Homeಮುಖಪುಟಪೆಗಾಸಸ್‌ ಹಗರಣ - ಸುಪ್ರೀಂನಲ್ಲಿ ಅಫಿಡವಿಟ್‌ಗಳನ್ನು ಸಲ್ಲಿಸುವುದಿಲ್ಲ ಎಂದ ಒಕ್ಕೂಟ ಸರ್ಕಾರ!

ಪೆಗಾಸಸ್‌ ಹಗರಣ – ಸುಪ್ರೀಂನಲ್ಲಿ ಅಫಿಡವಿಟ್‌ಗಳನ್ನು ಸಲ್ಲಿಸುವುದಿಲ್ಲ ಎಂದ ಒಕ್ಕೂಟ ಸರ್ಕಾರ!

- Advertisement -

ಪೆಗಾಸಸ್ ಗೂಢಚಾರ ಹಗರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಸುಪ್ರಿಂಕೊರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ವಿವರವಾದ ಅಫಿಡವಿಟ್‌ಗಳನ್ನು ಸಲ್ಲಿಸುವುದಿಲ್ಲ ಎಂದು ಒಕ್ಕೂಟ ಸರ್ಕಾರ ಸೋಮವಾರ ಹೇಳಿದೆ. ಈ ಬಗ್ಗೆ ಮುಚ್ಚಿಡಲು ಏನೂ ಇಲ್ಲ ಎಂದು ಸುಪ್ರೀಂಕೋರ್ಟ್‌ಗೆ ಒಕ್ಕೂಟ ಸರ್ಕಾರ ಹೇಳಿದ್ದು, ಅದಕ್ಕಾಗಿಯೇ ಡೊಮೇನ್ ತಜ್ಞರ ಸಮಿತಿಯನ್ನು ರಚಿಸುವುದಾಗಿ ಅದು ತಿಳಿಸಿದೆ.

ಸುಪ್ರೀಂಕೋರ್ಟ್‌ ಅಫಿಡವಿಟ್ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿತ್ತು, ಜೊತೆಗೆ ಒಕ್ಕೂಟ ಸರ್ಕಾರ ಕೂಡಾ ಈ ಬಗ್ಗೆ ಎರಡು ಬಾರಿ ಸಮಯ ತೆಗೆದುಕೊಂಡಿತ್ತು. “ಡೊಮೇನ್ ತಜ್ಞರ ಸಮಿತಿಯ ವರದಿಯು ಸುಪ್ರೀಂಕೋರ್ಟ್‌ಗೆ ಲಭ್ಯವಾಗುತ್ತದೆ” ಎಂದು ಒಕ್ಕೂಟ ಸರ್ಕಾರವನ್ನು ಪ್ರತಿನಿಧಿಸಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಆದರೆ ಇದಕ್ಕೆ ಕೋಪಗೊಂಡ ಸುಪ್ರೀಂಕೋರ್ಟ್‌, ‘ರಾಷ್ಟ್ರೀಯ ಭದ್ರತೆ’ ಕುರಿತ ವಿಷಯನ್ನು ನಾವು ಅರ್ಥಮಾಡಿಕೊಂಡಿದ್ದು, ಆದರೆ ಸರ್ಕಾರದೊಂದಿಗೆ ವ್ಯಕ್ತಿಗಳ ಫೋನ್ ಹ್ಯಾಕಿಂಗ್ ಆರೋಪಗಳಿಗೆ ಪ್ರತಿಕ್ರಿಯಿಸಲು ಮಾತ್ರ ಕೇಳಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಪೆಗಾಸಸ್ ಬಗ್ಗೆ ಮಾಧ್ಯಮ ವರದಿ ನಿಜವಾಗಿದ್ದರೆ ‘ಹಗರಣ ನಿಜಕ್ಕೂ ಗಂಭೀರ’: ಸುಪ್ರೀಂಕೋರ್ಟ್‌

“ಕಳೆದ ಬಾರಿಯೂ ರಾಷ್ಟ್ರೀಯ ಭದ್ರತೆ ಕುರಿತು ಹೇಳಲಾಯಿತು… ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ. ವೈಯಕ್ತಿಕ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆಯೆ ಎಂದು ನಾವು ನಿಮ್ಮನ್ನು ಕೇಳಿದ್ದೇವೆ … ಹಾಗಾಗಿ ಅದು ಅಧಿಕೃತವಾಗಿದೆಯೇ ಎಂದು ನಿಮ್ಮ ಅಫಿಡವಿಟ್ ಸಲ್ಲಿಸಿ” ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ.

ಕಳೆದ ತಿಂಗಳು ಅಫಿಡವಿಟ್ ಸಲ್ಲಿಸಲು ನ್ಯಾಯಾಲಯವು ಒಕ್ಕೂಟ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಜೊತೆಗೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಯಾವುದೆ ವಿಷಯವನ್ನು ಬಹಿರಂಗಪಡಿಸಬೇಕು ಎಂದು ಕೋರ್ಟ್‌ ಬಯಸುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿತು.

“ನಾವು ಹ್ಯಾಕ್ ಆಗಿರುವ ವ್ಯಕ್ತಿಗಳ ಫೋನ್‌ಗಳ ಸಮಸ್ಯೆಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇವೆ. ಖಾಸಗಿತನದ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಹೇಳುವ ವ್ಯಕ್ತಿಗಳೂ ಇದ್ದಾರೆ. ಈ ಬಗ್ಗೆ ಯಾವ ಏಜೆನ್ಸಿಗೆ ಅಧಿಕಾರವಿದೆ ಮತ್ತು ಅದಕ್ಕೆ ಅನುಮತಿ ಇದೆಯೋ ಇಲ್ಲವೋ … ಎಂದು ನಮಗೆ ತಿಳಿಯಬೇಕಾಗಿದೆ” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಪೆಗಾಸಸ್ ತನಿಖೆಗೆ ಆಗ್ರಹಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌!

ಅರ್ಜಿದಾರರಾಗಿರುವ ಪತ್ರಕರ್ತ ಎನ್ ರಾಮ್ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್‌, “ನಾವು ಪೆಗಾಸಸ್‌ ಅನ್ನು ಬಳಸಿದ್ದಾರೆಯೆ ಎಂದು ತಿಳಿಯಲು ಬಯಸುತ್ತೇವೆ… ರಾಷ್ಟ್ರೀಯ ಭದ್ರತೆಗೆ ಅಡ್ಡಿಪಡಿಸಲು ನಾವು ಬಯಸುವುದಿಲ್ಲ. ಇದು ವ್ಯಕ್ತಿಗಳ ಗೌಪ್ಯತೆಯ ಬಗ್ಗೆಗಿನ ವಿಷಯವಾಗಿದೆ. ಒಂದು ವೇಳೆ ಸಾಮಾನ್ಯ ನಾಗರೀಕರನ್ನು ಗುರಿಯಾಗಿಸಿ ಪೆಗಾಸಸ್‌ ಅನ್ನು ಬಳಸಿದರೆ ಅದು ತುಂಬಾ ಗಂಭೀರ ವಿಚಾರವಾಗಿದೆ” ಎಂದು ಹೇಳಿದ್ದಾರೆ.

ನ್ಯಾಯಾಲಯವು ಈ ವಿಷಯದ ಮೇಲೆ ಆದೇಶಗಳನ್ನು ಕಾಯ್ದಿರಿಸಿದ್ದು, ಎರಡು ಮೂರು ದಿನಗಳಲ್ಲಿ ಅವುಗಳನ್ನು ಘೋಷಿಸುವುದಾಗಿ ಹೇಳಿತು. ಸರ್ಕಾರವು ತನ್ನ ಮನಸ್ಸನ್ನು ಬದಲಾಯಿಸಿದರೆ ಅದಕ್ಕಿಂತ ಮೊದಲು ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಸುಪ್ರೀಂಕೋರ್ಟ್‌ ಹೇಳಿದ್ದಾರೆ.

ಇಸ್ರೇಲಿ ಮೂಲದ ಪೆಗಾಸಸ್‌ ತಂ‌ತ್ರಾಂಶವನ್ನು ಬಳಸಿಕೊಂಡು, ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಸೇರಿದಂತೆ ಸುಮಾರು 300 ಭಾರತೀಯ ಮೇಲೆ ಗೂಢಚಾರ ಮಾಡಲಾಗಿದೆ ಎಂದು, ಸುದ್ದಿ ಸಂಸ್ಥೆ ದಿ ವೈರ್‌ ತನಿಖಾ ವರದಿ ಪ್ರಕಟ ಮಾಡಿತ್ತು. ದಿ ವೈರ್ ಇತರ ಅಂತಾರಾಷ್ಟ್ರೀಯ ಮಾಧ್ಯಮಗಳ ಜೊತೆ ಸೇರಿ ಈ ತನಿಖಾ ವರದಿಯನ್ನು ಮಾಡಿತ್ತು. ಈ ವರದಿ ಪ್ರಕಟವಾಗುತ್ತಿದ್ದಂತೆ ದೇಶದಾದ್ಯಂತ ಬಿಜೆಪಿ ಸರ್ಕಾರದ ವಿರುದ್ದ ಭಾರಿ ಆಕ್ರೋಶ, ಪ್ರತಿಭಟನೆಗಳು ದಾಖಲಾಗಿದ್ದವು.

ಇದನ್ನೂ ಓದಿ: ಹಲವು ದೇಶಗಳಿಗೆ ‘ಪೆಗಾಸಸ್‌‌’ ಅನ್ನು ತಾತ್ಕಾಲಿಕವಾಗಿ ತಡೆಹಿಡಿದ ಎನ್‌ಎಸ್‌‌ಒ!

Karnataka Legislative Assembly | ಕರ್ನಾಟಕ ವಿಧಾನಸಭಾ ಅಧಿವೇಶನ | 10th Session | 13-09-2021

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial