Homeರಂಜನೆಕ್ರೀಡೆಆಫ್ಘಾನಿಸ್ತಾನಕ್ಕೆ ಸೋಲು: ಭಾರತದ ಸೆಮಿಫೈನಲ್ ಕನಸು ಭಗ್ನ

ಆಫ್ಘಾನಿಸ್ತಾನಕ್ಕೆ ಸೋಲು: ಭಾರತದ ಸೆಮಿಫೈನಲ್ ಕನಸು ಭಗ್ನ

- Advertisement -
- Advertisement -

ಐಸಿಸಿ ಟಿ20 ವಿಶ್ವಕಪ್ ಗ್ರೂಪ್ 2 ರ ನಿರ್ಣಾಯಕ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವು ನ್ಯೂಜಿಲೆಂಡ್ ಎದುರು ಸೋಲು ಅನುಭವಿಸುವುದರ ಮೂಲಕ ಭಾರತ ಮತ್ತು ಆಫ್ಘಾನಿಸ್ತಾನದ ಸೆಮಿಫೈನಲ್ ಕನಸು ಭಗ್ನಗೊಂಡಿದೆ. ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ತಂಡ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಫ್ಘಾನಿಸ್ತಾನ ತಂಡವು ನ್ಯೂಜಿಲೆಂಡ್‌ ಬೌಲರ್‌ಗಳ ದಾಳಿಗೆ ತತ್ತರಿಸಿತು. 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಕೇವಲ 124 ರನ್ ಪೇರಿಸಿತು. ನಜೀಬುಲ್ಲಾ ಝಾರ್ಡನ್ ಮಾತ್ರ ಹೋರಾಟ ಮಾಡಿ 48 ಎಸೆತಗಳಲ್ಲಿ 73 ರನ್ ಗಳಿಸಿ ತಂಡ 120 ರ ಗಡಿ ದಾಟಲು ಸಹಾಯಕರಾದರು.

ಇದಕ್ಕೆ ಉತ್ತರವಾಗ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಎರಡು ವಿಕೆಟ್ ಕಳೆದುಕೊಂಡು ಅನಾಯಸವಾಗಿ 125 ರನ್ ಗಳಿಸಿತು. ತಂಡದ ನಾಯಕ ಕೇನ್ ವಿಲಿಯಂಸನ್ ಔಟಾಗದೆ 40 ರನ್ ಗಳಿಸಿದರೆ ಕಾನ್ವೆ 36 ರನ್ ಗಳಿಸಿದರು.

ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋತಿದ್ದರೆ 6 ಪಾಯಿಂಟ್‌ ಪಡೆದಿರುತ್ತಿತ್ತು. ಅದೇ ರೀತಿ ಆಫ್ಘಾನಿಸ್ತಾನಕ್ಕೂ 6 ಪಾಯಿಂಟ್ ಸಿಕ್ಕುತ್ತಿತ್ತು. ಭಾರತ ಸೋಮವಾರದ ಕಡೆಯ ಪಂದ್ಯದಲ್ಲಿ ನಮಿಬೀಯ ಎದುರು ಗೆದ್ದಲ್ಲಿ ಅದಕ್ಕೂ 6 ಪಾಯಿಂಟ್ ದಕ್ಕುತ್ತಿತ್ತು. ಆಗ ನೆಟ್‌ ರನ್ ರೇಟ್ ಜಾಸ್ತಿಯಿದ್ದವರು ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸುತ್ತಿದ್ದರು. ಆ ಆಸೆಯಲ್ಲಿ ಭಾರತ ತಂಡವಿತ್ತು. ಆದರೆ ನ್ಯೂಜಿಲೆಂಡ್ ಗೆಲುವಿನೊಂದಿಗೆ ಆ ಆಸೆ ಕಮರಿ ಹೋಗಿದೆ.

ಗ್ರೂಪ್2 ರಲ್ಲಿ ನ್ಯೂಜಿಲೆಂಡ್ ಮತ್ತ ಪಾಕಿಸ್ತಾನ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದಿವೆ. ಗ್ರೂಪ್ 1 ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಅರ್ಹತೆ ಪಡೆದಿವೆ. ನವೆಂಬರ್ 10 ಮತ್ತು 11 ರಂದು ಸೆಮಫೈನಲ್ ಪಂದ್ಯಗಳು ನಡೆಯಲಿದ್ದು, 14 ರಂದು ಫೈನಲ್ ನಡೆಯಲಿದೆ.

ನಾಳೆ ಭಾರತವು ನಮೀಬಿಯಾ ಎದುರು ತನ್ನ ಕಡೆಯ ಔಪಚಾರಿಕ ಪಂದ್ಯ ಆಡಲಿದೆ.


ಇದನ್ನೂ ಓದಿ: ಭಾರತ -ಪಾಕಿಸ್ತಾನ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಹೀಗಾದರೆ ಹೇಗೆ..?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...