Homeಕರ್ನಾಟಕಹಾನಗಲ್: ಪ್ರತಿಷ್ಠೆಯ ಕಣದಲ್ಲಿ ’ಬಿ ಟೀಮ್'ಗಳದ್ದೇ ಸಂಕಟ

ಹಾನಗಲ್: ಪ್ರತಿಷ್ಠೆಯ ಕಣದಲ್ಲಿ ’ಬಿ ಟೀಮ್’ಗಳದ್ದೇ ಸಂಕಟ

- Advertisement -
- Advertisement -

ಒಂದು ಕಡೆ ಬೆಲೆ ಏರಿಕೆ, ಮತ್ತೊಂದು ಕಡೆ ಸಂವಿಧಾನಿಕ ಚೌಕಟ್ಟು ಮೀರಿದ ರಾಜಕೀಯ ಕೆಸರೆರೆಚಾಟ. ಇದೆಲ್ಲದರ ನಡುವೆ ಹಾವೇರಿ ಜಿಲ್ಲೆಯ ಹಾನಗಲ್, ವಿಜಯಪುರ ಜಿಲ್ಲೆಯ ಸಿಂಧಗಿ ವಿಧಾನಸಭಾ ಕ್ಷೇತ್ರದ ಜನರು ಅಕ್ಟೋಬರ್ 30ರಂದು ನಡೆಯುವ ಉಪಚುನಾವಣೆಯಲ್ಲಿ ತಮ್ಮ ನಿರ್ಧಾರವನ್ನು ಮತಪೆಟ್ಟಿಗೆಯಲ್ಲಿ ದಾಖಲಿಸಲಿದ್ದಾರೆ.

ಉಪಚುನಾವಣೆ ಎಂದಮೇಲೆ ಆಡಳಿತಾರೂಢ ಪಕ್ಷಕ್ಕೆ ಪ್ರತಿಷ್ಟೆಯದ್ದಾಗಿರುತ್ತದೆ. ಹಾವೇರಿ ಜಿಲ್ಲೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆಯೂ ಆಗಿರುವುದರಿಂದ ಅವರು ಹಾನಗಲ್ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ. ಅವರು ಮುಖ್ಯಮಂತ್ರಿಯಾದ ಬಳಿಕ ಎದುರಿಸುತ್ತಿರುವ ಮೊದಲ ವಿಧಾನಸಭಾ ಕ್ಷೇತ್ರದ ಚುನಾವಣೆಯೂ ಇದಾಗಿದ್ದು, ಪ್ರತಿಷ್ಠೆಯ ಕಣವಾಗಿರುವುದು ಸುಳ್ಳಲ್ಲ.

ಮಾಜಿ ಸಚಿವ ಸಿ.ಎಂ.ಉದಾಸಿಯವರ ನಿಧನದಿಂದಾಗಿ ತೆರವಾಗಿರುವ ಕ್ಷೇತ್ರದಲ್ಲಿ, ಕಾಂಗ್ರೆಸ್ ಪಕ್ಷವು ಕ್ಷತ್ರಿಯ ಮರಾಠ ಸಮುದಾಯದ ಶ್ರೀನಿವಾಸ ಮಾನೆಯವರಿಗೆ ಟಿಕೆಟ್ ನೀಡಿದೆ. ಬಿಜೆಪಿಯಿಂದ ಗಾಣಿಗ ಸಮುದಾಯದ ಶಿವರಾಜ್ ಸಜ್ಜನರ್ ಕಣಕ್ಕಿಳಿದಿದ್ದಾರೆ. ಸಿ.ಎಂ. ಉದಾಸಿಯವರ ಭದ್ರಕೋಟೆಯಾಗಿದ್ದ ಹಾನಗಲ್‌ನಲ್ಲಿ ಅನೇಕ ಸಲ ಕಾಂಗ್ರೆಸ್ ಅಭ್ಯರ್ಥಿಗಳೂ ಮೇಲುಗೈ ಸಾಧಿಸಿದ್ದಿದೆ. ಈ ಹಿಂದೆ ಉದಾಸಿಯವರ ವರ್ಚಿಸ್ಸಿನಿಂದಾಗಿ ನೆಲೆ ಕಂಡಿದ್ದ ಜೆಡಿಎಸ್, ಮುಸ್ಲಿಂ ವ್ಯಕ್ತಿ ನಿಯಾಜ್ ಶೇಖ್ ಅವರನ್ನು ಈ ಬಾರಿ ಕಣಕ್ಕಿಳಿಸಿದೆ.

1957ರಲ್ಲಿ ಪ್ರಥಮ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಬಿ.ಆರ್.ಪಾಟೀಲ ಅವರು ಕಾಂಗ್ರೆಸ್‌ನ ಎಸ್.ಸಿ.ಸಿಂಧೂರ ಅವರನ್ನು ಸೋಲಿಸಿದ್ದರು. 1962ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎನ್.ದೇಸಾಯಿ, 1967ರಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ಆರ್.ಪಾಟೀಲ, 1968ರ ಬಿ.ಆರ್.ಪಾಟೀಲರ ನಿಧನದಿಂದಾಗಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ.ಎನ್. ದೇಸಾಯಿ, 1972ರಲ್ಲಿ ಕಾಂಗ್ರೆಸ್‌ನ ಪಿ.ಸಿ. ಶೆಟ್ಟರ್ ಗೆಲುವು ಸಾಧಿಸಿದ್ದರು.

1978ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದ ಮನೋಹರ ತಹಸೀಲ್ದಾರ್ ಆಯ್ಕೆಯಾದರು. 1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿ.ಎಂ. ಉದಾಸಿ ಗೆದ್ದು ವಿಧಾನಸಭೆ ಪ್ರವೇಶಿಸಿದರು. 1985ರಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿದ ಸಿ.ಎಂ.ಉದಾಸಿ ಮತ್ತೆ ಆಯ್ಕೆಯಾದರು. 1989ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನೋಹರ ತಹಸೀಲ್ದಾರ್, ಉದಾಸಿ ಅವರನ್ನು ಮಣಿಸಿದರು. 1994ರಲ್ಲಿ ಜನತಾದಳದಿಂದ ಸ್ಪರ್ಧೆಗಿಳಿದ ಸಿ.ಎಂ. ಉದಾಸಿ ಅವರು ಮನೋಹರ ತಹಸೀಲ್ದಾರ್ ಅವರನ್ನು ಸೋಲಿಸಿದರು. 1999ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಮನೋಹರ ತಹಸೀಲ್ದಾರ್ ಗೆಲುವು ಸಾಧಿಸಿದರು. ಜೆಡಿಯುನಿಂದ ಸ್ಪರ್ಧಿಸಿದ್ದ ಸಿ.ಎಂ. ಉದಾಸಿ ಸೋಲು ಕಂಡರು.

2004ರಲ್ಲಿ ಉದಾಸಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರು. ಕಾಂಗ್ರೆಸ್‌ನ ಮನೋಹರ ತಹಸೀಲ್ದಾರ್ ಸೋತರು. 2008ರಲ್ಲಿ ಬಿಜೆಪಿಯಿಂದ ಸಿ.ಎಂ. ಉದಾಸಿ ಸತತ ಎರಡನೇ ಬಾರಿಗೆ ದಿಗ್ವಿಜಯ ಸಾಧಿಸಿದರು. 2013ರಲ್ಲಿ ಕಾಂಗ್ರೆಸ್‌ನ ಮನೋಹರ ತಹಸೀಲ್ದಾರ್ ಅವರು, ಕೆಜೆಪಿಯಿಂದ ಸ್ಪರ್ಧಿಸಿದ್ದ ಉದಾಸಿಯವರನ್ನು ಮಣಿಸಿದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಉದಾಸಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಗೆ ಸೋಲುಣಿಸಿದರು. 5 ಸಾವಿರ ಮತಗಳ ಅಂತರದಲ್ಲಿ ಮಾನೆ ಸೋತರು.

ಸಿ.ಎಂ. ಉದಾಸಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದರೆ, ಕಾಂಗ್ರೆಸ್‌ನ ಮನೋಹರ ತಹಸೀಲ್ದಾರ್ ನಾಲ್ಕು ಬಾರಿ ಶಾಸಕರಾಗಿದ್ದರು. ಸಿ.ಎಂ. ಉದಾಸಿ ಜನತಾಪಕ್ಷ, ಜಾ.ದಳ, ಬಿಜೆಪಿ ಹಾಗೂ ಒಮ್ಮೆ ಪಕ್ಷೇತರರಾಗಿ ಗೆದ್ದಿರುವುದನ್ನು ಕಾಣಬಹುದು. ಹೀಗೆ ಸಿ.ಎಂ. ಉದಾಸಿಯವರು ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದರು. ಬಿಜೆಪಿಯ ಭದ್ರಕೋಟೆಯಾಗಿಯೂ ಉದಾಸಿ ಕ್ಷೇತ್ರವನ್ನು ಬಲಪಡಿಸಿದ್ದರು.

ಒಟ್ಟು 2,04,500 ಮತದಾರರಿರುವ ಈ ಕ್ಷೇತ್ರದಲ್ಲಿ ಅಂದಾಜಿನ ಪ್ರಕಾರ ಬ್ರಾಹ್ಮಣ ಮತದಾರರು 4,500, ಲಿಂಗಾಯತರು 56,500, ಮುಸ್ಲಿಮರು 31,000, ಪರಿಶಿಷ್ಟ ಪಂಗಡ 20,500, ಪರಿಶಿಷ್ಟ ಜಾತಿ 28,500, ಕುರುಬ 11,000, ಗಂಗಮತ- 34,500, ಇತರೆ 18,000 ಮತದಾರರನ್ನು ಕಾಣಬಹುದು. 2011ರ ಜನಗಣತಿಯ ಪ್ರಕಾರ 2,60,455 ಜನಸಂಖ್ಯೆ ಹಾನಗಲ್ ತಾಲ್ಲೂಕಿನಲ್ಲಿ ಇದ್ದಾರೆ. ಗಂಡಸರು 133,171, ಹೆಂಗಸರು 127,284 ಇದ್ದಾರೆ.

ಆಡಳಿತಾರೂಢ ಬಿಜೆಪಿ ಹಾವೇರಿ ಜಿಲ್ಲೆಗೆ 2020-2021ರ ಬಜೆಟ್‌ನಲ್ಲಿ ಆದ್ಯತೆ ನೀಡಿರುವುದನ್ನು ಕಾಣಬಹುದು. 20 ಕೋಟಿ ರೂ. ವೆಚ್ಚದಲ್ಲಿ 20 ಬೆಡ್‌ಗಳ ಆಯುಷ್ ಆಸ್ಪತ್ರೆ, ಶಿಗ್ಗಾವಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕೆ
ಸರ್ಕಾರ ಮುಂದಾಗಿದೆ. ಇದು ಸಾವಿರಾರು ಜನರಿಗೆ ಉದ್ಯೋಗ ದೊರಕಿಸಲಿದೆ ಎನ್ನಲಾಗಿದೆ. ಸಂತ ಶಿಶುನಾಳ ಶರೀಫರ ಶಿಶುನಾಳ ಗ್ರಾಮದ ಅಭಿವೃದ್ಧಿಗೆ ಐದು ಕೋಟಿ ರೂ., ಹಿರೇಕೆರೂರು ತಾಲೂಕಿನಲ್ಲಿ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ಆದ್ಯತೆ ನೀಡಲಾಗಿದೆ. ’ಮಿಷನ್ ಹಾನಗಲ್’ ಯೋಜನೆಯನ್ನು ಬಿಜೆಪಿ ಘೋಷಿಸಿದೆ.

ಬಿಜೆಪಿಯ ಪರವಿರುವ ಲಿಂಗಾಯತ ಸಮುದಾಯದ ಮತಗಳು ಹೆಚ್ಚಿರುವುದು ಬಿಜೆಪಿಗೆ ವರದಾನವಾಗಲಿದೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು ಕೋವಿಡ್ ಸಮಯದಲ್ಲಿ ಮಾಡಿರುವ ಕೆಲಸಗಳು ಕಾಂಗ್ರೆಸ್ ಪರ ಮತದಾರರು ವಾಲಲು ಕಾರಣವಾಗಲಿದೆ ಎಂಬುದು ರಾಜಕೀಯ ಪಡೆಸಾಲೆಯ ವಿಶ್ಲೇಷಣೆಯಾಗಿದೆ.

ಶ್ರೀನಿವಾಸ ಮಾನೆ ಹಾಗೂ ಮನೋಹರ ತಹಶಿಲ್ದಾರ್ ಬಣದ ನಡುವಿನ ಕಿತ್ತಾಟಗಳು ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಕಾಂಗ್ರೆಸ್ ಪಕ್ಷದ ’ಬಿ’ ಫಾರ್ಮ್‌ಗಾಗಿ ಮನೋಹರ್ ತಹಸೀಲ್ದಾರ್ ಯತ್ನಿಸಿದ್ದರು.

ತಳಮಟ್ಟದಲ್ಲಿ ಕ್ಷೇತ್ರ ಪರಿಶೀಲನೆ ಮಾಡಿರುವ ನೋಟಾ ಪರವಾಗಿ ಪ್ರಚಾರ ಮಾಡುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಮುಚ್ಚಂಡಿಯವರು ’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿ, “ಒಟ್ಟಾರೆಯಾಗಿ ಕಾಂಗ್ರೆಸ್ ಪರವಾದ ಸ್ಥಿತಿಯನ್ನು ಕಾಣಬಹುದು” ಎಂದರು.

“ಎಲ್ಲ ಅಭ್ಯರ್ಥಿಗಳೂ ಹೊರಗಿನವರಾಗಿದ್ದಾರೆ. ದುಡ್ಡು ಹೊರಗಿನದ್ದು, ಪ್ರಚಾರದಲ್ಲಿ ಪಾಲ್ಗೊಂಡ ಬಹುತೇಕ ಕಾರ್ಯಕರ್ತರೂ ಹೊರಗಿನವರು, ವಾಹನಗಳೂ ಹೊರಗಿನವು, ಘೋಷಣೆ ಕೂಗುವವರು ಹೊರಗಿನವರು. 200 ಅಥವಾ 300 ರೂ.ಗಳಿಗೆ ಬರುವ ಕಾರ್ಯಕರ್ತರು ಮಾತ್ರ ಇಲ್ಲಿನವರು” ಎನ್ನುತ್ತಾರೆ ಪ್ರಶಾಂತ್.

ಮಾನೆಯವರು ಕೋವಿಡ್ ಸಂದರ್ಭದಲ್ಲಿ ಮಾಡಿಸಿದ ಕೆಲಸಗಳನ್ನು ಮುನ್ನೆಲೆಗೆ ತಂದು ಪ್ರಚಾರ ಪಡೆಯುತ್ತಿದ್ದಾರೆ. ಶಿವರಾಜ್ ಸಜ್ಜನರ್ ಅವರು ದಿಢೀರನೆ ಕ್ಷೇತ್ರಕ್ಕೆ ಬಂದವರು. ಅವರ ಮೇಲೆ ಸಂಗೂರು ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪಗಳಿವೆ ಎಂಬುದು ಗಮನಾರ್ಹ.

“ಮುಖ್ಯಮಂತ್ರಿಯಾದಿಯಾಗಿ ಮಂತ್ರಿಮಂಡಲ ಹಾನಗಲ್‌ನಲ್ಲಿ ಕುಳಿತುಕೊಂಡಿದೆ. ಪಂಚಾಯಿತಿ ಮಟ್ಟದ ಚುನಾವಣೆಯಂತೆ ಮನೆಮನೆ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಕೋಟಿ ಕೋಟಿ ರೂ.ಗಳನ್ನು ತಂದು ಸುರಿಯುತ್ತಿದ್ದಾರೆ. ಗಲಾಟೆ ಮಾಡಿಸಲು ಯತ್ನಿಸುತ್ತಿದ್ದರೂ ಅದು ಸಾಧ್ಯವಾಗುತ್ತಿಲ್ಲ. ನಮ್ಮ ಜನರಿಗೆ ಇದರ ಬಗ್ಗೆ ಎಚ್ಚರಿಕೆ ಇದೆ. ಬೆಂಗಳೂರು, ಚಿಕ್ಕಬಳ್ಳಾಪುರ ರಾಜಕಾರಣ ಇಲ್ಲಿ ನಡೆಯಲ್ಲ. ನಮ್ಮದು ಶಾಂತಿಯುತ ಕ್ಷೇತ್ರ” ಎನ್ನುತ್ತಾರೆ ಪ್ರಶಾಂತ್.

’ಬಿ ಟೀಮ್’ ಬಿಸಿ

ಜಾ.ದಳ ಅಭ್ಯರ್ಥಿಯಾಗಿರುವ ನಿಯಾಜ್ ಅವರು ಈ ಹಿಂದೆ ಆಮ್ ಆದ್ಮಿ ಪಾರ್ಟಿಯಲ್ಲಿದ್ದರು. ಕಾಂಗ್ರೆಸ್ ಸೇರಲು ಇಚ್ಛಿಸಿದ್ದರು. ಆದರೆ ಮನೋಹರ್ ತಹಸೀಲ್ದಾರ್ ಅವರು ನಿಯಾಜ್ ಅವರನ್ನು ಜಾ.ದಳಕ್ಕೆ ಸೇರಿಸಿ ಟಿಕೆಟ್ ಕೊಡಿಸಿದ್ದಾರೆ ಎಂಬ ಊಹಾಪೋಹಗಳಿವೆ. ಹೊರಗಿನಿಂದ ಬಂದ ಕಾಂಗ್ರೆಸ್ ಅಭ್ಯರ್ಥಿ ಮಾನೆಯವರನ್ನು ಸೋಲಿಸಬೇಕೆಂದು ತಹಸೀಲ್ದಾರ್ ಯೋಚಿಸಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಎರಡರಲ್ಲೂ ಬಿ ಟೀಮ್‌ಗಳು ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಬಿ ಟೀಮ್‌ನ ಕೆಲಸಗಳು ಸ್ವಲ್ಪ ಗೌಣವಾಗಿವೆ. ಬಿಜೆಪಿ ಕಾರ್ಯಕರ್ತರೇ ’ಬಿ’ ಟೀಮ್ ಆಗಿ ಪರಿವರ್ತನೆಯಾಗಿದ್ದಾರೆ ಎಂಬ ಗುಲ್ಲಿದೆ. ಶಿವರಾಜ್ ಸಜ್ಜನರ್ ಆರ್‌ಎಸ್‌ಎಸ್ ಕಾರ್ಯಕರ್ತನಲ್ಲ, ಕ್ಷೇತ್ರದ ವ್ಯಕ್ತಿಯಲ್ಲ. ಅವರಿಗೆ ಕ್ಷೇತ್ರದ ಸಂಪರ್ಕದಲ್ಲೇ ಇಲ್ಲ. ಪಕ್ಕದ ತಾಲೂಕಿನವರಾಗಿದ್ದಾರೆ. ಉದಾಸಿಯವರ ಪುತ್ರ ಶಿವಕುಮಾರ್ ಉದಾಸಿಯವರ ಪತ್ನಿ ರೇವತಿಯವರಿಗೆ ಟಿಕೆಟ್ ಸಿಗಬೇಕಿತ್ತು. ಕುಟುಂಬ ರಾಜಕಾರಣ ಮತ್ತು ಶಿವಕುಮಾರ್ ಅವರಿಗೆ
ಜನಸಂಪರ್ಕವನ್ನು ಕಾಪಾಡಿಕೊಳ್ಳುವ ಗುಣವಿಲ್ಲದ ಮುಖ್ಯ ಕಾರಣದಿಂದ ರೇವತಿ ಅವರಿಗೆ ಟಿಕೆಟ್ ಸಿಕ್ಕಿಲ್ಲ ಎನ್ನಲಾಗುತ್ತಿದೆ.

ಆದರೆ ತಾಲ್ಲೂಕಿನಲ್ಲಿ ಬಿಜೆಪಿ ನಾಯಕರಿದ್ದರು. ಅವರಿಗಾದರೂ ಟಿಕೆಟ್ ಕೊಡಬಹುದಿತ್ತು. ಸ್ಥಳೀಯ ನಾಯಕರಿಗೆ ಟಿಕೆಟ್ ಕೊಟ್ಟರೆ ತನ್ನ ಬೆಳವಣಿಗೆಗೆ ಮಾರಕವಾಗುತ್ತದೆ ಎಂದು ಉದಾಸಿಯವರ ಪುತ್ರ, ಶಿವರಾಜ್ ಸಜ್ಜನರ್ ಪರ ನಿಂತಿದ್ದಾರೆ. ಶಿವರಾಜ್ ಸಜ್ಜನರ್ ಉದಾಸಿಯವರ ಮಾನಸ ಪುತ್ರ ಎಂದು ಹೇಳಲಾಗಿದೆ. ರಬ್ಬರ್ ಸ್ಟಾಂಪ್ ಕೂಡ ಆಗಿದ್ದಾರೆ. ನಾಳೆ ಕ್ಷೇತ್ರ ಬಿಡು ಎಂದರೂ ಬಿಡುತ್ತಾರೆ. ದುಡ್ಡು ಕೊಟ್ಟು ಬಿಜೆಪಿಯವರು ಸಮೀಕ್ಷೆ ನಡೆಸಲು ಹೋದಾಗ, ಸಮೀಕ್ಷೆ ಮಾಡಲು ಬಂದವರನ್ನು ಓಡಿಸಿದ ಪ್ರಸಂಗವೂ ನಡೆದಿದೆ. ಅಂದಹಾಗೆ ಮಾನೆಯವರೇನೂ ಶುದ್ಧ ಹಸ್ತರೇನಲ್ಲ. ಆದರೆ ಸದ್ಯಕ್ಕೆ ಉಳಿದವರಿಗಿಂತ ಪರವಾಗಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲೂ ’ಬಿ ಟೀಮ್’ಗಳು ಬಲವಾಗಿರುವುದರಿಂದ ಗೆಲುವು ನಿಶ್ಚಯಿಸುವುದು ಕಷ್ಟ.


ಇದನ್ನೂ ಓದಿ: ಉಪಚುನಾವಣೆ: ಸಿಂಧಗಿಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ ಪ್ರತಿಪಕ್ಷಗಳ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...