ಅತ್ಯಚಾರ ಮತ್ತು ಕೊಲೆ ಪ್ರಕರಣ ವರದಿಯಾದ ಒಂದೇ ತಿಂಗಳ ಅಂತರದಲ್ಲಿ ರಾಜಸ್ಥಾನದ ವಿಶೇಷ ನ್ಯಾಯಾಲಯವು 25 ವರ್ಷದ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ನಾಗೌರ್ ಜಿಲ್ಲೆಯ ಮೆರ್ತಾ ನಗರದ ವಿಶೇಷ ಪೋಕ್ಸೊ ನ್ಯಾಯಾಲಯವು ಈ ಮಹತ್ವದ ತೀರ್ಪನ್ನು ಶುಕ್ರವಾರ ಘೋಷಿಸಿದೆ.
ಈ ವರ್ಷದ ಸೆಪ್ಟೆಂಬರ್ 20 ರಂದು, ಜಿಲ್ಲೆಯ ಪಡುಕಲಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ನಡೆದಿತ್ತು.
“ವಿಶೇಷ ನ್ಯಾಯಾಧೀಶೆ ರೇಖಾ ರಾಥೋಡ್ ಅವರು, ಅಪರಾಧಿ ದಿನೇಶ್ ಜಾಟ್ ಸಂತ್ರಸ್ತ ಮಗುವಿನ ಮೇಲೆ 11 ದಿನಗಳ ಕಾಲ ನಿರಂತರವಾಗಿ ನಡೆಸಿದ ಅತ್ಯಾಚಾರ ಮತ್ತು ನಂತರ ನಡೆಸಿದ ಕೊಲೆಯನ್ನು ‘ಅಪರೂಪದಲ್ಲಿ ಅಪರೂಪ’ ಎಂದು ಘೋಷಿಸಿದ್ದಾರೆ” ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸುಮರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ: ಹೋಂವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಯನ್ನು ಥಳಿಸಿ ಕೊಂದ ಶಿಕ್ಷಕ
ದಿನೇಶ್ ಜಾಟ್ ಸಂತ್ರಸ್ತ ಮಗುವಿನ ತಾಯಿಯ ಸಂಬಂಧಿಯಾಗಿದ್ದ. ಪ್ರಕರಣದ ಕುರಿತು ಸಂತ್ರಸ್ತೆಯ ತಂದೆ ದೂರು ನೀಡಿದ್ದರು. ಇದರ ನಂತರ ತನಿಖೆ ಪ್ರಾರಂಭಿಸಿದ ಪೊಲೀಸರು ಹೊಲದಲ್ಲಿ ಹೂತಿಟಿದ್ದ ಮಗುವಿನ ಶವವನ್ನು ಪತ್ತೆ ಹಚ್ಚಿದ್ದರು. ನಂತರ ಪರಿಸ್ಥಿತಿಯ ಗಂಭೀರತೆಯನ್ನು ಅರಿತ, ಅಜ್ಮೇರ್ ರೇಂಜ್ ಐಜಿ ಮತ್ತು ಇತರರ ನೇತೃತ್ವದ ಪೊಲೀಸ್ ತಂಡ ನಾಗೂರಿಗೆ ಧಾವಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿತು.
ಸಾಕ್ಷಿಯ ಆಧಾರದ ಮೇಲೆ ಆರೋಪಿಯನ್ನು ವಿಶೇಷ ಪೊಲೀಸ್ ತಂಡವು ಬಂಧಿಸಿತು ಮತ್ತು ಆರು ದಿನಗಳಲ್ಲಿ ಆತನನ್ನು ಮೆರ್ಟಾ ನಗರದ ಪೋಕ್ಸೊ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸೆಪ್ಟೆಂಬರ್ 28 ರಂದು ವಿಚಾರಣೆ ಪ್ರಾರಂಭವಾಗಿ, ಪ್ರತಿ ದಿನ ಸಾಕ್ಷಿದಾರರನ್ನು ಕರೆಸಲಾಗಿತ್ತು. ಅಂತಿಮವಾಗಿ, ಅಕ್ಟೋಬರ್ 21 ರಂದು, ದಿನೇಶ್ ಅಪರಾಧಿ ಎಂದು ಸಾಬೀತಾಗಿ, ಶುಕ್ರವಾರ ಆತನಿಗೆ ಮರಣದಂಡನೆ ವಿಧಿಸಲಾಗಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ನ್ಯಾಯಾಲಯದ ತ್ವರಿತ ತೀರ್ಪು ಮತ್ತು ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸಿದ ಪೊಲೀಸರ ನಡೆಯನ್ನು ಸ್ವಾಗತಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ದಲಿತ ವ್ಯಕ್ತಿಯ ಬರ್ಬರ ಹತ್ಯೆ: ತ್ವರಿತ ಕ್ರಮಕ್ಕೆ ಜಿಗ್ನೇಶ್ ಮೇವಾನಿ ಆಗ್ರಹ
-
ಯೋಜನೆಗಳ ಹೆಸರಿನಲ್ಲಿ ಪರಿಸರದ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ.:ಶಿವಾನಂದ ಕುಗ್ವೆರೈತ ಸಂಘ ಮುಖಂಡರು #naanugauri
-
ರಾಜ್ಯ ಸರ್ಕಾರ ಮಾತು ಕೊಟ್ಟಂತೆ ನಡೆದುಕೊಳ್ಳುತ್ತಿಲ್ಲ:ಬಡಗಲಪುರ ನಾಗೇಂದ್ರ #naanugauri
-
ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನ ಜಾರಿ ಮಾಡುತ್ತಿದೆ: ಪ್ರೊ. ಬಾಬು ಮ್ಯಾಥ್ಯೂ #naanugauri
-
LIVE : ಹದಿನೈದು ಪ್ರಮುಖ ಹಕ್ಕೊತ್ತಾಯಗಳ ಪರಿಹಾರಕ್ಕಾಗಿ ಆಗ್ರಹಿಸಿ ಬೆಂಗಳೂರು ಚಲೋ
ಇದನ್ನೂ ಓದಿ: ರಾಜಸ್ಥಾನ: ದಲಿತ ಯುವಕನ ಬರ್ಬರ ಗುಂಪು ಹತ್ಯೆ, ಕಾಂಗ್ರೆಸ್ ವಿರುದ್ಧ ಭುಗಿಲೆದ್ದ ಆಕ್ರೋಶ



ಒಳ್ಳೆಯ ನಿರ್ಧಾರ ಆರೋಪಿಗೆ ಗಲ್ಲು ಶಿಕ್ಷೆ ನೀಡಿರೋದು??????
ಒಳ್ಳೆಯ ನಿರ್ಧಾರ ಆರೋಪಿಗೆ ಗಲ್ಲು ಶಿಕ್ಷೆ ನೀಡಿರೋದು??????