ಬೆಂಗಳೂರಿನ ಲಾಲ್‌ಬಾಗ್‌ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಸಂಪೂರ್ಣ ಹಿಂದಿಮಯ ಬ್ಯಾನರ್‌ ಹಾಕಿದ್ದಕ್ಕೆ ಮತ್ತು ಒಂದು ಕಡೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇನ್ನೊಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹಾಕಿದ್ದಕ್ಕೆ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಕಿಡಿಕಾರಿದ್ದಾರೆ. ಬ್ಯಾನರ್‌ಗೆ ಮಸಿ ಬಳಿದು ‘ಕನ್ನಡಿಗರು ನಿಮ್ಮ ಗುಲಾಮರಲ್ಲ, ಸ್ವಾಭಿಮಾನಿಗಳು. ಕನ್ನಡ ಬಳಸಿ’ ಎಂದು ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾನರ್‌ನಲ್ಲಿ ಉಜ್ವಲ 2.0 ಯೋಜನೆಯ ಮಾಹಿತಿಯನ್ನು ಸಂಪೂರ್ಣ ಹಿಂದಿಯಲ್ಲಿ ನೀಡಲಾಗಿದೆ. ಕರ್ನಾಟಕಕ್ಕೆ ಯಾವುದೇ ಸಂಬಂಧವಿಲ್ಲದ ಯೋಗಿ ಆದಿತ್ಯನಾಥ್ ಫೋಟೊ ಏಕೆ ಹಾಕಬೇಕು? ನಾವು ಹಿಂದಿಗೆ ವಿರುದ್ಧವಲ್ಲ, ಆದರೆ ಹಿಂದಿ ಹೇರಿಕೆಗೆ ವಿರುದ್ಧವಿದ್ದೇವೆ. ಕನ್ನಡನಾಡಿನಲ್ಲಿ ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಕನ್ನಡದಲ್ಲಿ ಮಾಹಿತಿ ನೀಡಬೇಕು, ಕನ್ನಡ ನಾಡಿನ ಮುಖಂಡರುಗಳಾದ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅಥವಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಫೋಟೊ ಬೇಕಾದರೆ ಹಾಕಿ. ಆದರೆ ಯೋಗಿ ಆದಿತ್ಯನಾಥ್‌ ಫೋಟೊ ಏಕೆ? ನಿನ್ನೆ ನಡೆದ ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಪೂರ್ಣ ಇಂಗ್ಲಿಷ್ ಬ್ಯಾನರ್ ಬಳಸಲಾಗಿದೆ. ಹೀಗೆ ಆದರೆ ಕನ್ನಡ ನಶಿಸಿ ಮುಂದೊಂದು ದಿನ ನಮ್ಮ ಮೊಮ್ಮಕ್ಕಳು ಕನ್ನಡ ಅಂದರೆ ಏನು ಎಂದು ಕೇಳುವ ಪರಿಸ್ಥಿತಿ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಿವಮೊಗ್ಗದ ಕಾರ್ಯಕ್ರಮದಿಂದ ಆರಂಭವಾಗಿ ಎಲ್ಲಡೆ ಹಿಂದಿ ಪ್ರಚಾರ ಮಾಡುತ್ತಿದೆ. ಏಕೆ ಪ್ರಾದೇಶಿಕ ಭಾಷೆಗಳನ್ನು  ಹತ್ತಿಕ್ಕಲಾಗುತ್ತಿದೆ? ಇದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪೆಟ್ರೋಲ್ ಬಂಕ್‌ನ ಮಾಲೀಕರನ್ನು ಸಹ ಏಕೆ ಇಂತಹ ಬ್ಯಾನರ್ ಹಾಕಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ರೂಪೇಶ್ ರಾಜಣ್ಣ, “ಇಂದು ನಮ್ಮ ರಾಜ್ಯದಲ್ಲಿ ರಸ್ತೆಗಳು ಸೇರಿದಂತೆ ಎಲ್ಲೆಡೆ ಹಿಂದಿ ರಾರಾಜಿಸುತ್ತಿದೆ, ಕನ್ನಡ ನಶಿಸುತ್ತಿದೆ. ಏಕೆ ಹೀಗೆ? ರಾಜಾರೋಷವಾಗಿ ಬೆಂಗಳೂರಿನ ಮಧ್ಯಭಾಗದಲ್ಲಿ ಹಿಂದಿಯಲ್ಲಿ ಬ್ಯಾನರ್ ಹಾಕಲು ಇವರಿಗೆ ಎಷ್ಟು ಧೈರ್ಯ? ಯೋಗಿ ಆದಿತ್ಯನಾಥ್‌ಗೂ ಕರ್ನಾಟಕಕ್ಕೂ ಏನು ಸಂಬಂಧ? ಹಾಗಾಗಿ ಮಸಿ ಬಳಿದೆ” ಎಂದರು.

ಇಂದು ಜಾತಿ, ಧರ್ಮದ ಬೇಧಭಾವವಿಲ್ಲದೆ ನಮ್ಮೆಲ್ಲರನ್ನು ಒಂದು ಮಾಡುವುದು ನಮ್ಮ ಕನ್ನಡ ಭಾಷೆಯಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಅದು ಕೇವಲ ಭಾಷೆಯಲ್ಲ ದೈತ್ಯ ಶಕ್ತಿಯಾಗಿದೆ. ನಾವು ಕನ್ನಡಕ್ಕಾಗಿ ಹೋರಾಡದಿದ್ದರೆ ನಮ್ಮ ಅಸ್ತಿತ್ವ, ಅಸ್ಮಿತೆ ನಾಶವಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅವರು ತಿಳಿಸಿದರು.


ಇದನ್ನೂ ಓದಿ; ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಹೊಸ ಚಿತ್ರಕ್ಕೆ ಕನ್ನಡಿಗರ ಸ್ವಾಗತ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮುತ್ತುರಾಜು
+ posts

1 COMMENT

  1. Correct aagi heliddeeri Adithyanathana abhimanigalidre anthavaru Utthara Pradeshakke hogi alli Banner haakli….. Kannadada Banner mathu kannadada Rajakaranigalu taare aagli bembalisona…. Adithyanathanige kannadadalli soppu haakiru yaaru illa.

LEAVE A REPLY

Please enter your comment!
Please enter your name here