ಬಿಹಾರದಲ್ಲಿ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮತ್ತು ತಮ್ಮ ಮಗ ತೇಜಸ್ವಿ ಯಾದವ್ ನಡುವಿನ ಮೈತ್ರಿಯ ಪರವಾಗಿದ್ದೇನೆ ಎಂದು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಮಂಗಳವಾರ ಹೇಳಿದ್ದಾರೆ.
ಚಿರಾಗ್ ಪಾಸ್ವಾನ್ ತನ್ನ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ನೇತೃತ್ವದಲ್ಲಿ ಪಕ್ಷದ ಐದು ಸಂಸದರು ಬಂಡಾಯವನ್ನು ಎದುರಿಸುತ್ತಿದ್ದರೂ ಕೂಡ ಚಿರಾಗ್ ಎಲ್‌ಜೆಪಿಯ ನಾಯಕರಾಗಿ ಮುಂದುವರಿದಿದ್ದಾರೆ ಎಂದು ಲಾಲು ಪ್ರಸಾದ್ ಯಾದವ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ವಿರುದ್ಧ ಕಿಡಿ ಕಾರಿರುವ ಲಾಲು ಪ್ರಸಾದ್ ಯಾದವ್, ’ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಮೋಸ ಮಾಡಿ ತಮ್ಮ ಪಕ್ಷವನ್ನು 10-15 ಮತಗಳಿಂದ ಸೋಲಿಸಿದರು” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ‘ನನ್ನ ತಂದೆ ಮತ್ತು ಲಾಲು ಯಾದವ್ ಸ್ನೇಹಿತರು; ತೇಜಸ್ವಿ ನನ್ನ ಸಹೋದರ’ – ಚಿರಾಗ್ ಪಾಸ್ವಾನ್
ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಸಮಾಜವಾದಿ ನಾಯಕ ಶರದ್ ಯಾದವ್ ಅವರನ್ನು ಭೇಟಿ ಮಾಡಿದ ನಂತರ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಈ ಹೇಳಿಕೆ ನೀಡಿದ್ದಾರೆ. ಇಬ್ಬರೂ ನಾಯಕರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.
वरिष्ठ समाजवादी नेता शरद भाई से मुलाक़ात कर स्वास्थ्य लाभ संबंधित जानकारी प्राप्त की।
सामाजिक, आर्थिक, शैक्षणिक और राजनीतिक असमानता के विरुद्ध हमारा लंबा संघर्ष रहा है। हम समाजवादियों का संघर्ष ही संस्कार है। सांप्रदायिकता और ग़ैर-बराबरी के ख़िलाफ अंतिम दम तक लड़ाई जारी रहेगी। pic.twitter.com/W93QWwa5wI
— Lalu Prasad Yadav (@laluprasadrjd) August 3, 2021
ಸಮಾಜವಾದಿ ನಾಯಕರಾದ ಶರದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮತ್ತು ನನ್ನಂತ ನಾಯಕರ ಅನುಪಸ್ಥಿತಿಯಿಂದ ಸಂಸತ್ತಿನಲ್ಲಿ ಜನ ಸಂಬಂಧಿತ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೋಮವಾರ, ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಪುತ್ರ ಅಖಿಲೇಶ್ ಯಾದವ್ ಅವರನ್ನು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನವದೆಹಲಿಯಲ್ಲಿ ಭೇಟಿಯಾಗಿದ್ದರು.
ಇದರ ಜೊತೆಗೆ ಪೆಗಾಸಸ್ ಗೂಢಚರ್ಯೆ ಹಗರಣದ ತನಿಖೆಗೂ ಕರೆ ನೀಡಿರುವ ಲಾಲು ಪ್ರಸಾದ್ ಯಾದವ್, ಪ್ರಕರಣದ ತನಿಖೆ ನಡೆಸಿ ಸಂಬಂಧಪಟ್ಟವರ ಹೆಸರುಗಳನ್ನು ಪ್ರಕಟಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ‘ಆರೆಸ್ಸೆಸ್ ಅಥವಾ ಸಂವಿಧಾನ’ – ಚಿರಾಗ್ ಪಾಸ್ವಾನ್‌ಗೆ ಆಯ್ಕೆ ಮುಂದಿಟ್ಟ ತೇಜಸ್ವಿ ಯಾದವ್!


