ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಡತಲ್ ಕಜೆ ಎಂಬಲ್ಲಿ, ಅಡಿಕೆ ಕದ್ದಿದ್ದಾನೆ ಎಂದು ಆರೋಪಿಸಿ 16 ವರ್ಷದ ಬಾಲಕನನ್ನು ಯುವಕರ ಗುಂಪೊಂದು ಕ್ರೂರವಾಗಿ ಥಳಿಸಿತ್ತು. ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ನಂತರ 10 ಜನ ಆರೋಪಿಗಳ ಮೇಲೆ ಎಫ್ಐಆರ್ ದಾಖಲಾಗಿತ್ತು. ಇದೀಗ ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದುಕೊಂಡಿದ್ದಾರೆ ಎಂದು ಸುಬ್ರಹ್ಮಣ್ಯ ಠಾಣೆಯ ಪೊಲೀಸರು ನಾನುಗೌರಿ.ಕಾಂಗೆ ತಿಳಿಸಿದ್ದಾರೆ.
ಘಟನೆಯು ಅಕ್ಟೋಬರ್ 27ರಂದು ಸಂಜೆ 7 ಗಂಟೆಗೆ ನಡೆದಿತ್ತು. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ನಂತರ ಈ ಬಗ್ಗೆ ನವೆಂಬರ್ 2 ರಂದು ಗುತ್ತಿಗಾರು ಗ್ರಾಮದ ಹತ್ತು ಜನರ ಮೇಲೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಮಂಗಳೂರು: ಮತ್ತೊಂದು ಅನೈತಿಕ ಪೊಲೀಸ್ಗಿರಿ; ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ
ಘಟನೆಯ ವಿವರ
ಗುತ್ತಿಗಾರು ಗ್ರಾಮದ ಕುವ್ವೆಕೋಡಿ ಮನೆ ನಿವಾಸಿ ಸೋಮಪ್ಪ ಗೌಡ ಎಂಬವರ ಮಗ 16 ವರ್ಷದ ವೇಣುಗೋಪಾಲ ಪಿ.ಎಸ್. ತಮ್ಮ ಮನೆಯವರು ಲೀಸ್ಗೆ ಪಡೆದುಕೊಂಡಿದ್ದ ಅಡಿಕೆ ತೋಟದಿಂದ 20 ರಿಂದ 25 ಕೆಜಿ ಹಣ್ಣು ಅಡಿಕೆಯನ್ನು ಹೊತ್ತು ತರುತ್ತಿದ್ದರು. ಈ ವೇಳೆ ಅವರಿಗೆ ಪರಿಚಯದವರೇ ಆಗಿರುವ ಯುವಕರ ಗುಂಪೊಂದು ಅಡ್ಡಗಟ್ಟಿ “ಅಡಿಕೆಯನ್ನು ಈಶ್ವರ ಎಂಬವರ ತೋಟದಿಂದ ಕದ್ದು ತಂದಿದ್ದಾರೆ” ಎಂದು ಆರೋಪಿಸಿದ್ದಾರೆ. ಈ ವೇಳೆ ಬಾಲಕನೂ ತಾನು ತಮ್ಮದೇ ತೋಟದಿಂದ ಅಡಿಕೆ ತಂದಿದ್ದೇನೆ ಎಂದು ಕೇಳಿಕೊಂಡರೂ, ಅವರಿಗೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ.
ವೈರಲ್ ವಿಡಿಯೊದಲ್ಲಿ ಬಾಲಕನಿಗೆ ಗುಂಪು ಹಲ್ಲೆ ನಡೆಸುತ್ತಿರುವುದು ಕಾಣಬಹದುದಾಗಿದೆ.
ದ.ಕ. ಜಿಲ್ಲೆಯ ಸುಳ್ಯದ ಗುತ್ತಿಗಾರು ಗ್ರಾಮದ ಕಡತಲ್ ಕಜೆ ಎಂಬಲ್ಲಿ, ಅಡಿಕೆ ಕದ್ದಿದ್ದಾರೆ ಎಂದು ಆರೋಪಿಸಿ 16 ವರ್ಷದ ಬಾಲಕನನ್ನು ಯುವಕರ ಗುಂಪೊಂದು ಕ್ರೂರವಾಗಿ ಥಳಿಸಿತ್ತು. ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ನಂತರ 10 ಜನ ಆರೋಪಿಗಳ ಮೇಲೆ ಎಫ್ಐಆರ್ ದಾಖಲಾಗಿತ್ತು. ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದುಕೊಂಡಿದ್ದಾರೆ. pic.twitter.com/Cnbqna3qT3
— Naanu Gauri (@naanugauri) November 7, 2021
ಜೊತೆಗೆ ಘಟನೆಯ ಬಗ್ಗೆ ಪೊಲೀಸರಿಗೆ ಏನಾದರು ದೂರು ನೀಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಗುಂಪು ಬಾಲಕನಿಗೆ ಜೀವ ಬೆದರಿಕೆ ಒಡ್ಡಿತ್ತು. ಆರೋಪಿಗಳು ಬಾಲಕನಿಗೆ ಪೊಲೀಸ್ ದೂರು ನೀಡದಂತೆ ಬೆದರಿಕೆ ಹಾಕಿದ್ದರಿಂದ, ಅವರು ಬೆದರಿ ದೂರು ಕೂಡಾ ನೀಡಿರಲಿಲ್ಲ.
ಇದನ್ನೂ ಓದಿ: ಮಂಗಳೂರು: ಅತ್ಯಾಚಾರ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ- ಪೊಲೀಸ್ ಪೇದೆ ಬಂಧನ
ಇದರ ನಂತರ ಘಟನೆಯ ವಿಡಿಯೊ ವೈರಲ್ ಆಗಿದ್ದು ಪೊಲೀಸರು ಗುತ್ತಿಗಾರು ಗ್ರಾಮದ ಜೀವನ್, ವರ್ಷಿತ್, ಸಚಿನ್, ಮೋಕ್ಷಿತ್, ಸನತ್, ಮುರಳಿ, ಎಂ.ಪಿ.ದಿನೇಶ್, ಈಶ್ವರ, ಚಂದ್ರ ಮತ್ತು ಚೇತನ್ ಸೇರಿ ಒಟ್ಟು ಹತ್ತು ಜನರ ಮೇಲೆ IPC ಸೆಕ್ಷನ್ 143, 341,323,324, 506 r/w 149 ಅಡಿಯಲ್ಲಿ ಪ್ರಕರಣದ ದಾಖಲಿಸಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದರು.
ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಪೊಲೀಸರೊಬ್ಬರು, ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಮುಖ್ಯಮಂತ್ರಿಯವರು ಗೂಂಡಾಗಿರಿಯನ್ನು ಸಮರ್ಥಿಸಿ ಹೇಳಿಕೆ ನೀಡಿದ ನಂತರ ಕರಾವಳಿಯಲ್ಲಿ ಅನೈತಿಕ ಪೊಲೀಸ್ಗಿರಿ ಹೆಚ್ಚಿದೆ ಎಂದು ಆರೋಪಿಸಲಾಗಿದೆ.
ರಾಜ್ಯದ ಅನ್-ಫಿಟ್ ಗೃಹಮಂತ್ರಿಯೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಇದೇ ಗತಿ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ. ನಮ್ಮ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಅನ್ನುವುದಕ್ಕೆ ಈ ವಿಡಿಯೋ ಒಂದೇ ಸಾಕ್ಷಿ. ಆ ಚಿಕ್ಕ ಬಾಲಕನನ್ನು ಈ ರೀತಿಯಾಗಿ ಮಾರಣಾಂತಿಕ ಹಲ್ಲೆ ಮಾಡಿರುವ ನೀಚರನ್ನು ಬಂಧಿಸಬೇಕು, ಶಿಕ್ಷೆ ಕೊಡಬೇಕು. https://t.co/YnjDno1Nrm
— ಶಶಿಗೌಡ ನಿರವಾಣಿ | Shashigoud Niravani? (@SNiravani) November 6, 2021
ಇದನ್ನೂ ಓದಿ: ನೈತಿಕತೆ ಮತ್ತು ಪೊಲೀಸ್ಗಿರಿ ಕೂಡಿಕೊಂಡರೆ ಅದು ಅನೈತಿಕ ಮನಸ್ಥಿತಿಗಳ ವಿಕೃತಿ
— ಉಮ್ಮರ್ ಬ್ಯಾರಿ ಸಾಲೆತ್ತೂರು/Ummar salethur (@USalathur) November 5, 2021
ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಬಹಳ ಹೆಚ್ಚುತ್ತಿದೆ.
LAW AND ORDER ರಕ್ಷಣೆ ಆಗುತ್ತಿಲ್ಲ,
ಮಂಗಳೂರು ಎಸ್ಪಿ ಕಾಣೆಯಾಗಿದ್ದಾರೆ??
ಆ ಬಾಲಕ ಇನ್ನೂ Minor..
ಸಿ ಎಂ ಬೊಮ್ಮಾಯಿ ನೈತಿಕ ಪೊಲೀಸ್ ಗಿರಿ ಸಮರ್ಥಿಸಿಕೊಂಡಿದ್ದಾರೆ.. ಪೊಲೀಸ್ ಇಲಾಖೆ ಯಾಕೆ ಬೇಕು??
ಇದು ಸಂವಿಧಾನ ವಿರೋಧಿ ಚಟುವಟಿಕೆ ಮತ್ತು ನಡವಳಿಕೆ.— ರಾಜೇಶ್ C.R. PATNA (@rajeshs4810) November 7, 2021
RSSನ ಕೋಮುವಾದಿ ಸೇವಕಿ CM ಬಸವರಾಜ ಬೊಮ್ಮಾಯಿ.
ಭಾರತ ಸಂವಿಧಾನ ವಿರೋಧಿ RSS CM ಬಸವರಾಜ ಬೊಮ್ಮಾಯಿ ಬಿಜೆಪಿ— ರಾಜೇಶ್ C.R. PATNA (@rajeshs4810) November 7, 2021
ಇದನ್ನೂ ಓದಿ: ಪುತ್ತೂರು-ಸುಳ್ಯದಲ್ಲಿ ಅನೈತಿಕ ಪೊಲೀಸ್ಗಿರಿ ಉಪದ್ರವ; ಜಿ.ಪಂ-ತಾ.ಪಂ ಚುನಾಚಣೆಗಾಗಿ ಈ ಆಟ?



ಈ ರೀತಿ ಚಿಕ್ಕ ಬಾಲಕ ನನ್ನ ಹೊಡೆದಿರುವುದು ಕಂಡನೀಯ ಆರೋಪಿಗೆ ಶಿಕ್ಷೆ ಆಗಲೇ ಬೇಕು ,ಮಕ್ಕಳ ರಕ್ಷಣಾ ಘಟಕ ಕೂಡಲೇ ಮಗುವಿಗೆ ನೆರವು ನೀಡಲೇಬೇಕು….