ಹಿಂದಿ ಬಿಗ್ ಬಾಸ್ 13 ನೇ ಸೀಸನ್ ವಿನ್ನರ್‌, ನಟ ಸಿದ್ದಾರ್ಥ್ ಶುಕ್ಲಾ(40) ನಿಧನ
PC:IANS

ಬಾಲಿಕ ವಧು ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ್ದ ಹಿಂದಿ ನಟ ಮತ್ತು ಮಾಡೆಲ್ ಸಿದ್ದಾರ್ಥ್ ಶುಕ್ಲಾ ಗುರುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇವಲ 40ನೇ ವಯಸ್ಸಿನಲ್ಲಿಯೇ ವಿಧಿವಶರಾಗಿದ್ದಾರೆ.

ತೀವ್ರ ಎದೆಯ ನೋವಿನಿಂದ ಬಳಲುತಿದ್ದ ಸಿದ್ಧಾರ್ಥ್ ಶುಕ್ಲಾ ಅವರನ್ನು ಇಂದು ಬೆಳಗ್ಗೆ ಮುಂಬೈನ ಕೂಪರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಕೂಪರ್ ಆಸ್ಪತ್ರೆಯ ಡಾಕ್ಟರ್ ಸುಖದೇವ್ ದೃಢಪಡಿಸಿದ್ದಾರೆ.

ಸಿದ್ಧಾರ್ಥ್ ಶುಕ್ಲಾ ಅವರ ಹಠಾತ್ ಸಾವಿಗೆ ಟೆಲಿವಿಷನ್ ನಟರು, ಬಾಲಿವುಡ್ ತೀವ್ರ ಸಂತಾಪ ಸೂಚಿಸಿದ್ದಾರೆ. ಸಹೋದ್ಯೋಗಿಗಳಾದ ಕಪಿಲ್ ಶರ್ಮಾ, ದಾರಾ ಸಿಂಗ್, ಸುನಿಲ್ ಗ್ರೋವರ್, ದೇವೋಲೀನಾ ಭಟ್ಟಾಚಾರ್ಜಿ, ಹಿಮಾಂಶಿ ಖುರಾನಾ, ಮುನ್ಮುನ್ ದತ್ತಾ ಮತ್ತು ಇತರರು ಸಂತಾಪ ಸೂಚಿಸಿದ್ದಾರೆ.

ನಟಿ ಮಾಧುರಿ ದೀಕ್ಷಿತ್, ಝರೀನ್ ಖಾನ್,  ನಟ ಸೋನುಸೂದ್, ಮನೋಜ್ ಬಾಜ್ಪೇಯಿ, ಅಜಯ್ ದೇವಗನ್ ಸೇರಿದಂತೆ ಬಾಲಿವುಡ್ ನಟ, ನಟರು ಅಗಲಿದ ಕಲಾವಿದನಿಗೆ ಗೌರವ ಸಲ್ಲಿಸಿದ್ದಾರೆ.

ಇದನ್ನೂ ಓದಿ: ನೆಹರು-ಗಾಂಧಿ ಕುಟುಂಬದ ವಿರುದ್ಧ ಅವಹೇಳನಕಾರಿ ವಿಡಿಯೊ: ನಟಿ ಪಾಯಲ್ ರೋಹ್ಟಗಿ ವಿರುದ್ಧ ಪ್ರಕರಣ

2019 ರಲ್ಲಿ ಬಿಗ್ ಬಾಸ್ 13 ನೇ ಆವೃತ್ತಿ ಮತ್ತು ಖತ್ರೋನ್ ಕೆ ಖಿಲಾಡಿ 7ನೇ ಆವೃತ್ತಿ ಗೆದ್ದಿದ್ದ ಸಿದ್ದಾರ್ಥ್ ಶುಕ್ಲಾ ಅವರು ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಸಿದ್ಧಾರ್ಥ್ ಶುಕ್ಲಾ 2008 ರ ಟಿವಿ ಶೋ ’ಬಾಬುಲ್ ಕಾ ಆಂಗನ್ ಚೂಟೇ ನಾ’ ಧಾರವಾಹಿ ಮೂಲಕ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಶುಕ್ಲಾ ಅವರು ಜಾನೆ ಪೆಹ್ಚಾನೆ ಸೆ … ಯೆ ಅಜ್ನಬ್ಬಿ, ಲವ್ ಯು ಜಿಂದಗಿ, ಸಿಐಡಿ ಮತ್ತು ದಿಲ್ ಸೆ ದಿಲ್ ತಕ್ ಸೇರಿ ಹಲವು ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ದಿವಂಗತ ನಟಿ ಪ್ರತ್ಯೂಷಾ ಬ್ಯಾನರ್ಜಿಯೊಂದಿಗೆ ಕಾಣಿಸಿಕೊಂಡ ಬಾಲಿಕಾ ವಧು ಧಾರವಾಹಿಯಲ್ಲಿನ ಅವರ ಪಾತ್ರ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತು.

ಕಿರುತೆರೆ ಜೊತೆಗೆ ಹಲವು ಬಾಲಿವುಡ್ ಚಲನಚಿತ್ರಗಳಲ್ಲಿ ಪೋಷಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆಲಿಯಾ ಭಟ್ ಮತ್ತು ವರುಣ್ ಧವನ್ ಅಭಿನಯದ ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಆಲ್ಬಂಬ್ ಸಾಂಗ್‌ಗಳಲ್ಲಿಯೂ ಸಿದ್ಧಾರ್ಥ್ ಶುಕ್ಲಾ ನಟಿಸಿದ್ದರು.


ಇದನ್ನೂ ಓದಿ: ಗ್ಯಾಂಗ್‌ ರೇಪ್‌: ಮಹಿಳೆಯರ ಮೇಲಿನ ಅಪರಾಧಗಳಿಗೆ ಕುರುಡಾಗದಿರಿ, ದನಿ ಎತ್ತಿ- ನಟಿ ರಮ್ಯಾ ಆಕ್ರೋಶ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here