ಅಮಿತಾಬ್ ಬಚ್ಚನ್ ಹಂಚಿರುವ ಗಣೇಶ ಹಬ್ಬದ ಈ ವಿಡಿಯೊ 5 ವರ್ಷ ಹಳೆಯದು! | Naanu gauri

ನಟ ಅಮಿತಾಬ್ ಬಚ್ಚನ್ ಅವರು ಸೆಪ್ಟೆಂಬರ್ 8, 2021 ರಂದು ಮುಂಬೈನ ಲಾಲ್‌ಬಾಗ್‌ನಲ್ಲಿ ಈ ವರ್ಷದ ಗಣೇಶ ಮೂರ್ತಿಯ ಮೊದಲ ದರ್ಶನ ಎಂದು ವಿಡಿಯೊವೊಂದನ್ನು ಟ್ವೀಟ್‌ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬವನ್ನು ಬಹಳ ಸಂಭ್ರಮದಿಂದ ಪೂಜಿಸಲಾಗುತ್ತದೆ. ಅದರಲ್ಲೂ ಮುಂಬೈನ ಲಾಲ್‌ಬಾಗ್‌ನಲ್ಲಿರುವ ಗಣಪತಿ ಪೂಜೆಯ ಚಪ್ಪರ ಅತಿದೊಡ್ಡದು ಮತ್ತು ಅತ್ಯಂತ ಜನಪ್ರಿಯವಾಗಿದೆ. ಅಲ್ಲಿ ಕೂರಿಸುವ ಗಣಪತಿಯ ಮೂರ್ತಿಯನ್ನು ‘ಲಾಲ್‌ಬೌಚ ರಾಜಾ’ ಎಂದು ಎಂದು ಕರೆಯುತ್ತಾರೆ. ಅಲ್ಲಿ ಈ ವರ್ಷದ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 10 ರಂದು ಆಚರಿಸಲಾಯಿತು.

ಅಮಿತಾಬ್ ಬಚ್ಚನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅದೇ ವಿಡಿಯೊವನ್ನು ಫೇಸ್‌ಬುಕ್‌ನಲ್ಲೂ ಹಂಚಿಕೊಂಡಿದ್ದಾರೆ.

ಅಮಿತಾಬ್ ಅವರು ಟ್ವೀಟ್ ಮಾಡಿರುವ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, ಫೇಸ್‌ಬುಕ್‌ನಲ್ಲಿ ಅವರ ಪೋಸ್ಟ್ 4,500 ಕ್ಕೂ ಹೆಚ್ಚು ಶೇರ್ ಮಾಡಲಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ಈ ಚಿತ್ರವನ್ನು ಮಹಿಳೆಯರ ಕಾಲಿಗೆ ಸಂಕೋಲೆ ಕಟ್ಟಿರುವಂತೆ ಎಡಿಟ್ ಮಾಡಲಾಗಿದೆ!

ಅಮಿತಾಬ್ ಅವರು ಟ್ವೀಟ್ ಮಾಡಿದ ನಂತರ ಹಲವಾರು ಜನರು ಈ ವಿಡಿಯೊ ಈ ವರ್ಷದ್ದು ಎಂದು ಹಂಚಿಕೊಂಡಿದ್ದಾರೆ. ಕೊರೊನಾ ಪ್ರಯುಕ್ತ ದೊಡ್ಡ ಕೂಟಗಳನ್ನು ನಿಷೇಧಿಸಿದರೂ ಸಹ ಸಾವಿರಾರು ಜನರು ಸೇರಿರುವುದು ವಿಡಿಯದಲ್ಲಿ ಕಾಣುತ್ತಿರುವುದರಿಂದ ಇದು ವಿವಾದವನ್ನೂ ಉಂಟು ಮಾಡಿದೆ.

ಫ್ಯಾಕ್ಟ್‌ಚೆಕ್

ವೀಡಿಯೊದಲ್ಲಿ ಕಂಡುಬರುವಂತೆ ಜನಸಮೂಹವು ಯಾವುದೆ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವಂತೆ ಕಾಣುತ್ತಿಲ್ಲ. ಮಹಾರಾಷ್ಟ್ರದಲ್ಲಿ ಪ್ರಾರ್ಥನಾ ಸ್ಥಳಗಳನ್ನು ತೆರೆಯಲು ಅನುಮತಿ ನೀಡುವಂತೆ ಮಹಾರಾಷ್ಟ್ರದ ಪ್ರತಿಪಕ್ಷವಾದ ಬಿಜೆಪಿ ಸರ್ಕಾರಕ್ಕೆ ಆಗ್ರಹಿಸಿತ್ತು. ಈ ಬಗ್ಗೆ ಆಡಳಿತ ಮತ್ತು ವಿಪಕ್ಷಗಳ ನಡುವೆ ವಿವಾದಗಳೂ ಉಂಟಾಗಿತ್ತು. ಹೀಗಾಗಿ, ವಿಡಿಯೊದಲ್ಲಿನ ಕಾಣುತ್ತಿರುವ ಜನರು ಮಾಸ್ಕ್‌ ಕೂಡಾ ಧರಿಸದೆ ಅಲ್ಲಿ ಭಾಗವಹಿಸಿದ್ದು ವಿವಾದವಾಗಿತ್ತು.

ಈ ಬಗ್ಗೆ ಆಲ್ಟ್ ನ್ಯೂಸ್ ವಿಡಿಯೋವನ್ನು ಫ್ಯಾಕ್ಟ್‌ಚೆಕ್ ನಡೆಸಲು ಅದನ್ನು ರಿವರ್ಸ್ ಇಮೇಜ್‌ ಸರ್ಚ್‌ ಮೂಲಕ ಹುಡುಕಾಡಿದೆ. ಈ ಹುಡುಕಾಟದಲ್ಲಿ ಪ್ರಸ್ತುತ ವಿಡಿಯೊ ಈ ವರ್ಷದ್ದಲ್ಲ ಎಂದು ಆಲ್ಟ್‌ನ್ಯೂಸ್‌ ಕಂಡು ಹಿಡಿದಿದೆ. ಅಮಿತಾಬ್ ಅವರು ಹಂಚಿಕೊಂಡಿರುವ ವಿಡಿಯೊ 2016 ರ ಸೆಪ್ಟೆಂಬರ್‌ನದ್ದು ಎಂದು ಆಲ್ಟ್‌ ನ್ಯೂಸ್ ಕಂಡುಕೊಂಡಿದೆ. 2016 ರ ಸೆಪ್ಟೆಂಬರ್ 5 ರಂದು ಗಣೇಶ ಚತುರ್ಥಿಯನ್ನು ಆಚರಿಸಲಾಗಿತ್ತು.

ಟ್ವಿಟರ್‌ನಲ್ಲಿ ಕೂಡಾ ಈ ವಿಡಿಯೊವನ್ನು 2016 ರ ಸೆಪ್ಟೆಂಬರ್ 2 ರಂದು ಹಂಚಿಕೊಳ್ಳಲಾಗಿತ್ತು.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್: ಇದು ಅಫ್ಘಾನ್‌‌ ನಾಗರಿಕನ ವಿಡಿಯೊವಲ್ಲ; ಎಡಿಟೆಡ್‌!

 

ಸುದ್ದಿ ಸಂಸ್ಥೆ ಎಎನ್ಐ ಕೂಡಾ ಇದೇ ಘಟನೆಯನ್ನು ಬೇರೆ ಬೇರೆ ಕೋನದಿಂದ ಚಿತ್ರೀಕರಿಸಿದ ವಿಡಿಯೊವನ್ನು 2016 ರ ಸೆಪ್ಟೆಂಬರ್‌ 1 ರಂದು ಟ್ವಿಟರ್‌ಗೆ ಅಪ್ಲೋಡ್ ಮಾಡಿತ್ತು.

ಕೊರೊನಾ ನಿರ್ಬಂಧಗಳ ಹಿನ್ನಲೆಯಲ್ಲಿ ಈ ವರ್ಷವು ಮಹಾರಾಷ್ಟ್ರ ಸರ್ಕಾರವು ಲಾಲ್‌ಬಾಗ್‌ಗೆ ಯಾವುದೇ ಭಕ್ತರಿಗೆ ದೈಹಿಕ ಭೇಟಿಗೆ ಅನುಮತಿ ನೀಡಿರಲಿಲ್ಲ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ‘ಲಾಲ್‌ಬೌಚಾ ರಾಜ’ ಸರ್ವಜನಿಕ ಗಣೇಶೋತ್ಸವ ಮಂಡಳಿಯು ವಿಗ್ರಹದ ಆನ್‌ಲೈನ್ ದರ್ಶನವನ್ನು ಸೆಪ್ಟೆಂಬರ್ 10 ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಆರಂಭಿಸಿತ್ತು.

ವರದಿಯಲ್ಲಿ, ಈ ವರ್ಷದ ಮೂರ್ತಿಯ ಚಿತ್ರವನ್ನೂ ನೀಡಲಾಗಿತ್ತು. ಸಾಮಾನ್ಯವಾಗಿ ಪ್ರತಿಷ್ಟಾಪಿಸುವ 14 ಅಡಿಗಳ ಮೂರ್ತಿಯ ಬದಲಾಗಿ, 4 ಅಡಿ ವಿಗ್ರಹವನ್ನು ಅಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಅಲ್ಲದೆ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಕಾಣುವ ವಿಗ್ರಹಕ್ಕಿಂತ ಈ ವಿಗ್ರಹವು ವಿಭಿನ್ನವಾಗಿ ಕಾಣುತ್ತದೆ.

ಒಟ್ಟಿನಲ್ಲಿ ಸಂಕ್ಷಿಪ್ತವಾಗಿ ಹೇಳುವುದಾದರೆ, ಅಮಿತಾಬ್ ಬಚ್ಚನ್ ಅವರ ಟ್ವೀಟ್‌ ಸಂಖ್ಯೆ ‘T 4023’ ಮತ್ತು ‘FB 3053’ ಸಂಖ್ಯೆಯ ಫೇಸ್‌ಬುಕ್ ಪೋಸ್ಟ್ ಮೂಲಕ ಹಂಚಿಕೊಂಡಿರುವ ವಿಡಿಯೊ ಈ ವರ್ಷದ ಲಾಲ್‌ಬಾಗ್‌ನಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿಯಲ್ಲ. ಅದನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ವಾಸ್ತವದಲ್ಲಿ ಈ ವಿಡಿಯೊ ತುಣುಕು ಐದು ವರ್ಷಗಳ ಹಿಂದಿನ ಗಣೇಶ ಚತುರ್ಥಿಯ ಆಚರಣೆಯದ್ದಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ಇದನ್ನೂ ಓದಿ: ರೋಹಿಂಗ್ಯಾ ನಿರಾಶ್ರಿತರಿಗೆ ದೆಹಲಿ ಸರ್ಕಾರ ಸೌಲಭ್ಯಗಳನ್ನು ಒದಗಿಸಿದೆ ಎಂದು ಸುಳ್ಳು ಸುದ್ದಿ ಹಂಚುತ್ತಿರುವ ಬಿಜೆಪಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here