Homeಮುಖಪುಟತಾಲಿಬಾನ್‌ಗೆ ಅಧಿಕಾರ ಸಿಕ್ಕಿದ್ದಕ್ಕೆ ಸಂಭ್ರಮಿಸುವುದು ಅಪಾಯ: ನಾಸೀರುದ್ದೀನ್‌ ಶಾ

ತಾಲಿಬಾನ್‌ಗೆ ಅಧಿಕಾರ ಸಿಕ್ಕಿದ್ದಕ್ಕೆ ಸಂಭ್ರಮಿಸುವುದು ಅಪಾಯ: ನಾಸೀರುದ್ದೀನ್‌ ಶಾ

- Advertisement -
ಅಘಫಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರ ಹಿಡಿದದ್ದನ್ನು ಭಾರತದ ಕೆಲವು ಮುಸ್ಲಿಮರು ಸಂಭ್ರಮಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಖ್ಯಾತ ನಟ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ನಾಸೀರುದ್ದೀನ್‌ ಶಾ ಆತಂಕ ವ್ಯಕ್ತಪಡಿಸಿದ್ದಾರೆ.

- Advertisement -

ವಿಡಿಯೊ ಸಂದೇಶ ನೀಡಿರುವ ಅವರು, ಅಫಘಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರಕ್ಕೆ ಬಂದಿರುವುದನ್ನು ಕಂಡು ಇಡೀ ಜಗತ್ತೇ ಎಚ್ಚರ ವಹಿಸಿರುವಾಗ, ಅನಾಗರಿಕತೆಯನ್ನು ಸಂಭ್ರಮಿಸುತ್ತಿರುವ ಕೆಲವು ಭಾರತೀಯ ಮುಸ್ಲಿಮರೂ ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

“ನಮ್ಮ ಧಾರ್ಮಿಕತೆಯನ್ನುಸುಧಾರಿಸಿಕೊಂಡು, ಆಧುನಿಕತೆಯತ್ತ ಹೊರಳಬೇಕೆ ಅಥವಾ ಹಳೆಯ ಅನಾಗರೀಕತೆಯೇ ಇರಬೇಕಾ?” ಎಂಬ ಪ್ರಶ್ನೆಯನ್ನು ತಾಲಿಬಾನ್‌ ಅಧಿಕಾರವನ್ನು ಖುಷಿ ಪಡುವವರು ಕೇಳಿಕೊಳ್ಳಲಿ ಎಂದಿದ್ದಾರೆ.

ಭಾರತದ ಇಸ್ಲಾಂಗೂ ಜಗತ್ತಿನ ಇತರೆಡೆ ಇರುವ ಇಸ್ಲಾಂಗೂ ಇರುವ ವ್ಯತ್ಯಾಸವನ್ನು ಅವರು ಪ್ರಸ್ತಾಪಿಸಿದ್ದು, “ಜಗತ್ತಿನ ಇತರೆಡೆ ಇರುವ ಇಸ್ಲಾಗಿಂತ ಭಾರತದಲ್ಲಿನ ಇಸ್ಲಾಂ ತೀರಾ ಭಿನ್ನ” ಎಂದಿದ್ದಾರೆ. “

ಇದನ್ನೂ ಓದಿ: ಕೋಮುದ್ವೇಷ ಬಿತ್ತುವ ವರದಿಗಳಿಂದ ದೇಶಕ್ಕೆ ಕೆಟ್ಟ ಹೆಸರು: ಸುಪ್ರೀಂ ಆತಂಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...