ಅರುಣಾಚಲ ಪ್ರದೇಶದ ನದಿಯೊಂದು ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದ್ದು, ಸಾವಿರಾರು ಮೀನುಗಳು ಸಾವನ್ನಪ್ಪಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ಶನಿವಾರ ವರದಿ ಮಾಡಿದೆ. ಕಮೆಂಗ್ ನದಿಯ ಮೇಲ್ಮೈಯಲ್ಲಿ ತೇಲುತ್ತಿರುವ ಮೀನುಗಳನ್ನು ತಿನ್ನದಂತೆ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಅದು ವರದಿ ಮಾಡಿದೆ.
ಪೂರ್ವ ಕಮೆಂಗ್ ಜಿಲ್ಲೆಯಲ್ಲಿ ಹುಟ್ಟುವ ನದಿಯು ಕಪ್ಪು ಬಣ್ಣಕ್ಕೆ ತಿರುಗಲು ಒಟ್ಟು ಕರಗಿದ ಪದಾರ್ಥಗಳ ( total dissolved substances-ಟಿಡಿಎಸ್) ಹೆಚ್ಚಿನ ಅಂಶವೇ ಕಾರಣ ಎಂದು ಜಿಲ್ಲಾ ಅಧಿಕಾರಿಗಳು ಸೂಚಿಸಿದ್ದಾರೆ.
ಇದನ್ನೂ ಓದಿ: ಅರುಣಾಚಲ ಗಡಿಯಲ್ಲಿ ಸಂಪೂರ್ಣ ವಿದ್ಯುತ್ ಚಾಲಿತ ‘ಬುಲೆಟ್ ಟ್ರೈನ್’ ಪ್ರಾರಂಭಿಸಿದ ಚೀನಾ!
ಟಿಡಿಎಸ್ ಜಲಚರಗಳಿಗೆ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಜಿಲ್ಲಾ ಮೀನುಗಾರಿಕೆ ಅಧಿಕಾರಿಗಳು ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ. ಹೆಚ್ಚಿನ ಮಟ್ಟದ ಟಿಡಿಎಸ್‌ನಿಂದಾಗಿ ನೀರಿನ ಅಡಿಯಲ್ಲಿರುವ ಮೀನುಗಳು ಕಡಿಮೆ ಗೋಚರತೆಯನ್ನು ಅನುಭವಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Even after three days, there is no sign of improvement in Kameng River. Water continues to be muddied, flowing in huge quantities of fresh logs while fishes and aquatic lives washed to the bank. State govt constitutes fact finding committee. pic.twitter.com/XBNjpEm8Iz
— The Arunachal Times (@arunachaltimes_) October 31, 2021
ಕಮೆಂಗ್ ನದಿಯಲ್ಲಿನ ಟಿಡಿಎಸ್ ಪ್ರತಿ ಲೀಟರ್‌ಗೆ 6,800 ಮಿ.ಗ್ರಾಂ ಆಗಿತ್ತು, ಇದು ಪ್ರತಿ ಲೀಟರ್‌ಗೆ ಸಾಮಾನ್ಯ ಶ್ರೇಣಿಯ 300-1,200 ಮಿಗ್ರಾಂಗಿಂತ ಹೆಚ್ಚಾಗಿದೆ ಎಂದು ಜಿಲ್ಲಾ ಮೀನುಗಾರಿಕೆ ಅಭಿವೃದ್ಧಿ ಅಧಿಕಾರಿ (ಡಿಎಫ್‌ಡಿಒ) ಹಾಲಿ ತಾಜೋ ಹೇಳಿದ್ದಾರೆ.
“ನದಿಯ ಪರಿಸ್ಥಿತಿ ಹೀಗೇ ಇದ್ದರೆ, ಇನ್ನು ಕಲವೇ ದಿನಗಳಲ್ಲಿ ನದಿಯ ಜಲಚರಗಳು ಸಂಪೂರ್ಣವಾಗಿ ನಾಶವಾಗುತ್ತವೆ” ಎಂದು ಪಿಟಿಐ ಉಲ್ಲೇಖಿಸಿದೆ.
Dead & live fishes are floating in Kameng River of East Kameng. Advisory issued to avoid consuming them. pic.twitter.com/usElwLG0MP
— Babin? (@tadarbabin) October 29, 2021
ಇದನ್ನೂ ಓದಿ: ಭಾರತ-ಚೀನಾ ಗಡಿ: ಅರುಣಾಚಲ ಪ್ರದೇಶದಲ್ಲಿ ಒಂದು ಪುಟ್ಟ ಗ್ರಾಮವನ್ನೇ ನಿರ್ಮಿಸಿದ ಚೀನಾ!
ಈ ಮಧ್ಯೆ, ಘಟನೆ ನಡೆದ ಸೆಪ್ಪಾ ಗ್ರಾಮದ ನಿವಾಸಿಗಳು ಚೀನಾವನ್ನು ದೂಷಿಸಿದ್ದಾರೆ. ಗಡಿಯುದ್ದಕ್ಕೂ ನೆರೆಯ ದೇಶವು ನಡೆಸುತ್ತಿರುವ ನಿರ್ಮಾಣ ಚಟುವಟಿಕೆಗಳಿಂದ ಟಿಡಿಎಸ್ ಮಟ್ಟವು ಅಪಾಯಕಾರಿಯಾಗಿ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.
Hey and cry #changing of colors of kameng River# live and death fish is floating over the kameng River#Reason might be occurring of Land slide at the upper stream of River pic.twitter.com/8Qz8qJ2gVU
— Techi Necha (@techi_necha) October 29, 2021
ಕಮೆಂಗ್ ನದಿಯ ನೀರಿನ ಬಣ್ಣ ಹಠಾತ್ ಬದಲಾವಣೆ ಮತ್ತು ಹೆಚ್ಚಿನ ಪ್ರಮಾಣದ ಮೀನುಗಳ ಸಾವಿನ ಹಿಂದಿನ ಕಾರಣವನ್ನು ಕಂಡುಹಿಡಿಯಲು ತಜ್ಞರ ಸಮಿತಿಯನ್ನು ತಕ್ಷಣವೇ ರಚಿಸಬೇಕೆಂದು ಸೆಪ್ಪಾ ಪೂರ್ವ ಶಾಸಕ ತಪುಕ್ ಟಾಕು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
What's happening to the Kameng river water? Why is the Kameng river water becoming toxic & muddy? Why fishes & all other living organisms in Kameng river are dying? @KirenRijiju @PemaKhanduBJP @CWCOfficial_GoI @PMOIndia @ndtv @VPSecretariat @arunachaltimes_ @timesofindia pic.twitter.com/fMGntV7nkH
— Kon Jirjo Jotham (@KonJirjoINC) October 29, 2021
2017 ರಲ್ಲಿ, ಪಾಸಿಘಾಟ್‌ನಲ್ಲಿ ಸಿಯಾಂಗ್ ನದಿಯು ಇದೇ ರೀತಿಯ ಕಪ್ಪಾಗಿರುವುದು ವರದಿಯಾಗಿತ್ತು.
The aquatic life of Kameng River is in dire condition. It has been 2 days straight of damage. Govt must act fast and find the root cause for this huge problem. Is the government even moved by this losses ? @PemaKhanduBJP @KirenRijiju @TapirGao @dcseppa @SdLoda pic.twitter.com/Sh6Z3pODtt
— Vikash Dada (@VikashDada3) October 30, 2021
ಇದನ್ನೂ ಓದಿ: ಬಹುಜನ ಭಾರತ: ಅರುಣಾಚಲದ ಮೇಲೆ ಚೀನಾ ಕಣ್ಣು?


