2ಜಿ ತರಂಗಾಂತರ (2G Spectrum) ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಸಂಜಯ್ ನಿರುಪಮ್ ಅವರು ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ ಏಳು ವರ್ಷಗಳ ನಂತರ, ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವಿನೋದ್ ರಾಯ್ ಅವರು ಸಂಜಯ್ ನಿರುಪಮ್ ಅವರಿಗೆ “ಬೇಷರತ್ ಕ್ಷಮೆಯಾಚನೆ” ಯನ್ನು ಮಾಡಿದ್ದಾರೆ.
2014 ರಲ್ಲಿ, ವಿನೋದ್ ರಾಯ್ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, 2G ತರಂಗಾಂತರ ಹಂಚಿಕೆ ಪ್ರಕರಣದ ವರದಿಯಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರನ್ನು ಹೊರಗಿಡುವಂತೆ ಒತ್ತಡ ಹೇರಿದ ಸಂಸದರಲ್ಲಿ ಸಂಜಯ್ ನಿರುಪಮ್ ಕೂಡಾ ಒಬ್ಬರು ಎಂದು ಹೇಳಿದ್ದರು. ವಿನೋದ್ ರೈ ಅವರ 2014 ರ ಪುಸ್ತಕ, Not Just an Accountant: The Diary of the Nation’s Conscience Keeper ಬಿಡುಗಡೆಯ ಸಮಯದಲ್ಲಿ ಈ ಸಂದರ್ಶನವನ್ನು ಪ್ರಸಾರ ಮಾಡಲಾಯಿತು ಮತ್ತು ಮಾಧ್ಯಮಗಳಲ್ಲಿ ಅವರ ಹೇಳಿಕೆಯನ್ನು ಪ್ರಕಟಿಸಲಾಗಿತ್ತು.
ಇದನ್ನೂ ಓದಿ: ಪೆಗಾಸಸ್ ಹಗರಣ – ಸುಪ್ರೀಂನಲ್ಲಿ ಅಫಿಡವಿಟ್‌ಗಳನ್ನು ಸಲ್ಲಿಸುವುದಿಲ್ಲ ಎಂದ ಒಕ್ಕೂಟ ಸರ್ಕಾರ!
ವಿನೋದ್ ರಾಯ್ ಅವರ ಬೇಷರತ್ತಾದ ಕ್ಷಮೆಯಾಚನೆಯ ಕುರಿತು ಪ್ರತಿಕ್ರಿಯಿಸಿ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಸಂಜಯ್ ನಿರುಪಮ್, ಇದನ್ನು “ಸುವರ್ಣ ದಿನ” ಎಂದು ಬಣ್ಣಿಸಿದ್ದಾರೆ.
My Video statement regarding former CAG Vinod Rai’s unconditional apology to me.
He must apologise to the nation now for his all false reports. pic.twitter.com/cYOK7eaSX3— Sanjay Nirupam (@sanjaynirupam) October 28, 2021
“ಆ ಸಮಯದಲ್ಲಿ ಅವರ ತಪ್ಪು ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವಂತೆ ನಾನು ಮಾಜಿ ಸಿಎಜಿಯನ್ನು ಒತ್ತಾಯಿಸಿದ್ದೆ. ಆದರೆ ಅವರು ಹಾಗೆ ಮಾಡಲು ನಿರಾಕರಿಸಿದರು. ಹಾಗಾಗಿ ನಾನು ಹೊಸದಿಲ್ಲಿಯ ಪಟಿಯಾಲ ಹೌಸ್‌ನಲ್ಲಿರುವ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ವಿನೋದ್ ರೈ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ” ಎಂದು ಹೇಳಿದ ಅವರು ಕಲ್ಲಿದ್ದಲು ಬ್ಲಾಕ್ ಮತ್ತು 2ಜಿ ತರಂಗಾಂತರ ಹಂಚಿಕೆ ಪ್ರಕರಣಗಳ ಕುರಿತ ವಿನೋದ್ ರಾಯ್ ಅವರ ವರದಿಯು ‘ಸಂಪೂರ್ಣ ನಕಲಿ’ ಎಂದು ಕರೆದಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕೋರ್ಟ್‌ಗೆ ಶರಣಾದ RSS ಮುಖಂಡ
“ಇದನ್ನು ನ್ಯಾಯಾಲಯ ಹೇಳಿಲ್ಲ. ಆದರೆ, 2ಜಿ ತರಂಗಾಂತರ ಹಂಚಿಕೆ ಮತ್ತು ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದಲ್ಲಿ ಅವರು ಸಿದ್ಧಪಡಿಸಿದ ವರದಿಯು ಅಸಂಬದ್ಧವಾಗಿದೆ ಎಂದು ನಾನು ಹೇಳಲು ಬಯಸುತ್ತೇನೆ… 2ಜಿ ವರದಿಯ ಪ್ರಕರಣದ, ಏಳು ವರ್ಷಗಳ ವಿಚಾರಣೆಯ ನಂತರ ಕೂಡಾ, ಆಪಾದಿತ ಹಗರಣದ ಬಗ್ಗೆ ಸಿಬಿಐ ಯಾವುದೇ ಪುರಾವೆಯನ್ನು ನೀಡಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ವರದಿ ನಕಲಿಯಾಗಿತ್ತು. ಕಲ್ಲಿದ್ದಲು ನಿಕ್ಷೇಪ ಹಂಚಿಕೆ ವರದಿಯೂ ನಕಲಿ. ಈ ನಕಲಿ ವರದಿಗಳಿಗೂ ವಿನೋದ್ ರಾಯ್ ಇಡೀ ದೇಶಕ್ಕೆ ಕ್ಷಮೆ ಯಾಚಿಸಬೇಕು” ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.
ನೋಟರಿ ಮಾಡಿದ ಅಫಿಡವಿತ್
ವಿನೋದ್ ರಾಯ್ ಅವರು ಮಾಡಿರುವ ನೋಟರಿ ಅಫಿಡವಿಟ್‌ನ ಪ್ರತಿಯೊಂದನ್ನು ಟ್ವೀಟ್ ಮಾಡಿರುವ ಸಂಜಯ್ ನಿರುಪಮ್, “ಯುಪಿಎ (ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್) ಸರ್ಕಾರವು ಮಾಡಿದ 2ಜಿ ಮತ್ತು ಕಲ್ಲಿದ್ದಲು ನಿಕ್ಷೇಪಗಳ ಬಗ್ಗೆ ಎಲ್ಲಾ ಖೋಟಾ ವರದಿಗಳಿಗಾಗಿ ವಿನೋದ್ ರೈ ಅವರು ಈಗ ರಾಷ್ಟ್ರದ ಕ್ಷಮೆಯಾಚಿಸಬೇಕು” ಎಂದು ಹೇಳಿದ್ದಾರೆ.
Finally former CAG Vinod Rai tendered an unconditional apology to me in a defamation case filed by me in MM Court, Patiyala house, New Delhi today.
He must apologize to the nation now for all his forged reports about 2G and Coal block allocations done by the UPA Govt.#VinodRai pic.twitter.com/OdxwZXonCq— Sanjay Nirupam (@sanjaynirupam) October 28, 2021
ಇದನ್ನೂ ಓದಿ: ‘ರಾಹುಲ್ ಗಾಂಧಿಯ ಸಮಸ್ಯೆಯೇನೆಂದರೆ…!’: ಪ್ರಶಾಂತ್ ಕಿಶೋರ್ ಖಾಸಗಿ ಮಾತು ವೈರಲ್
ಅಕ್ಟೋಬರ್ 23 ರಂದು ವಿನೋದ್ ರಾಯ್ ಈ ಅಫಿಡವಿತ್ ಅನ್ನು ನೋಟರಿ ಮಾಡಿದ್ದರು. ಅದರಲ್ಲಿ, “ಸೆಪ್ಟೆಂಬರ್ 14 ರ ತನ್ನ ಪುಸ್ತಕ ಬಿಡುಗಡೆಯ ಸಮಯದಲ್ಲಿ ಸಂಜಯ್ ನಿರುಪಮ್ ವಿರುದ್ದ ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಟೈಮ್ಸ್ ನೌ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ಮಾಧ್ಯಮ ಸಂದರ್ಶನಗಳಲ್ಲಿ ಪ್ರಸಾರವಾಗಿದೆ ಮತ್ತು ಟೈಮ್ಸ್ ಆಫ್ ಇಂಡಿಯಾ ಹಾಗೂ ದಿ ಇಂಡಿಯನ್ ಎಕ್ಸ್‌ಪ್ರೆಸ್ ಸೇರಿದಂತೆ ಮಾಧ್ಯಮ ಪ್ರಕಟಣೆಗಳಲ್ಲಿ ಪ್ರಕಟಿಸಿದ್ದಾರೆ” ಎಂದು ಒಪ್ಪಿಕೊಂಡಿದ್ದಾರೆ.
“ಸಂದರ್ಶಕರು ನನಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ನಾನು ಪ್ರಮಾದಪೂರ್ವಕವಾಗಿ ಮತ್ತು ತಪ್ಪಾಗಿ ಸಂಜಯ್ ನಿರುಪಮ್ ಅವರ ಹೆಸರನ್ನು ಸಂಸದರಲ್ಲಿ ಒಬ್ಬರು ಎಂದು ಉಲ್ಲೇಖಿಸಿದ್ದೇನೆ. ಅದು ದೂರದರ್ಶನದಲ್ಲಿ ಪ್ರಸಾರವಾದ ಮತ್ತು ಪ್ರಕಟಿಸಿದ ಹೇಳಿಕೆಗಳು ವಾಸ್ತವವಾಗಿ ತಪ್ಪು” ಎಂದು ವಿನೋದ್ ರಾಯ್ ಹೇಳಿದ್ದಾರೆ.
“ನನ್ನ ಹೇಳಿಕೆಗಳಿಂದಾಗಿ ಸಂಜಯ್ ನಿರುಪಮ್, ಅವರ ಕುಟುಂಬ ಮತ್ತು ಅವರ ಹಿತೈಷಿಗಳಿಗೆ ಉಂಟಾದ ನೋವು ಮತ್ತು ಸಂಕಟವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಹೀಗಾಗಿ, ನನ್ನ ಇಂತಹ ಹೇಳಿಕೆಗಳಿಂದ ಉಂಟಾದ ನೋವಿಗೆ ನನ್ನ ಬೇಷರತ್ ಕ್ಷಮೆಯನ್ನು ಸಂಜಯ್ ನಿರುಪಮ್, ಅವರ ಕುಟುಂಬ, ಅವರ ಸ್ನೇಹಿತರು ಮತ್ತು ಅವರ ಹಿತೈಷಿಗಳೊಂದಿಗೆ ಕೇಳುತ್ತಿದ್ದೇನೆ….ಸಂಜಯ್ ನಿರುಪಮ್ ಅವರು ನನ್ನ ಬೇಷರತ್ ಕ್ಷಮೆಯನ್ನು ಪರಿಗಣಿಸಿ, ಇದನ್ನು ಇಲ್ಲಿಗೆ ಬಿಟ್ಟುಬಿಡುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ವಿನೋದ್ ರಾಯ್ ಅಫಿಡವಿಟ್‌ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ‘ಸತಿ’ ಹೋದ ರೂಪ್ ಕನ್ವರ್ ದೇಗುಲಕ್ಕೆ ಆರೆಸ್ಸೆಸ್ ಬೆಂಬಲ ಮತ್ತು ನಾನು ಆರೆಸ್ಸೆಸ್ ತೊರೆದದ್ದು ಹೀಗೆ


