ಅಯೋಧ್ಯೆ ರೈಲು ನಿಲ್ದಾಣದ ಪೋಟೋ ಎಂಬ ಒಕ್ಕಣೆಯೊಂದಿಗೆ ಪೋಟೋವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಸತ್ಯಾಸತ್ಯತೆಯನ್ನು ‘ಆಲ್ಟ್ ನ್ಯೂಸ್’ ಬಯಲಿಗೆಳೆದಿದೆ.
ಆರ್ಎಸ್ಎಸ್ ಮತ್ತು ಬಜರಂಗ ಯುವ ಸಂಘ ಬೆಂಬಲಿಗ ಎಂದು ಬರೆದುಕೊಂಡಿರುವ ನಾಯಕ್ ಮಹೇಶ್ ಚೌಹಾಣ್ ಎಂಬ ಟ್ವಿಟರ್ ಬಳಕೆದಾರ, ಹೀಗೆ ಪೋಟೋವನ್ನು ಶೇರ್ ಮಾಡಿದ್ದು, 500ಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ (ಅರ್ಕೈವ್ ಲಿಂಕ್).
मेरा देश बदल रहा है आगे बढ़ रहा है
आप सोच रहे होंगे की यह रेलवे स्टेशन अमेरिका चीन या जापान का होगा पर
नही दोस्तों यह है हमारे आराध्य देव भगवान श्री राम जी की जन्म स्थली अयोध्या का रेलवे स्टेशन है जो बहुत शीघ्र ही देश को समर्पित होने वाला है…!!?? pic.twitter.com/Zj76LfO70Q— नायक महेश चौहान (@Mahesh__Chouhan) September 20, 2021



ಅರೂಪ್ ಕನ್ಸಲ್ಟೆನ್ಸಿ ವೆಬ್ಸೈಟ್ನಲ್ಲೂ ಈ ಫೋಟೋ ಇದೆ. ಮಾಸ್ಟರ್ ಪ್ಲಾನ್, ಡಿಸೈನ್ ಹಾಗೂ ನವೀಕರಣಕ್ಕಾಗಿ ಸಿದ್ಧತೆ ಎಂದು ವೆಬ್ಸೈಟ್ ಹೇಳಿದೆ.
ಅಯೋಧ್ಯೆ ರೈಲು ನಿಲ್ದಾಣದ ಯೋಜನೆ ಹೇಗಿದೆ?
ರೈಲ್ವೆ ಸಚಿವಾಲಯವು ಆಗಸ್ಟ್ 5, 2020ರಂದು ‘ಅಯೋಧ್ಯೆ ರೈಲು ನಿಲ್ದಾಣದ ಪುನರಾಭಿವೃದ್ಧಿಯ ಕಲಾವಿದನ ಕಲ್ಪನೆ’ಯನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದೆ. ಇದು ಹೊಸದಿಲ್ಲಿ ರೈಲು ನಿಲ್ದಾಣದ ಡಿಜಿಟಲ್ ಪರಿಕಲ್ಪನೆಗಿಂತ ಭಿನ್ನವಾಗಿದೆ.
ಕಂಪ್ಯೂಟರ್ ಮೂಲಕ ಸೃಷ್ಟಿಸಿರುವ ಹೊಸ ದೆಹಲಿ ರೈಲು ನಿಲ್ದಾಣದ ಪುನಾರಾಭಿವೃದ್ಧಿ ಯೋಜನೆಯ ಫೋಟೋ, ಆಯೋಧ್ಯೆ ರೈಲು ನಿಲ್ದಾಣದ ನವೀಕರಣ ಯೋಜನೆಯಾಗಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಕೃಪೆ: ಆಲ್ಟ್ ನ್ಯೂಸ್
ಇದನ್ನೂ ಓದಿ: ಫ್ಯಾಕ್ಟ್ಚೆಕ್ – ನಟ ಅಮಿತಾಬ್ ಬಚ್ಚನ್ ಹಂಚಿರುವ ಗಣೇಶ ಹಬ್ಬದ ಈ ವಿಡಿಯೊ 5 ವರ್ಷ ಹಳೆಯದು!


