Homeಚಳವಳಿರೈತರ ಮೇಲೆ ಪೊಲೀಸರ ಹಲ್ಲೆ: ಆಯುಷ್‌ ಸಿನ್ಹಾ ಸರ್ಕಾರಿ ತಾಲಿಬಾನ್‌ ಕಮಾಂಡರ್‌- ರಾಕೇಶ್ ಟಿಕಾಯತ್ ಕಿಡಿ

ರೈತರ ಮೇಲೆ ಪೊಲೀಸರ ಹಲ್ಲೆ: ಆಯುಷ್‌ ಸಿನ್ಹಾ ಸರ್ಕಾರಿ ತಾಲಿಬಾನ್‌ ಕಮಾಂಡರ್‌- ರಾಕೇಶ್ ಟಿಕಾಯತ್ ಕಿಡಿ

- Advertisement -
- Advertisement -

ಹರಿಯಾಣದ ಪ್ರತಿಭಟನಾ ನಿರತ ರೈತರ ತಲೆ ಬುರುಡೆ ಒಡೆಯಿರಿ ಎಂದು ಆದೇಶ ನೀಡದ್ದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿರುವ ಆಯುಷ್‌ ಸಿನ್ಹಾ ಅವರನ್ನು ಸರ್ಕಾರಿ ತಾಲಿಬಾನ್‌ ಕಮಾಂಡರ್‌ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಕಿಡಿ ಕಾರಿದ್ದಾರೆ.

ಶನಿವಾರ ಹರಿಯಾಣದ ಕರ್ನಲ್‌ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಅಮಾನುಷವಾಗಿ ಲಾಠಿ ಚಾರ್ಜ್ ನಡೆಸಿದ್ದಾರೆ. ಲಾಠಿ ಚಾರ್ಜ್‌ ಆದ ನಂತರ ವಿಡಿಯೊವೊಂದು ವೈರಲ್‌ ಆಗಿದ್ದು, ಅದರಲ್ಲಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿರುವ ಆಯುಷ್‌ ಸಿನ್ಹಾ “ಪ್ರತಿಭಟನಾಕಾರರ ತಲೆಬುರುಡೆ ಒಡೆಯಲು” ಪೊಲೀಸ್‌ ಸಿಬ್ಬಂದಿಗಳಿಗೆ ಆದೇಶ ನೀಡುತ್ತಿವುದುನ್ನು ಕಾಣಬಹುದು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಕಿಸಾನ್ ಯೂನಿಯನ್ ಟಿಕಾಯತ್ ಬಣದ ರೈತ ನಾಯಕ ರಾಕೇಶ್ ಟಿಕಾಯತ್, “ನಿನ್ನೆ ಒಬ್ಬ ಅಧಿಕಾರಿ(ಪೊಲೀಸರಿಗೆ ರೈತರ ತಲೆಯ ಮೇಲೆ ಹೊಡೆಯಲು ಆದೇಶಿಸಿದರು. ಅವರು ನಮ್ಮನ್ನು ಖಲಿಸ್ತಾನಿಗಳು ಎಂದು ಕರೆಯುತ್ತಾರೆ. ನೀವು ನಮ್ಮನ್ನು ಖಲಿಸ್ತಾನಿ ಮತ್ತು ಪಾಕಿಸ್ತಾನಿ ಎಂದು ಕರೆದರೇ, ನಾವು ಸರ್ಕಾರಿ ತಾಲಿಬಾನಿ ದೇಶವನ್ನು ಆಕ್ರಮಿಸಿಕೊಂಡಿದೆ ಎಂದು ಹೇಳುತ್ತೇವೆ. ಅವರು ಸರ್ಕಾರಿ ತಾಲಿಬಾನಿಗಳು. ಅಧೀಕಾರಿ ಸರ್ಕಾರಿ ತಾಲಿಬಾನ್‌ ಕಮಾಂಡರ್‌” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಹರಿಯಾಣ: ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಚಾರ್ಜ್‌; 10 ಜನರಿಗೆ ಗಾಯ

“ಇದು ತುಂಬಾ ಸರಳ ಮತ್ತು ಸ್ಪಷ್ಟವಾಗಿದೆ. ಯಾರು ಎಲ್ಲಿಂದ ಬಂದರೂ, ಯಾರೊಬ್ಬರೂ ಬ್ಯಾರಿಕೇಡ್‌ನಿಂದ ಮುಂದೆ ಹೋಗಬಾರದು. ಒಂದು ವೇಳೆ ಬಂದರೆ ಅವರ ಬುರುಡೆಯನ್ನು ಒಡೆಯಿರಿ. ಯಾವುದೇ ಸೂಚನೆ ಅಥವಾ ನಿರ್ದೇಶನದ ಅಗತ್ಯವಿಲ್ಲ. ನಮ್ಮಲ್ಲಿ ಸಾಕಷ್ಟು ಪೊಲೀಸ್ ಪಡೆಯಿದೆ” ಎಂದು ಕರ್ನಾಲ್‌ನಲ್ಲಿ ಪ್ರತಿಭಟನಾ ನಿರತ ರೈತರನ್ನು ನಿಭಾಯಿಸಲು ನಿಯೋಜಿಸಲಾದ ಪೊಲೀಸರಿಗೆ ಅಧಿಕಾರಿ ಆಯುಷ್ ಸಿನ್ಹಾ ಹೇಳಿದ್ದಾರೆ.

ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಭಾಗವಹಿಸಿದ್ದ ಸಭೆಯನ್ನು ವಿರೋಧಿಸಿ ರೈತರು ಕರ್ನಾಲ್ ಬಳಿಯ ಬಸ್ತಾರಾ ಟೋಲ್ ಪ್ಲಾಜಾದಲ್ಲಿ ಜಮಾಯಿಸಿದ್ದರು. ಈ ವೇಳೆ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ರಕ್ತಸಿಕ್ತವಾಗಿರುವ ದೇಹಗಳೊಂದಿಗೆ, ಗಂಭೀರ ಗಾಯಗೊಂಡಿರುವ ಹಲವಾರು ರೈತರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ನ್ನು ಚುನಾವಣೆಗೆ ಮುನ್ನ ಬಂಧಿಸಿದ್ದು ಏಕೆ? EDಗೆ ಉತ್ತರಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್‌

0
ಸಾರ್ವತ್ರಿಕ ಚುನಾವಣೆಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣೆಗೂ ಮುನ್ನ ಬಂಧಿಸಿದ್ದು ಏಕೆ? ಎಂದು...