ಒಕ್ಕೂಟ ಸರ್ಕಾರದ ಸಚಿವ ಸಂಪುಟಕ್ಕೆ ಇತ್ತೀಚೆಗೆ ಸೇರ್ಪಡೆಯಾದ ರಾಜ್ಯದ ನಾಲ್ಕು ಹೊಸ ಮಂತ್ರಿಗಳನ್ನು ಕರ್ನಾಟಕದ ಜನರಿಗೆ ಪರಿಚಯಿಸುವ ಉದ್ದೇಶದಿಂದ ರಾಜ್ಯದ ಬಿಜೆಪಿ ಘಟಕವು ಆಗಸ್ಟ್ 16 (ಸೋಮವಾರ) ರಿಂದ “ಜನಾಶೀರ್ವಾದ ಯಾತ್ರೆ” ಯನ್ನು ಕೈಗೆತ್ತಿಕೊಂಡಿದೆ.
ಬಿಜೆಪಿಯ ಜನಾಶೀರ್ವಾದ ಯಾತ್ರೆಗೆ ಕರ್ನಾಟಕ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ’ ಎಲ್ಲದಕ್ಕೂ ಕೋವಿಡ್ ರೂಲ್ಸ್ ಜಾರಿಗೊಳಿಸಿದ್ದರೂ ಬಿಜೆಪಿ ಪಕ್ಷದ ಜನಾಶೀರ್ವಾದ ಯಾತ್ರೆಗೆ ಯಾವುದೇ ರೂಲ್ಸ್ ಇಲ್ಲ, ಅವರ ಯಾತ್ರೆಯಲ್ಲಿ ಕೊರೊನಾ ಬರುವುದಿಲ್ಲವೇ” ಎಂದು ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, “ಗಣೇಶ ಹಬ್ಬಕ್ಕೆ ಕೊರೊನಾ ರೂಲ್ಸ್, ದೇದೇವಾಲಯಗಳಿಗೆ ಕೊರೊನಾ ರೂಲ್ಸ್, ಮದುವೆ ಸಮಾರಂಭಗಳಿಗೆ ಕೊರೊನಾ ರೂಲ್ಸ್, ಸಂತೆ, ಮಾರ್ಕೆಟ್‌ಗಳಿಗೆ ಕೊರೊನಾ ರೂಲ್ಸ್ ಎಲ್ಲದಕ್ಕೂ ಕೋವಿಡ್ ರೂಲ್ಸ್ ಜಾರಿಗೊಳಿಸಿದ್ದರೂ ಬಿಜೆಪಿ ಪಕ್ಷದ ಜನಾಶೀರ್ವಾದ ಯಾತ್ರೆಗೆ ಯಾವುದೇ ರೂಲ್ಸ್ ಇಲ್ಲ, ಅವರ ಯಾತ್ರೆಯಲ್ಲಿ ಕೊರೊನಾ ಬರುವುದಿಲ್ಲವೇ!” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಒಕ್ಕೂಟ ಸರ್ಕಾರದ ಹೊಸ ಮಂತ್ರಿಗಳನ್ನು ಪರಿಚಯಿಸಲು ಬಿಜೆಪಿಯಿಂದ ‘ಜನಾಶೀರ್ವಾದ ಯಾತ್ರೆ’
★ಗಣೇಶ ಹಬ್ಬಕ್ಕೆ ಕರೋನಾ ರೂಲ್ಸ್
★ದೇವಾಲಯಗಳಿಗೆ ಕರೋನಾ ರೂಲ್ಸ್
★ಮದುವೆ ಸಮಾರಂಭಗಳಿಗೆ ಕರೋನಾ ರೂಲ್ಸ್
★ಸಂತೆ, ಮಾರ್ಕೆಟ್‌ಗಳಿಗೆ ಕರೋನಾ ರೂಲ್ಸ್ಎಲ್ಲದಕ್ಕೂ ಕೋವಿಡ್ ರೂಲ್ಸ್ ಜಾರಿಗೊಳಿಸಿದ್ದರೂ @BJP4Karnataka ಪಕ್ಷದ ಜನಾಶೀರ್ವಾದ ಯಾತ್ರೆಗೆ ಯಾವುದೇ ರೂಲ್ಸ್ ಇಲ್ಲ, ಅವರ ಯಾತ್ರೆಯಲ್ಲಿ ಕರೋನಾ ಬರುವುದಿಲ್ಲವೇ!
— Karnataka Congress (@INCKarnataka) August 16, 2021
ಮತ್ತೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್, ಜನಾಶೀರ್ವಾದ ಯಾತ್ರೆಯಲ್ಲಿ ಉಂಟಾದ ನೂಕುನುಗ್ಗಲಿನ ಚಿತ್ರಗಳನ್ನು ಹಂಚಿಕೊಂಡಿದೆ.
“ರಾಜ್ಯದಲ್ಲಿ ಕೊರೊನಾ ಉಲ್ಬಣವಾಗುತ್ತಿದೆ, ಲಸಿಕಾಕರಣ ಹಳ್ಳ ಹಿಡಿದಿದೆ, ಲಸಿಕೆ ಕೊಡಲಾಗದೆ ಟಫ್ ರೂಲ್ಸ್ ಹೆಸರಲ್ಲಿ ಜನರ ಬದುಕಿನ ಮೇಲೆ ಸವಾರಿ ಮಾಡುತ್ತಿದೆ ಸರ್ಕಾರ. ಜನಸಾಮಾನ್ಯರಿಗೆ ರೂಲ್ಸ್ ಹೇರಿ ಬಿಜೆಪಿ ಮಾತ್ರ ಜನ ಸೇರಿಸಿ ಜನಾಶೀರ್ವಾದ ಯಾತ್ರೆ ಮಾಡಬಹುದಂತೆ, ಇವರೇನು ಒಲಂಪಿಕ್ಸ್ ಪದಕ ಗೆದ್ದು ಬಂದವರೇ?” ಎಂದು ಟೀಕಿಸಿದೆ.
ರಾಜ್ಯದಲ್ಲಿ ಕರೋನಾ ಉಲ್ಬಣವಾಗುತ್ತಿದೆ, ಲಸಿಕಾಕರಣ ಹಳ್ಳ ಹಿಡಿದಿದೆ, ಲಸಿಕೆ ಕೊಡಲಾಗದೆ ಟಫ್ ರೂಲ್ಸ್ ಹೆಸರಲ್ಲಿ ಜನರ ಬದುಕಿನ ಮೇಲೆ ಸವಾರಿ ಮಾಡುತ್ತಿದೆ ಸರ್ಕಾರ.
ಜನಸಾಮಾನ್ಯರಿಗೆ ರೂಲ್ಸ್ ಹೇರಿ ಬಿಜೆಪಿ ಮಾತ್ರ ಜನ ಸೇರಿಸಿ ಜನಾಶೀರ್ವಾದ ಯಾತ್ರೆ ಮಾಡಬಹುದಂತೆ, ಇವರೇನು ಒಲಂಪಿಕ್ಸ್ ಪದಕ ಗೆದ್ದು ಬಂದವರೇ?#ಕರೋನಾಶಿರ್ವಾದಯಾತ್ರೆ pic.twitter.com/09pMABH0lp
— Karnataka Congress (@INCKarnataka) August 16, 2021
ಕೊರೊನಾಶಿರ್ವಾದಯಾತ್ರೆ ಹ್ಯಾಶ್‌ಟ್ಯಾಗ್ ಬಳಸಿ ಸರ್ಕಾರ ಜನಾಶೀರ್ವಾದ ಯಾತ್ರೆ ಹೆಸರಲ್ಲಿ ಕೊರೊನಾ ಹರಡುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ.
ಸಂಸತ್ ಅಧಿವೇಶನದಲ್ಲಿ ಹೊಸ ಮಂತ್ರಿಗಳನ್ನು ಪರಿಚಯಿಸಲು ಪ್ರಧಾನಿ ಮೋದಿಗೆ ವಿಪಕ್ಷಗಳು ಅನುಮತಿ ನೀಡದ ಕಾರಣ, ಇಂತಹ ಜನಾಶೀರ್ವಾದ ಯಾತ್ರೆಗಳನ್ನು ಕೈಗೊಳ್ಳುವಂತೆ ರಾಜ್ಯ ಘಟಕಗಳಿಗೆ ಬಿಜೆಪಿ ಕೇಂದ್ರ ನಾಯಕತ್ವ ಸೂಚನೆ ನೀಡಿತ್ತು ಎನ್ನಲಾಗಿದೆ.
ಹೊಸ ಸಚಿವರ ನೇತೃತ್ವದ ನಾಲ್ಕು ತಂಡಗಳು 24 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿವೆ. ಒಟ್ಟು 161 ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕ ಸಭೆಗಳಲ್ಲಿ, ಅವರು ಒಕ್ಕೂಟ ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ಕೊರೊನಾ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡುತ್ತಾರೆ. ಬರಹಗಾರರು, ಕಲಾವಿದರು ಮತ್ತು ಹಿರಿಯ ಬಿಜೆಪಿ ನಾಯಕರ ಮನೆಗಳು ಮತ್ತು ಮಠಾಧೀಶರನ್ನು ಭೇಟಿ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾಹಿತಿ ನೀಡಿದ್ದರು.
ಇದನ್ನೂ ಓದಿ: 3 ವರ್ಷದಿಂದ ಒಂದೇ ಭರವಸೆ ನೀಡುತ್ತಿರುವ ಪ್ರಧಾನಿ : ಸಂಖ್ಯೆಯನ್ನಾದರೂ ಬದಲಿಸಿ ಎಂದ ಕಾಂಗ್ರೆಸ್


