ಲಿ ಗುಯ್‌ ಗುಟ್ಟುತ್ತಿದ್ದ ಸೊಳ್ಳೆ…. ಇದು ನನ್ನ ಕುಟುಂಬದ ಪ್ರತಿನಿತ್ಯದ ಬದುಕಾಗಿತ್ತು. ಅಪ್ಪ ತಳ್ಳುಗಾಡಿಯಲ್ಲಿ ಸಾಮಾನು ಸಾಗಿಸುವ ಕೂಲಿ ಕೆಲಸ ಮಾಡುತ್ತಿದ್ದರು. ಅಮ್ಮ ಮನೆಕೆಲಸ ಮಾಡುತ್ತಿದ್ದರು. ನನ್ನ ಹೆತ್ತವರು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿ ಜೀವನ ನಡೆಸುತ್ತಿದ್ದರು. ಇವೆಲ್ಲದರಿಂದ ತಪ್ಪಿಸಿಕೊಳ್ಳಲು ನಾನು ಬಯಸುತ್ತಿದ್ದೆ.

ನನ್ನ ಮನೆಯ ಹತ್ತಿರ ಹಾಕಿ ಅಕಾಡೆಮಿ ಇತ್ತು. ಅಲ್ಲಿ ನಡೆಯುತ್ತಿದ್ದ ಹಾಕಿ ಆಟಗಾರರ ಅಭ್ಯಾಸವನ್ನು ಪ್ರತಿನಿತ್ಯ ಗಂಟೆಗಟ್ಟಲೆ ನೋಡುತ್ತಿದ್ದೆ. ಅಷ್ಟೆ ಅಲ್ಲ. ನಾನು ಕೂಡ ಆಡಬೇಕೆಂದು ಬಯಸುತ್ತಿದ್ದೆ. ಹಾಕಿ ಅಭ್ಯಾಸ ಮಾಡಲು ಹಾಕಿ ಸ್ಟಿಕ್‌ ಅಗತ್ಯವಿತ್ತು. ನನ್ನ ಅಪ್ಪನಿಗೆ ದಿನಕ್ಕೆ ದೊರೆಯುತ್ತಿದ್ದ 80 ರೂ ಕೂಲಿಯಲ್ಲಿ ಇಡೀ ಸಂಸಾರವನ್ನು ನಡೆಸುತ್ತಿದ್ದರು. ಆದ್ದರಿಂದ ನಾನು ಹಾಕಿ ಸ್ಟಿಕ್‌ ಖರೀದಿಸುವುದು ಕನಸಾಗಿತ್ತು.

ಆದರೆ ನಾನು ಮಾತ್ರ ಪ್ರತಿದಿನ ಆ ಅಕಾಡೆಮಿಯಲ್ಲಿ ಆಟ ಅಭ್ಯಾಸ ಮಾಡಿಸುತ್ತಿದ್ದ ತರಬೇತುದಾರರ (ಕೋಚ್‌) ಹತ್ತಿರ ಹೋಗಿ ನನಗೂ ಆಟ ಹೇಳಿಕೊಡಿ ಎಂದು ದುಂಬಾಲು ಬೀಳುತ್ತಿದ್ದೆ. ಆದರೆ ಕೋಚ್‌, ’ಪ್ರಾಕ್ಟೀಸ್‌ ಸಮಯದಲ್ಲಿ ಓಡಲು, ಆಡುವಷ್ಟು ಶಕ್ತಿ ನಿನ್ನಲ್ಲಿಲ್ಲ’ ಎನ್ನುತ್ತಿದ್ದ ಅವರು ನಾನು ಅಪೌಷ್ಟಿಕತೆಯಿಂದ ಬಳಲುತ್ತಿದ್ದದ್ದರಿಂದ ನನಗೆ ತರಬೇತಿ ನೀಡಲು ತಿರಸ್ಕರಿಸುತ್ತಿದ್ದರು.

ಒಂದು ದಿನ ಆಟದ ಮೈದಾನದಲ್ಲಿ ನನಗೊಂದು ಮುರಿದ ಹಾಕಿ ಸ್ಟಿಕ್‌ ಸಿಕ್ಕಿತು. ಅದನ್ನೇ ಹಿಡಿದುಕೊಂಡು ಆಟವಾಡಲು ಆರಂಭಿಸಿದೆ. ನನ್ನ ಹತ್ತಿರ ಟ್ರೈನಿಂಗ್‌ಗೆ ಅಗತ್ಯವಿರುವ ಬಟ್ಟೆ ಇರಲ್ಲಿಲ್ಲ. ನಾನು ಹಾಕಿಕೊಳ್ಳುತ್ತಿದ್ದ ಸೆಲ್ವಾರ್‌ ಕಮೀಜ್‌ನಲ್ಲಿಯೇ ನಾನು ಓಡುತ್ತಿದ್ದೆ. ನಾನು ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ನಿರ್ಧರಿಸಿದ್ದೆ. ಅವಕಾಶಕ್ಕಾಗಿ ಕೋಚ್‌ ಬಳಿ ವಿನಂತಿಸಿಕೊಂಡೆ. ಕೊನೆಗೂ ಕಷ್ಟಪಟ್ಟು ಅವರನ್ನು ಒಪ್ಪಿಸಿದೆ.

ರಾಣಿ ರಾಂಪಾಲ್‌

ಈ ಬಗ್ಗೆ ಕುಟುಂಬದವರಿಗೆ ತಿಳಿಸಿದಾಗ, ‘ಹೆಣ್ಣುಮಕ್ಕಳು ಮನೆಯಲ್ಲಿ ಕೆಲಸ ಮಾಡುತ್ತಾರೆ. ನಾವು ನಿನ್ನನ್ನು ಸ್ಕರ್ಟ್‌‌ನಲ್ಲಿ ಆಡಲು ಬಿಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ನಾನು ಅವರ ಬಳಿ ವಿನಂತಿಸಿಕೊಂಡೆ. ‘ದಯವಿಟ್ಟು ನನಗೆ ಹೋಗಲು ಬಿಡಿ, ನಾನು ಸೋತಿದ್ದೇ ಆದರೆ ನೀವೇಳಿದಂತೆ ಕೇಳುವೆ’ ಎಂದು ಕೇಳಿಕೊಂಡೆ. ಕೊನೆಗೆ ನನ್ನ ಕುಟುಂಬ ಒಲ್ಲದ ಮನಸ್ಸಿನಿಂದಲೇ ನನಗೆ ಆಟವಾಡಲು ಸಮ್ಮತಿ ನೀಡಿತ್ತು.

ಹಾಕಿ ಕೋಚಿಂಗ್‌ ಸೂರ್ಯ ಉದಯಿಸುವ ಮುನ್ನವೇ ಆರಂಭವಾಗುತ್ತಿತ್ತು. ನಾನು ಕೂಡ ಬೆಳಗ್ಗೆ ಬೇಗ ಎದ್ದು ಮೈದಾನಕ್ಕೆ ಹೋಗಬೇಕಾಗುತ್ತಿತ್ತು. ನಮ್ಮ ಮನೆಯಲ್ಲಿ ಗಡಿಯಾರ ಇರಲಿಲ್ಲ. ಹಾಗಾಗಿ ಅಮ್ಮ ಎದ್ದು ಆಕಾಶವನ್ನು ನೋಡಿ ನನ್ನನ್ನು ಎಚ್ಚರಿಸುತ್ತಿದ್ದರು.

ಅಕಾಡೆಮಿಯಲ್ಲಿ ‌ಪ್ರತಿಯೊಬ್ಬ ಆಟಗಾರನು ಅರ್ಧ ಲೀಟರ್‌ ಹಾಲು ತರಬೇಕು ಎಂಬುದು ಕಡ್ಡಾಯವಾಗಿತ್ತು. ನಮ್ಮ ಕುಟುಂಬದಲ್ಲಿ ಕಾಲು ಲೀಟರ್‌ ಹಾಲು ಸಿಗುವುದು ಕಷ್ಟವಾಗಿತ್ತು. ಹಾಗಾಗಿ ನಾನು ಯಾರಿಗೂ ತಿಳಿಯದ ಹಾಗೆ ಸ್ವಲ್ಪ ಹಾಲಿಗೆ ಹೆಚ್ಚು ನೀರನ್ನು ಮಿಶ್ರಣ ಮಾಡಿ ಕುಡಿಯುತ್ತಿದ್ದೆ. ಏಕೆಂದರೆ ನಾನು ಹೇಗಾದರೂ ಮಾಡಿ ಆಟವಾಡಲು ಬಯಸುತ್ತಿದ್ದೆ.

ನನ್ನ ಕೋಚ್‌ ನನಗೆ ಬೆನ್ನೆಲುಬಾಗಿ ನಿಂತಿದ್ದರು. ನನಗಾಗಿ ಅವರು ಹಾಕಿ ಕಿಟ್‌ ಮತ್ತು ಶೂಗಳನ್ನು ಕೊಡಿಸಿದರು. ಅವರ ಕುಟುಂಬದೊಂದಿಗೆ ಬೆರೆಯಲು ಅವಕಾಶ ನೀಡಿದರು. ನನ್ನ ಊಟದ ಅಗತ್ಯಗಳನ್ನು ಅವರೇ ನೋಡಿಕೊಂಡರು. ಕಷ್ಟಪಟ್ಟು ನಾನು ತರಬೇತಿ ಪಡೆಯುತ್ತಿದ್ದೆ. ಒಂದು ದಿನವೂ ತರಬೇತಿಯನ್ನು ತಪ್ಪಿಸುತ್ತಿರಲಿಲ್ಲ.

ನನ್ನ ಮೊದಲ ಸಂಬಳ ಈಗಲೂ ನೆನಪಿದೆ. ಟೂರ್ನಮೆಂಟ್‌ ಒಂದರಲ್ಲಿ ನಾನು 500ರೂ ಗೆದ್ದಿದ್ದೆ. ಆ ಹಣವನ್ನು ಅಪ್ಪನಿಗೆ ಕೊಟ್ಟಿದ್ದೆ. ಅಲ್ಲಿಯವರೆಗೂ ಎಂದೂ ಅಪ್ಪ ಅಷ್ಟೊಂದು ಹಣವನ್ನು ತನ್ನ ಕೈನಲ್ಲಿ ಹಿಡಿದಿರಲಿಲ್ಲ. ‘ಒಂದಲ್ಲಾ ಒಂದು ದಿನ ನಾವು ನಮ್ಮ ಸ್ವಂತ ಮನೆಯನ್ನು ಕಟ್ಟಿಸುತ್ತೇನೆ’ ಎಂದು ಅಂದು ನಾನು ನನ್ನ ಕುಟುಂಬದವರಿಗೆ ಪ್ರಮಾಣ ಮಾಡಿದೆ. ಆ ನಿಟ್ಟಿನಲ್ಲಿ ನನ್ನೆಲ್ಲಾ ಶಕ್ತಿಯನ್ನು ಬಳಸಿ ಎಲ್ಲವನ್ನು ಮಾಡಿದ್ದೇನೆ.

ರಾಣಿ ರಾಂಪಾಲ್‌
PC: Reuters / Bernadett Szabo

ನನ್ನ ರಾಜ್ಯವನ್ನು ಪ್ರತಿನಿಧಿಸಿ ಹಲವಾರು ಚಾಂಪಿಯನ್‌ಶಿಪ್‌ಗಳಲ್ಲಿ ಆಡಿದ್ದ ನನಗೆ, ನನ್ನ 15ನೇ ವಯಸ್ಸಿನಲ್ಲಿ ರಾಷ್ಟ್ರೀಯ ತಂಡಕ್ಕೆ ಸೇರುವಂತೆ ಕರೆ ಬಂದಿತು. ಇಷ್ಟೆಲ್ಲಾ ಅವಕಾಶಗಳು ನನಗೆ ದೊರೆತಿದ್ದರೂ ನನ್ನ ಸಂಬಂಧಿಕರು ಮಾತ್ರ ಯಾವಾಗ ಮದುವೆಯಾಗುತ್ತೀಯಾ? ಎಂದು ಕೇಳುತ್ತಿದ್ದರು. ಆದರೆ ಅಪ್ಪ, ‘ನಿನ್ನ ಮನಸ್ಸಿಗೆ ಇಷ್ಟವಾಗುವವರೆಗೂ ಆಟವಾಡು’ ಎಂದರು. ನನ್ನ ಕುಟುಂಬದ ಬೆಂಬಲದೊಂದಿಗೆ ನಾನು ಆಟದ ಕಡೆ ಗಮನ ಹರಿಸಿದೆ. ಅಂತಿಮವಾಗಿ ನಾನು ಭಾರತದ ಮಹಿಳಾ ಹಾಕಿ ತಂಡದ ನಾಯಕಿಯಾಗಿದ್ದೇನೆ.

ಇದಾದ ಸ್ವಲ್ಪ ಸಮಯದ ನಂತರ ಅಪ್ಪನೊಂದಿಗೆ ಅವರ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೇವು. ಅವರು ತಮ್ಮ ಮೊಮ್ಮಗಳನ್ನು ಕರೆದು ನನಗೆ ‘ಅವಳು ನಿನ್ನಿಂದ ಸ್ಫೂರ್ತಿ ಪಡೆದಿದ್ದಾಳೆ. ಅವಳೂ ಹಾಕಿ ಆಟಗಾರಳಾಗಲು ಬಯಸುತ್ತಾಳೆ’ ಎಂದರು. ನನಗೆ ತುಂಬಾ ಸಂತೋಷವಾಯಿತು. ದುಖಃ ಒತ್ತರಿಸಿ ಬಂತು. ಕಣ್ಣೀರು ತಡೆಯಲಾಗಲಿಲ್ಲ.

2017ರಲ್ಲಿ, ಅಂತಿಮವಾಗಿ ನಾನು ನನ್ನ ಕುಟುಂಬಕ್ಕೆ ನೀಡಿದ್ದ ಭರವಸೆ ಈಡೇರಿಸಿದೆ. ಅವರಿಗಾಗಿ ಸ್ವಂತ ಮನೆಯನ್ನು ಖರೀದಿಸಿದೆ. ಆ ದಿನ ನಾವು ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡು ಒಟ್ಟಿಗೆ ಅಳುತ್ತಿದ್ದೆವು.

ಇದು ಇಲ್ಲಿಗೆ ಮುಗಿದಿಲ್ಲ. ನನ್ನ ಕೋಚ್‌ ಟೊಕಿಯೋ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸು ಕಂಡಿದ್ದರು. ಈ ವರ್ಷ ನಾನು ಆ ಕನಸನ್ನು ನನಸು ಮಾಡಲು ತೀರ್ಮಾನಿಸಿದ್ದೇನೆ.

ಕೃಪೆ: ಹ್ಯೂಮನ್ಸ್‌ ಆಫ್‌ ಬಾಂಬೆ (Humans of Bombay)

ರಾಣಿ ರಾಂಪಾಲ್‌ ಪರಿಚಯ:

2010ರ ವಿಶ್ವಕಪ್‌ನಲ್ಲಿ ಭಾಗವಹಿಸಿದ ರಾಷ್ಟ್ರೀಯ ತಂಡದ ಅತ್ಯಂತ ಕಿರಿಯ ಆಟಗಾರ್ತಿ, ಪ್ರಸ್ತುತ ಭಾರತದ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ಜನಿಸಿದ್ದು 1994 ಡಿಸೆಂಬರ್‌ 4ರಂದು. ಹರಿಯಾಣ ರಾಜ್ಯದ ಕುರುಕ್ಷೇತ್ರ ಜಿಲ್ಲೆ, ಶಹಾಬಾದ್‌ ಮಾರ್ಕಂಡ ಇವರ ಹುಟ್ಟೂರು. ತನ್ನ 15ನೇ ವಯಸ್ಸಿಗೆ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಪಾರ್ದಾಪಣೆ ಮಾಡಿದ ರಾಣಿ ಈವರೆಗೂ ಸುಮಾರು 212 ಪಂದ್ಯಗಳಲ್ಲಿ ಆಡಿದ್ದಾರೆ. ಸುಮಾರು 134ಗೋಲುಗಳನ್ನು ಗಳಿಸಿದ್ದಾರೆ. ಸ್ಟ್ರೈಕರ್‌ ಆಗಿಯೂ ಪ್ರಸಿದ್ಧರಾಗಿರುವ ಇವರಿಗೆ 2020ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ.

2013ರಲ್ಲಿ ನಡೆದ ಜೂನಿಯರ್‌ ವರ್ಲ್ಡ್‌ ಕಪ್‌ನಲ್ಲಿ ಇವರಿದ್ದ ಮಹಿಳಾ ತಂಡವು ಕಂಚು, 2018ರಲ್ಲಿ ಜಕರ್ತಾದಲ್ಲಿ ನಡೆದ ಏಷ್ಯನ್‌ ಕಪ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಸೇರಿದಂತೆ ಹಲವು ಪದಕಗಳನ್ನು ಗೆದ್ದಿದ್ದಾರೆ. ಪ್ರಸ್ತುತ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ರಾಣಿ ನಾಯಕತ್ವದ ಮಹಿಳಾ ಹಾಕಿ ತಂಡವು ಸೆಮಿಫೈನಲ್‌ ತಲುಪಿ ಇತಿಹಾಸ ನಿರ್ಮಿಸಿದೆ.


ಇದನ್ನೂ ಓದಿ; ಒಂದೇ ಒಲಂಪಿಕ್ಸ್‌ನಲ್ಲಿ 7 ಪದಕ ಗೆದ್ದ ಮೊದಲ ಮಹಿಳೆ ಎನಿಸಿಕೊಂಡ ಎಮ್ಮ ಮಕೀನ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...