Homeಮುಖಪುಟಕೃಷಿ ನೀತಿಯ ಮರುಚಿಂತನೆ ಇಂದಿನ ಅಗತ್ಯ: ತನ್ನ ಪಕ್ಷದ ವಿರುದ್ದ ಮತ್ತೆ ದಾಳಿ ಮಾಡಿದ BJP...

ಕೃಷಿ ನೀತಿಯ ಮರುಚಿಂತನೆ ಇಂದಿನ ಅಗತ್ಯ: ತನ್ನ ಪಕ್ಷದ ವಿರುದ್ದ ಮತ್ತೆ ದಾಳಿ ಮಾಡಿದ BJP ಸಂಸದ

- Advertisement -
- Advertisement -

ಬಿಜೆಪಿ ಸಂಸದ ವರುಣ್ ಗಾಂಧಿ ತನ್ನ ಪಕ್ಷದ ವಿರುದ್ದ ದಾಳಿ ಮಾಡುವುದನ್ನು ಮತ್ತೆ ಮುಂದುವರೆಸಿದ್ದಾರೆ. ರೈತರು ತಮ್ಮ ಭತ್ತಕ್ಕೆ ಬೆಂಕಿ ಹಾಕುವ ವಿಡಿಯೊವನ್ನು ಶನಿವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಈ ವ್ಯವಸ್ಥೆ ರೈತರನ್ನು ಎಲ್ಲಿ ನಿಲ್ಲುವಂತೆ ಮಾಡಿದೆ? ಕೃಷಿ ನೀತಿಯನ್ನು ಮರುಚಿಂತನೆ ಮಾಡುವುದು ಇಂದಿನ ಅಗತ್ಯವಾಗಿದೆ” ಎಂದು ಹೇಳಿದ್ದಾರೆ.

ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ರೈತ ಎನ್ನಲಾಗಿರುವ ವ್ಯಕ್ತಿಯೊಬ್ಬರು ತನ್ನ ಬೆಳೆಗೆ ಇಂಧನವನ್ನು ಸುರಿಯುವುದನ್ನು ಕಾಣಬಹುದು. ಕೆಲವರು ಅವರನ್ನು ತಡೆಯಲು ಪ್ರಯತ್ನಿಸಿದರೂ, ಅವರು ಇಡೀ ಬೆಳೆಗೆ ಬೆಂಕಿ ಹಚ್ಚುತ್ತಾರೆ.

ಇದನ್ನೂ ಓದಿ: ರೈತರನ್ನು ಬೆಂಬಲಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಭಾಷಣ ಹಂಚಿಕೊಂಡ ಬಿಜೆಪಿ ಸಂಸದ ವರುಣ್ ಗಾಂಧಿ

ವರುಣ್ ಗಾಂಧಿ ಟ್ವಿಟರ್‌ನಲ್ಲಿ, “ಉತ್ತರ ಪ್ರದೇಶದ ರೈತರಾದ ಸಮೋಧ್ ಸಿಂಗ್, ಕಳೆದ 15 ದಿನಗಳಿಂದ ತನ್ನ ಭತ್ತದ ಬೆಳೆಯನ್ನು ಮಾರಲು ಮಂಡಿಯಲ್ಲಿ ಅಲೆದಾಡುತ್ತಿದ್ದಾರೆ. ಆದರೆ, ಭತ್ತ ಮಾರಾಟವಾಗದಿದ್ದಾಗ ಹತಾಶನಾಗಿ ಬೆಂಕಿ ಹಚ್ಚಿಕೊಂಡಿದ್ದಾರೆ. ಈ ವ್ಯವಸ್ಥೆಯು ರೈತರನ್ನು ಎಲ್ಲಿ ನಿಲ್ಲುವಂತೆ ಮಾಡಿದೆ? ಕೃಷಿ ನೀತಿಯನ್ನು ಮರುಚಿಂತನೆ ಮಾಡುವುದು ಇಂದಿನ ಅಗತ್ಯವಾಗಿದೆ” ಎಂದು ಬರೆದು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

 

ಇದನ್ನೂ ಓದಿ: ’5 ವರ್ಷದಿಂದ ಕಾರ್ಯಕಾರಣಿಯ ಒಂದು ಸಭೆಗೂ ಹಾಜರಾಗಿಲ್ಲ’- ಬಿಜೆಪಿ ಸಂಸದ ವರುಣ್ ಗಾಂಧಿ

ವರುಣ್ ಗಾಂಧಿ ಇತ್ತೀಚೆಗೆ ಬಿಜೆಪಿ ವಿರುದ್ದ ತೀವ್ರ ದಾಳಿಯನ್ನು ಮಾಡುತ್ತಿದ್ದಾರೆ. ಆದರೆ ಈ ಬಾರಿ ನೇರ ದಾಳಿಯನ್ನು ಮಾಡದೆ, ಸರ್ಕಾರವು ಕೃಷಿ ಸಮಸ್ಯೆಗಳನ್ನು ನಿಭಾಯಿಸುವುದರಲ್ಲಿ ತಡವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಅವರು ರಾಜ್ಯದ ಟೆರೈ ಪ್ರದೇಶದಲ್ಲಿ ಪ್ರವಾಹದ ಫೋಟೋಗಳನ್ನು ಟ್ವೀಟ್ ಮಾಡಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಟೆರೈನ ಬಹುಭಾಗ ಜಲಾವೃತಗೊಂಡಿದೆ. ಅವರಿಗೆ ಪಡಿತರವನ್ನು ನೀಡುವುದರಿಂದ ಈ ವಿಪತ್ತು ಮುಗಿಯುವವರೆಗೂ ಯಾವುದೇ ಕುಟುಂಬವು ಹಸಿವಿನಿಂದ ಬಳಲುವುದಿಲ್ಲ. ಆದರೆ ಪ್ರತಿಯೊಂದು ವಿಷಯದಲ್ಲೂ ವೈಯಕ್ತಿಕವಾಗಿ ನೇತೃತ್ವದ ಬೇಕೆಂದರೆ ಹೇಗೆ, ಆಡಳಿತ ಅಂದರೆ ಏನು? ಎಂದು ಅವರು ಪ್ರಶ್ನಿಸಿದ್ದರು.

ವರುಣ್ ಗಾಂಧಿ ಅವರು ಇತ್ತೀಚೆಗೆ ಲಖಿಂಪುರ್‌ ಖೇರಿ ಘಟನೆಯ ಬಗ್ಗೆ ಬಿಜೆಪಿ ವಿರುದ್ದ ಆಕ್ರೊಶ ವ್ಯಕ್ತಪಡಿಸಿದ ನಂತರ ಅವರನ್ನು ಪಕ್ಷವು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಹೊರ ಹಾಕಿತ್ತು.

ಇದನ್ನೂ ಓದಿ: ‘ಅತ್ಯಂತ ಸ್ಪಷ್ಟ’ – ಮತ್ತೆ ರೈತರ ಪರ ಟ್ವೀಟ್ ಮಾಡಿದ ಬಿಜೆಪಿ ನಾಯಕ ವರುಣ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯವರ ಹಲವಾರು ಹೇಳಿಕೆಗಳಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಸೀತಾರಾಂ ಯೆಚೂರಿ

0
'ದೇಶದ ವಿವಿಧ ಭಾಗಗಳಲ್ಲಿ ತಮ್ಮ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಹೇಳಿಕೆಗಳನ್ನು ನೀಡಿದ್ದಾರೆ' ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ...