ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಮತ್ತು ನಟ ನಾಗಚೈತನ್ಯ ನಡುವಿನ ವಿವಾಹ ಸಂಬಂಧವನ್ನು ಇಬ್ಬರು ನಿರ್ಧರಿಸಿ ಕೊನೆಗೊಳಿಸಿಕೊಂಡಿದ್ದಾರೆ. ಈ ಬಗ್ಗೆ ಇಬ್ಬರೂ ಸ್ಪಷ್ಟವಾಗಿ ಮಾಹಿತಿಯನ್ನು ನೀಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ನಟಿ ಸಮಂತಾ ಅವರದ್ದೇ ತಪ್ಪು ಎನ್ನುವಂತೆ ಟೀಕಿಸಲಾಗುತ್ತಿದೆ.
ನಟಿಯ ಬಾಲಿವುಡ್ ಪ್ರವೇಶ, ಫ್ಯಾಮಿಲಿ ಮ್ಯಾನ್-2 ವೆಬ್ ಸೀರೀಸ್‌ನಲ್ಲಿನ ಬೋಲ್ಡ್ ದೃಶ್ಯಗಳು ಮತ್ತು ಡಿಸೈನರ್ ಜೊತೆಗಿನ ಚಿತ್ರಗಳನ್ನು ಶೇರ್ ಮಾಡುತ್ತಾ ಸಂಬಂಧ ಕೊನೆಗೊಳ್ಳು ಇವುಗಳೇ ಕಾರಣ ಎಂದು ಬಿಂಬಿಸಲಾಗುತ್ತಿದೆ.
10 ವರ್ಷಗಳಿಗೂ ಹೆಚ್ಚಿನ ಸ್ನೇಹ, 4 ವರ್ಷದ ದಾಂಪತ್ಯ ಕೊನೆಗೊಂಡ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹಲವು ಮಂದಿ ಟೀಕೆ ಕೂಡ ಮಾಡಿದ್ದಾರೆ. ಇವುಗಳಿಗೆ ಉತ್ತರವಾಗಿ ಶುಕ್ರವಾರ (ಅ.08) ಇನ್ಸ್ಟಾಗ್ರಾಮ್ ವೇದಿಕೆಯಲ್ಲಿ ಗುಡ್ ಮಾರ್ನಿಂಗ್ ಜೊತೆಗೆ ಕೆಲವು ಸಾಲುಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರೀತಿಯಷ್ಟೇ ಬಯಸಿದ್ದು; 200 ಕೋಟಿ ರೂ. ಜೀವನಾಂಶ ನಿರಾಕರಿಸಿದ ನಟಿ ಸಮಂತಾ!

ಶುಕ್ರವಾರ ಬೆಳಿಗ್ಗೆ, ಸಮಂತಾ ರುತ್ ಪ್ರಭು ಲೇಖಕಿ ಫರೀಡಾ ಡಿ ಅವರ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. “ಕೆಲವು ವಿಷಯಗಳಲ್ಲಿ ನಿರಂತರವಾಗಿ ಮಹಿಳೆಯರು ಮಾತ್ರ ನೈತಿಕವಾಗಿ ಪ್ರಶ್ನಾರ್ಹವಾಗಿದ್ದರೇ, ಅದೇ ಕೆಲಸ ಪುರುಷ ಮಾಡಿದಾಗ ನೈತಿಕವಾಗಿ ಪ್ರಶ್ನಿಸಲ್ಪಡುವುದಿಲ್ಲ ಎಂದರೆ, ನಾವು ನಮ್ಮ ಸಮಾಜದಲ್ಲಿ ಮೂಲಭೂತವಾಗಿ ಯಾವುದೇ ನೈತಿಕತೆಯನ್ನು ಹೊಂದಿಲ್ಲ” ಎಂದಿದ್ದಾರೆ.

ತೆಲುಗು ನಟ ನಾಗ ಚೈತನ್ಯ ಜತೆಗಿನ ಮದುವೆ ಮುರಿದು ವಿಚ್ಛೇದನ ಪಡೆದುಕೊಂಡ ಬಳಿಕ ನಟಿ ಸಮಂತಾ ರುತ್ ಪ್ರಭು ಅವರ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗಿತ್ತು. “ಸುಮಂತಾ ಅವರಿಗೆ ಬೇರೆ ಸಂಬಂಧವಿತ್ತು. ಅವರು ಗರ್ಭಪಾತ ಮಾಡಿಸಿಕೊಂಡಿದ್ದಾರೆ” ಎಂದೆಲ್ಲ ಸುದ್ದಿ ಹಬ್ಬಿಸಲಾಗಿತ್ತು. ಇದಕ್ಕೂ ಸ್ಪಷ್ಟನೆ ನೀಡಿರುವ ಸಮಂತಾ, ಈ ಆರೋಪಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
“ಈ ಸಂದರ್ಭದಲ್ಲಿ ನನ್ನ ಜತೆಗಿರುವ ಎಲ್ಲರಿಗೂ ಧನ್ಯವಾದಗಳು, ನನ್ನ ಬಗ್ಗೆ ಹಲವು ಊಹಾಪೋಹಗಳನ್ನು ಹರಡಲಾಗಿದೆ. ನನಗೆ ಬೇರೆ ಸಂಬಂಧವಿತ್ತು, ನಾನು ಗರ್ಭಪಾತ ಮಾಡಿಸಿಕೊಂಡಿದ್ದೆ, ನನಗೆ ಮಕ್ಕಳು ಬೇಕಿರಲಿಲ್ಲ ಮತ್ತು ನಾನು ಅವಕಾಶವಾದಿಯಾಗಿದ್ದೆ ಎಂದೆಲ್ಲ ಹೇಳಲಾಗಿದೆ. ಆದರೆ ಅವೆಲ್ಲವೂ ನಿಜವಲ್ಲ. ವಿಚ್ಛೇದನದ ನೋವೇ ದೊಡ್ಡದಾಗಿದೆ. ಅದರ ಜತೆಗೆ ಇಂತಹ ಮಾತುಗಳಿಂದ ನನ್ನ ಮನಸ್ಸನ್ನು ಘಾಸಿಗೊಳಿಸಲಾಗುತ್ತಿದೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ. ನನ್ನ ಬಗೆಗಿನ ವದಂತಿಗಳೆಲ್ಲವೂ ಸುಳ್ಳು ಎಂದು ಹೇಳುತ್ತಿದ್ದೇನೆ. ಇದರಿಂದ ಹೊರಬರಲು ನನಗೆ ಇನ್ನಷ್ಟು ಸಮಯ ಬೇಕಿದೆ” ಎಂದು ಸುಮಂತಾ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಅಕ್ಟೋಬರ್ 2 ರಂದು ಸಮಂತಾ ಪ್ರಭು ಹಾಗೂ ನಾಗಚೈತನ್ಯ ವಿಚ್ಛೇದನ ಪಡೆದಿರುವುದಾಗಿ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿ, ಹಲವು ದಿನಗಳ ವದಂತಿಗೆ ಅಂತ್ಯ ಹಾಡಿದ್ದರು.
“ಸಾಕಷ್ಟು ಆಲೋಚಿಸಿ ಈ ನಿರ್ಧಾರ ಕೈಗೊಂಡಿದ್ದೇವೆ. ನಾವು ಸ್ವಂತ ಮಾರ್ಗಗಳನ್ನು ಅನುಸರಿಸಲು ಹಾಗೂ ಗಂಡ, ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ಅದು ನಮ್ಮ ಸಂಬಂಧದ ಮೂಲ ಸೆಲೆಯಾಗಿತ್ತು. ಅದು ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಉಳಿಸಿಕೊಳ್ಳುತ್ತದೆ ಎಂದು ನಾವು ನಂಬುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮಗೆ ಸಹಕರಿಸಬೇಕು, ನಾವು ಮುಂದುವರಿಯಲು ನಮಗೆ ಖಾಸಗಿತನವನ್ನು ನೀಡಬೇಕು” ಎಂದು ಬರೆದುಕೊಂಡಿದ್ದರು.

ವಿಚ್ಛೇದನ ಪಡೆದಿರುವ ಸಮಂತಾ ಅವರು ಐವತ್ತು ಕೋಟಿ ರೂ. ಜೀವನಾಂಶವನ್ನು ಪಡೆಯುತ್ತಾರೆ ಎಂಬ ವರದಿಗಳಾಗಿದ್ದವು. ಆದರೆ, ಅದನ್ನು ಸಮಂತಾ ನಿರಾಕರಿಸಿದ್ದಾರೆ. ಅಧಿಕೃತ ಮೂಲವೊಂದರ ಪ್ರಕಾರ ಸಮಂತಾ ಅವರಿಗೆ 200 ಕೋಟಿ ರೂ.ಗಿಂ ಹೆಚ್ಚು ಜೀವನಾಂಶದ ಅವಕಾಶ ಬಂದಿತ್ತು. ಆದರೆ ತನ್ನ ಸಂಬಂಧವನ್ನು ಕೊನೆಗೊಳಿಸಲು ಆಕೆ ಒಂದು ರೂಪಾಯಿ ಕೂಡ ಬಯಸಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಸಮಂತಾ ಹಾಗೂ ನಾಗಚೈತನ್ಯ ಅವರ ನಡುವೆ 2010ರಲ್ಲಿ ‘ಯೇ ಮಾಯಾ ಚೇಸವೆ’ ಸಿನಿಮಾದಲ್ಲಿ ಕೆಲಸ ಮಾಡುವಾಗ ಗೆಳೆತನ ಆರಂಭವಾಗಿತ್ತು. 2017ರಲ್ಲಿ ವಿವಾಹವಾಗಿದ್ದರು.
ಇದನ್ನೂ ಓದಿ: ಅಕ್ಟೋಬರ್‌ನಲ್ಲಿ ಒಟಿಟಿ ವೇದಿಕೆಯಲ್ಲಿ ಸಿಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ



ವಿವಾಹವಾಗಿತ್ತೊ
ಮದುವೆಯಾಗಿತ್ತೊ?