ಜಮ್ಮು ಕಾಶ್ಮೀರದ ಬಗ್ಗೆಗಿನ ಬಿಜೆಪಿ ಸರ್ಕಾರದ ನೀತಿಗಳು ರಾಜ್ಯವನ್ನು ದಶಕಗಳಷ್ಟು ಹಿಂದಕ್ಕೆ ಕರೆದೊಯ್ದಿದೆ ಎಂದು ಅವಿಭಜಿತ ರಾಜ್ಯದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮು ಕಾಶ್ಮೀರದ ಲಾಲ್ ಚೌಕ್ ಮತ್ತು ನಗರದ ಇತರ ವಾಣಿಜ್ಯ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಅನಿರೀಕ್ಷಿತ ಪರಿಶೀಲನೆಯ ಸಮಯದಲ್ಲಿ, ಮಹಿಳೆಯರು ಮತ್ತು ಅಪ್ರಾಪ್ತರನ್ನು ತಪಾಸಣೆ ನಡೆಸುತ್ತಿರುವ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಭಯೋತ್ಪಾದಕರ ಗುಂಡೇಟಿಗೆ ಬಿಹಾರಿ ಕಾರ್ಮಿಕರು ಬಲಿ
ಈ ಚಿತ್ರ ಮತ್ತು ವಿಡಿಯೊಗಳಿಗೆ ಪ್ರತಿಕ್ರಿಯೆ ನೀಡಿರುವ ಮೆಹಬೂಬಾ ಅವರು, “ಕಾಶ್ಮೀರದ ಪ್ರಸ್ತುತ ಪರಿಸ್ಥಿತಿಯನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಮಹಿಳೆಯರು ಮತ್ತು ಮಕ್ಕಳು ಕೂಡ ಈಗ ಶಂಕಿತರಾಗಿದ್ದಾರೆ. ಬಿಜೆಪಿ ಜಮ್ಮು ಕಾಶ್ಮೀರಕ್ಕೆ ತಂದಿರುವುದು ಇದನ್ನೇ ಆಗಿದೆ. ಅವರ ನೀತಿಗಳು ನಮ್ಮನ್ನು ದಶಕಗಳ ಹಿಂದಕ್ಕೆ ಕರೆದೊಯ್ದಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
Sums up the current situation in Kashmir where women & even children are suspects now. This is what BJP has brought J&K to. Their policies have taken us back by decades. https://t.co/YHbU4sL07Z
— Mehbooba Mufti (@MehboobaMufti) October 21, 2021
ಜಮ್ಮು ಕಾಶ್ಮೀರದಲ್ಲಿ ಸ್ಥಳೀಯರಲ್ಲದ ಕಾರ್ಮಿಕರು ಒಳಗೊಂಡಂತೆ ನಾಗರಿಕರ ಹತ್ಯೆಗಳು ನಡೆದ ನಂತರ ನಗರ ಮತ್ತು ಕಣಿವೆಯ ಇತರೆಡೆಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ: 2019 ರಿಂದ 2,300 ಕ್ಕೂ ಹೆಚ್ಚು ಜನರ ಮೇಲೆ UAPA ಅಡಿ ಪ್ರಕರಣ
In video – Women security personnel frisk females at Lal Chowk in Srinagar on Monday. #Kashmir #Srinagar pic.twitter.com/2Rk79NhQhc
— Umar Ganie (@UmarGanie1) October 18, 2021
ಇದನ್ನೂ ಓದಿ: ಅಕ್ರಮ ಬಂದೂಕು ಲೈಸೆನ್ಸ್: ಜಮ್ಮು ಕಾಶ್ಮೀರ, ದೆಹಲಿಯ 40 ಕಡೆ ಸಿಬಿಐ ದಾಳಿ



ಜಮ್ಮು ಮತ್ತು ಕಾಶ್ಮೀರ ದಶಕಗಳಷ್ಟು ಮುಂದೆ ಬಂದಿದೆ ಬಿಜೆಪಿ ಪಕ್ಷದ ವತಿಯಿಂದ ಆದರೆ ಮೆಹಬೂಬ ಮುಕ್ತಿ ಕುಟುಂಬ ಅಧಿಕಾರ ಇಲ್ಲದೇ ಹುಚ್ಚರಾಗಿದ್ದು ರಾಜಕೀಯ ನಿರುದ್ಯೋಗ ದಿಂದ ದಶಕ ಗಳಿಗಿಂತ ಶತಮಾನಗಳಷ್ಟು ಹಿಂದೆ ಹೋಗಿದೆ . ಅವಳನ್ನು ಮೊದಲು ಪಾಕ್ ,ಬಾಂಗ್ಲಾದೇಶಗಳಿಗೆ ಪಾರ್ಸೆಲ್ ಮಾಡಿದರೆ ದೇಶದ ಪೀಡೆ ಕೊನೆಯಾಗುತ್ತೆ