Homeಮುಖಪುಟ‘ನಮ್ಮದು ಕೊರೊನಾ ವಿರೋಧಿ ಸರ್ಕಾರವೇ ಹೊರತು, ಹಿಂದೂ ವಿರೋಧಿಯಲ್ಲ’ - BJP ಗೆ ತಿರುಗೇಟು ನೀಡಿದ...

‘ನಮ್ಮದು ಕೊರೊನಾ ವಿರೋಧಿ ಸರ್ಕಾರವೇ ಹೊರತು, ಹಿಂದೂ ವಿರೋಧಿಯಲ್ಲ’ – BJP ಗೆ ತಿರುಗೇಟು ನೀಡಿದ ಉದ್ದವ್‌ ಠಾಕ್ರೆ

- Advertisement -
- Advertisement -

ಮಹಾರಾಷ್ಟ್ರದಲ್ಲಿ ಕೊರೊನಾ ಮೂರನೆ ಅಲೆಯ ಆತಂಕದ ನಡುವೆ, ಬಿಜೆಪಿ ಮತ್ತು ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ, ‘‘ದೇವಸ್ಥಾನಗಳನ್ನು ಪುನಃ ತೆರೆಯುವಂತೆ ಮತ್ತು ‘ದಹಿ ಹಂಡಿ’ ಉತ್ಸವ”ಗಳಿಗೆ ಅನುಮತಿ ನೀಡುವಂತೆ ಅಭಿಯಾನ ನಡೆಸುತ್ತಿದೆ. ಇದರ ವಿರುದ್ದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದು, ‘‘ನಾವು ಹಿಂದೂ ವಿರೋಧಿಗಳಲ್ಲ, ಕೊರೊನಾ ವಿರೋಧಿಗಳು” ಎಂದು ಹೇಳಿದ್ದಾರೆ.

“ಇದು ಸ್ವಾತಂತ್ರ್ಯ ಹೋರಾಟವಲ್ಲ … ಕೆಲವರು ದಹಿ ಹಂಡಿ ಉತ್ಸವಗಳನ್ನು ಸಂಘಟಿಸಿ ಹೀರೋಗಳಾಗಲು ಪ್ರಯತ್ನಿಸುತ್ತಿದ್ದಾರೆ. ನೀವು ಹೋರಾಡಲು ಬಯಸಿದರೆ, ಕೊರೊನಾ ವಿರುದ್ಧ ಹೋರಾಡಿ” ಎಂದು ಉದ್ದವ್‌ ಠಾಕ್ರೆ ಮಂಗಳವಾರ ಥಾಣೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕದ ಆನ್‌ಲೈನ್‌ ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮತ್ತೆ ಹೊಂದಾಣಿಕೆಗೆ ಪ್ರಯತ್ನಿಸುತ್ತಿದೆ: ಶಿವಸೇನೆಯ ಹಿರಿಯ ನಾಯಕ

“ಅವರು ನಮ್ಮನ್ನು ‘ಹಿಂದೂ ವಿರೋಧಿ ಸರ್ಕಾರ’ ಎಂದು ಕರೆಯುತ್ತಾರೆ…ಇದು ಮುಂದುವರೆಯಬಾರದು. ನಾನು ಅವರಿಗೆ ಒಕ್ಕೂಟ ಸರ್ಕಾರದ ಪತ್ರವನ್ನು ತೋರಿಸಲು ಬಯಸುತ್ತೇನೆ. ಪತ್ರದಲ್ಲಿ ಅವರು ದಹಿ ಹಂಡಿ ಮತ್ತು ಗಣೇಶ ಉತ್ಸವದ ಸಮಯದಲ್ಲಿ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಹೇಳಿದ್ದಾರೆ… ಹಾಗಾದರೆ ಅವರು ಯಾರು” ಎಂದು ಅವರು ಪ್ರಶ್ನಿಸಿದ್ದಾರೆ.

“ನಮ್ಮ ಸರ್ಕಾರ ಕೊರೊನಾ ವಿರೋಧಿಯೆ ಹೊರತು, ಯಾವುದೇ ಧರ್ಮದ ವಿರೋಧಿಯಲ್ಲ. ಅದಕ್ಕಾಗಿಯೇ, ಹೋರಾಟ ಮಾಡಲು ಬಯಸುವವರು ವೈರಸ್ ವಿರುದ್ಧ ಹೋರಾಡಿ ನಾನು ಹೇಳಲು ಬಯಸುತ್ತೇವೆ… ಆಮ್ಲಜನಕ ಉತ್ಪಾದನಾ ಘಟಕ ಹೆಚ್ಚಿಸುವ ಬಗ್ಗೆ ಖಚಿತಪಡಿಸುತ್ತೇನೆ. ಆದರೆ ಬಿಜೆಪಿಗೆ ಇವುಗಳ ಬಗ್ಗೆ ಇಚ್ಛೆಯಾಗಲಿ ಅಥವಾ ಉದ್ದೇಶವಾಗಲಿ ಇಲ್ಲ, ಅವರು ಬೀದಿಗಿಳಿದು ಗೊಂದಲ ಸೃಷ್ಟಿಸಲು ಮಾತ್ರ ಬಯಸುತ್ತಾರೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

‘ಕನ್ನಡಿಗರು ನಿಮ್ಮ ಗುಲಾಮರಲ್ಲ, ಸ್ವಾಭಿಮಾನಿಗಳು’- ಹಿಂದಿ ಬ್ಯಾನರ್‌ಗೆ ಮಸಿ ಬಳಿದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ 

ಒಂದು ದಿನದ ಹಿಂದಯಷ್ಟೇ, ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ತಮ್ಮ ಪಕ್ಷದ ಕಾರ್ಯಕರ್ತರಿಗೆ ಕೋವಿಡ್‌‌ ನಿರ್ಬಂಧಗಳನ್ನು ಧಿಕ್ಕರಿಸಿ ಉತ್ಸವಗಳನ್ನು ಆಚರಿಸಲು ನಿರ್ದೇಶನ ನೀಡಿದ್ದಾರೆ.

ಸೋಮವಾರದಂದು, ಬೀದಿಗಿಳಿದು ಹೋರಾಟ ಮಾಡಿದ್ದ ಬಿಜೆಪಿ ದೇವಸ್ಥಾನಗಳನ್ನು ಪುನಃ ತೆರೆಯಬೇಕು ಮತ್ತು ದಹಿ ಹಂಡಿ ಉತ್ಸವಗಳನ್ನು ಆಚರಿಸಲು ಅನುಮತಿಸಬೇಕು ಎಂದು ಒತ್ತಾಯಿಸಿದೆ. ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ದಹಿ ಹಂಡಿ ಆಯೋಜಿಸುವಲ್ಲಿ ನಿರತರಾಗಿದ್ದ ನವನಿರ್ಮಾಣ ಸೇನೆಯ ನಾಯಕ ಬಾಲ ನಂದಗಾಂವ್ಕರ್ ಅವರನ್ನು ಸೆಂಟ್ರಲ್ ಮುಂಬೈನಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ: ಮಹಾರಾಷ್ಟ್ರ BJP ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು: ಬಿಜೆಪಿ -ಶಿವಸೇನೆ ನಡುವೆ ವಾಕ್ಸಮರ

ಒಕ್ಕೂಟ ಸರ್ಕಾರದ ಆರೋಗ್ಯ ಸಚಿವಾಲಯ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ನಿರ್ದಿಷ್ಟವಾಗಿ ಈ ಸಮಯದಲ್ಲಿ, ದಹಿ ಹಂಡಿ ಮತ್ತು ಗಣಪತಿ ಹಬ್ಬಗಳನ್ನು ಒಳಗೊಂಡಂತೆ ನಿರ್ಬಂಧಗಳನ್ನು ಜಾರಿಗೊಳಿಸಬೇಕು ಎಂದು ಸಲಹೆ ನೀಡಿದ್ದರು.

ಸಾಂಕ್ರಮಿಕವನ್ನು ಅನ್ನು ನಿಯಂತ್ರಣಕ್ಕೆ ತರುವವರೆಗೂ ಮಹಾರಾಷ್ಟ್ರ ಭಾರತದ ಕೊರೊನಾದ ಕೇಂದ್ರಬಿಂದುವಾಗಿತ್ತು. ರಾಜ್ಯದಲ್ಲಿ ಸುಮಾರು 55,000 ಸಕ್ರಿಯ ಕೊರೊನಾ ಪ್ರಕರಣಗಳಿವೆ.

ಮಹಾರಾಷ್ಟ್ರದಲ್ಲಿ ಮುಂದಿನ ತಿಂಗಳು ಕೊರೊನಾ ಮೂರನೆಯ ಅಲೆ ಅಪ್ಪಳಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡುವುದರೊಂದಿಗೆ, ರಾಜ್ಯದಲ್ಲಿ ಮತ್ತೊಮ್ಮೆ ಆತಂಕ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಒಕ್ಕೂಟ ಸರ್ಕಾರದ ಆರೋಗ್ಯ ಸಚಿವಾಲಯ ಪತ್ರ ಬರೆದಿತ್ತು. ಪ್ರಸ್ತುತ ದೇಶದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣವಿರುವ ಕೇರಳದಲ್ಲಿ ಹಬ್ಬಗಳ ಆಚರಣೆಯ ನಂತರ ಏರಿಕೆ ಕಂಡಿತ್ತು.

ಇದನ್ನೂ ಓದಿ: ಮುಂಬೈ ವಿಮಾನ ನಿಲ್ದಾಣದಲ್ಲಿನ ‘ಅದಾನಿ ಏರ್‌ಪೋರ್ಟ್’ ಬೋರ್ಡ್‌ಗಳನ್ನು ಕಿತ್ತೆಸೆದ ಶಿವಸೇನೆ ಕಾರ್ಯಕರ್ತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...