ಮುಜಾಫರ್‌ ನಗರ ಗಲಭೆ ಪ್ರಕರಣ: ಖುಲಾಸೆಗೊಂಡ BJP ಶಾಸಕ | Naanu gauri

2013 ರಲ್ಲಿ ಉತ್ತರ ಪ್ರದೇಶದ ಮುಜಾಫರ್‌ ನಗರದಲ್ಲಿ ನಡೆದಿದ್ದ ಕೋಮುಗಲಭೆ ಪ್ರಕರಣದಲ್ಲಿ ಬಿಜೆಪಿ ಶಾಸಕ ವಿಕ್ರಮ್ ಸೈನಿ ಮತ್ತು ಇತರ 11 ಮಂದಿಯನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಆಗಸ್ಟ್ 2013ರಂದು ಕವಾಲ್ ಗ್ರಾಮದಲ್ಲಿ ಸೋದರ ಸಂಬಂಧಿಗಳಾದ ಸಚಿನ್ ಮತ್ತು ಗೌರವ್ ಎಂಬುವವರ ಹತ್ಯೆಯ ನಂತರ ಹಿಂಸಾಚಾರ ನಡೆದಿತ್ತು. ಹಿಂಸಾಚಾರದಲ್ಲಿ ಶಾಸಕ ಸೈನಿ ಮತ್ತು ಇತರರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ: ಮುಜಾಫರ್‌ನಗರ ಕೋಮು ಗಲಭೆಗೆ ಪ್ರಚೋದನೆ: ಬಿಜೆಪಿ ಮುಖಂಡರ ವಿರುದ್ಧದ ಪ್ರಕರಣ ಹಿಂಪಡೆಯಲು ಅನುಮತಿ

ಘಟನೆ ನಡೆದ ಸಂದರ್ಭದಲ್ಲಿ ಖತೌಲಿಯ ಶಾಸಕ ಸೈನಿ ಅವರು ಗ್ರಾಮದ ಪ್ರಧಾನರಾಗಿದ್ದರು.

ಪ್ರಕರಣದ ವಿಚಾರಣೆ ನಡೆಸಿರುವ ಮುಜಾಫರ್‌ ನಗರ ನ್ಯಾಯಾಲಯದ ವಿಶೇಷ ನ್ಯಾಯಮೂರ್ತಿ ಗೋಪಾಲ್ ಉಪಾಧ್ಯಾಯ ಅವರು, ವಿಕ್ರಮ್ ಸೈನಿ ಮತ್ತು ಇತರ 11 ಮಂದಿ ವಿರುದ್ದ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಹೇಳಿದ್ದು, ಅವರೆಲ್ಲರನ್ನೂ ಖುಲಾಸೆಗೊಳಿಸಿದ್ದಾರೆ.

ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲ ನರೇಂದ್ರ ಶರ್ಮಾ, “ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಸಾಕ್ಷಿಗಳು ಪ್ರಾಸಿಕ್ಯೂಷನ್‌ ಅನ್ನು ಬೆಂಬಲಿಸಲಿಲ್ಲ” ಎಂದು ಹೇಳಿದ್ದಾರೆ.

ಜಾಮೀನಿನ ಮೇಲೆ ಹೊರಗಿದ್ದ ಸೈನಿ ಮತ್ತು ಇತರ ಆರೋಪಿಗಳು ಶುಕ್ರವಾರ ಮುಜಾಫರ್‌ ನಗರ ನ್ಯಾಯಾಲಯದಲ್ಲಿ ಹಾಜರಾಗಿದ್ದರು.

ಇದನ್ನೂ ಓದಿ: ಗೋರಖ್‍ಪುರ ಮತ್ತು ಮುಜಾಫರ್‍ಪುರಗಳು ಏಕೆ ಮರುಕಳಿಸುತ್ತಲೇ ಇರಲಿವೆ?

LEAVE A REPLY

Please enter your comment!
Please enter your name here