ಕೆನರಾ ಬ್ಯಾಂಕ್‌ನಲ್ಲಿ ಗ್ರಾಹಕರಾಗಿರುವ ರೈತರೊಬ್ಬರು, ಬ್ಯಾಂಕ್ ಸಿಬ್ಬಂದಿಯಲ್ಲಿ ‘ಕನ್ನಡ ಮಾತನಾಡಿ’ ಎಂದು ಕೇಳಿದ್ದಕ್ಕೆ, ಸಿಬ್ಬಂದಿ ಬ್ಯಾಂಕಿನಿಂದ ಹೊರ ನಡೆ ಎಂದು ಬೆದರಿಸಿ, ಅವರ ಮೇಲೆ ದಬ್ಬಾಳಿಕೆ ನಡೆಸಿದ ಘಟನೆ ತುಮಕೂರಿನ ಶಿರಾ ತಾಲೂಕಿನ ಬುಕ್ಕಪಟ್ಟಣದಲ್ಲಿ ಇತ್ತೀಚೆಗೆ ನಡೆದಿತ್ತು. ಈ ಬಗ್ಗೆ ಘಟನಾ ಸ್ಥಳಕ್ಕೆ ತೆರಳಿದ್ದ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಸಿಬ್ಬಂದಿಯನ್ನು ಪ್ರಶ್ನಿಸಿ, ರೈತನಿಗೆ ಬೆದರಿಸಿದ ಸಿಬ್ಬಂದಿಯ ಮೇಲೆ ಕ್ರಮಕೈಗೊಳ್ಳುವಂತೆ ಕೇಳಿಕೊಂಡಿದ್ದರು.
ಇದೀಗ ಕೆನರಾ ಬ್ಯಾಂಕ್ ಘಟನೆಗೆ ವಿಷಾದಿಸಿದ್ದು, ಮುಂದಕ್ಕೆ ಇಂತಹ ಘಟನೆ ಆಗದಂತೆ ನೋಡಿಕೊಳ್ಳುವುದಾಗಿ ಹಾಗೂ ಉದ್ಯೋಗಿಯ ಮೇಲೆ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸಲು ಆದೇಶಿಸಿದ್ದೇವೆ ಎಂದು ಹೇಳಿದೆ.
ಇದನ್ನೂ ಓದಿ: ಕನ್ನಡಿಗರು ನಿಮ್ಮ ಗುಲಾಮರಲ್ಲ, ನಾವು ಸ್ವಾಭಿಮಾನಿಗಳು: ಹಿಂದಿ ಬ್ಯಾನರ್‌ಗೆ ಮಸಿ ಬಳಿದ ರೂಪೇಶ್ ರಾಜಣ್ಣ
ಇತ್ತೀಚೆಗೆ ಶಿರಾದ ಬುಕ್ಕಪಟ್ಟಣದಲ್ಲಿ ಚಂದ್ರಶೇಖರ್ ಎಂಬ ರೈತರೊಬ್ಬರು ತಮ್ಮ ಖಾತೆಯಿರುವ ಕೆನರಾ ಬ್ಯಾಂಕಿಗೆ ತೆರಳಿದ್ದರು. ಈ ವೇಳೆ ಅವರು ಸಿಬ್ಬಂದಿಯೊಂದಿಗೆ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿಕೊಂಡಿದ್ದರು. ಆದರೆ, ಇಷ್ಟಕ್ಕೆ ಆಕ್ರೋಶಗೊಂಡ ಹಿಂದಿ ಭಾಷಿಕ ಸಿಬ್ಬಂದಿ ರೈತನನ್ನು ಹೊರಹೋಗುವಂತೆ ಕೂಗಾಡಿದ್ದಲ್ಲದೆ, ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಬೆದರಿಸಿದ್ದರು.
ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು.
ಹೇಗಿದೆ ನೋಡಿ ಹಿಂದಿ ದಬ್ಬಾಳಿಕೆ?
ಕೆನರಾ ಬ್ಯಾಂಕ್ ನಾ ರೈತನ ಮೇಲೆ ದಬ್ಬಾಳಿಕೆ ಮಾಡಿದ ಉತ್ತರ ಭಾರತದ ಈ ಉದ್ಯೋಗಿ
ಕನ್ನಡದಲ್ಲಿ ಸೇವೆ ಕೊಡಿ ಅಂದ್ರೆ ಪೊಲೀಸರಿಗೆ ಫೋನ್ ಮಾಡ್ತಾನಂತೆ
ಕನ್ನಡ ಗೊತ್ತಿಲ್ಲಾ ,ನಿನ್ನ ಅಕೌಂಟ್ ಕ್ಲೋಸ್ ಮಾಡು ಅನ್ನೋ ಧಮ್ಕಿ.
ಇದು ಕರ್ನಾಟಕದ ಪರಿಸ್ಥಿತಿ.
ಕನ್ನಡಿಗರಿಗೂ ಉದ್ಯೋಗ ಇಲ್ಲ,ಕನ್ನಡಕ್ಕೆ ಬೆಲೆ ಕೊಡ್ತಿಲ್ಲಾ. pic.twitter.com/FZG3RCsn0T— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) November 10, 2021
ಇದನ್ನೂ ಓದಿ: ಅಪ್ಪು ಅಗಲಿಕೆ: ಎಲ್ಲಾ ನಟರ ಅಭಿಮಾನಿಗಳಿಂದ ’ಸ್ಟಾಪ್ ಫ್ಯಾನ್ಸ್ ವಾರ್’ ಅಭಿಯಾನ
ಇದರ ನಂತರ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ತಮ್ಮ ಕಾರ್ಯಕರ್ತರೊಂದಿಗೆ ತೆರಳಿ ಬ್ಯಾಂಕ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕನ್ನಡ ಭಾಷಿಗರೆ ಹೆಚ್ಚಿರುವ ಬುಕ್ಕಾಪಟ್ಟಣ ಎಂಬ ಹಳ್ಳಿಯಲ್ಲಿ ಕಾರ್ಯಾಚರಿಸುತ್ತಿರುವ ಬ್ಯಾಂಕಿನಲ್ಲಿ ಕನ್ನಡ ಭಾಷೆ ತಿಳಿಯದ ನಾಲ್ಕು ಉದ್ಯೋಗಿಗಳು ಇದ್ದಾರೆ ಎಂಬ ವಿಷಯವನ್ನು ಅವರು ಗಮನಸೆಳೆದಿದ್ದರು. ನಂತರ ರೈತನಿಗೆ ಧಮಕಿ ಹಾಕಿದ್ದ ಸಿಬ್ಬಂದಿಯು ತಾನು ಎಸಗಿದ ಕೃತ್ಯಕ್ಕೆ ಕ್ಷಮೆ ಕೇಳಿದ್ದಾರೆ. ಅಲ್ಲದೆ ಮುಂದಕ್ಕೆ ಬ್ಯಾಂಕಿಗೆ ಬರುವ ಗ್ರಾಹಕರಿಗೆ ಕನ್ನಡದಲ್ಲೇ ಸೇವೆ ನೀಡಲು ಕೂಡಾ ಬ್ಯಾಂಕ್ ಒಪ್ಪಿಕೊಂಡಿದೆ.
ಇಷ್ಟೇ ಅಲ್ಲದೆ, ಘಟನೆಯ ನಂತರ ಕೆನರಾಬ್ಯಾಂಕ್‌ನ ಮುಖ್ಯ ಅಧಿಕಾರಿಗಳನ್ನು ಭೇಟಿ ಮಾಡಿದ್ದ ರೂಪೇಶ್ ರಾಜಣ್ಣ ಅವರೊಂದಿಗೆ ಘಟನೆ ಬಗ್ಗೆ ಚರ್ಚಿಸಿದ್ದಾರೆ. ಅಧಿಕಾರಿಗಳು ಅವರಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರೂಪೇಶ್ ರಾಜಣ್ಣ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ನಾಡಧ್ವಜ ಹಾರಿಸದೆ ದ್ರೋಹವೆಸಗಿವರಿಗೆ ಕನ್ನಡಿಗರ ಕ್ಷಮೆ ಇಲ್ಲ: ’#ನಮ್ಮಧ್ವಜ_ನಮ್ಮಹೆಮ್ಮೆ’ ಟ್ರೆಂಡ್
ಇದೀಗ ಘಟನೆಯ ಬಗ್ಗೆ ತನ್ನ ಅಧೀಕೃತ ಟ್ವಿಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಕೆನರಾ ಬ್ಯಾಂಕ್, “ನಿನ್ನೆ ಬುಕ್ಕಾಪಟ್ಟಣದ ನಮ್ಮ ಬ್ಯಾಂಕ್ ಶಾಖೆಯಲ್ಲಿ ನಡೆದ ಘಟನೆ ಬಗ್ಗೆ ವಿಷಾದಿಸುತ್ತೇವೆ. ಇನ್ನು ಮುಂದೆ ಇಂತಹ ಘಟನೆ ಆಗದಂತೆ ನೋಡಿಕೊಂಡು, ಈ ಘಟನೆ ಬಗ್ಗೆ , ಸಂಬಂಧ ಪಟ್ಟ ಉದ್ಯೋಗಿಯ ಮೇಲೆ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸಲು ಕೂಡಲೇ ಆದೇಶಿಸಲಾಗಿದೆ. ಸದಾ ನಾವು ಕನ್ನಡಪರ ವಿಚಾರದಲ್ಲಿ ಕನ್ನಡಿಗರ ಜೊತೆ ಇದ್ದೇವೆ. ನಮ್ಮ ಬ್ಯಾಂಕ್ ಜೊತೆ ನಿಮ್ಮ ಸಹಕಾರ ಸದಾ ಮುಂದೆಯೂ ಇರಲಿ ಎಂದೂ ಕೇಳಿಕೊಳ್ಳುತ್ತಿದ್ದೇವೆ. ಕನ್ನಡವೇ ಸತ್ಯ.” ಎಂದು ಟ್ವೀಟ್ ಮಾಡಿದೆ.
ಎಲ್ಲಾ ಕನ್ನಡಿಗರಿಗೆ ಮನವಿ
ನಿನ್ನೆ ಬುಕ್ಕಾಪಟ್ಟಣದ ನಮ್ಮ ಬ್ಯಾಂಕ್ ಶಾಖೆಯಲ್ಲಿ ನಡೆದ ಘಟನೆ ಬಗ್ಗೆ ವಿಷಾದಿಸುತ್ತೇವೆ ಹಾಗೂ ಇನ್ನುಮುಂದೆ ಇಂತಹ ಘಟನೆ ಆಗದಂತೆ ನೋಡಿಕೊಂಡು, ಈ ಘಟನೆ ಬಗ್ಗೆ , ಸಂಬಂಧ ಪಟ್ಟ ಉದ್ಯೋಗಿಯ ಮೇಲೆ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸಲು ಕೂಡಲೇ ಆದೇಶಿಸಲಾಗಿದೆ. (1/2)— Canara Bank (@canarabank) November 12, 2021
ಇದನ್ನೂ ಓದಿ: ಕ್ಲಬ್‌ಹೌಸ್‌ನಲ್ಲಿ ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಅವಹೇಳನ



ಇದು, ತ್ರಿಬಾಶಾ ಸೂತ್ರವನ್ನು ಒಪ್ಪಿಕೊಂಡು ಏಳು ದಶಕಗಳ ಕಾಲ ಹಿಂದಿಯನ್ನು ತಲೆಯ ಮೇಲೆ ಹೊತ್ತುಕೊಂಡು ಮೆರೆಸಿದ ಪರಿಣಾಮ, ಕನ್ನಡಿಗರು ಈಗಲೂ ಎಚ್ಚೆತ್ತುಕೊಳ್ಳದಿದ್ದಲ್ಲಿ, ಇದಕ್ಕಿಂತಲೂ ಗೋರ ಪರಿಣಾಮಗಳು ನಮಗೆ ಕಾದಿವೆ. ಬಾಶೆಯ ವಿಷಯದಲ್ಲಿ ನಾವು ತಮಿಳರನ್ನು ಅನುಸರಿಸಬೇಕು. ಇಲ್ಲದಿದ್ದಲ್ಲಿ “ಕನ್ನಡದಲ್ಲಿ ಮಾತನಾಡಿ” ಎಂದವರ ವಿರುದ್ಧ ಎಫ್.ಐ.ಆರ್. ದಾಕಲಾಗುವ ದಿನ ದೂರವಿಲ್ಲ.
ನಮ್ಮ ರಾಜ್ಯದ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್, ರಾಜ್ಯದ ಪ್ರತಿಯೊಂದು ಶಾಖೆಗೂ ಕನ್ನಡ ಗೊತ್ತಿಲ್ಲದ ಸಿಬ್ಬಂದಿಗಳನ್ನು ನಿಯೋಜನೆ ಮಾಡುತ್ತಿದೆ. ಕೆನರಾ ಬ್ಯಾಂಕ್ ನಮ್ಮ ರಾಜ್ಯದಲ್ಲಿ ಕನ್ನಡಿಗರಿಗೆ ಮಾತ್ರ ಅವಕಾಶ ಕೊಡಲಿ.
ನಮ್ಮ ಮಾತೃಭಾಷೆಗೆ ಪರಕಿಯರ ದಬ್ಬಾಳಿಕೆ ನಿರಂಥರವಾಗಿ
ನಡೆಸಲಾಗುತಿದೆ. ಇದರ ಬಗ್ಗೆ ಸರಕಾರ ಮತ್ತು ಕನ್ನಡಿಗರು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ
.